ಋಣಂ ಕೃತ್ವಾ…


Team Udayavani, May 12, 2020, 8:32 AM IST

runam-krtva000

ಜೇಮ್ಸ್‌ ವೆಸ್ಲರ್‌, 19ನೇ ಶತಮಾನದ ಖ್ಯಾತ ಚಿತ್ರಕಲಾವಿದರಲ್ಲಿ ಒಬ್ಬ. ಹುಟ್ಟಿದ್ದು ಅಮೆರಿಕದ ಮೆಸಾಚುಸೆಟ್ಸ್ನಲ್ಲಾದರೂ, ಬದುಕಿನ ಉತ್ತರಾರ್ಧವನ್ನು ಈತ ಕಳೆದದ್ದು, ಇಂಗ್ಲೆಂಡಿನ ಲಂಡನ್‌ ನಗರದಲ್ಲಿ. ಅವನ ಪೀಕಾಕ್‌ ರೂಮ್,  ಫೈಟಿಂಗ್‌ ಪೀಕಾಕ್ಸ್, ಸಿಂಪನಿ ಇನ್‌ ವೈಟ್‌, ಎಟ್‌ ದ ಪಿಯಾನೋ ಮುಂತಾದ ಕಲಾಕೃತಿಗಳು, ಜಗತ್ತಿನ ಪ್ರಮುಖ ವಸ್ತು ಸಂಗ್ರಹಾಲಯ ಗಳಲ್ಲಿ, ಆರ್ಟ್‌ ಗ್ಯಾಲರಿಗಳಲ್ಲಿ ಪ್ರದರ್ಶನಕ್ಕಿವೆ.

ವೆಸ್ಲರ್‌ನ ಕಲಾಕೃತಿಗಳು, ಈಗ ಹಲವು ಸಾವಿರ  ಡಾಲರು  ಗಳಷ್ಟು ಬೆಲೆಬಾಳುತ್ತ   ವಾದರೂ, ಆತ ಬದುಕಿದ್ದ ಕಾಲದಲ್ಲಿ, ಅವೇನೂ ಅಂಥ ದೊಡ್ಡ ಶ್ರೀಮಂತಿಕೆಯನ್ನು ತಂದುಕೊಡಲಿಲ್ಲ. ವೆಸ್ಲರ್‌ ಕಲಾವಿದನಷ್ಟೇ ಅಲ್ಲ, ಮಾತುಗಾರಿಕೆಯ ಕಲೆ ಅರಿತವನು ಕೂಡ. ಒಮ್ಮೆ, ಪಾರ್ಟಿಯೊಂದರಲ್ಲಿ ಒಬ್ಟಾಕೆ, “ನೀವು ಹುಟ್ಟಿದ್ದೆಲ್ಲಿ?’ ಎಂದು ಕೇಳಿದಳಂತೆ. ವೆಸ್ಲರ್‌ “ಲಾವೆಲ…’ ಎಂದು ಉತ್ತರಿಸಿದ.

ಅದು, ಮೆಸಾಚುಸೆಟ್ಸ್ ಪಟ್ಟಣದಲ್ಲಿದ್ದ ಸಣ್ಣ ಪ್ರಾಂತ್ಯ. ಆಗ ಅದು ಆರ್ಥಿಕವಾಗಿ ಹಿಂದುಳಿದ್ದವರ ನೆಲೆಯಾಗಿತ್ತು. ಅಲ್ಲಿನ ಜನರಿಗೆ ಶಿಷ್ಟಾಚಾರ ಗೊತ್ತಿಲ್ಲ ಎಂದು ಅಮೆರಿಕನ್ನರೇ ಭಾವಿಸಿದ್ದ ಕಾಲ ಅದು. ಅಂದಮೇಲೆ, ಲಂಡನ್ನಿನ ಆ ಕುಲೀನ ಮಹಿಳೆಗೆ, ಈತನ ಮೇಲೆ ಅದೆಷ್ಟು ಕುತ್ಸಿತ ಭಾವ ಬಂದಿರಬಹುದು ಎಂದು ಊಹಿಸಬಹುದು. “ಓಹ್‌! ಆ  ಜಾಗದಲ್ಲೇ? ಹೋಗಿ ಹೋಗಿ ಅಂಥ ಜಾಗದಲ್ಲೇಕೆ ಹುಟ್ಟಿದಿರಿ?’ ಎಂದು ಕೇಳಿದಳು ಆಕೆ.

“ಏನು ಮಾಡಲಿ ಮೇಡಮ…? ಹುಟ್ಟುವ ಸಮಯದಲ್ಲಿ, ತಾಯಿಯ ಬಳಿ ಇರಬೇಕೆಂಬುದು ನನ್ನ ಬಯಕೆಯಾಗಿತ್ತು’ ಎಂದು ಉತ್ತರಿಸಿದ ವೆಸ್ಲರ್‌.  ಜಾಣ ಮಾತಿಗೆ ಮಾತ್ರವಲ್ಲ, ಕಟುವಾಗಿ ಟೀಕೆ ಮಾಡುವುದಕ್ಕೂ ಆತ ಹೆಸರಾಗಿದ್ದ. ವೆಸ್ಲರ್‌ನ ದೌರ್ಬಲ್ಯವಿದ್ದುದು ದುಂದುವೆಚ್ಚದಲ್ಲಿ. ಅವನ ಕೈಯಲ್ಲಿ ಕಾಸು ನಿಲ್ಲುತ್ತಿರಲಿಲ್ಲ. ಅವರಿವರಿಂದ ಕಡ ಕೇಳುವುದು ಮಾಮೂಲಿಯಾಯಿತು.  ಸಾಲದ ಬೆಟ್ಟ ಬೆಳೆಯಿತು.

ಕಡೆಗೊಮ್ಮೆ,  ಸಾಲಗಾರರು ಮನೆಗೆ ಎಡತಾಕಿದರು. ಮಾತಿನ ಮಲ್ಲನಾದ್ದರಿಂದ, ವೆಸ್ಲರ್‌ ಹಾಗೆ ಬಂದವರನ್ನೆಲ್ಲ ಒಂದಿಲ್ಲೊಂದು ನೆಪ, ಕತೆ ಹೇಳಿ ಸಾಗಹಾಕುತ್ತಿದ್ದ. ಆದರೆ ಅದೊಂದು ದಿನ ಬಂದ ವ್ಯಕ್ತಿ ಮಾತ್ರ, ಸಾಲ ವಸೂಲು ಮಾಡದೆ ವಾಪಸಾಗುವುದಿಲ್ಲ ಎಂದು ಹಠ ಹಿಡಿದು ಕೂತ. ವೆಸ್ಲರ್‌ನ ಮಾತಿನ ಬತ್ತಳಿಕೆಯಲ್ಲಿದ್ದ ಬಾಣಗಳೆಲ್ಲ ಖರ್ಚಾದವು. ಕೊನೆಯ ಅಸOಉ ಎಂಬಂತೆ, ಒಂದೊಳ್ಳೆಯ ಶಾಂಪೇನ್‌ ಬಾಟಲಿ ತಂದು, ಅವನು ಆ ವ್ಯಕ್ತಿಯ  ಮುಂದಿಟ್ಟ.

ಕುಡಿಸಿ ಅವನನ್ನು ಸಮಾಧಾನಪಡಿಸೋಣ ಎಂಬುದು ವೆಸ್ಲರನ ಹಂಚಿಕೆ! ಅದು ತುಂಬಾ ದುಬಾರಿಯಾದ ಶಾಂಪೇನ್‌. ಸಾಲ ಕೊಟ್ಟವನಿಗೆ ಆ ಬಾಟಲನ್ನು ನೋಡುತ್ತಲೇ ಮತ್ತಷ್ಟು ಉರಿಯಿತು. “ವೆಸ್ಲರ್‌ ಅವರೇ, ಕೈಯಲ್ಲಿ  ಕಾಸಿಲ್ಲ ಎನ್ನುತ್ತೀರಿ. ಇಷ್ಟೊಂದು ಬೆಲೆಯ ಮದ್ಯದ ಬಾಟಲಿಗೆ ಹಣ ಹೇಗೆ ಹೊಂದಿಸಿದಿರಿ?’ ಎಂಬುದನ್ನು ಹೇಳಿಬಿಡಿ ಎಂದನಾತ. ಬಾಟಲಿಯ ಮುಚ್ಚಳ ತೆಗೆದು, ಒಂದಷ್ಟು ಮದ್ಯವನ್ನು ಗ್ಲಾಸಿಗೆ ಸುರಿಯುತ್ತಾ ವೆಸ್ಲರ್‌ ಹೇಳಿದ: “ಇದಕ್ಕಿನ್ನೂ  ನಾನು ದುಡ್ಡು ಕೊಟ್ಟಿಲ್ಲ ಸ್ವಾಮಿ!’

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.