ನನಗೆ ಖುಷಿ ಕೊಡುವಂಥ ಉತ್ತರ ಹೇಳು?


Team Udayavani, Mar 5, 2019, 12:30 AM IST

4-josh.jpg

ಇರೋ ಒಬ್ಬ ಚಂದ್ರನನ್ನೇ ನುಂಗಿ ನೀರು ಕುಡಿದವಳಂತೆ ನಗ್ತೀಯಲ್ಲ, ಆ ನಗುವಿನ ಬೆಳದಿಂಗಳಲ್ಲೇ ಕುಳಿತು ನಾವಿಬ್ರೂ ಮಾತಾಡ್ತಾ ಊಟ ಮಾಡಬೇಕು ಅನ್ನಿಸ್ತಿದೆ ಗೊತ್ತಾ? 

ಮೊನ್ನೆ ಕಾಲೇಜು ವಾರ್ಷಿಕೋತ್ಸವ ಆಯ್ತಲ್ಲ, ಅಲ್ಲಿಯವರೆಗೂ ಎಲ್ಲಾ ಚೆನ್ನಾಗಿಯೇ ಇತ್ತು. ಅದಾದ ನಂತರವೇ ಮನಸ್ಸು ಇಷ್ಟೊಂದು ಡಿಸ್ಟರ್ಬ್ ಆಗಿರೋದು. ಆ ಕಾರ್ಯಕ್ರಮದಲ್ಲಿ ನೀನು ಅಷ್ಟೊಂದು ಚೆನ್ನಾಗಿ ಹಾಡ್ತೀಯಾ ಅಂತ ನಾನು ಊಹಿಸಿಯೂ ಇರಲಿಲ್ಲ. ಹಾಡು ಮುಗಿದ ಮೇಲೂ ನೀನ್ಯಾಕೆ ಕಾಡ್ತಿದ್ದೀಯ ಅಂತಾನೇ ಗೊತ್ತಾಗ್ತಿಲ್ಲ. ಆವತ್ತೇ ನಿನ್ನ ಪರಿಚಯ ಮಾಡಿಕೊಂಡಿದ್ದರಿಂದ, ಗೆಳೆತನದ ವೇಷ ಧರಿಸಿದ ಪ್ರೀತಿ ನಮ್ಮಿಬ್ಬರಲ್ಲೂ ಹುಟ್ಟಿರುವುದಂತೂ ನಿಜ. 

ಮೊದ ಮೊದಲು ಕಾಲೇಜಿನ ಕಾರಿಡಾರ್‌ನಲ್ಲಿ ಎದುರು ಬದುರು ಬಂದಾಗ, ಪಕ್ಕಾ ಹಳ್ಳಿ ಗೌರಮ್ಮನಂತೆ ನೆಲವನ್ನೇ ನೋಡುತ್ತ ಹೋಗುತ್ತಿದ್ದವಳು, ಈಗ ಇದ್ದಕ್ಕಿದ್ದ ಹಾಗೆ ಹೋಗೋ, ಬಾರೋ ಅನ್ನುವ ಮಟ್ಟಿಗೆ ಹತ್ತಿರವಾದೆಯಲ್ಲ? ಇದು ಪ್ರೀತಿಯ ಲಕ್ಷಣವಾ? ಕ್ಲಾಸ್‌ನಲ್ಲಿ ನೀನು ಯಾವಾಗ್ಲೂ ಫ‌ಸ್ಟ್‌ ಬೆಂಚ್‌ ಸ್ಟೂಡೆಂಟ್‌. ಆದ್ರೆ ಲಾಸ್ಟ್‌ ಬೆಂಚ್‌ನ ಶಾಶ್ವತ ಸದಸ್ಯನಾಗಿದ್ದ ನನಗೆ ಇತ್ತೀಚೆಗೆ ಫ‌ಸ್ಟ್‌ ಬೆಂಚ್‌ನತ್ತ ಗಮನ ಹರಿಯುತ್ತಿರುವುದಕ್ಕೆ ನಿನ್ನ ಮೇಲಿರುವ ಪ್ರೀತಿಯೇ ಕಾರಣ ಅಂತ ಕನ್ಫರ್ಮ್ ಆಗಿ ಹೇಳಬಲ್ಲೆ. 

ತುಸು ಯೋಚಿಸೇ ಮುದ್ದು ಮುಖದ ಪೆದ್ದು ಸುಂದರಿ, ತಪ್ಪು ನಂದಲ್ಲ. ಆ ನಿನ್ನ ಓರೆನೋಟದ ಕಣ್ಣುಗಳು, ಹಣೆ ಮೇಲೆ ಕಂಡೂ ಕಾಣದಂತೆ ಮಿಂಚುವ ಬಿಂದಿ, ನೀಳ ಜಡೆ, ನವಿಲಿನಿಂದ ಬಾಡಿಗೆ ಪಡೆದ ಆ ನಿನ್ನ ವೈಯ್ನಾರ, ಮದಿರೆಯನ್ನೂ ಸೋಲಿಸುವ ಮೋಹಕ ಮಂದಹಾಸ… ಇಷ್ಟೆಲ್ಲ ಬಾಣಗಳು ಒಮ್ಮೆಲೇ ಎದೆಗೆ ಚುಚ್ಚಿದರೆ ಯಾವ ಹೃದಯ ತಾನೇ ಸಹಿಸಿಕೊಂಡೀತು ಹೇಳು? ಸಹಿಸಿಕೊಳ್ಳೋಕೆ ನನ್ನ ಹೃದಯವೇನು ಕಲ್ಲಿನಿಂದ ಮಾಡಿದ್ದಾ? 

ಪುಸ್ತಕಗಳನ್ನ ಎದೆಗವಚಿಕೊಂಡು ಕ್ಯಾಂಪಸ್‌ ತುಂಬೆಲ್ಲ ನೀನು ಸುತ್ತಾಡ್ತಿರಬೇಕಾದ್ರೆ, ಪುಸ್ತಕವೇ ನಾನಾದಂತೆ ಕನಸು ಕಾಣುತ್ತಾ ಮೈ ಮರೆಯುತ್ತೇನೆ. ಅದ್ಸರಿ, ಇರೋ ಒಬ್ಬ ಚಂದ್ರನನ್ನೇ ನುಂಗಿ ನೀರು ಕುಡಿದವಳಂತೆ ನಗ್ತಿàಯಲ್ಲ, ಆ ನಗುವಿನ ಬೆಳದಿಂಗಳಲ್ಲೇ ಕುಳಿತು ನಾವಿಬ್ರೂ ಮಾತಾಡ್ತಾ ಊಟ ಮಾಡಬೇಕು ಅನ್ನಿಸ್ತಿದೆ ಗೊತ್ತಾ? ನೀನು ಸದಾ ಹೀಗೇ ನಗ್ತಾ ಇದ್ರೆ ಅಮಾವಾಸ್ಯೆಗೆ ಜಾಗವೇ ಇರಲ್ಲವೇನೋ. 

ಇರೋ ಒಂದು ಹೃದಯಾನ ಪುಕ್ಕಟೆ ಕದೊRಂಡು ಹೋಗೋಕೂ ನೀನು ತಯಾರಿದ್ದಂತೆ ಕಾಣಿಸ್ತಿದೆ. ಅದೆಲ್ಲ ಇರಲಿ, ಈಗ ಮ್ಯಾಟರ್‌ಗೆ ಬರ್ತೀನಿ. ಸರಿಯಾಗಿ ಕೇಳಿಸ್ಕೋ, ಯಾರೋ ಕಳಿಸಿದ ಸಂದೇಶವನ್ನೇ ನಿನಗೆ ಫಾರ್ವರ್ಡ್‌ ಮಾಡಿ ಪ್ರೀತಿ ಒಲಿಸಿಕೊಳ್ಳುವ ಪುಢಾರಿ ಪ್ರೇಮಿಯಲ್ಲ ನಾನು. ನನ್ನೀ ಹೃದಯದಲ್ಲಿ ನಿನಗೆಂದೇ ಹುಟ್ಟಿಕೊಂಡು, ಅಕ್ಷರ ರೂಪದಲ್ಲಿ ನಿನ್ನ ಸೇರೋದಕ್ಕೆ ಬಂದಿರೋ ಭಾವನೆಗಳಿವು. ಈ ನನ್ನ ನಿಷ್ಕಲ್ಮಶ ಭಾವನೆಗಳಿಗೆ ಬೆಲೆ ನೀಡದ ನಿರ್ದಯಿ ನೀನಲ್ಲ ಅಂದೊRàತೀನಿ. ನಾನು ನಿನ್ನನ್ನ ತುಂಬಾ ಪ್ರೀತಿಸ್ತೀನಿ ಕಣೇ. ನನ್ನ ಪ್ರೀತಿನ ಒಪ್ಕೋ…

ಅರೇ! ಇದನ್ನೇ ಕಾಲೇಜಿನಲ್ಲಿ ನಾನು ಸಿಕ್ಕಾಗ ನೇರವಾಗಿ ಹೇಳಬಹುದಿತ್ತಲ್ಲ? ಅಂತ ನೀನು ಕೇಳಬಹುದು. ಈ ಮನದ ಭಾವನೆಗಳನ್ನ ಕಾಲೇಜು ಅಂಗಳದಲ್ಲಿ ನಿಂತು ಅಷ್ಟೊಂದು ಜನರ ಮುಂದೆ ಪಟಪಟಾ ಅಂತ ಹೇಳುವಷ್ಟು ಧೈರ್ಯವಿಲ್ಲ. ಅದೇ ಕಾರಣದಿಂದ ಈ ಪತ್ರ ಬರೆದಿರೋದು. ಇದನ್ನು ಓದಿ ಸುಮ್ಮನಾಗಬೇಡ. ಉತ್ತರ ಬರಿ. ಪ್ಲೀಸ್‌, ನಂಗೆ ಖುಷಿಯಾಗುವಂಥ ಉತ್ತರವನ್ನೇ ಹೇಳು! 

– ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ

ಟಾಪ್ ನ್ಯೂಸ್

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್‌ ಹುತಾತ್ಮ

3(1

Belman: ಹಿಂದೂಗಳ ಮನೆಯಲ್ಲಿ ಗೋದಲಿ ಸಂಭ್ರಮ!

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

2

Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.