ನಿನ್ನ ಕಂಗಳ ನೋಟದ ಹಣತೆಯಂಥಾ ಬೆಳಕಿನ ಹಿಂದೆ ಕಪಟವಿತ್ತಾ?

Team Udayavani, May 16, 2017, 1:13 PM IST

ninna-kangala.jpg

ನನ್ನಂಥ ನಿಷ್ಪಾಪಿ ಹುಡುಗನ ಬದುಕನ್ನು ಯಾಕಿಷ್ಟು ದಾರುಣಗೊಳಿಸಿದೆ? ನನ್ನ ಈ ಪ್ರಶ್ನೆಗಳಿಗೆ ಯಾವತ್ತಾದರೂ ನಿನ್ನಿಂದ ಉತ್ತರಿಸಲು ಸಾಧ್ಯವಾ ಹುಡುಗಿ? 

ಹುಡುಗಿ ,
ನಿನ್ನಿಂದ ತುಂಬ ದೂರ ಬಂದಿದ್ದೇನೆ. ಇಬ್ಬರ ನಡುವಿನ ಬಾಂಧವ್ಯದ ಸೇತುವೆ ಕುಸಿದು ಬಿದ್ದಿದೆ. ನಿತ್ತರಿಸಿಕೊಳ್ಳಲಾಗದ ದುಃಖದಿಂದ ತತ್ತರಿಸಿ ಹೋಗಿದ್ದೇನೆ. ಎತ್ತ ನೋಡಿದರೂ ಕಾಣುವುದು ನಿನ್ನದೇ ಮುಖ. ನಾವಿಬ್ಬರೂ ಸಂಭ್ರಮದಲ್ಲಿ ಸುತ್ತಾಡಿದ್ದ, ಖುಷಿಯಲ್ಲಿ ಓಡಾಡಿದ್ದ, ಸಡಗರದಲ್ಲಿ ಹೆಜ್ಜೆಗೆ ಹೆಜ್ಜೆ ಇಟ್ಟಿದ್ದ,ಪ್ರಶಾಂತವಾಗಿ ಹರಿವ ನದಿಗೆ ಅಡ್ಡವಾಗಿ ಕಟ್ಟಿದ ಸೇತುವೆಯ ಮೇಲೆ, ನಿನ್ನೆದುರು ಮೊಣಕಾಲೂರಿ ನಿಂತು ನನ್ನೆದೆಯಾಳದ ಒಲವನ್ನೆÇÉಾ ನಿವೇದಿಸಿದ್ದ ನಮ್ಮಿಬ್ಬರ ಇಷ್ಟದ ಜಾಗ. ಎಲ್ಲವನ್ನೂ ತೊರೆದು ಬಂದಿದ್ದೇನೆ. ಆದರೆ ಈ ನೆರಳಿನಂಥ ನೆನಪುಗಳನ್ನು ಏನು ಮಾಡೋದು ಹೇಳು? ಸದಾ ಬೆನ್ನತ್ತಿ ಕಾಡುವ, ಅರೆ ಕ್ಷಣವೂ ಬಿಡದೆ ಉಸಿರಿನಂತೆ ಬೆರೆಯುವ, ಈ ನೆನಪುಗಳಿಂದ ಹೇಗೆ ತಪ್ಪಿಸಿಕೊಳ್ಳಲಿ ಹೇಳು? ದೂರವೆನ್ನುವುದು ಎಂಥ ಸುಳ್ಳು! ಎದೆಯೊಳಗೇ

ಕುಳಿತವಳನ್ನು ದೂರ ಮಾಡಲು ಇಷ್ಟು ದೂರ ಬಂದೆನÇÉಾ… ನನ್ನಂಥ ಮೂರ್ಖ ಮತ್ತೂಬ್ಬನಿರಲು ಸಾಧ್ಯವಾ? 
ಇದು ಕೊನೆಯ ಪತ್ರ. ನನ್ನ ಎದೆಯಾಳದ ನೋವನ್ನು ಯಾವ ಅಕ್ಷರಗಳಿಂದಲೂ ಭರಿಸಲಾಗದು. ಆದರೂ ಬರೆಯುತ್ತಿದ್ದೇನೆ. ನಿನ್ನ ನಿರಾಕರಣೆಗೆ ಕಾರಣ ಕೇಳುವುದಿಲ್ಲ. ನಿನ್ನೊಳಗೆ ಉದಾಸೀನ ಹುಟ್ಟಿತಾದರೂ ಯಾಕೆಂದು ಪ್ರಶ್ನೆ ಹಾಕುವುದಿಲ್ಲ. ಮತ್ತೆ ನನ್ನ ಬದುಕಿನೊಳಕ್ಕೆ ಬಾ ಎಂದು ದಮ್ಮಯ್ಯ ಗುಡ್ಡೆ ಹಾಕುವುದಿಲ್ಲ. ನೀ ಬರುವ ಹಾದಿಯಲಿ ಶತಪಥ ಹಾಕಿ ಕಾಯುತ್ತಾ ನಿಲ್ಲುವುದೂ ಇಲ್ಲ. ನಿನ್ನ ಬದುಕಿನ ಹೊಸ ಬೆಳಕಿನ ಹಾದಿಗೆ ನನ್ನ ಕರಿ ನೆರಳು ತಾಕುವುದಿಲ್ಲ. ಆದರೆ ಹೇಳು ಹುಡುಗೀ, ನಮ್ಮ ಪ್ರೀತಿ ಸುಳ್ಳಾ? ನಿನ್ನ ಮೊದಲ ನೋಟದ ಹಚ್ಚಿಟ್ಟ ಹಣತೆಯಂತಾ ಬೆಳಕಿನಲ್ಲಿ ಕಪಟವಿತ್ತಾ? ಮುಂಜಾನೆ ಮಿಂದ ಹೂ ಎಸಳಿನಂಥಾ ನಿನ್ನ ಪರಿಶುದ್ಧ ಮಾತುಗಳಲ್ಲಿ ಮೋಸವಿತ್ತಾ? ಸಂತಸದ ಸಂತೆಯೇ ನೆರೆದಂತಿದ್ದ ನಿನ್ನ ಕೋಮಲ ಮುಖಭಾವ ಮುಖವಾಡ ಧರಿಸಿತ್ತಾ? 

ಎಲ್ಲವೂ ಗಾಯಕ್ಕೆ ಮತ್ತುವ ನೊಣಗಳಂತೆ ಮುತ್ತುತ್ತಿವೆ. ನನ್ನಂಥ ನಿಷ್ಪಾಪಿ ಹುಡುಗನ ಬದುಕನ್ನು ಯಾಕಿಷ್ಟು ದಾರುಣಗೊಳಿಸಿದೆ? ನನ್ನ ಈ ಪ್ರಶ್ನೆಗಳಿಗೆ ಯಾವತ್ತಾದರೂ ನಿನ್ನಿಂದ ಉತ್ತರಿಸಲು ಸಾಧ್ಯವಾ ಹುಡುಗಿ? ನೆನಪಿರಲಿ: ನನ್ನ ನಿಟ್ಟುಸಿರು ಯಾವತ್ತೂ ನಿನ್ನನ್ನು ಶಪಿಸುವುದಿಲ್ಲ. ಯಾಕೆಂದರೆ ಪ್ರೀತಿಯ ಹೊರತು ಮತ್ತೂಂದು ಭಾವ ನನ್ನೆದೆಯೊಳಗಿಲ್ಲ.

– ಜೀವ ಮುಳ್ಳೂರು

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.