ಇದು ಸರ್ಕಾರಿ ಕ್ಲಾಸು : ಎಲ್ಲವೂ ಫಸ್ಟ್ ಕ್ಲಾಸು
Team Udayavani, Sep 24, 2019, 5:20 AM IST
ಸೆಂಟ್ ಪರ್ಸೆಂಟ್ ರಿಸಲ್ಟ್ ಬರಬೇಕೆಂದರೆ, ಅದು ಖಾಸಗಿ ಶಾಲೆಯೇ ಆಗಿರಬೇಕು ಎಂಬು ನಂಬಿಕೆಯೊಂದು ನಮ್ಮಲ್ಲಿ ಉಳಿದುಬಿಟ್ಟಿದೆ. ಸರ್ಕಾರಿ ಶಾಲೆಯಲ್ಲಿಯೂ ಅಂಥದೊಂದು ಮ್ಯಾಜಿಕ್ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗದ ಎರಡು ಶಾಲೆಗಳಿವೆ.ಈ ಸರ್ಕಾರಿ ಶಾಲೆಗಳಲ್ಲಿ ಎಸ್ ಎಸ್ ಎಲ್‌ಸಿ ಓದಿ ಎಲ್ಲಾ ಮಕ್ಕಳೂ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ ! ಅಂಥದೇ ಫಲಿತಾಂಶವನ್ನು ಈ ವರ್ಷವೂ ಪಡೆಯುವ ಉತ್ಸಾಹದಲ್ಲಿ ಈ ಶಾಲೆಗಳ ಶಿಕ್ಷಕರು-ವಿದ್ಯಾರ್ಥಿಗಳಿದ್ದಾರೆ…
“ನಿಮ್ಮ ಮಕ್ಕಳನ್ನ ಯಾವ ಶಾಲೆಗೆ ಸೇರಿಸಿದ್ದೀರಿ’ ಎಂದು ಯಾರಾದರೂ ಕೇಳಿದರೆ, ಆ ಊರಿನ ಪ್ರತಿಷ್ಠಿತ ಖಾಸಗಿ ಶಾಲೆಯ ಹೆಸರು ಹೇಳಿ, “ಅಲ್ಲಿ ಸೇರಿಸಿದ್ದೇನೆ’ ಎಂದು ಜಂಭದಿಂದ ಕೊಚ್ಚಿಕೊಳ್ಳುವವರೇ ಎಲ್ಲ ಊರುಗಳಲ್ಲೂ ಹೆಚ್ಚಾಗಿ ಹೆಚ್ಚು ಕಾಣಸಿಗುತ್ತಾರೆ. ಇನ್ನು ಏನಾದರೂ ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ ಎಂದ್ರೆ ಸಾಕು; ಹೌದಾ? ಎನ್ನುತ್ತಾ ಮೂಗು ಮುರಿಯುವವರೇ ಹೆಚ್ಚು.
ನೀವು ಚಿತ್ರದುರ್ಗದ ಐಮಂಗಲ ಹಾಗೂ ದೇವರಕೋಟಕ್ಕೆ ಬಂದು ಇದೇ ಪ್ರಶ್ನೆ ಕೇಳಿ: ತಕ್ಷಣ, ನಾವು ಮೊರಾರ್ಜಿ ಸರ್ಕಾರಿ ಶಾಲೆಗೆ ಸೇರಿಸಿದ್ದೀವಿ ಎಂದು ಪೋಷಕರು ಎದೆ ತಟ್ಟಿಕೊಂಡು ಹೇಳುತ್ತಾರೆ.
ಇದು ನಿಜ, ಸರ್ಕಾರಿ ಶಾಲೆಯಲ್ಲಿ ಓದಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಇಲ್ಲಿನ ಎಲ್ಲ ವಿದ್ಯಾರ್ಥಿಗಳೂ ಫಸ್ಟ್ ಕ್ಲಾಸ್‌ನಲ್ಲಿಯೇ ಉತ್ತೀರ್ಣರಾಗಿದ್ದಾರೆ. ಈ ಅಮೋಘ ಫಲಿತಾಂಶ, ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಲ್ಲದೆ, ಸರ್ಕಾರಿ ಶಾಲೆಯ ಬಗ್ಗೆ ತಾತ್ಸಾರ ವ್ಯಕ್ತಪಡಿಸುವವರಿಗೆ ಸರಿಯಾಗಿಯೇ ಉತ್ತರ ನೀಡಿದೆ.
ಐಮಂಗಲದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಹಾಗೂ ದೇವರಕೋಟದ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಎಲ್ಲ ವಿದ್ಯಾರ್ಥಿಗಳೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ, ಈ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ, ಪಠ್ಯಪುಸ್ತಕ, ಸಮವಸ್ತ್ರ, ಊಟೋಪಚಾರ, ವಸತಿ ಎಲ್ಲವೂ ಉಚಿತ. ಯಾವುದೇ ವಿದ್ಯಾರ್ಥಿ ನಯಾ ಪೈಸೆಯೂ ಖರ್ಚು ಮಾಡುವಂತಿಲ್ಲ. ಎಲ್ಲ ವೆಚ್ಚವನ್ನೂ ಸರ್ಕಾರವೇ ಭರಿಸುತ್ತದೆ.
ಐಮಂಗಲದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು 38 ವಿದ್ಯಾರ್ಥಿನಿಯರು, ಅದರಲ್ಲಿ 10 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್, ಉಳಿದ 28 ವಿದ್ಯಾರ್ಥಿನಿಯರು ಫಸ್ಟ್ ಕ್ಲಾಸ್‌ನಲ್ಲಿಯೇ ಪಾಸಾಗಿದ್ದಾರೆ. ಇಲ್ಲಿ ಯಾವುದೇ ಫೇಲ್, ಸೆಕೆಂಡ್ ಕ್ಲಾಸ್ ಅಥವಾ ಜಸ್ಟ್ ಪಾಸ್ ಇಲ್ಲವೇ ಇಲ್ಲ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿಯರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದವರು. ಎಲ್ಲರೂ ಬಡ ಕುಟುಂಬದಿಂದ ಬಂದವರೇ. ಇನ್ನು ದೇವರಕೋಟದ ಮೊರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆಯಲ್ಲಿಯೂ ಕೂಡ 44 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದರೆ, ಉಳಿದ ಎಲ್ಲ 28 ವಿದ್ಯಾರ್ಥಿಗಳೂ ಫಸ್ಟ್ ಕ್ಲಾಸ್‌ನಲ್ಲಿಯೇ ಪಾಸಾಗಿದ್ದಾರೆ.
ಇದು ಹೇಗೆ ಸಾಧ್ಯ?
ಈ ಯಶಸ್ಸನ ಹಿಂದಿರುವ ಗುಟ್ಟನ್ನು ಅರಸುತ್ತಾ ಹೋದರೆ ಎದುರಾಗುವುದು ಶಿಕ್ಷಕರ ಪರಿಶ್ರಮ. ಈ ಶಾಲೆಗಳಿಗೆ ಶಿಕ್ಷಕರನ್ನು ಆಯ್ಕೆ ಮಾಡಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ ಇಡುತ್ತಾರೆ. ಅದರಲ್ಲಿ ಪ್ರತಿಭಾನ್ವಿತರನ್ನು ಮಾತ್ರ ಶಿಕ್ಷಕರನ್ನಾಗಿ ಆಯ್ಕೆ ಮಾಡುವುದರಿಂದ ಎಂಥ ದಡ್ಡ ಮಕ್ಕಳು ಶಾಲೆ ಸೇರಿದರೂ, ಇವರು ಅವರನ್ನು ಬುದ್ಧಿವಂತರನ್ನಾಗಿ ಮಾಡಿಬಿಡುವ “ಐಡಿಯಾಗಳು’ ಇಲ್ಲಿ ಶಿಕ್ಷಕರಿಗೆ ಗೊತ್ತಿವೆ.
“ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾಡುವುದಷ್ಟೇ ಶಿಕ್ಷಕರ ಕೆಲಸವಲ್ಲ. ಮಕ್ಕಳನ್ನು ಭವಿಷ್ಯದ ಸ್ಪರ್ಧೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸಲು ನಾವು ಆದ್ಯತೆ ನೀಡುತ್ತಿದ್ದೇವೆ. ನಮ್ಮ ಶಾಲೆಯ ಎಲ್ಲ ಕೊಠಡಿಗಳಿಗೂ ಸಿ.ಸಿ. ಟಿವಿ. ಕ್ಯಾಮೆರಾ ಅಳವಡಿಸಿದ್ದೇವೆ. ಯಾವುದೇ ನಿರ್ದಿಷ್ಟ ಕೊಠಡಿಯ ಶಿಕ್ಷಕರು ಅಥವಾ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ರೀತಿ ಧ್ವನಿ ವರ್ಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ ಎನ್ನುತ್ತಾರೆ, ಐಮಂಗಲದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರಾಂಶುಪಾಲ ರಮೇಶ್.
ಪಾಠ ಮಾಡುವ ಕ್ರಮ ಕೂಡ ವಿಭಿನ್ನ. ಮಕ್ಕಳಿಗೆ ಗಣಿತ, ವಿಜ್ಞಾನದಂಥ ವಿಷಯಗಳನ್ನು ವಿಡಿಯೋ ಚಿತ್ರ ಸಹಿತ ಮನದಟ್ಟು ಮಾಡಿಸುವ ಸಲುವಾಗಿಯೇ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ 16 ಕಂಪ್ಯೂಟರ್, 16 ಜನ ಶಿಕ್ಷಕರು ಸಜ್ಜಾಗಿದ್ದಾರೆ. ವಸತಿ ಶಾಲೆಗೆಂದೇ ಪ್ರತ್ಯೇಕ ಶುಶ್ರೂಷಕಿಯೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ಭಯ, ಗಾಬರಿ ಇರದಂತೆ ಮಾಡಲೆಂದೇ ನಾಲ್ಕು ಬಾರಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುವುದುಂಟು. ಕೆಲವೊಮ್ಮೆ ಪರೀಕ್ಷೆಗಳಲ್ಲಿ ಮಕ್ಕಳು ಕೇವಲ ಶೇ. 40 ಕ್ಕಿಂತ ಕಡಿಮೆ ಅಂಕ ಪಡೆಯುತ್ತಾರೆ. ಅವರನ್ನು ಗುರುತಿಸಿ, ವಿಶೇಷ ತರಗತಿಗಳನ್ನು ತೆಗೆದು ಕೊಂಡು, ಪಾಠ ಮಾಡಿ ಅವರನ್ನೂ ಪ್ರತಿಭಾನ್ವಿತರ ಸಾಲಿಗೆ ಸೇರಿಸಲು ವಿಶೇಷ ಕ್ರಮ ತೆಗೆದು ಕೊಳ್ಳುತ್ತಾರೆ.
ಅಷ್ಟೇ ಅಲ್ಲದೆ, ಪರೀಕ್ಷೆಯ ಭಯ ಓಡಿಸಲು ಹಲವು ಬಗೆಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಉತ್ತರಿಸಲು ಮಕ್ಕಳಿಗೆ ತರಬೇತಿ ನೀಡುತ್ತಾರೆ. ಅಂಕ ಗಳಿಕೆಗೆ ಯಾವ ರೀತಿ ಉತ್ತರ ಬರೆಯಬೇಕು ಎಂಬುದನ್ನೂ ಕಲಿಸುವುದರಿಂದ. ದೊಡ್ಡ ಪ್ರಮಾಣಲ್ಲೇ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂಬುದಿ ಇಲ್ಲಿನ ಶಿಕ್ಷಕ ವರ್ಗದವರ ಮಾತು.
ಒಟ್ಟಾರೆ, ಈ ಶಾಲೆ ಸರ್ಕಾರಿ ಶಾಲೆ ಅಂದರೆ ಮೂಗು ಮೂರಿಯೋದಲ್ಲ. ಹುಬ್ಬೇರಿಸುವಂತೆ ಮಾಡಿದೆ.
-ತುಕಾರಾಂ ರಾವ್ ಬಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.