ಟೀಚರ್ ಆಗಬಯಸುವವರಿಗೆ: ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಕಾರ್ಯಕ್ರಮ
Team Udayavani, May 2, 2017, 12:38 PM IST
ದೇಶದ ಶಿಕ್ಷಣ ಕ್ರಾಂತಿಯಲ್ಲಿ ಪಾಲ್ಗೊಳ್ಳಲು “ಟೀಚ್ ಫಾರ್ ಇಂಡಿಯಾ ಫೆಲೋಶಿಪ್’ ಯುವಕರಿಗೆ ಒಂದು ಉತ್ತಮ ಅವಕಾಶ. ಈ ಕಾರ್ಯಕ್ರಮದ ಮೂಲಕ ವಿವಿಧ ಶೈಕ್ಷಣಿಕ ಹಿನ್ನೆಲೆ ಹೊಂದಿದ ಮತ್ತು ವಿವಿಧ ವೃತ್ತಿಗಳಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಕೆಲವು ತಿಂಗಳುಗಳ ತರಬೇತಿಯ ನಂತರ ಹಿಂದುಳಿದ ಶಾಲೆಗಳಲ್ಲಿ ಎರಡು ವರ್ಷಗಳ ಕಾಲ ಬೋಧನೆ ಮಾಡಲು ಕಳಿಸಲಾಗುತ್ತದೆ.
ಪ್ರತಿವರ್ಷ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆಂದು ಮೀಸಲಿಡುತ್ತದೆ. ಆದರೂ ಸಹ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಇನ್ನೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲದ ಕೊರತೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಬಹಳ ಕಡಿಮೆಯಿದೆ. ಹಿಂದುಳಿದ ಪ್ರದೇಶಗಳಲ್ಲಿ ಮತ್ತು ಸೀಮಿತ ಪನ್ಮೂಲಗಳನ್ನು ಹೊಂದಿದ ಶಾಲೆಗಳಲ್ಲಿ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು “ಟೀಚ್ ಫಾರ್ ಇಂಡಿಯಾ ಫೆಲೋಶಿಪ್’ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಉತ್ಸಾಹಿ ಯುವಕರಿಗೆ ಹಿಂದುಳಿದ ಶಾಲೆಗಳಲ್ಲಿ ಎರಡು ವರ್ಷಗಳ ಕಾಲ ಭೋಧನಾ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಒದಗಿಸಲಾಗುತ್ತದೆ.
ಏನಿದು “ಟೀಚ್ ಫಾರ್ ಇಂಡಿಯಾ ಫೆಲೋಶಿಪ್’?
ದೇಶದ ಶಿಕ್ಷಣ ಕ್ರಾಂತಿಯಲ್ಲಿ ಪಾಲ್ಗೊಳ್ಳಲು “ಟೀಚ್ ಫಾರ್ ಇಂಡಿಯಾ ಫೆಲೋಶಿಪ್’ ಯುವಕರಿಗೆ ಒಂದು ಉತ್ತಮ ಅವಕಾಶ. ಈ ಕಾರ್ಯಕ್ರಮದ ಮೂಲಕ ವಿವಿಧ ಶೈಕ್ಷಣಿಕ ಹಿನ್ನೆಲೆ ಹೊಂದಿದ ಮತ್ತು ವಿವಿಧ ವೃತ್ತಿಗಳಲ್ಲಿ ಅನುಭವ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಕೆಲವು ತಿಂಗಳುಗಳ ತರಬೇತಿಯ ನಂತರ ಹಿಂದುಳಿದ ಪ್ರದೇಶದ ಶಾಲೆಗಳಲ್ಲಿ ಎರಡು ವರ್ಷಗಳ ಕಾಲ ಬೋಧನೆ ಮಾಡಲು ಕಳಿಸಲಾಗುತ್ತದೆ. ಇಂಥ ಶಾಲೆಗಳಲ್ಲಿ ಫೆಲೋಗಳು, ಭಿನ್ನ ಹಾಗು ಆಧುನಿಕ ಕಲಿಕಾ ವಿಧಾನಗಳ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯವನ್ನು ಮಾಡುತ್ತಾರೆ. ಬೋಧನೆಯ ಜೊತೆ ಜೊತೆಗೆ ಅಭ್ಯರ್ಥಿಗಳ ನಾಯಕತ್ವ ಗುಣಗಳನ್ನು, ಕೌಶಲಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಕೂಡ ತರಬೇತಿ ನೀಡಲಾಗುತ್ತದೆ.
ಆಯ್ಕೆ ಹೇಗೆ?
ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಮೊದಲನೇ ಹಂತದಲ್ಲಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಅರ್ಜಿಯಲ್ಲಿ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ಈ ಹಿಂದೆ ಕೈಗೊಂಡ ಉದ್ಯೋಗದ ಮಾಹಿತಿಯನ್ನು ಒದಗಿಸಬೇಕು. ಜೊತೆಗೆ, ಏಕೆ ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳಲು ಇಚ್ಛಿಸುತ್ತೇನೆ ಎಂಬುದನ್ನು ವಿವರವಾಗಿ ತಿಳಿಸಬೇಕು. ಮೊದಲನೇ ಹಂತದಲ್ಲಿ ಒಂದೂವರೆ ಗಂಟೆ ಅವಧಿಯ ಒಂದು ಆನ್‌ಲೈನ್ ಪರೀಕ್ಷೆಯನ್ನು ಕೂಡ ನಡೆಸಲಾಗುತ್ತದೆ. ಆನ್‌ಲೈನ್ ಪರೀಕ್ಷೆಯು ತಾರ್ಕಿಕ ಸಾಮರ್ಥ್ಯ ಮತ್ತು ಇಂಗ್ಲಿಷ್ ಭಾಷಾಜಾnನ ಕುರಿತ ಪ್ರಶ್ನೆಗಳನ್ನು ಹೊಂದಿರುತ್ತದೆ. ಎರಡನೇ ಹಂತದಲ್ಲಿ 30 ನಿಮಿಷಗಳ ಫೋನ್- ಸಂದರ್ಶನವನ್ನು ನಡೆಸಲಾಗುತ್ತದೆ. ಈ ಎರಡು ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮೂರನೇ ಹಂತದ ಆಯ್ಕೆ ಪ್ರಕ್ರಿಯೆಗೆ ಕರೆಯಲಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳು 5 ನಿಮಿಷಗಳ ಒಂದು ಪಾಠವನ್ನು ಬೋಧನೆ ಮಾಡಬೇಕು. ಜೊತೆಗೆ, ಸಮೂಹ ಚರ್ಚೆ ಮತ್ತು ಸಮಸ್ಯೆ ನಿವಾರಣೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ನಂತರ ಸುಮಾರು ಒಂದು ಗಂಟೆಯ ವ್ಯಕ್ತಿಗತ
ಸಂದರ್ಶನವನ್ನು ನಡೆಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಕಡೆಯದಾಗಿ ಅಭ್ಯರ್ಥಿಗಳನ್ನು ಆಯ್ಕೆ
ಮಾಡಿಕೊಳ್ಳಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಮುಂಬೈ, ಪೂನಾ, ದೆಹಲಿ, ಚೆನ್ನೈ, ಹೈದರಾಬಾದ್, ಅಹಮದಾಬಾದ್
ಮತ್ತು ಬೆಂಗಳೂರು ನಗರಗಳಲ್ಲಿನ ಹಿಂದುಳಿದ ಶಾಲೆಗಳಲ್ಲಿ (2- 10ನೇ ತರಗತಿ) ಬೋಧನೆಗಾಗಿ ಕಳಿಸಲಾಗುತ್ತದೆ.
ವೇತನ ಮತ್ತು ಭವಿಷ್ಯದಲ್ಲಿನ ಅವಕಾಶಗಳು ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ರೂ 17,500/- ವೇತನವನ್ನು ಪಡೆಯುತ್ತಾರೆ. ಜೊತೆಗೆ, ರೂ. 5500-10,000 ವರೆಗೆ ವಸತಿ ಭತ್ಯೆಯನ್ನು ಪಡೆಯುತ್ತಾರೆ. ಫೆಲೋಶಿಪ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಪ್ರತಿಷ್ಟಿತ ಹಾರ್ವಡ್ (Harvard), ಕಾರ್ನೆಲ್ (Cornell), ಚಿಕಾಗೊ ಬೂತ್ (Chicago Booth), ಕೊಲಂಬಿಯಾ (Columbia)
ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಬಹುದು. ಇಲ್ಲವಾದರೆ, ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಅಥವಾ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳಲ್ಲಿ ಸಲಹಾಗಾರರಾಗಿ ಕೆಲಸ ಮಾಡಬಹುದು. ಅಥವಾ ಶಾಲೆಗಳಲ್ಲಿ ಬೋಧನಾ ವೃತ್ತಿಯನ್ನು ಮುಂದುವರಿಸಬಹುದು. ಒಮ್ಮೆ ಫೆಲೋಶಿಪ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಉತ್ತಮ
ಅವಕಾಶಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ.
*ಪ್ರಶಾಂತ್ ಎಸ್.ಚಿನ್ನಪ್ಪನವರ್, ಚಿತ್ರದುರ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
CT Ravi ಬಂಧನ ಪ್ರಕರಣ; ಗ್ರಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.