ಪರೀಕ್ಷೆ .. ಐ ಲವ್ ಯೂ!
Team Udayavani, Mar 14, 2017, 3:50 AM IST
ಪರೀಕ್ಷೆ ಎಂದರೆ ಭಯ, ಆತಂಕ, ಆವೇಗ, ಗಲಿಬಿಲಿ, ಇತ್ಯಾದಿ ಇತ್ಯಾದಿ. ಇದು ಎಲ್ಲರಿಗೂ ಕಾಡುವ ಸಾಮಾನ್ಯ ಸಂಗತಿ. ಈ ಭಯದಿಂದ ಹೊರ ಬಂದು ಪರೀಕ್ಷೆ ಬರೆಯುವುದಾದರೂ ಹೇಗೆ ಎಂಬುದೇ ಈಗ ಬಿಲಿಯನ್ ಡಾಲರ್ ಪ್ರಶ್ನೆ! ಕೆಲವರಿರುತ್ತಾರೆ ಬಿಡಿ, ಅವರೆಲ್ಲರೂ ಜೀನಿಯಸ್ಸುಗಳು. ನಾನು ಮಾತನಾಡುತಿರುವುದು ಲಾಸ್ಟ್… ಬೆಂಚಿನವರ ಬಗ್ಗೆ.
ಯಾವುದೇ ವಿಷಯದ ಬಗ್ಗೆ ನಮಗೆ ಅರಿವಿರದಿದ್ದಾಗ ಭಯ ಸಾಮಾನ್ಯ. ರಸ್ತೆಯೇ ಇಲ್ಲದ ಊರಿಗೆ ಹೊರಟಾಗ ಅಳುಕು ಕಾಡುತ್ತದೆ, ಹೋಗಿ ಬಂದು, ಹೋಗಿ ಬಂದು ಅಭ್ಯಾಸವಾಗಿಬಿಟ್ಟರೆ ಆನೆ ನಡೆದದ್ದೇ ದಾರಿ ಎಂಬಂತೆ ಸಣ್ಣ ಕಾಲುದಾರಿಯೇ ಮುಂದೊಂದು ದಿನ ಹೆ¨ªಾರಿಯಾಗುತ್ತದೆ.
ಪರೀಕ್ಷೆ ಎದುರಿಸಲು ಸುಲಭೋಪಾಯವೆಂದರೆ ಆರಂಭದಿಂದ ಓದಲು ಶುರು ಮಾಡುವುದು. ಸರಿಯಾದ ವೇಳಾಪಟ್ಟಿಯನ್ನು ಅನುಸರಿಸುವುದು. ತರಗತಿಗೆ ಗೈರಾಗದಿರುವುದು. ಹೆಚ್ಚೆಚ್ಚು ಬಾರಿ ಪುನರಾವರ್ತನೆ ಮಾಡುವುದು. ಅಣಕು ಪರೀಕ್ಷೆಗಳಲ್ಲಿ ಭಾಗವಹಿಸುವುದು. ಇದಕ್ಕೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಪರಾಮರ್ಶಿಸುವುದು. ಹಿರಿಯ ವಿದ್ಯಾರ್ಥಿಗಳ ಸಲಹೆ- ಮಾರ್ಗದರ್ಶನ
ಪಡೆಯುವುದು. ಮೊಬೈಲ… ಬಳಕೆಗೆ ಸ್ವಯಂ ನಿಷೇಧ ವಿಧಿಸುವುದು. ಲೈಬ್ರರಿಯಲ್ಲಿ ಸೆರೆಯಾಗುವುದು. ವಿಷಯ ಜ್ಞಾನವನ್ನು ವೃದ್ದಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸ್ವಯಂ ಶಿಸ್ತು ಅಳವಡಿಸಿಕೊಳ್ಳುವುದು. ಏಕೆಂದರೆ “ಹೇಳಿಕೊಟ್ಟ ಬುದ್ದಿ; ಕಟ್ಟಿ ಕೊಟ್ಟ ಬುತ್ತಿ’ ಎಲ್ಲಿಯವರೆಗೆ ಬಂದಾವು ಅಲ್ಲವೇ?!
ಈ ಎಲ್ಲಾ ಸಂಗತಿಗಳು ನಿಮಗೆ ಗೊತ್ತಿಲ್ಲದವೇನಲ್ಲ. ಆದರೆ ಅವುಗಳನ್ನು ಅನುಸರಿಸದಿರುವುದೇ ನಾವು ಮಾಡುವ ಪರಮ ಪಾಪದ ಕೆಲಸ. ಇಲ್ಲಿ ಮುಖ್ಯವಾಗಿ ಒಂದು ಮಾತನ್ನು ಚೆನ್ನಾಗಿ ನೆನಪಿಡಿ. ನಾವು ಆಯ್ದುಕೊಂಡ ಕೋರ್ಸ್ ಬಗ್ಗೆ ನಮಗೆ ಅಪಾರ ಪ್ರೀತಿ ಇರಬೇಕು. ಎಷ್ಟೆಂದರೆ ಹರೆಯದಲ್ಲಿ ಹುಡುಗಿಯೊಬ್ಬಳೆಡೆಗೆ ಇರುವಷ್ಟು (ಹುಡುಗಿಯರಿಗೂ ಈ ಮಾತು ಅನ್ವಯಿಸುತ್ತದೆ).
ನಾವು ನಮ್ಮ ಕೋರ್ಸನ್ನು ಪ್ರೀತಿಸಬೇಕು. ಅದನ್ನು ಚೆನ್ನಾಗಿ ಅರಿಯಬೇಕು. ನಮ್ಮ ಕೋರ್ಶೇ ನಮಗೆ ಸರ್ವಸ್ವ. ಜಗತ್ತಿನಲ್ಲಿ ನಮ್ಮ ಅಧ್ಯಯನದ ಸಂಗತಿ ಬಿಟ್ಟರೆ ಬೇರೇನೂ ಇಲ್ಲವೆಂದು ತೀರ್ಮಾನಿಸಬೇಕು. “ನನ್ನ ಗುರಿ ತಲುಪಲು ನಾನೇ ಹೋರಾಡುತ್ತೇನೆ’ ಎಂದು ಅಂದುಕೊಂಡ ಘಳಿಗೆಯಲ್ಲಿ ಅಡಗಿದೆ ನೋಡಿ ಯಶಸ್ಸಿನ ಸೀಕ್ರೆಟ್. ಹೇಗೆ ಅರ್ಜುನನಿಗೆ ಮರದ ಮೇಲೆ ಕುಳಿತ ಪಕ್ಷಿಯ ಕಣ್ಣಿನ ಹೊರತು ಬೇರೇನೂ ಕಾಣಿಸಲಿಲ್ಲವೋ, ಹಾಗೆಯೇ ನಮಗೆ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರದ ಹೊರತು ಬೇರೇನೂ
ಕಾಣದಂತಿರಬೇಕು. ಇವತ್ತಿನ ಹೈ ಸ್ಪೀಡ್ ಕಾಂಪಿಟೇಶನ್ ಯುಗದಲ್ಲಿ, ನೀನು ಅಂದ್ರೆ ನಿಮ್ಮಪ್ಪಅನ್ನುವವರೇ ಹೆಚ್ಚಾಗಿರುವಾಗ ನಾವು ಬೆಪ್ಪರಾಗುವುದು ತಪ್ಪಲ್ಲವೇ?! ಇಷ್ಟೆಲ್ಲಾ ಸಿದ್ದತೆ ಮಾಡಿಕೊಂಡ ಮೇಲೂ ಅಫ್ಟರ್‌ಆಲ… ಪರೀಕ್ಷೆಗೆ ಹೆದರಬೇಕೆ? ಜೋರಾಗಿ ಒಮ್ಮೆ ಪ್ರಳಯವಾಗುವಂತೆ ಕೂಗಿ: “ಪರೀಕ್ಷೆ… ಐ ಲವ್ ಯೂ!’ ಎದೆಯೊಳಗಿನ ಅಳುಕನ್ನು ಅಳಿಸಿಹಾಕಿ “ಜೋಶ್’ನಿಂದ ಪರೀಕ್ಷೆ ಬರೆಯಿರಿ. ಆಲ…ದ ಬೆಸ್ಟ್….
ಎಡೆಯೂರು ಸೋಮಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.