ಬದುಕಿಗೆ ಚಿನ್ನದ ಹಾದಿ

ಜುಮ್ಮ್ ಅಂತ ಜೆಮ್ಮಾಲಜಿ ಕಲಿಯೋಕೆ ಮುತ್ತಿನಂಥ ಅವಕಾಶ

Team Udayavani, Jul 16, 2019, 5:15 AM IST

jewellery-designing-course-in-India-copy-copy

ಭಾರತ, ಶತ ಶತಮಾನಗಳಿಂದಲೂ ಅನರ್ಘ್ಯ ಮುತ್ತು, ರತ್ನಗಳಿಗೆ ಹೆಸರಾಗಿದೆ. ಮೌರ್ಯರ ಆಡಳಿತ, ಗುಪ್ತರ ಸ್ವರ್ಣಯುಗ, ವಿಜಯನಗರ ಕಾಲದ ಐಶ್ವರ್ಯ ವರ್ಣನೆಯನ್ನು ಮಾಡುವಾಗ, ಮೊಗಲರ ವೈಭವವನ್ನು ಚಿತ್ರಿಸುವಾಗ, ಮುತ್ತು ರತ್ನ, ವಜ್ರ, ವೈಡೂರ್ಯಗಳ ವರ್ಣನೆ ಇಲ್ಲದೆ ಅವು ಮುಗಿಯುವುದೇ ಇಲ್ಲ. ಹಿಂದೊಂದು ಕಾಲದಲ್ಲಿ ಭಾರತವು ಜಗತ್ತಿನ ಏಕಮೇವಾದ್ವಿತೀಯ ರಾಷ್ಟ್ರವೆಂದು ಖ್ಯಾತಿಯಾಗಿದ್ದು ಕೂಡ ಈ ಮುತ್ತು, ರತ್ನಗಳ ಉತ್ಪಾದನೆ ಮತ್ತು ಸಂಸ್ಕರಣದಲ್ಲಿ. ಇಂದಿಗೂ ಸಹಾ ಭಾರತ ಅನರ್ಘ್ಯರತ್ನಗಳಾದ ವಜ್ರ, ವೈಡೂರ್ಯಗಳನ್ನು ಸಂಸ್ಕರಿಸುವುದರಲ್ಲಿ ವಿಶ್ವದ ನಂ.1 ದೇಶ ಅನ್ನಿಸಿಕೊಂಡಿದೆ. ಬನ್ನಿ, ಈ ವಿಶಿಷ್ಟವಾದ ರತ್ನಶಾಸ್ತ್ರದ ಬಗ್ಗೆ ಒಂದಿಷ್ಟು ತಿಳಿಯೋಣ.

ರತ್ನ ಶಾಸ್ತ್ರ ಒಂದು ಕಲೆಯೂ ಹೌದು. ವಿಜ್ಞಾನವೂ ಹೌದು. ರತ್ನಶಾಸ್ತ್ರವು ಅನರ್ಘ್ಯ ರತ್ನಗಳ ಅಧ್ಯಯನ, ಸಂಸ್ಕರಣೆ, ಬೆಲೆ ನಿರ್ಧಾರ ಮತ್ತು ಮಾರಾಟ ಮಾಡುವ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಅನರ್ಘ್ಯ ರತ್ನಗಳೆಂದರೆ, ವಜ್ರ, ಮುತ್ತು, ದವಳ, ಪಚ್ಚೆ, ವೈಢೂರ್ಯ. ರತ್ನಶಾಸ್ತ್ರವು ನೈಸರ್ಗಿಕ ಹಾಗೂ ಕೃತಕ ರತ್ನಗಳನ್ನು ಅಧ್ಯಯನ ಮಾಡುವ ವಿಶೇಷಶಾಸ್ತ್ರವಾಗಿದೆ. ಇಂದು ಕೃತಕ ವಜ್ರಗಳು, ಕೃತಕ ರತ್ನಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರಕುತ್ತದೆ. ಅಲ್ಲದೇ ಇದರದ್ದೇ ಆದ ಮಾರ್ಕೆಟ್‌ ಸೃಷ್ಟಿಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್‌/ಡೀಸೆಲ್‌ ಮತ್ತು ಚಿನ್ನವನ್ನು ಹೊರತುಪಡಿಸಿದರೆ ಅತಿ ಹೆಚ್ಚಿನ ಮೌಲ್ಯದ ವಹಿವಾಟು ನಡೆಯುವುದು ಅನರ್ಘ್ಯ ರತ್ನಗಳದ್ದೇ. ಭಾರತ ಕಳೆದ ಹಣಕಾಸು ವರ್ಷದಲ್ಲಿ 3.5 ಬಿಲಿಯನ್‌ ಡಾಲರ್‌ ಮೌಲ್ಯದ ರತ್ನಗಳನ್ನು ಆಮದು ಮಾಡಿಕೊಂಡಿದೆ. ಹೀಗಾಗಿ, ರತ್ನ ಶಾಸ್ತ್ರದ ಅಧ್ಯಯನ ಎಂಬುದು ಇಂದು ಅತಿ ಹೆಚ್ಚಿನ ಬೇಡಿಕೆ ಇರುವ ಎಜುಕೇಶನ್‌ಪ್ರೋಗ್ರಾಮ್‌ಗಳಲ್ಲಿ ಒಂದಾಗಿದೆ.
ರತ್ನಶಾಸ್ತ್ರದಲ್ಲಿ ಹಲವಾರು ರೀತಿಯ ಕೋರ್ಸ್‌ಗಳಿವೆ. ಪೋಸ್ಟ್‌ ಗ್ರಾಜಿಯೇಷನ್‌ ಡಿಪ್ಲೊಮೊ ಇನ್‌ ಜೆಮ್ಮಲಾಜಿಕಲ್‌, ಡಿಪ್ಲೊಮೊ ಇನ್‌ ಡೈಮಂಡ್‌ ಗ್ರೇಡಿಂಗ್‌, ಡಿಪ್ಲೊಮೋ ಇನ್‌ ಜ್ಯುಯಲರಿ ಡಿಸೈನಿಂಗ್‌ ಹೀಗೆ ನಾನಾ ರೀತಿಯ ಕೋರ್ಸ್‌ಗಳು ಇವೆ. ಇವುಗಳಲ್ಲಿ ಬಹುತೇಕ ಆನ್‌ಲೈನ್‌ ಕೋರ್ಸಗಳು, ದೂರಶಿಕ್ಷಣ ಕೋರ್ಸುಗಳ ಇವೆ. ಹೀಗಾಗಿ, ಒಂದು ವಾರದಿಂದ ನಾಲ್ಕು ತಿಂಗಳ ಅವಧಿಯಲ್ಲಿ ಮುಗಿದು ಹೋಗುವಂಥ ಕೋರ್ಸ್‌ಗಳಿವೆ. ಇವಲ್ಲದೆ, ಅಲ್ಪಾವಧಿ, ಪೂರ್ಣಾವಧಿ ಕೋರ್ಸ್‌ಗಳು ಲಭ್ಯವಿವೆ. ಅಂಚೆ ಮೂಲಕ ಕೂಡ ಶಿಕ್ಷಣ ಪಡೆಯಬಹುದು. ಹೆಚ್ಚಿನ ಮಾಹಿತಿ www.giionline.com ಇಲ್ಲಿ ಸಿಗುತ್ತದೆ.

ಕೆಲಸ ಎಲ್ಲಿ ಸಿಗುತ್ತೆ?
ಇವತ್ತು ರತ್ನಾಭರಣಕ್ಕೆ ಸಂಬಂಧಿಸಿದಂತೆ ಡಿಪ್ಲೊಮೊ ಪದವಿ ಗಳಿಸಿದವರಿಗೆ ಡಿಮ್ಯಾಂಡ್‌ ಜಾಸ್ತಿ ಇದೆ. ಇದಕ್ಕೆ ಕಾರಣ, ಪ್ರತಿಯೊಬ್ಬ ಗ್ರಾಹಕ ಕೂಡ ಗುಣಮಟ್ಟವನ್ನು ನೋಡುತ್ತಿರುವುದು. ಹೀಗಾಗಿ, ವಜ್ರದ ಯೋಗ್ಯತ ತಿಳಿದುಕೊಳ್ಳಲು ಪದವೀಧರರ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜ್ಯೂಯಲರಿ ಡಿಸೈನಿಂಗ್‌, ಜ್ಯುಯಲರಿ ರಿಟೈನಿಂಗ್‌ ಕ್ಷೇತ್ರಕ್ಕೆ ಬುದ್ಧಿವಂತ ಪದವೀಧರನ ಅವಶ್ಯಕತೆ ಕಾಡುತ್ತಿದೆ.

ಅಂತೆಯೇ, ಬೆಲೆ ಬಾಳುವ ಮುತ್ತು, ರತ್ನಗಳನ್ನು ಪಾಲಿಶ್‌ ಮಾಡುವುದು ಸರಿಯಾಗಿ ಕತ್ತರಿಸುವುದು ಕೂಡ ಸವಾಲಿನ ಕೆಲಸ. ವಜ್ರವನ್ನು ಪಾಲಿಶ್‌ ಮಾಡುವ ಉದ್ಯಮವಿದೆಯಲ್ಲ, ಅದು ದೇಶದ ವಿದೇಶಿ ವಿನಿಮಯದಲ್ಲಿ ದೊಡ್ಡ ಪಾಲು ಹೊಂದಿದೆ ಎಂದರೆ ಇನ್ನು, ಕೆಲಸಕ್ಕೆ ಯಾವ ರೀತಿಯ ಡಿಮ್ಯಾಂಡ್‌ ಇರಬೇಡ? ಮುತ್ತುಗಳನ್ನು ಪರೀಕ್ಷೆ ಮಾಡುವ ಲ್ಯಾಬೊರೇಟರಿಗಳಲ್ಲಿ ಕೆಲಸ ಮಾಡುವ ತಂತ್ರಜ್ಞರಿಗೆ ಯಾವತ್ತೂ ಡಿಮ್ಯಾಂಡ್‌ ಇದ್ದೇ ಇದೆ. ಮೈನಿಂಗ್‌ ಕಂಪನಿಗಳಲ್ಲಿ, ಆಭರಣಗಳ ತಯಾರಿಕಾ ಯೂನಿಟ್‌ಗಳಲ್ಲಿ, ದೊಡ್ಡ ದೊಡ್ಡ ಜ್ಯುಯಲರಿ ಶೋರೂಮ್‌ಗಳಲ್ಲಿ ಪದವಿ ಪಡೆದವರು ಬೇಕೇಬೇಕು.

ಎಲ್ಲೆಲ್ಲಿ ಕೋರ್ಸ್‌?
ಮುಂಬಯಿನ ರತ್ನ ಮತ್ತು ಆಭರಣಗಳ ರಫ್ತುದಾರರ ಒಕ್ಕೂಟದ ನೆರವಿನಿಂದ ಭಾರತ ರತ್ನ ಶಾಸ್ತ್ರ ಸಂಸ್ಥೆ (Gemmological Institute of India) 1971ರಲ್ಲಿ ಆರಂಭವಾಯಿತು. ಈ ಸಂಸ್ಥೆ, ರತ್ನಗಳಿಗೆ ಸಂಬಂಧಿಸಿದಂತೆ ಹಲವಾರು ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುತ್ತದೆ. ಅದರಲ್ಲಿ ಮುಖ್ಯವಾಗಿ-
1) ವಜ್ರಗಳ ವಿಂಗಡಣೆ
2) ಆಭರಣಗಳ ವಿನ್ಯಾಸ/ತಯಾರಿಕೆ
3) ಮುತ್ತು, ರತ್ನಗಳ ಸಂಸ್ಕರಣೆ
4) ವಜ್ರಗಳ ಸಂಸ್ಕರಣೆ ಮುಂತಾದವುಗಳ ಬಗ್ಗೆ ಹೇಳಿ ಕೊಡಲಾಗುತ್ತದೆ.
ಈ ಸಂಸ್ಥೆ ರತ್ನಗಳ ಪರೀಕ್ಷಾ ಘಟಕಗಳನ್ನು 70ರ ದಶಕದಲ್ಲೇ ಶುರುಮಾಡಿದ ಹೆಗ್ಗಳಿಕೆ ಈ ಸಂಸ್ಥೆಗೆ ಇದೆ. ಈ ರತ್ನ ಪರೀಕ್ಷಾ ಘಟಕವು ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದೆ. ಈವರೆಗೆ ಹೆಚ್ಚು ಕಮ್ಮಿ 7 ಲಕ್ಷಕ್ಕೂ ಹೆಚ್ಚು ರತ್ನ ಶಾಸ್ತ್ರಜ್ಞರನ್ನು ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಗೆ ಇದೆ. ಪಂಜಾಬ್‌ ವಿವಿ ಯೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿ ಕೂಡ ರತ್ನ ಶಾಸ್ತ್ರದ ಕೋರ್ಸ್‌ಗಳನ್ನು ನಡೆಸುತ್ತಿದೆ. ಇದಲ್ಲದೆ , ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಜೆಮಾಲಜಿ ನ್ಯೂಡೆಲ್ಲಿ,ಯಲ್ಲಿ , ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಜ್ಯೂಯಲ್ಲರಿಯಲ್ಲೂ ಕೂಡ ಕೋರ್ಸ್‌ಮಾಡಬಹುದು.

-ಡಾ. ಗೋಪಾಲಕೃಷ್ಣ

ಟಾಪ್ ನ್ಯೂಸ್

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

1

Pushpa 2: ಕಿಸಿಕ್‌ ಎಂದು ಕುಣಿದ ಶ್ರೀಲೀಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.