ಸಗಣಿ ಮಾರಿ ಬಹುಮಾನ ಕೊಟ್ಟೆವು…


Team Udayavani, Mar 3, 2020, 5:58 AM IST

Nenapu

ಕೊನೆ ದಿನದ ಕೊನೆ ಪಂದ್ಯ ನಡೆಯುವಾಗ ಸಂಗ್ರಹಿಸಿದ ಹಣವನ್ನು ಇಟ್ಟು ಕೊಳ್ಳುವ ಜವಾಬ್ದಾರಿ ಹೊತ್ತಿದ್ದ ಇಬ್ಬರು ಗೆಳೆಯರು ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟಿದ್ದರು. ಪ್ರಥಮ ಬಹುಮಾನ ಸಾವಿರದ ಐನೂರು ರೂ., ದ್ವಿತೀಯ ಬಹುಮಾನ ಸಾವಿರ ರೂ.ಗಳು ಅವರ ಹತ್ತಿರವೇ ಇತ್ತು. ನಾವೆಲ್ಲ ಗಾಬರಿಯಾದೆವು.

ಚಿಕ್ಕವರಿದ್ದಾಗ ನಮಗೆ ಸ್ಕೂಲಿಗೆ ಹೋಗುವುದಕ್ಕಿಂತ ಜಾನುವಾರುಗಳನ್ನು ಮೇಯಿಸುವುದರಲ್ಲೇ ಆಸಕ್ತಿ. ನಮ್ಮೂರ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದವು. ದನಕರುಗಳು ಊರ ತುಂಬ ಇದ್ದವು. ಅಂದರೆ, ಊರು ಸಮೃದ್ಧವಾಗಿತ್ತು ಅಂತಲೇ ಅರ್ಥ. ರಜಾ ದಿನಗಳಲ್ಲಿ ದನಕರುಗಳನ್ನು ಊರ ಹತ್ತಿರವಿರುವ ಜವುಳ ಕಡೆಗೆ (ಕೆರೆಗೆ)ಹೊಡೆದುಕೊಂಡು ಹೋಗಿಬಿಟ್ಟರೆ ಮುಗೀತು ನಮ್ಮ ಕೆಲಸ. ದನಗಳು ಕೆರೆ ಮುಟ್ಟುತ್ತಲೇ ಇತ್ತ ನಮ್ಮ ಚೆಂಡು-ದಾಂಡಿನ ಆಟ ಪ್ರಾರಂಭವಾಗುತ್ತಿತ್ತು. ಆಗಷ್ಟೇ ಎಲ್ಲೆಡೆ ಕ್ರಿಕೆಟ್‌ ಜ್ವರ ಏರುತಿತ್ತು. ಊರಲ್ಲಿ ಅಲ್ಲೊಂದು- ಇಲ್ಲೊಂದು ಇದ್ದ ಟಿ.ವಿಯಲ್ಲಿ ಆಟವನ್ನು ಕಣ್ತುಂಬಿಕೊಂಡೇ ಅಷ್ಟೊಂದು ಹುಚ್ಚು ತಲೆಗೆ ಏರಿತ್ತು.

ಆ ಕಾಲಕ್ಕೆ ನಮ್ಮ ಪಾಲಿನ ಈಡನ್‌ ಗಾರ್ಡನ್‌ ಅಂದರೆ ನಮ್ಮೂರ ಕೆರೆಯೇ. ಟಾಸ್‌ ಹಾಕಲು ನಮ್ಮ ಹತ್ತಿರ ಎಂಟಾಣಿಯೂ ಇರುತ್ತಿರಲಿಲ್ಲ. ಆ ಕಾರಣದಿಂದ ಚಿಕ್ಕಕಲ್ಲಿಗೆ ಉಗುಳು ಹಚ್ಚಿ, ಟಾಸ್‌ ಹಾಕುತ್ತಿದ್ದೆವು. ತೆಂಗಿನಮರದ ಮಟ್ಟಿಯಿಂದ ಮಾಡಿದ ಬ್ಯಾಟಲ್ಲೇ ಆಟ ಶುರು. ಅದು ಸಚಿನ್‌ ತೆಂಡೂಲ್ಕರ್‌ ಬಳಸುತ್ತಿದ್ದ ಎಮ…. ಆರ್‌. ಎಫ್ ಬ್ಯಾಟನ್ನು ಮೀರಿಸುವಂತಿತ್ತು. ಹೀಗೆ ಮುಂಜಾನೆ ಪ್ರಾರಂಭವಾಗುತ್ತಿದ್ದ ನಮ್ಮ ಕ್ರಿಕೆಟ್‌ ದನ-ಕರುಗಳು ಮೇದು ವಾಪಸ್ಸು ಬರುವ ತನಕವೂ ಮುಂದವರಿಯುತ್ತಿತ್ತು. ಈ ಕ್ರಿಕೆಟ್‌ ಹುಚ್ಚು ಯಾವ ಮಟ್ಟಕ್ಕೆ ಹೋಯಿತೆಂದರೆ, ಪಕ್ಕದ ಊರಿನಲ್ಲಿ ಸಂಘಟಿಸುತ್ತಿದ್ದ ಪಂದ್ಯಾವಳಿಗಳನ್ನು ನಮ್ಮೂರಲ್ಲಿ ಏಕೆ ಸಂಘಟಿಸಬಾರದು? ಎನ್ನುವ ಮಟ್ಟಕ್ಕೆ ಬಂತು. ಆದರೆ ಅಷ್ಟೊಂದು ಹಣ ಎಲ್ಲಿ ಸಂಗ್ರಹಿಸುವುದು? ಎಂಬ ಪ್ರಶ್ನೆಗೆ ಉತ್ತರವಾಗಿ ನಮ್ಮ ಗುಂಪಿನಲ್ಲಿ ಒಬ್ಬ ಸ್ನೇಹಿತನಿದ್ದ. ಒಳ್ಳೆ ತಿಳುವಳಿಕೆ ಹೊಂದಿದ್ದ. ಅಲ್ಪ-ಸ್ವಲ್ಪ ರಾಜಕೀಯ ಜ್ಞಾನವೂ ಇತ್ತು. ಅವನ ಮೂಲಕ ಹಣ ಸಂಗ್ರಹ ಮಾಡಬಹುದೇ ಅಂತ ಯೋಚಿಸಿದೆವು. ಅಷ್ಟರಲ್ಲಿ ಲೋಕಸಭಾ ಚುನಾವಣೆ ರಂಗೇರಿತ್ತು. ಊರಿಗೆ ರಾಜಕೀಯ ವ್ಯಕ್ತಿಗಳು ಬರುತ್ತಿದ್ದರು.

“ಲೇ, ಊರಾಗ ಜೀಪು ಬಂದು. ಬೇಗ ಬೇಗ ನಡಿರಲೇ’ ಅಂತಾ ಗೆಳೆಯ ಹೇಳಿದಾಕ್ಷಣ ನಾವೆಲ್ಲ ಊರ ಅಗಸಿಬಾಗಿಲು ಹತ್ತಿರ ಹಾಜರಿರುತ್ತಿದ್ದೆವು. ನಮಗೆ ಯಾವ ಪಾರ್ಟಿ, ಮುಖಂಡ ಅನ್ನೋದೆಲ್ಲಾ ಮುಖ್ಯವಾಗಿರಲಿಲ್ಲ. ದುಡ್ಡು ಕೊಟ್ಟರೆ ಸಾಕಾಗಿತ್ತು. ಸಾವಿರಗಟ್ಟಲೆ ಹಣ ಕೇಳುತ್ತಿರಲಿಲ್ಲ; ಐವತ್ತೂ-ನೂರೋ ಸಾಕಿತ್ತು. ಮೀಸೆ ಬಾರದ ನಮ್ಮನ್ನು ನೋಡಿ, ಹಣ ಕೊಡಲು ಕೆಲವರು ಹಿಂದೇಟು ಹಾಕುತ್ತಿದ್ದರು. ಗೆಳೆಯ ಮುಲಾಜಿಲ್ಲದೆ ಅವರ ಜೇಬಿಗೆ ಕೈ ಹಾಕಿ ಹಣ ಪಡೆಯುತ್ತಿದ್ದ. ಏಳೆಂಟು ದಿಗಳಲ್ಲಿ ನಾಲ್ಕೈದು ಸಾವಿರ ಸಂಗ್ರಹವಾಯಿತು. ಮೂರು ದಿನದ ಟೂರ್ನಮೆಂಟ್‌ ಶುರು ಮಾಡಿದೆವು. ಒಳ್ಳೆ ಊಟ. ವೀಕ್ಷಕ ವಿವರಣೆ ಎಲ್ಲವೂ ಇತ್ತು. ಕೊನೆ ದಿನದ ಕೊನೆ ಪಂದ್ಯ ನಡೆಯುವಾಗ ಸಂಗ್ರಹಿಸಿದ ಹಣವನ್ನು ಇಟ್ಟು ಕೊಳ್ಳುವ ಜವಾಬ್ದಾರಿ ಹೊತ್ತಿದ್ದ ಇಬ್ಬರು ಗೆಳೆಯರು ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟಿದ್ದರು. ಪ್ರಥಮ ಬಹುಮಾನ ಸಾವಿರದ ಐನೂರು ರೂ., ದ್ವಿತೀಯ ಬಹುಮಾನ ಸಾವಿರ ರೂ.ಗಳು ಅವರ ಹತ್ತಿರವೇ ಇತ್ತು. ನಾವೆಲ್ಲ ಗಾಬರಿಯಾದೆವು. ಪಂದ್ಯ ಮುಗಿಯಿತು. ಆಟಗಾರರು ಬಹುಮಾನಕ್ಕಾಗಿ ಮುಗಿಬಿದ್ದರು. ಜೊತೆಯಲ್ಲಿದ್ದ ಸ್ನೇಹಿತರ ಜೊತೆ ಚರ್ಚಿಸಿ, ದಿನನಿತ್ಯ ಸಂಗ್ರಹಿಸಿದ್ದ ದನಕರುಗಳ ಸಗಣಿಯನ್ನು ಹರಾಜು ಹಾಕಿ ಬಹುಮಾನದ ಮೊತ್ತವನ್ನು ನೀಡಲು ಮುಂದಾದೆವು. ಎರಡು ಟ್ರ್ಯಾಕ್ಟರ್‌ನಷ್ಟಿದ್ದ ಸಗಣಿ ಗೊಬ್ಬರವನ್ನು ವೀಳ್ಯದೆಲೆ ಬೆಳೆಯುವ ರೈತ ಮೂರು ಸಾವಿರಕ್ಕೆ ಕೊಂಡುಕೊಂಡ. ಅದನ್ನೇ ಬಹುಮಾನವಾಗಿ ಕೊಟ್ಟೆವು. ನಮ್ಮೂರ ಜನರಿಂದ ಚೆನ್ನಾಗಿ ಬೈಯಿಸಿಕೊಂಡು ಹ್ಯಾಪು ಮೋರೆ ಹಾಕಿಕೊಂಡು ನಮ್ಮ ದನಗಳೊಂದಿಗೆ ಊರಿಗೆ ತೆರಳಿದೆವು.

ಐದಾರು ದಿನಗಳ ನಂತರ ಕಾಣೆಯಾಗಿದ್ದ ಗೆಳೆಯರು ಸಿಕ್ಕರು, ನಮ್ಮನ್ನು ನೋಡಿ ಅಳಲು ಪ್ರಾರಂಭಿಸಿ ನಡೆದ ಘಟನೆ ಹೇಳಿದರು. ಅವರು ಇಟ್ಟಿದ್ದ ಹಣವನ್ನು ಅವರ ತಂದೆ ಇಸ್ಪೀಟು ಆಟದಲ್ಲಿ ಸೋತಿದ್ದರಂತೆ. ಅಲ್ಲಿಗೆ ಕಂಪನಿ ಬ್ಯಾಟು ಮತ್ತು ಟೆನ್ನಿಸ್‌ ಬಾಲ್‌ನಲ್ಲಿ ದಿನನಿತ್ಯ ಆಡುವ ನಮ್ಮಗಳ ಕನಸು ಸಾಕಾರಗೊಳ್ಳಲಿಲ್ಲ.
ಈಗ, ಯಾರೇ ಕ್ರಿಕೆಟ್‌ ಆಡುವುದನ್ನು ಕಂಡರೆ, ಇವೆಲ್ಲ ನೆನಪಾಗುತ್ತದೆ

ಮಲ್ಲಪ್ಪ ಫ‌ ಕರೇಣ್ಣನವರ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.