ಈ ಫ‌ಕೀರನಿಗೆ ಪ್ರೀತಿಯೇ ಫೆರಾರಿ!


Team Udayavani, Aug 15, 2017, 7:10 AM IST

pakera.jpg

ಒಂದರೆ ಘಳಿಗೆ ನೀನಿಲ್ಲದ ದಿನಗಳ ಊಹಿಸಿಕೊಂಡರೂ ಎದೆ, ಮನಸ್ಸು, ಹೃದಯ ಖಾಲಿ ಖಾಲಿಯಾದಂತೆ, ಶೂನ್ಯ ಕವಿದಂತೆ ಭಾಸವಾಗುತ್ತದೆ. ಯಾರು ಶಾಶ್ವತ ಈ ಭೂಮಿಯ ಮೇಲೆ? ಬದುಕನ್ನೇ ಪ್ರೀತಿಗೆ ಮುಡಿಪಿಟ್ಟು, ಹಗಲಿರುಳು ಪ್ರೇಮದ ಕನವರಿಕೆಯಲ್ಲಿ ಕಾಲ ನೂಕಿ ಕಾಲಗರ್ಭದಲ್ಲಿ ಹೂತು ಹೋದ ಅಮರಪ್ರೇಮಿಗಳಿಲ್ಲವೇ? 

ನನ್ನೊಲುಮೆಯ ಗೆಳತಿ…..
ಪ್ರೀತಿಯಲಿ ಮುಳುಗದ, ಅದರ ಸುಮಧುರ ಬಂಧದ ತೆಕ್ಕೆಗೆ ಸಿಗದವರಿಲ್ಲ. ಎಂತಹ ಕಲ್ಲೆದೆಯವನನ್ನೂ ಕರಗಿಸಿ, ಅರಳಿಸುವ ಶಕ್ತಿ ಪ್ರೀತಿಗಿದೆ. ಪ್ರತಿಯೊಬ್ಬರೂ ಪ್ರೀತಿಗಾಗಿ ಹಪಹಪಿಸುವವರೇ. ಅದರ ಕೃಪಾಕಟಾಕ್ಷಕ್ಕೆ ಸಿಲುಕಲು ಗೋಳಾಡುವವರೇ. ಮೋಸ, ವಂಚನೆ, ಸ್ವಾರ್ಥ ತುಂಬಿರುವ ಈ ಜಗತ್ತಿನಲ್ಲಿ, ಹಿಡಿ ಪ್ರೀತಿಗೆ ಜನ ಹಂಬಲಿಸುವುದು ಸಹಜ ತಾನೆ? ನೋವಿಗೆ ಆಸರೆಯಾಗಿ, ನಲಿವಿಗೆ ಹಿರಿ ಹಿರಿ ಹಿಗ್ಗಿ, ಓಲೈಸುವ, ಸಂತೈಸುವ ಜೀವ ಸಂಜೀವಿನಿ ಪ್ರೀತಿ. ಇದರ ಕಬಂಧ ಬಾಹುಗಳಿಗೆ ಒಮ್ಮೆ ಸಿಲುಕಿದರೆ ಮುಗಿದೇ ಹೋಯಿತು. ಹೊರಬರುವ ಉಪಾಯವೇ ಗೊತ್ತಾಗುವುದಿಲ್ಲ. ನನ್ನ ಸ್ಥಿತಿಯೂ ಹೀಗೇ ಆಗಿದೆ ನೋಡು. ನಿನ್ನ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಆಗುತ್ತಲೇ ಇಲ್ಲ. ಅದೇಕೆ ಹೀಗೆ ಎಂದು ನೂರಾರು ಸಲ ಚಿಂತಿಸಿದ್ದೇನೆ. ಚಿಂತೆ ಚಿತೆಯಾಗಿ ಸುಟ್ಟಿದೆಯೇ ಹೊರತು, ಫ‌ಲ ನೀಡಿಲ್ಲ. ನೀನೇಕೆ ಯಾವುದೋ ಜನುಮದ ಮಧುರ ಗಾನದಂತೆ ಕಿವಿಗೆ ಇಂಪಾಗಿ ತಟ್ಟುತ್ತಿರುವೆ? ತಿಳಿಯುತ್ತಿಲ್ಲ!

ಎಲ್ಲಿ ಜಾರಿತೋ… ಮನವು ಎಲ್ಲೆ ಮೀರಿತೋ…
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾುತೋ… 
ಒಮ್ಮೊಮ್ಮೆ ಯೋಚನೆ ನಿರಾಸಕ್ತಿಯತ್ತ ಹೊರಳುತ್ತದೆ. ಜಗತ್ತನ್ನು ಬೆಳಗುವ ಸೂರ್ಯ ಚಂದ್ರರೇ ಅನವರತ ಭುವಿಯಲ್ಲಿ ಬೆಳಗುವುದಿಲ್ಲ. ಮನಕೆ ಆನಂದ ನೀಡುವ ಅಸಂಖ್ಯಾತ ತಾರೆಗಳೇ ಬೆಳಗಾಗೆದ್ದು ಕಣ್ಮರೆಯಾಗುತ್ತವೆ. ನಸುಕಿನಲ್ಲಿ ಅರಳುವ ಹೂವೇ ಸಂಜೆಗೆ ಬಾಡಿ ಮಂಕಾಗಿ ಬಿಡುತ್ತದೆ. ತುಂಬಿದ ನದಿಯೇ ಬಿರು ಬಿಸಿಲಿನ ಝಳಕ್ಕೆ ಬತ್ತಿ ಸೊರಗಿ ಹೋಗುತ್ತದೆ. ಅಂಥದ್ದರಲ್ಲಿ ನಮ್ಮಂಥ ಬಡಪಾಯಿಗಳ ಪಾಡೇನು? ನೀನು ಒಂದಲ್ಲ ಒಂದು ದಿನ, ನನಗೆ ಕಾರಣ ಹೇಳದೆ ದೂರಕೆ ಸಾಗಿಬಿಡಬಹುದೇ? ನನ್ನ ಯಾವುದೋ ಒಂದು ಸಣ್ಣ ತಪ್ಪಿಗೆ ಮುಖ ತಿರುಗಿಸಿ ಮರಳಿ ಬಾರದ ದಾರಿ ತುಳಿದು ಬಿಡಬಹುದೇ? ಹಾಗನ್ನಿಸಿದಾಗೆಲ್ಲ ತುಂಬಾ ಭಯವಾಗುತ್ತದೆ. ನನ್ನಿಂದ ಯಾವುದೇ ಪ್ರಮಾದ ಆಗದಂತೆ ಎಚ್ಚರವಹಿಸುತ್ತೇನೆ. ಆದರೂ ಅನುಮಾನ ಕಾಡುವುದ ಬಿಡುವುದಿಲ್ಲ. ಒಂದರೆ ಘಳಿಗೆ ನೀನಿಲ್ಲದ ದಿನಗಳ ಊಹಿಸಿಕೊಂಡರೂ ಎದೆ, ಮನಸ್ಸು, ಹೃದಯ ಖಾಲಿ ಖಾಲಿಯಾದಂತೆ, ಶೂನ್ಯ ಕವಿದಂತೆ ಭಾಸವಾಗುತ್ತದೆ. ಯಾರು ಶಾಶ್ವತ ಈ ಭೂಮಿಯ ಮೇಲೆ? ಬದುಕನ್ನೇ ಪ್ರೀತಿಗೆ ಮುಡಿಪಿಟ್ಟು, ಹಗಲಿರುಳು ಪ್ರೇಮದ ಕನವರಿಕೆಯಲ್ಲಿ ಕಾಲ ನೂಕಿ ಕಾಲಗರ್ಭದಲ್ಲಿ ಹೂತು ಹೋದ ಅಮರಪ್ರೇಮಿಗಳಿಲ್ಲವೇ? ನಾವು ಅಮರಪ್ರೇಮಿಗಳಾಗದಿದ್ದರೂ ನಿರ್ಮಲ ಪ್ರೇಮಿಗಳಾಗೋಣ. ಸ್ವತ್ಛಂದ ಪ್ರೀತಿಗೆ ತಳಪಾಯ ಹಾಕೋಣ. ಸದಾ ಪ್ರೀತಿಗಾಗಿ, ಪ್ರೀತಿಗೋಸ್ಕರ, ಪ್ರೀತಿಯಿಂದಲೇ ಬದುಕೋಣ. ಗೆಳತಿ… ಇವು ಹುಚ್ಚು ಕಲ್ಪನೆಗಳಲ್ಲ, ಬದುಕಿನ ವಾಸ್ತ¤ವಗಳು! 

ದೀರ್ಘ‌ ಪತ್ರ ಓದಿ ಬೇಸರವೆನಿಸಿತೇ? ಪ್ರೀತಿ ಯಾಚಿಸುವ ಫ‌ಕೀರನೊಬ್ಬ ತನ್ನ ನಲ್ಲೆಯ ಎದುರಿಗಲ್ಲದೆ ಮತ್ಯಾರ ಬಳಿ ತನ್ನ ಭಾವನೆಗಳನ್ನು ಬಿಚ್ಚಿಡಬಲ್ಲ? ನಾನು ಫ‌ಕೀರ ನಿಜ, ಆದರೆ ಫೆರಾರಿ ಮಾರಿದ ಫ‌ಕೀರನಲ್ಲ. ಏಕೆಂದರೆ, ನನಗೆ ಪ್ರೀತಿಯೇ ಫೆರಾರಿ! ನೀನೇ ಬೇಸರಿಸಿಕೊಂಡರೆ ಮಾತುಗಳು ಮೊಟಕುಗೊಂಡಾವು, ನಿರಂತರ ಪತ್ರಗಳು ನಿಂತು ಹೋದಾವು, ಬಿಚ್ಚಿಡಬೇಕಾದ ಗುಟ್ಟುಗಳು ಗುಂಡಿಗೆಯಲ್ಲಿಯೇ ಗಟ್ಟಿಯಾಗಿ ಉಳಿದು ಹೋದಾವು! ಹಾಗಾಗಿ, ಈ ಪ್ರೇಮದಾಸನ ಮಾತುಗಳಿಗೆ ಯಾವತ್ತೂ ಬೇಸರಿಸಿಕೊಳ್ಳದಿರು…

ನಿನ್ನವನು
-ನಾಗೇಶ್‌ ಜೆ. ನಾಯಕ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.