ಸೋಲಲ್ಲೂ ಪಾಠ ಇದೆ

ಪರೀಕ್ಷಾ ಕೀ ಬಾತ್‌

Team Udayavani, Jan 28, 2020, 6:16 AM IST

solallu

ಪರೀಕ್ಷೆಯ ಸಂದರ್ಭದಲ್ಲಿ, ವಿದ್ಯಾರ್ಥಿಗಳಿಗೆ ಒಂದಿಷ್ಟು ಟಿಪ್ಸ್‌ ಕೊಡಬೇಕು. ಆ ಮೂಲಕ, ಪರೀಕ್ಷೆ ಎದುರಿಸಲು ಸಜ್ಜುಗೊಳಿಸಬೇಕು ಎಂಬ ಸದಾಶಯದಿಂದ ಆರಂಭವಾದದ್ದು ಪರೀಕ್ಷಾ ಪೇ ಚರ್ಚಾ. ಉತ್ತಮ ಫ‌ಲಿತಾಂಶಕ್ಕಾಗಿ ಹಂಬಲಿಸುವ ವಿದ್ಯಾರ್ಥಿಗಳು ಮತ್ತು ಪೋಷಕರು ತಿಳಿದಿರಲೇಬೇಕಾದ ಕೆಲ ಸಂಗತಿಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಲ್ಲಿ ವಿವರವಾಗಿ ಹೇಳಿದ್ದಾರೆ…

ಪ್ರಿಯ ಮಕ್ಕಳೇ,
ಪರೀಕ್ಷೆ ಬರ್ತಿದೆ. ಭಯ ಕೂಡ ಜಾಸ್ತಿ ಆಗ್ತಿದೆ ಅಲ್ವೇ? ಭಯ ಏಕೆ? ಭಯ ಇದ್ದರೆ ಪರೀಕ್ಷೆ ಎದುರಿಸೋಕೆ ಆಗೋಲ್ಲ. ನಮ್ಮೊಳಗಿನ ಭಯವನ್ನು ಮೆಟ್ಟಿ ನಿಂತರಷ್ಟೇ ಒತ್ತಡ ರಹಿತವಾಗಿ ಪರೀಕ್ಷೆ ಬರೆಯೋಕೆ ಸಾಧ್ಯ. ಇವತ್ತು ಚೆನ್ನಾಗಿ ಓದಿದರೆ ನಾಳೆ ನಿಮ್ಮದೇ. ಯಾರೋ ಒಬ್ಬರಂತೆ ನಾವಾಗಬೇಕು ಎಂದು ಯೋಚಿಸಬೇಡಿ. ನೀವು ನೀವಾಗಿರಿ. ಪರೀಕ್ಷೆಯ ಒತ್ತಡದಿಂದ ಪಾರಾಗಲು ಇದು ಸಹಕಾರಿಯಾಗುತ್ತದೆ. ಪರೀಕ್ಷೆಯೆಂಬುದೇ ಬದುಕಲ್ಲ, ಪರೀಕ್ಷೆಯು ಬದುಕಿನ ಒಂದು ಭಾಗ ಅಷ್ಟೆ. ಇಡೀ ದೇಶವನ್ನು ಬದಲಾಯಿಸುವ ನಾಯಕತ್ವ ನಿಮ್ಮ ಕೈಯ್ಯಲ್ಲಿದೆ. ಹೀಗಾಗಿ ನಾಳೆಯ ಗೆಲುವು ನಿಮ್ಮದೇ.

ಡೈರಿ ಇಟ್ಟುಕೊಳ್ಳಿ: ಮೊದಲು ನಮ್ಮೊಳಗೆ ನಾವು ಇಳಿಯಬೇಕು. ಏನು ಬೇಕು, ಏನು ಬೇಡ, ನಮ್ಮ ಸಾಮರ್ಥ್ಯ ಏನು, ಅದನ್ನು ಬಳಸಿಕೊಳ್ಳುವ ಬಗೆ ಹೇಗೆ? ಹೀಗೆ, ನಮ್ಮ ಪ್ಲಸ್‌ ಅಂಡ್‌ ಮೈನಸ್‌ ಅನ್ನು ಸಂಪೂರ್ಣವಾಗಿ ಅರಿತುಕೊಂಡರೆ, ಪರೀಕ್ಷೆ ಇರಲಿ, ಜೀವನ ಎಂಬ ದೊಡ್ಡ ಎಕ್ಸಾಮ್‌ ಅನ್ನೂ ಮೊದಲ ರ್‍ಯಾಂಕ್‌ನಲ್ಲೇ ಪಾಸ್‌ ಮಾಡಬಹುದು. ಆದರೆ, ನಮ್ಮನ್ನು ನಾವು ಅರ್ಥಮಾಡಿ ಕೊಳ್ಳುವುದು ಸುಲಭವೇನಲ್ಲ. ಸ್ವಲ್ಪ ಕಷ್ಟಕರವೇ. ಅದಕ್ಕೇ ನಿಮಗೆ ನೀವೇನೆಂದು ಅರ್ಥವಾಗಬೇಕೆಂದರೆ, ನಿಮ್ಮ ಕಂಫ‌ರ್ಟ್‌ ಝೋನ್‌ನಿಂದ ಹೊರಬನ್ನಿ. ಒಂದು ಡೈರಿ ಇಟ್ಟುಕೊಂಡು, ಅದರಲ್ಲಿ ಬರೆಯುತ್ತಾ ಹೋಗಿ. ಕ್ರಮೇಣ, ನಿಮ್ಮ ಕೌಶಲವು ನಿಮಗೇ ತಿಳಿಯುತ್ತಾ ಹೋಗುತ್ತದೆ. ಕೌಶಲ ಹೇಳಿದಂತೆ ನೀವು ಬದುಕನ್ನು ಕಟ್ಟಿಕೊಳ್ಳುತ್ತಾ ಹೋಗಿ.

ರಾತ್ರಿ ಬೇಡ, ಬೆಳಗ್ಗೆ ಓದಿ: ವಿದ್ಯಾರ್ಥಿಗಳಿಗೆ ರಾತ್ರಿ ಓದಬೇಕೋ, ಬೆಳಗ್ಗೆ ಓದಬೇಕೋ‌? ಇಂಥದೊಂದು ಪ್ರಶ್ನೆ ಸದಾ ಕಾಡುತ್ತದೆ. ಇದಕ್ಕೆ ನಿಖರವಾದ ಉತ್ತರ ಸಿಗೋಲ್ಲ. ಎಲ್ಲರೂ ಏನು ಮಾಡ್ತಾರೆ ಅಂದರೆ, ಇತರೆ ಗೆಳೆಯರು ಎಷ್ಟು ಹೊತ್ತಿಗೆ ಎದ್ದು ಓದುತ್ತಾರೆ ಅಂತ ನೋಡಿಕೊಂಡು ತಾವೂ ಹಾಗೆಯೇ ಮಾಡಲು ತೊಡಗುತ್ತಾರೆ. ಆದರೆ, ಇದು ತಮ್ಮ ದೇಹ ಪ್ರಕೃತಿಗೆ ಸಂಬಂಧಿಸಿದ್ದು. ಕೆಲವರಿಗೆ ರಾತ್ರಿ ಓದಿದರೆ ಚೆನ್ನ, ಕೆಲವರಿಗೆ ಬೆಳಗಿನ ಓದು ಸುಲಲಿತ. ಆದರೆ, ನಾನು ಹೇಳುವುದೇನೆಂದರೆ, ರಾತ್ರಿ ಹೊತ್ತಲ್ಲಿ ನಿಮ್ಮ ಮನಸ್ಸಲ್ಲಿ ಹಲವಾರು ಆಲೋಚನೆಗಳು ಸುತ್ತುತ್ತಿರುತ್ತವೆ.

ಹಾಗಾಗಿ, ರಾತ್ರಿ ಓದುವುದರಿಂದ ಏಕಾಗ್ರತೆಗೂ ಭಂಗ ಉಂಟಾಗಬಹುದು. ಆರೋಗ್ಯಕರ ಮನಸ್ಸಿನೊಂದಿಗೆ ಕಲಿಯ­ಬೇಕು, ಓದಬೇಕು ಎಂದೆನಿಸಿದರೆ, ಮುಂಜಾನೆಯೇ ಉತ್ತಮ ಆಯ್ಕೆ. ಜೋರಾಗಿ ಮಳೆ ಸುರಿದು ನಿಂತಮೇಲೆ, ಆಕಾಶ ಹೇಗೆ ಶುಭ್ರವಾಗಿ ಕಾಣುತ್ತದೋ, ಹಾಗೆಯೇ ರಾತ್ರಿ ಕಳೆದು ಬೆಳಗಾಗುವ ಹೊತ್ತು. ಹೀಗಾಗಿ, ಅದು ಓದಲು ಸುಸಮಯ. ಆ ಸಮಯವನ್ನು ಕಲಿಕೆಗೆ ಮೀಸಲಿಡಿ. ಇನ್ನು ನಿಮಗೆ ರಾತ್ರಿ ಓದುವುದೇ ಆರಾಮದಾಯಕ ಎಂದೆನಿಸಿದರೆ, ಹಾಗೆ ಮಾಡಲು ಅಡ್ಡಿಯಿಲ್ಲ. ತೀರ್ಮಾನ ನಿಮ್ಮದು. ಸೋಲಲ್ಲೂ ಪಾಠ ಇದೆ ಅನ್ನೋದನ್ನು ತಿಳಿದುಕೊಳ್ಳಬೇಕು. ಅದು ಈ ಜಗತ್ತಿನ ದೊಡ್ಡ ಗುರು.

ತಾತ್ಕಾಲಿಕ ಹಿನ್ನಡೆ ಯಾದೊಡನೆ, ಯಶಸ್ಸು ನಿಮಗಾಗಿ ಕಾಯುತ್ತಿಲ್ಲ ಎಂದರ್ಥವಲ್ಲ. ಬದಲಿಗೆ, ಭವಿಷ್ಯದಲ್ಲಿ ಅತ್ಯುತ್ತಮವಾದದ್ದು ನಿಮಗಾಗಿ ಕಾಯುತ್ತಿರುವು­ದಾಗಿದ್ದಕ್ಕೇ ಹೀಗಾಗಿದ್ದು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿ ಸೋಲಿನಲ್ಲೂ ಒಂದು ಪಾಠವಿರುತ್ತದೆ. ಸೋತಾಕ್ಷಣ ಹತಾಶರಾಗದೇ, ಮೊದಲು ಸೋತದ್ದು ಎಲ್ಲಿ, ಹೇಗೆ, ಅದಕ್ಕೆ ಕಾರಣಗಳೇನು, ಅದರಲ್ಲಿ ನನ್ನ ಪಾಲು ಎಷ್ಟು? ಹೀಗೆ ಎಲ್ಲವನ್ನೂ ಲೆಕ್ಕ ಹಾಕಿ ತಿಳಿದುಕೊಳ್ಳಬೇಕು. ಮುಂದಿನ ಗೆಲುವಿನ ಮೆಟ್ಟಿಲು ಏರಲು ಈ ರೀತಿಯ ತಪ್ಪುಗಳು ಆಗುವುದಿಲ್ಲ. ಸೋಲುವುದು ಕ್ಷಣಿಕ. ಅದು ಯಶಸ್ಸಿನತ್ತ ನಿಮ್ಮನ್ನು ಕೊಂಡೊ ಯ್ಯುವ ಸೇತುವಾಗಿರುತ್ತದೆ ಅನ್ನೋದನ್ನು ಮರೆಯದಿರಿ.

ಹೊಸ ಭಾಷೆ ಕಲಿಯಿರಿ: ಯಾವ ಹೊತ್ತಿನಲ್ಲಿ ಓದಬೇಕು ಅನ್ನೋ ಗೊಂದಲದಂತೆ, ಯಾವ ಭಾಷೆಯನ್ನು ಕಲಿಯಬೇಕು ಅನ್ನೋದು ವಿದ್ಯಾರ್ಥಿಗಳ ಮುಂದುವರಿದ ಗೊಂದಲ. ತಾಯ್ನುಡಿಯಲ್ಲಿ ಓದುವುದಕ್ಕೆ ಮೊದಲ ಪ್ರಾಶಸ್ತ್ಯ ಇರಲಿ. ಇದರ ಜೊತೆಗೆ, ಬೇರೆ ಭಾಷೆಗಳನ್ನೂ ಕಲಿಯುಂತಾಗಬೇಕು. 10, 11, 12ನೇ ತರಗತಿಯ ಮಕ್ಕಳು ದಿನದಲ್ಲಿ ಕನಿಷ್ಠ 15 ನಿಮಿಷಗಳ ಕಾಲ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಜೀವನ ರೋಬೋಟ್‌ನಂತೆ ಯಾಂತ್ರಿಕವಾಗಿಬಿಡುತ್ತದೆ. ಹೆಚ್ಚು ಹೆಚ್ಚು ಭಾಷೆ ಕಲಿತರೆ ಜ್ಞಾನದ ವಿಸ್ತಾರ ಕೂಡ ಆಗುತ್ತದೆ.

ನಿಮಗೆ ಇನ್ನೊಂದು ವಿಚಾರ ಹೇಳುವುದಿದೆ. ಅದು ಏನೆಂದರೆ, ತಂತ್ರಜ್ಞಾನಗಳು ಈಗ ಮಾನವನ ಬದುಕನ್ನೇ ಬದಲಿಸಿಬಿಟ್ಟಿವೆ. ಅವುಗಳ ಬಗ್ಗೆ ಭಯ ಬೇಡ. ಟೆಕ್ನಾಲಜಿ ಎನ್ನುವುದು ನಮ್ಮ ಉತ್ತಮ ಸ್ನೇಹಿತ. ಟೆಕ್ನಾಲಜಿಯನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಆದರೆ, ಅದುವೇ ನಮ್ಮನ್ನು ಆಳುವಂತಾಗಬಾರದು. ಇಂದಿನ ಯುವಜನತೆಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿದೆ. ಹಾಗೆಯೇ, ತಂತ್ರಜ್ಞಾನವಿಲ್ಲದೆಯೂ ಸಮಯ ಕಳೆಯಲು ಗೊತ್ತಿರಬೇಕು. ಅದು ನಿಮ್ಮ ಸಮಯವನ್ನು ಹಾಳು ಮಾಡುವಂತಿರಬಾರದು.

ದಿನದಲ್ಲಿ ಕೆಲವು ಗಂಟೆಗಳು ತಂತ್ರಜ್ಞಾನ ಮುಕ್ತವಾಗಿರಬೇಕು. ಆ ಸಮಯವನ್ನು ನೀವು ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಪುಸ್ತಕಗಳು, ಸಾಕುಪ್ರಾಣಿಗಳ ಜತೆ ಕಳೆಯಬೇಕು. ಮನೆಯಲ್ಲಿರುವ ಒಂದು ಕೊಠಡಿಯು ತಂತ್ರಜ್ಞಾನ ಮುಕ್ತವಾಗಿರುವಂತೆ ನೋಡಿಕೊಳ್ಳಿ. ಅಂದರೆ, ಆ ಕೊಠಡಿಯೊಳಗೆ ಯಾರೂ ಸಹ ಗ್ಯಾಜೆಟ್‌ಗಳನ್ನು ಒಯ್ಯಬಾರದು. ಪರೀಕ್ಷೆ ಸಮಯದಲ್ಲಿ ಓದಿನ ಮಧ್ಯೆ ಇಲ್ಲಿ ಬಂದು ಕಾಲ ಕಳೆಯಿರಿ. ಆಗ ಸಿಗುವ ಮಜವೇ ಬೇರೆ.

ಕರ್ತವ್ಯಗಳು, ಹಕ್ಕುಗಳು: ನಾವು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಿದರೆ, ಹಕ್ಕುಗಳಿಗಾಗಿ ಹೋರಾಡುವ ಅಗತ್ಯವೇ ಬರುವುದಿಲ್ಲ. ದೇಶಕ್ಕಾಗಿ ನಾವು ಈಗ ಏನು ಮಾಡಬಹುದು ಎಂಬುದನ್ನು ವಿದ್ಯಾರ್ಥಿಗಳು ಯೋಚಿಸಿ, ಅದರಂತೆ ನಡೆದರೆ, ಭವಿಷ್ಯದಲ್ಲಿ ನಿಮಗೂ, ದೇಶಕ್ಕೂ ಅನುಕೂಲವಾಗುತ್ತದೆ. ಭಾರತದಲ್ಲೇ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ, ವಿದೇಶದ ಪ್ರವಾಸಿ ತಾಣಗಳಿಗೆ ಹೋಗುವ ಬದಲು ಭಾರತದೊಳಗಿನ ಪ್ರವಾಸಿ ಹಾಗೂ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ. ನೈರ್ಮಲ್ಯ, ವಿದ್ಯುತ್ಛಕ್ತಿ, ನೀರು ಉಳಿತಾಯದಂಥ ಸಣ್ಣ ಸಣ್ಣ ಕ್ರಮಗಳು ಕೂಡ ಒಬ್ಬ ನಾಗರಿಕರಾಗಿ ನೀವು ಮಾಡಬಹುದಾದ ಕರ್ತವ್ಯಗಳು.
ಏನು ಹೇಳ್ತೀರಿ?

ಗುರಿಯೇ ಒತ್ತಡ: ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ಖನ್ನತೆಗೊಳಗಾಗುವುದು ಸಹಜ. ಆದರೆ, ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಮೊದಲು ಕಲಿಯಿರಿ. ಒತ್ತಡ ಉಂಟಾಗುವುದು ಪರೀಕ್ಷೆಯಿಂದಲ್ಲ. ಬದಲಿಗೆ, ಮುಂದೆ ಏನೋ ಆಗಬೇಕೆಂಬ ಗುರಿ ಇರುತ್ತದಲ್ಲಾ, ಅದರಿಂದ, ಪರೀಕ್ಷೆಯ ಕೊಠಡಿಯಲ್ಲಿ ನೀವು ಮಾನಸಿಕ ಒತ್ತಡಕ್ಕೆ ಒಳಗಾದಷ್ಟೂ, ಪರೀಕ್ಷೆ ಕಷ್ಟಕರವಾಗುತ್ತದೆ. ಆತ್ಮವಿಶ್ವಾಸದಿಂದ ಕೊಠಡಿಯೊಳಗೆ ಪ್ರವೇಶಿಸಿ, ನನ್ನಿಂದ ಸಾಧ್ಯ ಎಂದು ಭಾವಿಸಿ, ಇನ್ನೊಬ್ಬರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಕೊಡಬೇಡಿ. ನೀವೇನನ್ನು ಕಲಿತುಕೊಂಡು ಬಂದಿದ್ದೀರೋ, ಅದಷ್ಟೇ ಮನಸ್ಸಲ್ಲಿರಲಿ. ನಿಮ್ಮ ಮೇಲೆ ನೀವು ನಂಬಿಕೆಯಿಡಿ. ಆಗ ತನ್ನಿಂತಾನೇ ಎಲ್ಲವೂ ಸುಲಭ ಎಂದೆನಿಸುತ್ತದೆ. ನೀವು ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ ಮತ್ತು ಅದರತ್ತಲೇ ಗಮನ ಕೇಂದ್ರೀಕರಿಸಿ.

ಹೆತ್ತವರೇ ಕೇಳಿಸಿಕೊಳ್ಳಿ
* ಹೆತ್ತವರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು.
* ಅವರಲ್ಲಿ ಸ್ಫೂರ್ತಿ ತುಂಬುವುದರ ಜೊತೆಗೆ, ಪ್ರೋತ್ಸಾಹವನ್ನೂ ನೀಡಿ.
* ಗುರಿಯನ್ನು ಬೆಂಬತ್ತಿಸಿ, ಆದರೆ ಒತ್ತಡ ಹೇರಬೇಡಿ.
* ಮಕ್ಕಳಲ್ಲಿ ಮಾತನಾಡುತ್ತಾ, ಅವರೊಳಗಿನ ಭಾವನೆಳನ್ನು ಅರಿಯಿರಿ.
* ಪ್ರೋತ್ಸಾಹವೇ ಯಶಸ್ಸಿನ ಗುಟ್ಟು.
* ನೀವು ಇಚ್ಛಿಸಿದಷ್ಟು ಅಂಕ ಬಂದಿಲ್ಲ ಎಂದರೆ, ಪರ್ಯಾಯ ಮಾರ್ಗವೇ ಇಲ್ಲ ಎಂಬ ಮನಸ್ಥಿತಿಯನ್ನು ಮೊದಲು ಬಿಡಿ.

ನಿಮ್ಮವ
ನರೇಂದ್ರ ಮೋದಿ, ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ

ಟಾಪ್ ನ್ಯೂಸ್

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.