ಭ್ರಮೆ ಮೂಡಿಸೋದೂ ಉದ್ಯೋಗ ಸ್ವಾಮೀ…

ಅವಾಸ್ತವಕ್ಕೆ ಕೈ ಹಿಡಿದು ಕರೆದೊಯ್ಯುವುದೇ ಟ್ರೆಂಡ್‌

Team Udayavani, Aug 27, 2019, 5:52 AM IST

n-12

ಚಂದ್ರಗ್ರಹದ ಮೇಲೆ ಓಡಾಡಬೇಕು ಅಂದರೆ ಈಗ ಬಹಳ ಸಿಂಪಲ್‌, ಹೆಡ್‌ಗಿಯರ್‌ ಅನ್ನು ಕಣ್ಣಿಗೆ ಹಾಕಿ ಕೂತರೆ, ನೀವು ಚಂದ್ರನ ಜೊತೆ ನಿಂತು, ಅಲ್ಲೆಲ್ಲ ಓಡಾಡಿ ಬಂದ ಅನುಭವ ನಿಮ್ಮದಾಗುತ್ತದೆ. ಇದನ್ನು ವರ್ಚುಯಲ್‌ ರಿಯಾಲಿಟಿ ಅಂತ ಕರೆಯುತ್ತಾರೆ. ಈ ರೀತಿಯ ಮಿಥ್ಯ ಅನುಭವವನ್ನು ನೀಡುವುದಕ್ಕೂ ಕೋರ್ಸ್‌ಗಳು ಇವೆ.

ಇದು ಅತ್ಯುತ್ಕೃಷ್ಟ ಮನೋರಂಜನೆಯ ಯುಗ. ಸ್ಮಾಟ್‌ಫೋನ್‌, ಟ್ಯಾಬ್‌, ಹೆಡ್‌ಗಿಯರ್‌, ಎಕ್ಸ್‌ – ಬಾಕ್ಸ್‌ ಹ್ಯಾಂಡ್‌ಗಿಯರ್‌ ಮತ್ತು ಅತ್ಯಾಧುನಿಕ ಎಲ್‌ಇಡಿ, 3 ಡಿ ಟಿವಿಗಳಿಂದ ತೃಪ್ತನಾಗದ ಮನುಷ್ಯನಿಗೆ ಇನ್ನಷ್ಟು ಖುಷಿ ನೀಡಲು ವರ್ಚುಯಲ್‌ ರಿಯಾಲಿಟಿ (VR) ಮತ್ತು ಆಗುಮೆಂಟೆಡ್‌ ರಿಯಾಲಿಟಿ (AR) ಸಾಧನಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಹೀಗಾಗಿ, ಇವನ್ನು ತಯಾರಿಸುವುದು, ತಯಾರಿಸುವುದನ್ನು ಕಲಿಸುವುದೂ ಒಂದು ಶೈಕ್ಷಣಿಕ ಕೋರ್ಸ್‌ಗಳಾಗಿವೆ.

ಉದಾಹರಣೆಗೆ- ನೀವು ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಮಾಡುವುದು ಹೇಗೆ ಅನ್ನೋದನ್ನು ತಿಳಿಯಬೇಕು ಅನ್ನಿ. ಆಗ ನೀವು ಆಸ್ಪತ್ರೆಗೇ ಹೋಗಬೇಕಾಗಿಲ್ಲ. ಬದಲಿಗೆ, ಯಾವುದಾದರೂ ಕಂಪನಿಯ ಹೆಡ್‌ಗಿಯರ್‌ ಅನ್ನು ಹಾಕಿಕೊಂಡು ಕೂತರೆ ಸಾಕು. ನೀವು ಪೇಷೆಂಟ್‌ ಪಕ್ಕದಲ್ಲಿ ನಿಂತು ಆಪರೇಷನ್‌ ನೋಡಿದ ಅನುಭವವಾಗುತ್ತದೆ.

ಇದೊಂದು ರೀತಿ ತರಾಸು ಅವರ ಕಾದಂಬರಿಗಳನ್ನು ಓದಿ, ಮದಕರಿನಾಯಕನನ್ನು ನೋಡಿ ಬಂದ ಅನುಭವ. ಇಂದು ಇಂಥ ಭ್ರಮಾ ಜಗತ್ತನ್ನು ಸೃಷ್ಟಿಸುವುದೂ ಉದ್ಯೋಗದ ಒಂದು ರೂಪವಾಗಿದೆ. ಅದರ ಹೆಸರೇ ವರ್ಚುಯಲ್‌ ರಿಯಾಲಿಟಿ.

ಇವತ್ತು ಉದ್ದಿಮೆಗಳಲ್ಲಿ , ಉನ್ನತ ಶಿಕ್ಷಣ ಬೋಧಿಸುವ ಕಾಲೇಜುಗಳಲ್ಲಿ ಶಿಕ್ಷಣ ಕ್ರಮವನ್ನು ಉನ್ನತೀಕರಿಸಲು VR ಮತ್ತು AR ಗಳ ಮೊರೆ ಹೋಗಲಾಗುತ್ತಿದೆ. 2021 ಅನ್ನು ವಿ.ಆರ್‌, ಎ.ಆರ್‌ಗಳ ವರ್ಷ ಎಂದು ಕರೆಯಲಾಗುತ್ತಿದ್ದು, ಇನ್ನು 3 ವರ್ಷಗಳಲ್ಲಿ ಇವುಗಳ ಬಳಕೆದಾರರ ಸಂಖ್ಯೆ 443 ಮಿಲಿಯನ್‌ ತಲುಪಿ ಅದರ ವಹಿವಾಟು 250 ಬಿಲಿಯನ್‌ ಡಾಲರ್‌ನಷ್ಟಾಗಲಿದೆ ಎಂಬ ಅಂದಾಜಿದೆ.

ವರ್ಚುಯಲ್‌ ರಿಯಾಲಿಟಿ, ಮನುಷ್ಯನನ್ನು ವಾಸ್ತವ ಜಗತ್ತಿನಿಂದ ಸಂಪೂರ್ಣ ಬೇರ್ಪಡಿಸಿ ಅವಾಸ್ತವ ಜಗತ್ತನ್ನೇ ನೈಜ ಎಂಬ ತಿಳಿಯುವಂಥ ಅನುಭವ ನೀಡುತ್ತದೆ. ಆಗುಮೆಂಟೆಡ್‌ ರಿಯಾಲಿಟಿ ಎಂಬುದು ವ್ಯಕ್ತಿಯನ್ನು ವಾಸ್ತವ ಜಗತ್ತಿನಲ್ಲಿರಿಸಿಕೊಂಡೇ ಮಿಥ್ಯಾಜಗತ್ತಿನ ಅಂಶಗಳನ್ನು ಸೇರಿಸುತ್ತಾ ಹೋಗಿ, ಆತ ಏಕಕಾಲಕ್ಕೆ ವಾಸ್ತವ ಹಾಗೂ ಅವಾಸ್ತವ ಪ್ರಪಂಚಗಳ ಅನುಭವ ಪಡೆದುಕೊಳ್ಳುತ್ತಾನೆ. ವಿಆರ್‌ ಮತ್ತು ಎ.ಆರ್‌ ಇವೆರಡನ್ನೂ ಒಂದು ಮಾಡಿ ನೂತನ ಅನುಭವ ನೀಡುವ ಮಿಕ್ಸೆಡ್‌ ರಿಯಾಲಿಟಿ ಎಂಬುದೂ ಚಾಲ್ತಿಗೆ ಬರುತ್ತಿದೆ. ಈ ಕ್ಷೇತ್ರದಲ್ಲಿ ಕೆಲಸಮಾಡಲು ವಿಪುಲ ಅವಕಾಶಗಳು ಸೃಷ್ಟಿಯಾಗಿವೆ.

ಪ್ರಾಥಮಿಕ ತಿಳುವಳಿಕೆ
ಎಂಜಿನಿಯರಿಂಗ್‌ ಶಿಕ್ಷಣದ ಜೊತೆ, ವಿನ್ಯಾಸ, ಅನ್ವಯಿಕ ಗಣಿತ, ಸ್ಟಾಟಿಸ್ಟಿಕ್ಸ್‌ನ ಜ್ಞಾನ ಹೊಂದಿರುವ ಎಲ್ಲರೂ ವಿ.ಆರ್‌,ಎ.ಆರ್‌ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. 2ಡಿ/3ಡಿ ತಂತ್ರಜ್ಞಾನ, ಆ್ಯಂಡ್ರಾಯ್ಡ ಬಳಕೆ, ಕೋಡ್‌ ಬರೆಯಲು ಬೇಕಾದ ‘ಗಿಟ್‌’ ಟೂಲ್‌ನ ಸಂಪೂರ್ಣ ಜ್ಞಾನ, ವುಪೋರಿಯಾ, ಕಿಟೂಡ್‌, TPS, SVN ಗಳ ತಿಳುವಳಿಕೆ ಇದ್ದಷ್ಟೂ ಇಲ್ಲಿ ಕೆಲಸ ಸುಲಭವಾಗುತ್ತದೆ. VR ನಲ್ಲಿ ಕೆಲಸಮಾಡಲು ಅಗತ್ಯವಾಗಿ ಬೇಕಾದ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಲಾಂಗ್ವೇಜ್‌ಗಳಾದ C#, C++, ಜಾವಾ, ಜಾವಾ ಸ್ಕ್ರಿಪ್ಟ್ ಮತ್ತು ಪೈಥನ್‌ಗಳ ತಿಳುವಳಿಕೆ ಇರಲೇಬೇಕು. ಇವುಗಳ ಜೊತೆ 3ಡಿ ಮಾಡೆಲಿಂಗ್‌, 360 ಫೋಟೊಗ್ರಫಿ ಮತ್ತು ವೀಡಿಯೋ, ವರ್ಚುವಲ್‌ ರಿಯಾಲಿಟಿ, ಮಾಡೆಲಿಂಗ್‌ ಲಾಂಗ್ವೇಜ್‌, ಮಾರ್ಕ್‌ಆಪ್‌ ಲಾಂಗ್ವೇಜ್‌ಗಳಾದ HTML ಮತ್ತು XML, ಒಂದು ವಸ್ತು ಯಾವ ಯಾವೆಲ್ಲ ರೀತಿಯಲ್ಲಿ ಚಲಿಸಬಲ್ಲದು ಎಂಬ ಡಿಸೈನ್‌ ಭಾಷೆಯ Degree of Freedom, ಇದ‌ನ್ನು ಒಳಗೊಳ್ಳುವ ವಿ.ಆರ್‌ ಸಾಧನಗಳಾದ ಗೂಗಲ್‌ ಕಾರ್ಡ್‌ ಬೋರ್ಡ್‌, ಗೂಗಲ್‌ ಡೇಡ್ರೀಮ್‌, ಸ್ಯಾಮ್‌ಸಂಗ್‌ ಗಿಯರ್‌, ಆಪ್ಟಿಕ್ಸ್‌, ಡಿಸ್‌ಪ್ಲೇಯ್ಸ, ಸ್ಟೀರಿಯೋಪ್ಸಿಸ್‌, ಟ್ರ್ಯಾಕಿಂಗ್‌ ಮತ್ತು ಇತರ ಬಹುಮುಖ್ಯ ಹಾರ್ಡ್‌ವೇರ್‌ಗಳ ಕುರಿತು ಜ್ಞಾನ ಇರುವುದು ಅತೀ ಅವಶ್ಯಕ.

ಎಲ್ಲೆಲ್ಲಿ ಶಿಕ್ಷಣ ಮತ್ತು ತರಬೇತಿ?
ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಟರ್‌ ನೆಟ್‌ ಅಕಾಡೆಮಿಯು ವಿ.ಆರ್‌ಗೆ ಸಂಬಂಧಿಸಿದ 2ಡಿ, 3ಡಿ ಗೇಮ್‌ ಡೆವಲಪ್‌ಮೆಂಟ್‌ಗೆ ಹಲವು ತರಬೇತಿ ಕೋರ್ಸ್‌ಗಳನ್ನು ನಡೆಸುತ್ತಿದೆ. ಗೋವಾ, ಶಿಮ್ಲಾ, ದೆಹಲಿ, ಬೆಂಗಳೂರು, ದುಬೈ ನಲ್ಲಿರುವ ಕೊಯೆನಿಗ್‌ ಸಂಸ್ಥೆ ಯೂನಿಟಿ ಎಂಜಿನ್‌, ಗೂಗಲ್‌ ಕಾರ್ಡ್‌ಬೋರ್ಡ್‌ ಮತ್ತು ಆಕುಲಸ್‌ರಿಫ್ಟ್ ಸಾಧನಗಳನ್ನು ಬಳಸಿ . VR ನ ಪ್ರಾಥಮಿಕ ತರಬೇತಿಯನ್ನು 10 ರಿಂದ 30 ದಿನಗಳವರೆಗೆ ನೀಡುತ್ತದೆ. ಅಲಸೂರಿನ ಮಯ ಅಕಾಡೆಮಿ ಆಫ್ ಅಡ್ವಾನ್ಸ್‌ಡ್‌ ಸಿಸ್ಟಮ್ಯಾಟಿಕ್ಸ್‌ ಡಿಪ್ಲೊಮಾ ಇನ್‌ ಗೇಮ್‌, ಎ.ಆರ್‌ ಮತ್ತು ವಿ.ಆರ್‌ ಡಿಸೈನ್‌ – ಪುಣೆಯ ಡಿಸೈನ್‌ ಮೀಡಿಯಾ ಅಂಡ್‌ ಎಡುಟೇನ್‌ಮೆಂಟ್‌ ಸಲೂಷನ್ಸ್‌.

ಹೈದ್ರಾಬಾದ್‌ನ ಆರ್ಕಿಮೇಜ್‌, ಬೆಂಗಳೂರಿನ ಡ್ರೀಮಾರ್ಟ್‌, ಚೆನ್ನೈನ ಬಿಗ್‌ಡೇಟಾ ಟ್ರೆçನಿಂಗ್‌, ಬೆಂಗಳೂರಿನ ಆ್ಯಪಿಂಗ್ಸ್‌ಗಳು ಮೇಲಿನ ಹಲವು ಕೋರ್ಸ್‌ಗಳ ಶಿಕ್ಷಣ ನೀಡುತ್ತವೆ. ಮದ್ರಾಸ್‌, ಗೌಹತಿ, ಖರಗ್‌ಪುರ್‌, ಬಾಂಬೆ, ದೆಹಲಿ ವಿವಿಗಳು ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಯಲ್ಲಿ ವಿ.ಆರ್‌ ಕುರಿತ ಹತ್ತು ದಿನಗಳ ಬೇಸಿಗೆ ತರಬೇತಿ ನಡೆಯುತ್ತದೆ. ಉದ್ಯಮದ ಅಥವಾ ಯೋಜನೆಯ ಅವಶ್ಯಕತೆಗೆ ಅನುಗುಣವಾಗಿ 5 ದಿನಗಳ ಶಾರ್ಟ್‌ ಟರ್ಮ್ ಕೋರ್ಸ್‌ ನಿಂದ ಹಿಡಿದು 9 ವಾರಗಳ ವರೆಗಿನ ಸುದೀರ್ಘ‌ ತರಬೇತಿ ಮತ್ತು ಶಿಕ್ಷಣ ನೀಡುವ ಸಂಸ್ಥೆಗಳಿವೆ. ಇದರಲ್ಲಿ ಇಂಟರ್‌ನೆಟ್‌ ಅಕಾಡೆಮಿ ಮಂಚೂಣಿ ಸ್ಥಾನದಲ್ಲಿದೆ.

ಎಲ್ಲೆಲ್ಲಿ ಕೆಲಸ?
ಸಾಫ್ಟ್ವೇರ್‌ ಮತ್ತು ಹಾರ್ಡವೇರ್‌ ಎರೆಡೂ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಅಪಲ್‌, ಮೈಕ್ರೋಸಾಫ್ಟ್, ಸೋನಿ, ಗೂಗಲ್‌, ಫೇಸ್‌ಬುಕ್‌, ಎನ್‌ಡಿಯ, ಸ್ನ್ಯಾಪ್‌ಚಾಟ್‌, ಹೆಚ್‌ಟಿಸಿ ಉದ್ಯಮಗಳು ಆರ್‌ ಮತ್ತು ಎ.ಆರ್‌ ಕಲಿತವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಹೀಗೆ, ರಿಯಲ್‌ ಎಸ್ಟೇಟ್‌ ಉದ್ಯಮದಿಂದ ಹಿಡಿದು ಶಿಕ್ಷಣ, ಆರೋಗ್ಯ, ಸೇವಾಕ್ಷೇತ್ರ, ಗೇಮಿಂಗ್‌, ಸೇನೆ, ಬಾಹ್ಯಾಕಾಶ ವಿಜ್ಞಾನ, ಗೇಮಿಂಗ್‌, ವರ್ಚುಯಲ್‌ ಕಾಲು, ಸ್ವಯಂ ಚಾಲಿತ ಕಾರುಗಳು, ಥ್ರಿàಡಿ ತಂತ್ರಜ್ಞಾನ ಕ್ಷೇತ್ರಗಳಲ್ಲೆಲ್ಲಾ ವಿ.ಆರ್‌, ಎ.ಆರ್‌ ತಜ್ಞರಿಗೆ ಕೆಲಸ ಗ್ಯಾರಂಟಿ.

ಯಾವ ಯಾವ ಕೋರ್ಸ್‌ ?
ಕಂಪ್ಲೀಟ್‌ ಯುನಿಟಿ ಡೆವಲಪರ್‌ , ರಿಯಾಕ್ಟ್ ಆರ್‌, ಅನ್‌ರಿಯಲ್‌ ಎಂಜಿನ್‌ ಸಿ++ ಡೆವೆಲಪರ್‌ ಕೋರ್ಸ್‌, ಅಡ್ವಾನ್ಸ್‌ ಪ್ರೋಗ್ರಾಮ್‌ ಇನ್‌ ಇಂಟರ್‌ ಅಕ್ಟಿವ್‌ ಡಿಸೈನ್‌ ಅಂಡ್‌ ಗೇಮ್ಸ್‌ ಅಡ್ವಾನ್ಸ್‌ ಪ್ರೊಗ್ರಾಮ್‌ ಇನ್‌ ಡಿಜಿಟಲ್‌ ಮೀಡಿಯಾ ಅಂಡ್‌ ಡಿಸೈನ್‌, 3ಡಿ ಆರ್ಟ್‌ ಅಂಡ್‌ ಆಡಿಯೋ ಪೈಪ್‌ಲೈನ್‌, ಕೋಡ್‌ ಯುವರ್‌ ಸೆಲ್ಫ್, ಇಂಟ್ರೊಡಕ್ಷನ್‌ ಟು ವರ್ಚುಯಲ್‌ ರಿಯಾಲಿಟಿ. ಇವುಗಳಲ್ಲಿ ಆಫ್ಲೈನ್‌ ಕೋರ್ಸ್‌ಗಳೇ ಹೆಚ್ಚು.

ಗುರುರಾಜ್‌ ಎಸ್‌. ದಾವಣಗೆರೆ

ಟಾಪ್ ನ್ಯೂಸ್

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.