ನೆನಪುಗಳನ್ನು ನೇವರಿಸಿ ಮಾತಿಗೆ ಕೂತ ಘಳಿಗೆ…


Team Udayavani, Jul 11, 2017, 6:07 PM IST

nenapu.jpg

ನಮ್ಮಿಬ್ಬರ ಮಧ್ಯೆ ಇರುವ ಸ್ನೇಹವನ್ನು ಅರಿಯದೆ ಜಗತ್ತು ಬೇರೆ ರೀತಿಯ ಸಂಬಂಧ ಕಲ್ಪಿಸಿ ಗಹಗಹಿಸಿ ನಕ್ಕಾಗ ನೀನು ಮಾತ್ರ ಅಕ್ಷರಶಃ ಕುಸಿದು ಹೋದವಳಂತೆ ಬಿಕ್ಕಿ ಬಿಕ್ಕಿ ಅತ್ತದ್ದು ನನಗೀಗಲೂ ನೆನಪಿದೆ. 

ಮಳೆಗಾಲದ ಇಳಿಸಂಜೆಯಲ್ಲಿ ಬಾನ ಮಡಿಲಿಂದ ತೊಟ್ಟಿಕ್ಕುತ್ತಿಹ ಅಶ್ರುಧಾರೆ… ಅಂತರಂಗದಲ್ಲಿ ನವಿರಾದ ಭಾವನೆಗಳನ್ನು ಹುಟ್ಟು ಹಾಕುತ್ತದೆ. ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತರೆ ಸಾಕು, ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ಮಳೆಗಾಲದ ಘಳಿಗೆಗಳೇ ಅಪೂರ್ವ. ಬೆಚ್ಚಗೆ ಬಚ್ಚಿಟ್ಟುಕೊಂಡ ನೂರೆಂಟು ನೆನಪುಗಳು ಕಣ್ಣ ಮುಂದೆ ಮೆರವಣಿಗೆ ಹೊರಡುತ್ತವೆ. ಮನಸ್ಸು ಮಿಡಿಯುತ್ತದೆ. ಹೃದಯ ಹಾಡುತ್ತದೆ. ಕಣ್ಣಂಚಲ್ಲಿ ಈಗಲೋ ಆಗಲೋ ತೊಟ್ಟಿಕ್ಕುವ ಕಂಬನಿ ಸಾವಿರ ಕಥೆ ಹೇಳುತ್ತದೆ.

ಅದೊಂದು ದಿನ, ಮಳೆ ರಚ್ಚೆ ಹಿಡಿದ ಮಗುವಿನಂತೆ ಧರೆಗಿಳಿಯುತ್ತಲೇ ಇತ್ತು. ಮನೆಯಿಂದ ಛತ್ರಿ ತರಲು ಮರೆತ ನಾನು ಮರದ ಆಸರೆಗೆ ನಿಂತೆ. ದೂರದಲ್ಲಿ ಬಣ್ಣದ ಛತ್ರಿ ಬಿಚ್ಚಿಕೊಂಡು, ಇಷ್ಟಗಲ ಕಣ್ಣ ತುಂಬ ಅಸಂಖ್ಯ ಕನಸುಗಳನ್ನು ಹೊತ್ತು ಬೀಳ್ವ ಮಳೆಗೆ ಮೈಮುದ್ದೆಯಾಗಿಸಿ, ಒಂದೊಂದೇ ಹೆಜ್ಜೆಯಿಟ್ಟು ನನ್ನೆಡೆಗೆ ನಡೆದು ಬಂದೆ ನೋಡು; ಅಂಥ ಮಳೆಯಲ್ಲೂ ನನ್ನ ಹಣೆಯ ಮೇಲೆ ಬೆವರ ಸಾಲು. ಜೋರಾದ ಮಳೆಗೆ ಮುಂದೆ ಸಾಗಲಾರದೆ ನಾನಿದ್ದ ಮರದ ಕೆಳಗೆ ನೀನು ಬಂದಾಗ ಎದೆಯಲ್ಲಿ ಸಂಗೀತದ ಸಪ್ತಸ್ವರ. ನಿನ್ನ ಕಣ್ಣಿನಲ್ಲಿನ ಜೀವಂತಿಕೆ ನಿನ್ನನ್ನು ಮಾತನಾಡಿಸಲೇಬೇಕು ಎಂಬ ಹಂಬಲ ಹುಟ್ಟಿಸಿದ್ದು ಸುಳ್ಳಲ್ಲ.   

 “ಹಲೋ… ಯಾವ ಕಡೆ ಹೊರಟಿದ್ದೀರಾ? ಇವತ್ತು ಮಳೆ ನಿಲ್ಲೋ ಹಾಗೆ ಕಾಣಿ¤ಲ್ಲ ಕಣ್ರೀ. ಛತ್ರಿ ಮನೇಲೇ ಮರೆತು ಬಂದಿºಟ್ಟೆ. ಕಾಲೇಜ್‌ಗೆ ಬೇರೆ ಲೇಟಾಗ್ತಾ ಇದೆ.’ ಅಂದದ್ದೇ ತಡ… ನಿನ್ನ ಚಿನಕುರಳಿ ಮಾತಿನ ಭೋರ್ಗರೆತಕ್ಕೆ ಬೆಕ್ಕಸ ಬೆರಗಾಗಿ ಬಿಟ್ಟೆ. ಎರಡೇ ಎರಡು ನಿಮಿಷದ ಭೇಟಿ ಶಾಶ್ವತವಾದ ಸ್ನೇಹಕ್ಕೆ ತಿರುಗುತ್ತದೆ ಎಂದು ಯಾರಿಗೆ ಗೊತ್ತಿತ್ತು? ನಮ್ಮಿಬ್ಬರ ಮಧ್ಯೆ ಮಧುರ ಬಾಂಧವ್ಯವನ್ನು ಬೆಸೆದ ಮಳೆಗೆ ನಾನು ಚಿರಋಣಿ.

ಅನಂತರ ನನ್ನ ಬದುಕಿನ ಏಳು- ಬೀಳುಗಳಲ್ಲಿ ನೀನು ಭಾಗಿಯಾಗಿದ್ದು, ಬಂದ ಕಷ್ಟಗಳಿಗೆಲ್ಲ ಬೆದರಿ ನಾನು ಹತಾಶನಾಗಿ ಕುಳಿತಿದ್ದರೆ, ನೀನು ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದು, ಒಂದೇ ಒಂದು ದಿನ ನಿನ್ನನ್ನು ಕಾಣದಿದ್ದರೆ ನಾನು ಚಡಪಡಿಸುತ್ತಿದ್ದಿದ್ದು… ಇವೆಲ್ಲ ಇಂದು ಈ ಸುರಿಯುತ್ತಿರುವ ಮಳೆಯಲ್ಲಿ ನೆನಪಾಗುತ್ತಿವೆ. ನಮ್ಮಿಬ್ಬರ ಮಧ್ಯೆ ಇರುವ ಸ್ನೇಹವನ್ನು ಅರಿಯದೆ ಜಗತ್ತು ಬೇರೆ ರೀತಿಯ ಸಂಬಂಧ ಕಲ್ಪಿಸಿ ಗಹಗಹಿಸಿ ನಕ್ಕಾಗ ನೀನು ಮಾತ್ರ ಅಕ್ಷರಶಃ ಕುಸಿದು ಹೋದವಳಂತೆ ಬಿಕ್ಕಿ ಬಿಕ್ಕಿ ಅತ್ತದ್ದು ನನಗೀಗಲೂ ನೆನಪಿದೆ. “ಜಗತ್ತಿನ ಜನರ ಬಾಯಿಗೆ ಬೀಗ ಹಾಕುವುದು ಅಸಾಧ್ಯ ಕಣೇ. ಪ್ರತಿಯೊಂದಕ್ಕೂ ಕೊಂಕು ತೆಗೆಯುತ್ತದೆ ಜಗತ್ತು. ನಮ್ಮಿಬ್ಬರ ನಡುವೆ ಅಂಥ ಭಾವನೆ ಇಲ್ಲವೆಂದ ಬಳಿಕ ಜಗದ ಗೊಡವೆಗೆ ತಲೆ ಕೊಡುವುದಾದರೂ ಏಕೆ?’ ಎಂಬ ನನ್ನ ಮಾತಿಗೂ ನೀನು ಒಪ್ಪದೆ ನನ್ನನ್ನು ಬಿಟ್ಟು ನಡೆದದ್ದು ಈಗ ಇತಿಹಾಸ. ನಿನ್ನಂಥ ಚಿನ್ನದಂಥ ಗೆಳತಿಯನ್ನು ಕಳೆದುಕೊಂಡ ನಾನು ಸಂಪೂರ್ಣವಾಗಿ ಸೋತುಹೋದೆ. ಅತ್ತ ಬದುಕಲೂ ಆಗದೆ, ಇತ್ತ ಸಾಯಲೂ ಆಗದೆ ಒದ್ದಾಡಿಬಿಟ್ಟೆ. ಸಮಾಜದ ಗೊಡ್ಡು ಸಂಪ್ರದಾಯಗಳಿಗೆ ನಮ್ಮಿಬ್ಬರ ಸ್ನೇಹ ಕೊರಳು ಕೊಟ್ಟದ್ದು ಸಿಟ್ಟು ತರಿಸಿತ್ತು.

ಈಗ ಮಳೆಗಾಲ ಶುರುವಾಯಿತೆಂದರೆ ಸಾಕು, ನಿನ್ನ ಜೊತೆ ಕಳೆದ ದಿನಗಳ ನೆನಪು ಅಲೆ ಅಲೆಯಾಗಿ ನನ್ನೆದೆಗೆ ತಾಕುತ್ತದೆ. ಕೊನೆಗೊಂದು ವಿಷಾದದ ಛಾಯೆ. ಕದ್ದು ಕಣ್ಣಂಚಿಂದ ಸಣ್ಣಗೆ ಜಿನುಗುವ ನೀರ ಹನಿಗಳು ನಮ್ಮಿಬ್ಬರ ಸ್ವತ್ಛಂದ ಸ್ನೇಹಕ್ಕೆ ಸಾಕ್ಷಿ ನುಡಿಯುತ್ತವೆ. ಎಲ್ಲಿ ಹೋಯಿತು ಗೆಳತಿ ಆ ಕಾಲ? ಎಂಬ ಗೀತೆಗೆ ಮನಸ್ಸು ದನಿಗೂಡಿಸುತ್ತದೆ.

– ನಾಗೇಶ್‌ ಜೆ. ನಾಯಕ, ಬೈಲಹೊಂಗಲ

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.