ಗಣ್ಯರಿಗೆ ನಿಷೇಧವಿಲ್ಲ
Team Udayavani, Jul 2, 2019, 5:00 AM IST
ಅಲೆಕ್ಸಾಂಡರ್ ಅನ್ನಾನ್ ಆಡಮ್ಸ್, ಬ್ರಿಟಿಷ್ ವಾಯಸೇನೆಯಲ್ಲಿ ಹಿರಿಯ ಅಧಿಕಾರಿಯಾಗಿ, ಏರ್ ವೈಸ್ ಮಾರ್ಷಲ್ ಆಗಿ ಕೆಲಸ ಮಾಡಿದಾತ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಡಮ್ಸ್ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ. ಜರ್ಮನಿಯಲ್ಲಿ ಬ್ರಿಟನ್ನಿನ ರಾಯಲ್ ಏರ್‌ಪೋರ್ಸ್‌ನ ಬೇಹುಗಾರನಾಗಿಯೂ ಕೆಲಸ ಮಾಡಿದ ಅನುಭವ ಇದ್ದಾತ.
ಯುದ್ಧದ ಸಂದರ್ಭ. ಆಡಮ್ಸ್, ಫೈಟರ್ ಕಮಾಂಡ್ ಮುಖ್ಯಕಚೇರಿಗೆ ಹೋಗಬೇಕಾಗಿತ್ತು. ಕಾರು ಚಲಾಯಿಸುತ್ತ ಬರುತ್ತಿದ್ದಾಗ ಅವನಿಗೆ ರಸ್ತೆಯ ಮಧ್ಯದಲ್ಲಿ ಒಂದು ಸೂಚನಾ ಫಲಕ ಕಂಡಿತು. ಅದರಲ್ಲಿ ರಸ್ತೆ ಮುಚ್ಚಿದೆ. ಜೀವಂತ ಬಾಂಬ್‌ಗಳಿವೆ ಎಂದು ಬರೆದಿತ್ತು. ಆಡಮ್ಸ್ ಆ ಸೂಚನೆ ಓದಿ ಕಾರು ನಿಲ್ಲಿಸುವಷ್ಟರಲ್ಲಿ ಒಬ್ಬ ಪೊಲೀಸ್ ಪೇದೆ ಅಲ್ಲಿಗೆ ಬಂದ. ಈ ದಾರಿಯಲ್ಲಿ ಹೋಗುವಂತಿಲ್ಲ ಸರ್.
ಈ ದಾರಿಯಲ್ಲಿ ಅಲ್ಲಲ್ಲಿ ಜೀವಂತ ಬಾಂಬ್‌ಗಳಿವೆ. ಯಾವ ಕ್ಷಣದಲ್ಲಿ ಎಲ್ಲಿ ಸ್ಫೋಟಗೊಳ್ಳುತ್ತವೆ ಎಂದು ಹೇಳಲು ಸಾಧ್ಯಲ್ಲ ಎಂದ. ಅಷ್ಟರಲ್ಲಿ ಆಡಮ್ಸ್ ಕಾರಿನಿಂದ ಹೊರಗಿಳಿದಿದ್ದ. ಅವನ ಯೂನಿಫಾರ್ಮ್ ನೋಡಿದ ಪೇದೆಗೆ ಎದುರಿಗಿದ್ದ ವ್ಯಕ್ತಿ ದೊಡ್ಡ ಹುದ್ದೆಯಲ್ಲಿರುವವರು ಎಂಬುದು ಗೊತ್ತಾಯಿತು. ಕೂಡಲೇ ಸಾವಧಾನ್ ಸ್ಥಿತಿಗೆ ಬಂದು ನಿಂತ ಆತ ಸೆಲ್ಯೂಟ್ ಹೊಡೆದು ಹೇಳಿದ, ಕ್ಷಮಿಸಿ ಸರ್. ನೀವು ವಿಂಗ್ ಕಮಾಂಡರ್ ಅಂತ ಗೊತ್ತಾಗಲಿಲ್ಲ. ನಿಮಗೆ ನಿಷೇಧ ಅನ್ವಯವಾಗುವುದಿಲ್ಲ. ನೀವು ಹೋಗಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.