ಕಾಡು ಫಾಧರ್ ಗಂಧದಗುಡಿಯ ರಕ್ಷಕರಾಗಿ


Team Udayavani, Apr 10, 2018, 4:26 PM IST

kaadu-father.jpg

ಒಂದು ದೇಶದ ಸಾಮರ್ಥ್ಯವನ್ನು ಆಯಾ ದೇಶದ ಸಂಪನ್ಮೂಲದಿಂದ ನಿರ್ಧರಿಸಲಾಗತ್ತದೆ. ಅದರಲ್ಲಿ ಜನಸಂಪತ್ತು ಒಂದು ಭಾಗವಾದರೆ ನೈಸರ್ಗಿಕ ಅರಣ್ಯ ಸಂಪತ್ತು ಮತ್ತೂಂದು ಭಾಗ. ಹೀಗಾಗಿ ಮಾನವ ಸಂಪನ್ಮೂಲದ ಉಳಿವಿಗಾಗಿ ಅರಣ್ಯದ ರಕ್ಷಣೆ ಅನಿವಾರ್ಯ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಸಂಪತ್ತಿನ ಲೂಟಿ, ವನ್ಯಮೃಗಗಳ ಬೇಟೆ ಇತ್ಯಾದಿಗಳನ್ನು ತಡೆಯಲು ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಅರಣ್ಯದ ಸಂರಕ್ಷಣೆ, ಪರಿಸರ ಜಾಗೃತಿಯನ್ನೇ ಪ್ರಮುಖ ಆಶಯವಾಗಿ ಹೊಂದಿರುವ ಅರಣ್ಯ ಇಲಾಖೆಯಲ್ಲಿ ಅರಣ್ಯರಕ್ಷಕ, ರೇಂಜರ್‌, ಡೆಪ್ಯುಟಿ ರೇಂಜ್‌ ಆಫೀಸರ್‌ ಸೇರಿ ಒಟ್ಟು 736 ಹುದ್ದೆಗಳಿಗೆ ಈಗ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಜನಸಂಖ್ಯಾ ಸ್ಫೋಟ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ದೇಶದ ಅರಣ್ಯ ಸಂಪತ್ತು ಸಾಕಷ್ಟು ನಾಶವಾಗಿದೆ. ಕಾಡಿನ ಮಾರಣಹೋಮ ಪ್ರತ್ಯಕ್ಷ ಪರೋಕ್ಷವಾಗಿ ನಿರಂತರವಾಗಿ ನಡೆಯುತ್ತಲೇ ಇದೆ. ಬೇಸಿಗೆ ಪ್ರಾರಂಭವಾಯಿತೆಂದರೆ ಮೀಸಲು ಅರಣ್ಯ ಪ್ರದೇಶ ಮತ್ತು ಕಾಡಂಚಿನ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗುತ್ತದೆ. ಏಕೆಂದರೆ, ಯಾವ ಆಗಂತುಕರು ಬಂದು ಕಾಡಿಗೆ ಬೆಂಕಿ ಹಚ್ಚುತ್ತಾರೋ ಎನ್ನುವ ಭಯ.

ಜೊತೆಗೆ ಮಾನವ-ಪ್ರಾಣಿ ಸಂಕುಲದ ಸಂಘರ್ಷದಿಂದಾಗಿ ಹಾಗೂ ಆಹಾರದ ಸಮಸ್ಯೆಯಿಂದಾಗಿ ಆಗಿಂದಾಗ್ಗೆ ಕಾಡಿನಿಂದ ನಾಡಿಗೆ ವನ್ಯಮೃಗಗಳು ದಾಳಿ ಮಾಡುವುದೂ ಸಾಮಾನ್ಯವಾಗಿದೆ. ಇಂಥ ಸಮಯದಲ್ಲಿ ಕಾಡುಪ್ರಾಣಿಗಳಿಂದ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದೇ ಅರಣ್ಯ ಇಲಾಖೆ. ಚಿರತೆ, ಹುಲಿಗಳಿಂದ ದಾಳಿಯಾದಾಗ ಬೋನುಗಳನ್ನಿಟ್ಟು ನಮ್ಮನ್ನು ರಕ್ಷಿಸುವವರು ಇದೇ ಅರಣ್ಯ ಇಲಾಖೆಯ ಸಿಬ್ಬಂದಿ.

ಆನೆಗಳ ಹಿಂಡು ದಂಡಿನೊಂದಿಗೆ ಜಮೀನುಗಳಿಗೆ ದಾಳಿ ಮಾಡಿದಾಗ ಅಥವಾ ಸಲಗವೊಂದು  àಳಿಡುತ್ತಾ ಊರಿಗೇ ನುಗ್ಗಿ ಬಂದಾಗ ಅವುಗಳನ್ನು ಕಾಡಿಗೆ ಅಟ್ಟಲು ಬಗೆಬಗೆಯಲ್ಲಿ ಪ್ರಯತ್ನಿಸಿ ಯಶಸ್ಸು ಕಾಣುವುದೂ ಇದೇ ಅರಣ್ಯ ಇಲಾಖೆ ಸಿಬ್ಬಂದಿ. ಪೊಲೀಸ್‌ ಇಲಾಖೆಯಷ್ಟೇ ಮಹತ್ವದ ಜವಾಬ್ದಾರಿ ಹೊಂದಿರುವ ಅರಣ್ಯ ರಕ್ಷಕ, ರೇಂಜರ್‌, ಡೆಪ್ಯುಟಿ ರೇಂಜರ್‌ ಆಫೀಸರ್‌, ಫಾರೆಸ್ಟ್‌ ವಾಚರ್‌ ಸೇರಿ ಒಟ್ಟು 736 ಹುದ್ದೆಗಳಿಗೆ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಲಾಗಿದೆ. 

ಹುದ್ದೆಗಳು
-ಅರಣ್ಯ ರಕ್ಷಕ- 240
-ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ- 329
-ಅರಣ್ಯ ವೀಕ್ಷಕ- 94
-ವಲಯ ಅರಣ್ಯಾಧಿಕಾರಿ – 73
-ಬ್ಯಾಕ್‌ಲಾಗ್‌ ವಲಯ ಅರಣ್ಯಾಧಿಕಾರಿ-5
-ಒಟ್ಟು 736 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಯೋಮಿತಿ- ವಿದ್ಯಾರ್ಹತೆ: ಅರಣ್ಯ ರಕ್ಷಕ, ಉಪವಲಯ ಅರಣ್ಯಾಧಿಕಾರಿ, ಮೋಜಣಿದಾರ, ಅರಣ್ಯ ವೀಕ್ಷಕ ಹುದ್ದೆಗೆ ಹುದ್ದೆಗಳಿಗೆ 18ರಿಂದ 32ರವರೆಗೆ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಪರಿಶಿಷ್ಟರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಸಾಮಾನ್ಯ ವಿದ್ಯಾರ್ಹತೆ ಜೊತೆಗೆ ದೇಹದಾಡ್ಯ ಪರೀಕ್ಷೆ ಇರುತ್ತದೆ. ಕ್ರೀಡಾ ಕೋಟಾದ ಅವಕಾಶ ಬಳಸಿಕೊಳ್ಳಬಹುದು.

ಅರಣ್ಯ ವೀಕ್ಷಕ ಹುದ್ದೆಗಳಿಗೆ ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಕಾರವಾರ, ಕೊಡಗು, ಮಂಗಳೂರು ವೃತ್ತಗಳಿಗೆ ಹುದ್ದೆಗಳನ್ನು ಭಾಗ ಮಾಡಲಾಗಿದೆ. ವಲಯ ಅರಣ್ಯಾಧಿಕಾರಿ ಮತ್ತು ಬ್ಯಾಕ್‌ಲಾಗ್‌ ವಲಯ ಅರಣ್ಯಾಧಿಕಾರಿ 56 ಹುದ್ದೆಗಳಿಗೆ ಬಿಎಸ್ಸಿ(ಅರಣ್ಯಶಾಸ್ತ್ರ) ಪದವಿ ಹಾಗೂ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಪದವೀಧರರಿಗೆ 17 ಹುದ್ದೆಗಳನ್ನು ವಿಭಾಗಿಸಲಾಗಿದೆ. ಅರಣ್ಯಶಾಸ್ತ್ರ, ತೋಟಗಾರಿಕೆ, ಪಶುವಿಜ್ಞಾನದಲ್ಲಿ ಪದವಿ ಅಥವಾ ಎರಡಕ್ಕಿಂತ ಹೆಚ್ಚು ವಿಷಯದಲ್ಲಿ ಬಿಎಸ್ಸಿ ಪದವಿ ಹೊಂದಿರಬೇಕು. 

ಆಯ್ಕೆ: ಅರಣ್ಯ ರಕ್ಷಕ, ಉಪವಲಯ ಅರಣ್ಯಾಧಿಕಾರಿ, ಮೋಜಣಿದಾರ, ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ, ದೂರದೃಷ್ಟಿ, ಸಮೀಪ ದೃಷ್ಟಿ, ಶ್ರವಣ ಪರೀಕ್ಷೆ,  ದೈಹಿಕ ತಾಳ್ವಿಕೆ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. 

ವಲಯ ಮತ್ತು ಬ್ಯಾಕ್‌ಲಾಗ್‌ ವಲಯ ಅರಣ್ಯಾಧಿಕಾರಿ ಹುದ್ದೆಗೆ 200-200 ಅಂಕಗಳ ಪೂರ್ವ ಮತ್ತು ಮುಖ್ಯ ಪರೀಕ್ಷೆ ನಡೆಲಾಗುತ್ತದೆ. ಪೂರ್ವ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ(100) ಮತ್ತು ಆ್ಯಪ್ಟಿಟ್ಯೂಡ್‌(100 ಅಂಕ) ಲಿಖೀತ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಪೂರ್ವಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಮುಖ್ಯ ಪರೀಕ್ಷೆಗೆ ಅವಕಾಶ.

ಇಲ್ಲಿ ಕನ್ನಡ, ಇಂಗ್ಲಿಷ್‌ ಕಡ್ಡಾಯ ಮತ್ತು ಅರಣ್ಯ ವಿಷಯಗಳ ಪರೀಕ್ಷೆ, ಐಚ್ಛಿಕ ವಿಷಯಗಳ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಇಲ್ಲಿಯೂ ದೇಹದಾಡ್ಯ ಪರೀಕ್ಷೆ ಸಾಮಾನ್ಯವಾಗಿದ್ದು ಪುರುಷರಿಗೆ ಎತ್ತರ 163 ಸೆ.ಮೀ ಮತ್ತು ಎದೆ ಸುತ್ತಳತೆ ಗರಿಷ್ಠ 79 ಸೆ.ಮೀ, ಕನಿಷ್ಠ 74 ಸೆ.ಮೀ ಇರಬೇಕು. ಮಹಿಳೆಯರಿಗೆ ಎತ್ತರ 150 ಮೀಟರ್‌ ಇರಬೇಕು. 

ಅರ್ಜಿ ಸಲ್ಲಿಕೆ: ಎಲ್ಲ ಹುದ್ದೆಗಳಿಗೂ ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕಾಗಿದ್ದು, ಅರಣ್ಯ ರಕ್ಷಕ, ರೇಂಜ್‌, ಡೆಪ್ಯುಟಿ ರೇಂಜ್‌ ಆಫೀಸರ್‌ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಮೇ 8 ಕಡೆಯ ದಿನವಾಗಿದ್ದು, ಫಾರೆಸ್ಟ್‌ ವಾಚರ್‌(ಅರಣ್ಯ ವೀಕ್ಷಕ) ಹುದ್ದೆಗೆ ಮೇ 15 ಕಡೆಯ ದಿನವಾಗಿದೆ ಹೆಚ್ಚಿನ ಮಾಹಿತಿಗೆ www.aranya.gov.in ಮತ್ತು www.karnatakaforest.gov.in ಜಾಲತಾಣವನ್ನು ಸಂಪರ್ಕಿಸಿ.

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.