ಕೊಲಂಬಸ್ ಗೆ 21 ನಮಸ್ಕಾರಗಳು

ಬಾಕಿ ಉಳಿದ ಒಂದು ಥ್ಯಾಂಕ್ಸ್‌

Team Udayavani, May 28, 2019, 11:04 AM IST

bus

ಅದೇನೋ ಅಪಾಯ ತಡೆಯಲು ಡ್ರೈವರ್‌, ಗಕ್ಕನೆ ಬ್ರೇಕ್‌ ಒತ್ತುತ್ತಾನೆ. ಆದರೆ, ಅದಕ್ಕೆ ಬೀಳುವ ಶಾಪಗಳೆಷ್ಟು ಗೊತ್ತಾ? “ಯಾವನೋ ಅವನು ಡೈವರು..?’, “ಈ ಡ್ರೈವರ್‌ಗೆ ಗಾಡೀನೆ ಓಡ್ಸೋಕೆ ಬರೋಲ್ಲ’ ಅನ್ನೋ ವ್ಯಂಗ್ಯದ ಬಾಣಗಳು ಬೆನ್ನ ಹಿಂದೆ ನಾಟುತ್ತಿರೋದು ಗೊತ್ತಿದ್ದರೂ, ನಗುನಗುತ್ತಲೇ ಆತ ಗಾಡಿ ಓಡಿಸುತ್ತಿರ್ತಾನೆ…

ಜೀವನದಲ್ಲಿ ನಾವೆಲ್ಲರೂ ನಿತ್ಯ ಪಯಣಿಗರು. ಕೆಲಸಕ್ಕೆ, ಕಾಲೇಜಿಗೆ ಅಥವಾ ಇನ್ಯಾವುದೋ ತೀರಕ್ಕೆ ನಮ್ಮನ್ನು ಮುಟ್ಟಿಸುವುದೇ ಈ ಪಯಣ. ಸ್ವಂತ ವಾಹನವನ್ನೋ, ಸಾರ್ವಜನಿಕ ವಾಹನವನ್ನೋ ಏರಿ ನಾವು ಅಲ್ಲಿಗೆ ತಲುಪ ಬಹುದಷ್ಟೇ. ಆದರೆ, ಪ್ರಯಾಣವಂತೂ ನಿತ್ಯ ನೂತನ. ಅದು ಯಾವತ್ತೂ ತನ್ನ ಹೆಸರು ಬದಲಿಸಿಕೊಳ್ಳೋದಿಲ್ಲ. ಇದೇ ಪಯಣ ನಮಗೆ ಹಲವು ನಂಟು ಬೆಸೆಯುವುದೂ ಉಂಟು. ನಮ್ಮ ಈ ಹಾದಿಯಲ್ಲಿ ಅನೇಕರು ಸಿಗುತ್ತಾರೆ, ಹೋಗುತ್ತಾರೆ. ಎಷ್ಟೋ ಜನರನ್ನು ಆ ಕ್ಷಣವೇ ಮರೆತುಬಿಡುತ್ತೇವೆ. ಕಣ್ಣು ಮುಚ್ಚಿ ಬಿಡುವುದರೊಳಗೆ, ಅವರ ಮುಖ ನಮ್ಮ ಸ್ಮತಿಯಿಂದ ಅಳಿಸಿ ಹೋಗಿರುತ್ತೆ. ಆದರೆ, ಒಬ್ಬ ಮಾತ್ರ ಎಂದಿಗೂ ಅಳಿಸಲಾಗದ ಚಿತ್ರ. ಆತ ನಾನಾ ಕತೆಯಾಗಿ ನಮ್ಮನ್ನು ಕಾಡುತ್ತಲೇ ಇರುತ್ತಾನೆ.

ಆತನೇ ಬಸ್‌ ಡ್ರೈವರ್‌! ಆವನೂ ಒಬ್ಬ ಬುದ್ಧನಂತೆ. ಜಗವೆಲ್ಲಾ ಮಲಗಿರಲು ತಾನೊಬ್ಬ ಎದ್ದ ಎನ್ನುವಂತೆ, ಅವನ ದಿನಚರಿ ಶುರುವಾಗೋದೇ ಬೆಳಗ್ಗೆ ನಾಲ್ಕಕ್ಕೆ. ನಾವೆಲ್ಲರೂ ಸುಖ ನಿದ್ದೆಯ, ಸಿಹಿ ಕನಸಲ್ಲಿ  ತೇಲಾಡುತ್ತಿರುವಾಗ, ಅವನು ಗಡಿಯಾರದ ಮುಳ್ಳನ್ನು ಓವರ್‌ಟೇಕ್‌ ಮಾಡುವ ಆಸಾಮಿ. ಸೂರ್ಯ ಹುಟ್ಟಿ, ನೆತ್ತಿಗೇರಿ, ಪಶ್ಚಿಮದಲ್ಲಿ ಮುಳುಗಿ, ಇನ್ನೆಲ್ಲೋ ಆ ರವಿ ಎದ್ದಾದ ಮೇಲೂ, ಚಾಲಕನ ಡ್ನೂಟಿ ಮುಗಿದಿರೋದೇ ಇಲ್ಲ. ಕತ್ತಲಲ್ಲೂ ದಡ ತೋರಿಸುವ ದೇವರಾತ. ತನ್ನ ಬಸ್ಸನ್ನೇರಿದ ಎಲ್ಲರೂ ಆತನಿಗೆ ಕುಟುಂಬದ
ಸದಸ್ಯರಂತೆಯೇ ಕಾಣಿಸುತ್ತಾರೆ. ಡೋರ್‌ನಲ್ಲಿ ನಿಂತವನಿಗೆ, “ಮೇಲೆ ಬನ್ನಿ ಸರ್‌’ ಅಂತ ವಿನಂತಿಸಿದರೆ, ಕಿಟಕಿಯಾಚೆಗೆ ಇಣುಕಿದ ಪಾಪುವಿಗೆ, “ಹೊರಗೆ ತಲೆ ಹಾಕೆºಡ ಪುಟ್ಟಾ…’ ಅಂತ ಮುದ್ದು ದನಿಯಲ್ಲಿಯೇ ಮನವಿ ಮಾಡ್ತಾನೆ.

ಮೊನ್ನೆ ಹೀಗೇ ವಾಟ್ಸಾಪ್‌ ನೋಡುತ್ತಿರುವಾಗ, ಒಂದು ಮೆಸೇಜು ಕಣ್ಣಿಗೆ ಬಿತ್ತು. “ಟೆಕ್ಕಿಗಳು ತಮ್ಮ ಹೆಂಡತಿಯ ಮುಖ ನೋಡೋದೇ ವೀಕೆಂಡ್‌ನ‌ಲ್ಲಂತೆ’ ಅಂತ. ಅದಕ್ಕೆ ಒಂದಿಷ್ಟು ಮಂದಿ, ವ್ಹಾವ್‌, ಸೂಪರ್‌ ಅಂತೆಲ್ಲ ಹೊಗಳಿದ್ದರು. ಆಗ ನನಗೆ ಕಾಡಿದ್ದು, ಈ ಡ್ರೈವರ್‌ಗಳು. ಪಾಪ ಅಲ್ವಾ? ಇವರಿಗೂ ಸಂಸಾರ ಅಂತ ಇರುತ್ತೆ ಅಲ್ವಾ? ಹೊತ್ತಲ್ಲದ ಹೊತ್ತಲ್ಲಿ ಡ್ನೂಟಿ ಮುಗಿಸಿ, ಇವರು ತಮ್ಮ ಮನೆ ಬಾಗಿಲು ತಟ್ಟುವಾಗ ಅವರೆಲ್ಲ ಮಲಗಿರುತ್ತಾರೆ. ಹಾಸಿಗೆಯ ದಿಂಬಿಗೊರಗಿ, ಕಣ್ಮುಚ್ಚಿ ಬಿಡುವಷ್ಟರಲ್ಲಿ ನಸುಕು ನಗುತ್ತಾ ಅವನನ್ನು ಎಬ್ಬಿಸುತ್ತೆ. ಬೆಳಗ್ಗೆ ತಿಂಡಿ ತಿನ್ನುವಾಗ ಈ ಡ್ರೈವರ್‌ನ ಪುಟ್ಟ ಮಗಳು ಕೇಳ್ತಾಳೆ, “ಅಮ್ಮಾ…. ಪಪ್ಪಾ ಬಂದು ಹೋದ್ರಾ?’ ಅಂತ. ಅದನ್ನು ಕೇಳಿದ ಪತ್ನಿಯ ಕಣ್ಣಂಚಿನಲ್ಲಿ ನೀರು ಜಿನುಗುತ್ತೆ. ಆದರೆ, ಇದ್ಯಾವುದೂ ಸೋಷಿಯಲ್‌ ಮೀಡಿಯಾಗಳಲ್ಲಿ ಕತೆ ಆಗುವುದೇ ಇಲ್ಲ. ಕುಟುಂಬ ದೊಂದಿಗೆ ಕಳೆಯಲು, ಇವರಿಗೆ ರಜೆ ಅಂತ ಸಿಗೋದೇ, ಬಸ್ಸಿನ ಓನರ್‌ “ತಗೋ’ ಅಂತೆಳಿ ಕೊಟ್ಟಾಗ. ಇಲ್ಲವೇ ಭಾರತ್‌ ಬಂದೋ, ಕರ್ನಾಟಕ ಬಂದೋ ಇದ್ದಾಗಲಷ್ಟೇ. ಈ ಡ್ರೈವರ್‌ಗಳ ಕಷ್ಟಕ್ಕೆ ನೀವು ಎಂದಾದರೂ ಕಿವಿಯಾಗಿದ್ದೀರಾ? ಅದೇನೋ ಅಪಾಯ ತಡೆಯಲು ಈತ ಗಕ್ಕನೆ ಬ್ರೇಕ್‌ ಒತ್ತುತ್ತಾನೆ. ಆದರೆ, ಅದಕ್ಕೆ ಬೀಳುವ ಶಾಪಗಳೆಷ್ಟು ಗೊತ್ತಾ? “ಯಾವನೋ ಅವನು ಡೈವರು..?’, “ಈ ಡ್ರೈವರ್‌ಗೆ ಗಾಡೀನೆ ಓಡೊಕೆ ಬರೋಲ್ಲ’ ಅನ್ನೋ ವ್ಯಂಗ್ಯದ ಬಾಣಗಳು ಬೆನ್ನ ಹಿಂದೆ ನಾಟುತ್ತಿರೋದು ಗೊತ್ತಿದ್ದರೂ, ನಗುನಗುತ್ತಲೇ ಆತ ಗಾಡಿ ಓಡಿಸುತ್ತಿರ್ತಾನೆ. ನಮಗ್ಯಾವತ್ತೂ ಅನ್ನಿಸೋದೇ ಇಲ್ಲ, ನಮ್ಮೆಲ್ಲರ ಜೀವ ಆತನ ಕೈಯಲ್ಲಿ ಇರುತ್ತೆ ಅಂತ.

ಅದೆಷ್ಟು ಸಲ ನಾವು ನಮ್ಮ ಜೀವ ಉಳಿಸಿದ ಡ್ರೈವರಿಗೆ ಧನ್ಯತಾಭಾವ ತೋರಿಸಿದ್ದೇವೆ? ನಮ್ಮ ಸ್ಟಾಪ್‌ ಬಂದಾಗ, ಬಸ್ಸಿಂದ ಇಳಿದು ಹೋಗುವಾಗ, ಎಂದಾದರೂ ಥ್ಯಾಂಕ್ಯೂ ಹೇಳಿದ್ದೇವೆಯೇ? ಹೋಗಲಿ, ಒಂದು ಕಿರು ನಗೆಯನ್ನಾದರೂ ಆತನತ್ತ ರವಾನಿಸಿದ್ದೇವೆಯೇ? ಖಂಡಿತಾ
ಇಲ್ಲ…

ಒಮ್ಮೆ ಹೀಗೆ ಮಾತನಾಡುತ್ತಾ, ಒಬ್ಬ ಡ್ರೈವರ್‌ ಹೇಳಿದ ನೆನಪು… “ನಾನು ಹತ್ತನೇ ಕ್ಲಾಸಲ್ಲಿ 2 ಸಬೆjಕ್ಟ್ಮಾ ತ್ರ ಪಾಸ್‌’ ಅಂದ ಆತ “ಹೌದಾ? ಯಾಕೆ ಹಾಗಾಯ್ತು?’ ಅಂದೆ. ಅವನು ತನ್ನ ಆ ದಿನಗಳ ಬಡತನದ ಕತೆಗಳನ್ನು ಹೇಳುತ್ತಾ ಹೋದ. “ನನ್ನ ಅಮ್ಮ ನನ್ನನ್ನು ಬಿಟ್ಟು ಹೋಗಿ 25 ವರುಷಗಳಾದವು. ಆಗ ನಾನು 10ನೇ ಕ್ಲಾಸಿನ ಪರೀಕ್ಷೆಗೆ ಹೊರಡಲು ಅಣಿಯಾಗಿದ್ದೆ’ ಅಂದಾಗ, ಯಾಕೋ ನಾನೇ ಫೇಲ್‌ ಆದಂತೆ ಅನ್ನಿಸಿಬಿಟ್ಟಿತು. ಅಮ್ಮನಿಲ್ಲದ ಆ ಸಮಯ ನಿಜಕ್ಕೂ ಅಯೋಮಯ. ಹೀಗಿದ್ದೂ ಎರಡು ಸಬೆjಕ್ಟ್‌ನಲ್ಲಿ ಪಾಸ್‌ ಆಗಿದ್ದಾನಂದ್ರೆ, ನಿಜಕ್ಕೂ ಗ್ರೇಟೇ ಅಲ್ವೇ?

ಒಬ್ಬ ಡ್ರೈವರೇ ಏಕೆ, ನಾವು ನಮ್ಮ ಜೀವನದಲ್ಲಿ ಅನೇಕರಿಗೆ ಥ್ಯಾಂಕ್ಸ್‌ ಹೇಳಿರುವುದಿಲ್ಲ. ಮೈ ಕೊರೆಯುವ ಚಳಿಯಲ್ಲಿ, ಜಡಿ ಮಳೆಯಲ್ಲಿ, ಅದನ್ನೆಲ್ಲ ಲೆಕ್ಕಿಸದೇ ಮನೆ ಬಾಗಿಲಿಗೆ ಪೇಪರ್‌ ಹಾಕುವ ಹುಡುಗನ ಮುಖವನ್ನು ನಾವು
ನೋಡಿಯೇ ಇಲ್ಲ. ಕಸ ವಿಲೇವಾರಿ ಮ ಡುವವನ, ಕೊರಿಯರ್‌ ತಂದು ಕೊಡುವ ಹುಡುಗನಿಗೆ ನಾವ್ಯಾವತ್ತೂ ಸೆ„ಲೇ ಕೊಟ್ಟಿಲ್ಲ. ಎಟಿಎಂನಿಂದ ಸಾವಿರಾರು ರೂ. ದುಡ್ಡು ಬಿಡಿಸಿಕೊಂಡು, ಹಮ್ಮಿನಲ್ಲಿ ಮರಳುವಾಗ ಅಲ್ಲೇ ಬಾಗಿಲಲ್ಲಿ ನಿಂತ ಸೆಕ್ಯೂರಿಟಿ ಅಜ್ಜನಿಗೂ ಒಂದು ಥ್ಯಾಂಕ್ಸ್‌ ಹೇಳಿದವರಲ್ಲ, ನಾವು. ನಮ್ಗೆ ಗೊತ್ತು… ಆ ಥ್ಯಾಂಕ್ಸ್‌ಗೆ ಯಾವುದೇ ಕರೆನ್ಸಿ ಖರ್ಚಾಗೋದಿಲ್ಲ; ನಮ್ಮ ಡೇಟಾವೂ ಕರಗುವುದಿಲ್ಲ; ಜೇಬಿನಿಂದ ಹಣವೂ ಪುಸಕ್ಕನೆ ಜಾರಿ ಹೋಗುವುದಿಲ್ಲ; ಮಿಗಿಲಾಗಿ, ಜಿಎಸ್‌ಟಿಯೇ ಬೀಳ್ಳೋದಿಲ್ಲ… ಆದರೂ, ನಾವು ಕಂಜೂಸ್‌ಗಳು! ಯಾಕೋ ಗೊತ್ತಿಲ್ಲ..

ರಕ್ಷಿತಾ ಪ್ರಭು, ಉಡುಪಿ

ಟಾಪ್ ನ್ಯೂಸ್

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

Wadi-Pro

Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್‌ ಪ್ರತಿಭಟನೆ, ವಾಡಿ ಬಂದ್

1-bharat

Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ

9

Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.