ಎಲ್ಲ ಬಗೆಯ ಮೋಸಕ್ಕೂ ಧನ್ಯವಾದ…
Team Udayavani, Nov 12, 2019, 5:10 AM IST
ಪ್ರತಿ ಬಾರಿ ನಿನ್ನ ತಿರಸ್ಕಾರದ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ ನೋವು ಕೊಡುವುದಕ್ಕಿಂತ ನಿನ್ನಿಂದ ದೂರವಾಗುದೇ ಒಳಿತು ಅನಿಸುತ್ತಿದೆ.
ಬದುಕಿನಲ್ಲಿ ಬರುವ ನೋವಿರಲಿ, ನಲಿವಿರಲಿ, ಎಲ್ಲವನ್ನೂ ನಿನ್ನ ಜೊತೆಯಲ್ಲೇ ಸವಿಯಬೇಕು ಅಂತ ಹೇಳಿದ್ದು ಸುಳ್ಳಲ್ಲ ಕಣೇ.
ಎಷ್ಟೇ ವರ್ಷಗಳು ಆದರೂ ಪರವಾಗಿಲ್ಲ, ನಿನಗಾಗಿ ಕಾಯುವೆ ಅಂದಿದ್ದು ಎಷ್ಟೂ ಸತ್ಯವೋ, ಹಾಗೆಯೇ ನಿನ್ನ ನೆನಪೆಂಬ ಕನಸಿಗೆ ಈಗ ತಿಲಾಂಜಲಿ ನೀಡುತ್ತಿರುವುದೂ ಕೂಡ ಅಷ್ಟೇ ನಿಜ. ಇನ್ನು ಮುಂದೆ , ಇದು ನನ್ನದೇ ಬದುಕು.
ನನಗೆ ಗೊತ್ತು, ನಿನ್ನ ಪಾಲಿಗೆ ನಾನು ಮುಗಿದು ಹೋದಅಧ್ಯಾಯವಷ್ಟೇ. ನೀನೇ ನನ್ನನ್ನು ಮರೆತಿರುವಾಗ ನಾನು ನಿನ್ನ ನೆನಪಿನೊಂದಿಗೆ ಬದುಕುವುದು ಎಷ್ಟು ಸರಿ ಹೇಳು? ಪ್ರತಿ ಬಾರಿ ನಿನ್ನ ತಿರಸ್ಕಾರದ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ ನೋವು ಕೊಡುವುದಕ್ಕಿಂತ ನಿನ್ನಿಂದ ದೂರವಾಗುದೇ ಒಳಿತು ಅನಿಸುತ್ತಿದೆ. ನನ್ನ ಮಾತುಗಳಿಂದ ನಿನಗೆ ಆಶ್ಚರ್ಯವಾಗಹುದು, ಏಕೆಂದರೆ,ಪ್ರತಿ ಬಾರಿ ನಿನ್ನ ಪ್ರೀತಿಗೆ ಕಾಯುವೆ ಹೊರತು ನಿನ್ನದೂರ ಮಾಡುವ ಮಾತುಗಳನ್ನು ಆಡಿದವಳಲ್ಲ. ಆದಕ್ಕೂ ಕಾರಣಗಳಿವೆ.
ನಿನ್ನ ಪ್ರತಿ ಮಾತು ನನ್ನ ಕನಸುಗಳನ್ನು ಮುರಿಯುತ್ತಿದೆ. ಅಂದ ಮೇಲೆ, ನಿನಗೆ ನನ್ನ ಪ್ರೀತಿ ಅರ್ಥವಾಗಲೂ ಸಾಧ್ಯವಿಲ್ಲ.ನಿನ್ನಷ್ಟೂ ಕಠೊರವಾಗಿ ಮಾತಾನಾಡುವವಳು ನಾನಲ್ಲ.ಆದರೆ, ನನ್ನಷ್ಟು ಪ್ರೀತಿ ಮಾಡುವವರು ನಿನಗೆ ಸಿಗಲಾರರು.ನಿನ್ನಿಂದ ಪ್ರೀತಿ ಸಿಗದಿದ್ದರೂ ನೀ ಕಲಿಸಿದ ಪಾಠಗಳನ್ನು ಮರೆಯುವಂತೆಯೇ ಇಲ್ಲ.ಈಗಲೂ ಪ್ರತಿಬಾರಿ ನೆನಪಾಗುವುದು ನಿನ್ನ ಆ ಚುಚ್ಚು ಮಾತುಗಳು.
ನಿನ್ನ ಆ ಮಾತುಗಳೇ ಈ ನಿರ್ಧಾರ ತೆಗೆದುಕೊಳ್ಳವಂತೆ ಮಾಡಿದ್ದು.ಒಂದು ಮಾತು ಹೇಳುತ್ತೇನೆ ಕೇಳು: ಯಾರಾದರೂ ನಮಗೆ ಕಾಯುತ್ತಾರೆ ಅಂದರೆ, ಅವರಿಗೆ ಬೇರೆ ಕೆಲಸವಿಲ್ಲವೆಂದಲ್ಲಾ.ನಾನು ನಿನಗೆ ಕಾಯುತ್ತೀನಿ ಎಂದಾಕ್ಷಣ, ನನ್ನ ತಾಳ್ಮೆಯನ್ನು ಎಷ್ಟೋ ಬಾರಿ ಪರೀಕ್ಷೆಗೆ ಒಡ್ಡಿದ್ದೀಯಾ.ನಿನ್ನ ಜೀವನದಲ್ಲಿ ಬೇರೆ ಯಾರೋ ಬಂದರೆ, ನನಗೆ ಆಡಿದೆಯಲ್ಲ,ಅಂಥದೇ ಚುಚ್ಚು ಮಾತುಗಳನ್ನು ಅವರಿಗೂ ಆಡಬೇಡ.ಏಕೆಂದರೆ, ಅವರಿಗೆ ನನ್ನಷ್ಟು ತಾಳ್ಮೆ ಇರಲು ಸಾಧ್ಯಲ್ಲ. ನೀನು ಬೇಡ ಅಂದ ಆ ಕ್ಷಣ ನನ್ನ ಕನಸು ನುಚ್ಚುನೂರಾಗಿರಬಹುದು. ಆದರೆ, ಇಂದು ನನ್ನದೇ ಆದ ಕನಸುಗಳನ್ನು ಕಟ್ಟಿ ಸಾಗುತ್ತಿರುವೆ.
ನನಗಾದ ನೋವು ಒಂದಲ್ಲಾ ಒಂದು ದಿನ ನಿನಗೆ ಗೊತ್ತಾಗುತ್ತೆ.ಆಗ ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.ನಿನ್ನ ಬಿಡುವಿಲ್ಲದ ಜೀವನ ಎಂದು ಗೊತ್ತು. ಆದರೂ,ಕೇಳುತ್ತಿರುವೆ, ಸಮಯ ಸಿಕ್ಕರೆ ಕ್ಷಮಿಸಿಬಿಡು.
ಕೊನೆಯದಾಗಿ,ನೀ ಮಾಡಿದ ಮೋಸಕ್ಕೆಲ್ಲಾ ಧನ್ಯವಾದ ಹೇಳುತ್ತ, ಹೊಸ ಕನಸು ಗಳೊಂದಿಗೆ ನವನವೀನ ಹಾದಿಯಲ್ಲಿ ಸಾಗುತ್ತಿರುವೆ.
ವಂದನೆಗಳೊಂದಿಗೆ
ಚೈತ್ರಲಕ್ಷ್ಮಿ ಬಾಯಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.