ಬೇಕು ಉತ್ತರ, ಕೊಡು ಬಾರೋ ಹತ್ತಿರ
Team Udayavani, Oct 17, 2017, 8:35 AM IST
ಹಾಯ್ ಪ್ರಾಣದೊಲವೆ,
ಹೇಗಿದ್ದೀಯೋ? ಯಾಕೆ ನಿಂಗೆ ಪ್ರತಿ ಲೆಟರ್‌ನಲ್ಲೂ ಹಾಯ್ ಅಂತ ಹೇಳ್ತೀನಿ ಗೊತ್ತಾ? ಆ ಪದವೇ ಅಲ್ವಾ ನಮ್ಮಿಬ್ಬರ ಮೊದಲ ಭೇಟಿಯಲ್ಲಿ, ಮೊದಲ ಸಂಭಾಷಣೆಯಲ್ಲಿ ಉದುರಿದ್ದು. ಪ್ರತಿಯೊಬ್ಬ ಪ್ರೇಮಿಯೂ ಪ್ರೇಮ ಪತ್ರದಲ್ಲಿ ತನ್ನ ಪ್ರೀತಿಯ ಹೊಗಳಿಕೆಯನ್ನು ದಾಖಲಿಸುತ್ತಾನೆ. ಆದರೆ, ನಾನಿಂದು ಹೇಳಹೊರಟಿರುವುದು ನನ್ನ ಮನಸ್ಸಿನಲ್ಲಿ ಆಗುತ್ತಿರುವ ತುಮುಲವನ್ನು. ಇವತ್ತು ತಂಬಾ ಒಂಟಿಯಾಗಿ ಇರಬೇಕು ಅನ್ನಿಸುತ್ತಿದೆ. ಇದರ ಅರ್ಥ ನನಗೆ ಬೇಜಾರಾಗಿದೆ ಅಂತಲ್ಲ. ಬದಲಿಗೆ ನಿನ್ನೊಂದಿಗೆ ಮಾತಾಡಬೇಕಿದೆ. ನನ್ನೆದೆಯಲ್ಲಿ ಅಚ್ಚಳಿಯದೆ ಪ್ರೀತಿಯ ಹೊನಲನ್ನ ಹರಿಸಿ ಕೂತಿರುವ ಪ್ರೇಮಮೂರ್ತಿಯ ನೆನಪಿನೊಂದಿಗೆ, ಅವನಾಸೆಯ ಅಲೆಗಳೊಂದಿಗೆ, ನನ್ನಾಸೆಯ ಕನಸಿನೊಂದಿಗೆ ಕೂತು ಮಾ ತಾಡಬೇಕಿದೆ. ನಮ್ಮ ಬದುಕಿನ ಬಗ್ಗೆ, ಕನಸನ್ನು ನನಸಾಗಿಸಿ ಜೀವನ ಕಟ್ಟಿಕೊಳ್ಳುವ ಸಲುವಾಗಿ ಚರ್ಚೆ ನಡೆಸಬೇಕಿದೆ. ನಿನಗೆ ತಿಳಿದಿದೆ, ನಾನೆಷ್ಟು ಸ್ವತಂತ್ರವಾಗಿ ನಲಿಯಬೇಕೆಂಬ ಆಸೆ ಹೊತ್ತವಳು ಎಂದು. ಎಲ್ಲ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಬದುಕಬೇಕೆಂದುಕೊಂಡವಳು ಎಂದು. ಆದರೆ, ನನಗೇ ಗೊತ್ತಿಲ್ಲದಂತೆ ಈ ಸಮಾಜ ನಿರ್ಮಿಸಿರುವ ಬಂಧನದೊಳಗೆ ಸಿಲುಕಿ ತೊಳಲಾಡುತ್ತಿದ್ದೇನೆ.
ಈ ಸಮಾಜ ನನಗೆ “ಹುಚ್ಚಿ’ ಎಂಬ ಹಣೆಪಟ್ಟಿ ನೀಡಿದೆ. ಆದರೂ ಒಂಥರಾ ಖುಷಿಯಿದೆ ನನಗೆ. ಏಕೆಂದರೆ, ಎಲ್ಲರಿಗೂ ಸಂಪತ್ತು ಹೊಂದುವ ಹುಚ್ಚು, ಕೆಲವರಿಗೆ ನೆಲದ ಹುಚ್ಚು, ಇನ್ನು ಹಲವರಿಗೆ ಮತ್ತೂಬ್ಬರಿಗೆ ಹಿಂಸಿಸಿ ಆನಂದಪಡುವ ಹುಚ್ಚು, ಮಗದೊಬ್ಬರಿಗೆ ಚುಚ್ಚಿ ನುಡಿಯುವ ಹುಚ್ಚು, ಇರಿಯುವ, ಉರಿಯುವ… ಹೀಗೆ ಏನೇನೋ ಹುಚ್ಚು. ಆದರೆ, ನನಗೆ ಇರುವುದೊಂದೇ, ಓದನ್ನು ಆರಾಧಿಸುವುದು. ಅದರಲ್ಲಿ ಯಾರೊಬ್ಬರಿಗೂ ತೊಂದರೆ ನೀಡದ ಸಾತ್ವಿಕ ಸ್ಥಿತಿ ಇದ್ದರೂ ನನ್ನಿಷ್ಟದಂತೆ ಬದುಕಲು ಸಮಾಜವೇಕೆ ಒಪ್ಪುತ್ತಿಲ್ಲ, ಒಪ್ಪುವುದಿಲ್ಲ? ಅಲ್ಲಿನ ನಿಬಂ ಧನೆಗಳಿಗೆ, ಅರ್ಥವಿರದ ನಿಯಮಗಳಿಗೆ ನಾನೇಕೆ ನನ್ನ ಕನಸುಗಳನ್ನು ಚಿವುಟಬೇಕು? ತಿಳಿಯುತ್ತಿಲ್ಲ.
ಇಂಥ ಅದೆಷ್ಟೋ ಪ್ರಶ್ನೆಗಳು, ವ್ಯಥೆಗಳು ನನ್ನ ಹೃದಯಾಂತರಾಳವನ್ನು ಪ್ರತಿದಿನ ಬಾಧಿಸುತ್ತಿವೆ. ನಾನೇನು ಆದರ್ಶದ ಕೂಸಲ, ನನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಮೂಟೆ ಕಟ್ಟಿ ಮತ್ತೂಬ್ಬರಿಗಾಗಿ ತ್ಯಾಗ ಮಾಡುತ್ತಾ ಪೂರ್ತಿ ಜೀವನವ ಕೊರಗುತ್ತಾ ಕಳೆಯಲು. ಆದರೂ ಅನಿವಾರ್ಯವಾಗಿ ಅಂಥದೊಂದು ಸಂಕಟಕ್ಕೆ ಸಿಲುಕಿದ್ದೇನೆ. ಈ ಸಂಕಟಕ್ಕೆಲ್ಲ ಪರಿಹಾರ ಸಿಗುತ್ತದೆಂಬ ವಿಶ್ವಾಸ ನನಗಿದೆ ಕಣೋ. ಅದುವೇ ನಿನ್ನ ಪ್ರೀತಿ. ಬದುಕು ಯಾಕಿಷ್ಟು ಜಿಗುಟು? ಸಮಸ್ಯೆಗಳು, ವ್ಯಥೆಗಳು ಬೆಂಬಿಡದಂತೆ ಅಂಟಿಕೊಂಡು ಬರುತ್ತವೆ ಜಿಗಣೆಯ ಹಾಗೆ? ನನ್ನೆಲ್ಲ ನೋವಿಗೆ, ಪ್ರಶ್ನೆಗಳಿಗೆ ಉತ್ತರ ನೀನು ಮತ್ತು ನಿನ್ನ ಪ್ರೀತಿ ಮಾತ್ರ. ಉತ್ತರ ತಿಳಿಸಿ ಮನಸ್ಸಿನ ಭಾರವನ್ನು ಕಡಿಮೆಗೊಳಿಸು.
ಇಂತಿ ನಿನ್ನ
ಎಡೆಯೂರು ಪಲ್ಲವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.