“ಕ್ಯಾಮೆರಾ’ ಭಾರತ್‌ ಮಹಾನ್‌


Team Udayavani, Feb 19, 2019, 12:30 AM IST

q-14.jpg

ಲೋಕ ಸುತ್ತುತ್ತಾ, ಅಲ್ಲಿನ ಚಿತ್ರಾವಳಿಗಳನ್ನು ಸೆರೆಹಿಡಿಯುತ್ತಾ, ಬ್ಲಾಗ್‌ನಲ್ಲಿ ತನ್ನ ಅನುಭವವನ್ನು ಗೀಚುತ್ತಾ, ಮುನ್ನಡೆಯುತ್ತಿದ್ದ ಈ ಹುಡುಗನಿಗೆ ಇದ್ದಕ್ಕಿದ್ದಂತೆ ಅಪ್ಪನೇಕೋ ಕಾಡಿಬಿಟ್ಟ. ಹಲವು ವರುಷಗಳ ಹಿಂದೆ ಅಪ್ಪ ಸೈನಿಕನಾಗಿ ಓಡಾಡಿದ ಜಾಗಕ್ಕೆ ಹೋಗಿ, ಅಲ್ಲಿನ ಮಣ್ಣನ್ನು ಕಣ್ಣಿಗೊತ್ತಿಕೊಳ್ಳುವ ಕನಸು ಹುಟ್ಟಿತು. ಅಲ್ಲಿನ ಸಾಹಸ ಚಿತ್ರಗಳನ್ನು ಸೆರೆಹಿಡಿದು, “ಆರ್ಟ್‌ ಲೀವ್ಸ್‌ ಎ ಮಾರ್ಕ್‌’ ಎಂಬ ಸರಣಿಯ ಮೂಲಕ ಹುತಾತ್ಮ ತಂದೆಗೆ ಸಮರ್ಪಿಸಿದ…

ಹಿಮದ ನೆಲದ ಮೇಲೆ ನಿಂತಿದ್ದರೂ, ಅವನ ಪಾದ ಬಿಸಿಯೇರಿತ್ತು. ಕಾಶ್ಮೀರ… ಇದೇ ಸ್ವರ್ಗದಲ್ಲೇ ಅಲ್ಲವೇ ಅಪ್ಪ ಹುತಾತ್ಮನಾದುದ್ದು. ಆ ಯುವಕ ಪಾದ ಊರಿದಲ್ಲೆಲ್ಲ ತಂದೆಯ ನೆನಪುಗಳದ್ದೇ ಸಪ್ಪಳ. ಅವೆಲ್ಲವೂ ಅಪ್ಪ ಓಡಾಡಿದ್ದಂಥ ಜಾಗ. ಹದಿನೇಳು ವರುಷದ ನಂತರ ಅದೇ ಜಾಗಕ್ಕೆ ಮಗ ಮರುಭೇಟಿ ನೀಡಿದ್ದ. ಎಲ್ಲಿ ನೋಡಿದರೂ ಅಪ್ಪನ ಚಿತ್ರಗಳು… ಇನ್ನೂ ಅಳಿಸಿಯೇ ಹೋಗಿಲ್ಲ ಎನ್ನುವ ವಿಸ್ಮಯ… ಹೆಲಿಕಾಪ್ಟರ್‌ನಿಂದ ಕಣಿವೆಯ ನೆತ್ತಿಯ ಮೇಲೆ ಹಗ್ಗ ಇಳಿಬಿಟ್ಟು ಸರ್ರಕ್ಕನೆ ಇಳಿದಂತೆ, ಮಂಜು ಆವರಿಸಿದ ದಟ್ಟಾರಣ್ಯದ ಆಚೆಯೆಲ್ಲೋ ಜಿಗ್ಗನೆ ಜಿಗಿದಂತೆ, ಮರುಭೂಮಿಯ ಅಂಚಿನಲ್ಲಿ ಮರಳ ಧೂಳ ನಡುವೆಯೂ ಅಪ್ಪನೇ ಇಣುಕಿ ನೋಡುತ್ತಿದ್ದ! ಭಾರತೀಯ ವಾಯುಸೇನೆಯ ವೀರಯೋಧನಾಗಿದ್ದ ಅಪ್ಪನನ್ನು ಕಳಕೊಂಡರೂ, ಅವರಂತೆಯೇ ಗನ್‌ ಹಿಡಿದು ದೇಹವನ್ನೇ ಕಣ್ಣಾಗಿಸಿಕೊಂಡಿದ್ದ ಯೋಧರನ್ನು ತಂದೆಯ ಜಾಗದಲ್ಲೇ ಕಲ್ಪಿಸಿಕೊಂಡ.

ಹಾಗೆ ಸೈನಿಕರ ತಾಣಗಳಿಗೆ ಹೋದ ಹುಡುಗ ಅರ್ಜುನ್‌ ಮೆನನ್‌! ಅವನ ಕೈಯಲ್ಲೇನೂ ಗನ್‌ ಇದ್ದಿರಲಿಲ್ಲ; ಕ್ಯಾಮೆರಾ ಇತ್ತು. ಟ್ರಾವೆಲ್‌ ಫೋಟೋಗ್ರಾಫ‌ರ್‌ ಆತ. ಲೋಕ ಸುತ್ತುತ್ತಾ, ಅಲ್ಲಿನ ಚಿತ್ರಾವಳಿಗಳನ್ನು ಸೆರೆಹಿಡಿಯುತ್ತಾ, ಬ್ಲಾಗ್‌ನಲ್ಲಿ ತನ್ನ ಅನುಭವವನ್ನು ಗೀಚುತ್ತಾ, ಮುನ್ನಡೆಯುತ್ತಿದ್ದ ಈ ಹುಡುಗನಿಗೆ ಇದ್ದಕ್ಕಿದ್ದಂತೆ ಅಪ್ಪನೇಕೋ ಕಾಡಿಬಿಟ್ಟ. ಹಲವು ವರುಷಗಳ ಹಿಂದೆ ಅಪ್ಪ ಓಡಾಡಿದ ಜಾಗಕ್ಕೆ ಹೋಗಿ, ಅಲ್ಲಿನ ಮಣ್ಣನ್ನು ಕಣ್ಣಿಗೊತ್ತಿಕೊಳ್ಳುವ ಕನಸು ಹುಟ್ಟಿತು. ದೇಶಕ್ಕೆ ಸೇವೆ ಸಲ್ಲಿಸುತ್ತಲೇ ಹುತಾತ್ಮನಾದ ತನ್ನ ತಂದೆಗೆ, ಸೈನಿಕರ ಸಾಹಸ ಚಿತ್ರಗಳನ್ನು ಸೆರೆಹಿಡಿದು ಗೌರವ ಸಮರ್ಪಿಸಲು ನಿರ್ಧರಿಸಿಬಿಟ್ಟ.

ಭಾರತೀಯ ಸೈನಿಕರು ರಿಸ್ಕಿ ಪ್ರದೇಶಗಳಲ್ಲಿ ಹೇಗೆಲ್ಲ ಸಾಹಸ ಪ್ರದರ್ಶಿಸುತ್ತಾರೆ ಎನ್ನುವ ಕುತೂಹಲವೇ ಅರ್ಜುನ್‌ನ ಕ್ಯಾಮೆರಾಗೆ ವಸ್ತು. ಹಿಮಾಲಯದ ತುದಿಯಿಂದ ಮರುಭೂಮಿಯ ವರೆಗೆ, -18 ಡಿಗ್ರಿ ಸೆಲಿÒಯಸ್‌ನಿಂದ 46 ಡಿಗ್ರಿಯ ಅತ್ಯುಷ್ಣದ ತಾಪಮಾನದಲ್ಲೂ ಸೈನಿಕನ ದಿನಚರಿಯನ್ನು ಹಲವಾರು ತಿಂಗಳಿಂದ ಸೆರೆಹಿಡಿದ. ಎಷ್ಟೋ ಸಲ, ಮೈನವಿರೇಳಿಸುವ ಅವರ ಸಾಹಸದ ದೃಶ್ಯಗಳನ್ನು ಸೆರೆಹಿಡಿಯುವಾಗ, ಅರ್ಜುನನ ಕೈಗಳು ಕಂಪಿಸುತ್ತಿದ್ದವಂತೆ. ಅದರಲ್ಲೂ ಲಡಾಖ್‌ನ ಬೋಳು ನೆತ್ತಿಯ ಮೇಲೆ ಡಜನ್‌ ಸೈನಿಕರು ಜಿಗಿದ ಫೋಟೋಗಳನ್ನು ಮರುನೋಡುವಾಗ, ಅವಕ್ಕಾಗಿ ನಿಂತರಂತೆ.

ಈ ಎಲ್ಲ ಸಾಹಸದ ಆಚೆಗೆ ಸೈನಿಕರು, ತಂತ್ರಜ್ಞಾನವನ್ನು ಹೇಗೆಲ್ಲ ದುಡಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಮೇಲೂ ಅರ್ಜುನ್‌ ಫೋಕಸ್‌ ಮಾಡಿದ್ದಾನೆ. ತಾಯಿಯೋ, ಪತ್ನಿಯೋ ಬರೆದ ಪತ್ರ ಬಂದಾಗ ಸೈನಿಕರಿಗಾಗುವ ಪುಳಕವನ್ನೂ ಫ್ರೆàಮ್‌ನಲ್ಲಿ ಬಂಧಿಸಿಟ್ಟಿದ್ದಾನೆ. ಎಲ್ಲೋ ದಟ್ಟ ಕಾಡಿನಲ್ಲಿ ಒಬ್ಬಂಟಿಯಾಗಿ ನಿಂತ ಸೈನಿಕನ ಮುಖಭಾವವನ್ನೂ ಈತನ ಫೋಟೋಗ್ರಫಿ ಚಿತ್ರಿಸಿದೆ.

ಅಂದಹಾಗೆ, ಅರ್ಜುನ್‌ ತಾನು ತೆಗೆದ, ರೋಮಾಂಚನ ಹುಟ್ಟಿಸುವಂಥ ಇವೆಲ್ಲ ಫೋಟೋಗಳನ್ನು ಇತ್ತೀಚೆಗೆ ಇನ್‌ಸ್ಟಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು. ಗಣರಾಜ್ಯೋತ್ಸವದಂದು ಸೈನಿಕರ ಪೆರೇಡ್‌ ನೋಡುವಾಗ ಅಪ್ಪನ ನೆನಪಾಗಿ, ನೂರಾರು ಚಿತ್ರಗಳನ್ನು ಅವರಿಗೆ ಸಮರ್ಪಿಸಿದರು. ಆ ಚಿತ್ರಗಳೆಲ್ಲವೂ ಒಂದರ್ಥದಲ್ಲಿ ಸಾಹಸಕಾವ್ಯಗಳು. ಮತ್ತೆ ಮತ್ತೆ ನೋಡಿ, ನಮ್ಮ ವೀರ ಯೋಧರಿಗೆ ಸೆಲ್ಯೂಟ್‌ ಹೊಡೆಯಲು ಪ್ರೇರೇಪಿಸುವಂಥವು… (ನೀವು ಈ ಚಿತ್ರಗಳನ್ನು ಇನ್‌ಸ್ಟಗ್ರಾಮ್‌ನಲ್ಲಿ @artleavesamark  ನೋಡಬಹುದು)

– ಸುಹಾಸ

ಟಾಪ್ ನ್ಯೂಸ್

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

Rajbhavana

Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್‌- ಸಿ.ಟಿ.ರವಿ ವಾಗ್ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.