ಈ ಪ್ರೀತಿ, ಅದರ ರೀತಿ…
Team Udayavani, Oct 29, 2019, 4:14 AM IST
ಮನಸು ಇಂದೇಕೊ ಆಹ್ಲಾದಗೊಂಡಿದೆ. ಖುಷಿಯಿಂದ ಹುಚ್ಚೆದ್ದು ಕುಣಿಯುತ್ತಿದೆ. ಯಾರಲ್ಲೂ ಹೇಳಿಕೊಳ್ಳಲಾಗದ ಒಂದು ಸಿಹಿ ಅನುಭವ ನನ್ನಲ್ಲಿದೆ. ಅದೇನು ಮೋಡಿ ಇದೆಯೇ ಆ ನಿನ್ನ ಕಂಗಳಲ್ಲಿ? ಗೊತ್ತಿಲ್ಲ. ನೀ ನನ್ನ ಜೊತೆಯಲ್ಲಿದ್ದರೆ ಏನೇ ಕಷ್ಟಗಳು ಬಂದರೂ ಮರೆತುಬಿಡುತ್ತೇನೆ. ಬೇಕಾದ್ರೆ ಆ ವಿಧಿಗೂ ಚಾಲೆಂಜ್ ಮಾಡಿ ಗೆಲ್ಲುತ್ತೇನೆ ಎನ್ನುವಷ್ಟು ಉತ್ಸಾಹ ನನ್ನಲ್ಲಿ ತುಂಬಿದೆ. ಕಷ್ಟ ಕಾಲದಲ್ಲಿ ನೀನು ಮಾಡಿದ ಸಹಾಯ ನಾನು ಎಂದಾದರೂ ಮರೆಯಲು ಸಾಧ್ಯವೇ?
ಗೆಳತಿ, ಕಾರಣವೇ ಇಲ್ಲದೇ ನಿನ್ನ ನೋಡುತ್ತ ಮನತುಂಬಿ ನಗಬಲ್ಲೆ. ಜಗತ್ತೇ ತಿರಸ್ಕರಿಸಿದರೂ ನಿನ್ನೊಡಲ ಅನುರಾಗವ ಉಸಿರಾಗಿಸಿಕೊಂಡು ಬದುಕಬಲ್ಲೆ. ಮುಖ್ಯವಾಗಿ, ನಿನ್ನನ್ನು ನಾ ನನ್ನ ಪ್ರೀತಿಸುವುದಕ್ಕಿಂತಲೂ ಜಾಸ್ತಿ ಪ್ರೀತಿಸಬಲ್ಲೆ. ನಾವಿಬ್ಬರೇ ನಡೆವಾಗ ಯಾರಿಗೂ ತಿಳಿಯದೇ ಪ್ರಕೃತಿಯೇ ನಾಚುವಂತೆ ಸಿಹಿಮುತ್ತೂಂದನ್ನು ನೀಡಬಲ್ಲೆ. ನಮ್ಮಿಬ್ಬರ ನಡುವಿನ ಪ್ರೀತಿ ಇಂದು ಈ ಮಟ್ಟಕ್ಕೆ ಬಂದು ನಿಂತಿದೆ. ಇವತ್ತಿಗೆ ಆ ದೇವರು ನಿನ್ನ ಪ್ರೀತಿಯನ್ನು ಕರುಣಿಸಿ ಎಂಟು ವರ್ಷ ಪೂರ್ಣವಾಗಿದೆ. ಈ ಸಮಯದಲ್ಲಿ ಆ ದೇವರನ್ನು ಕೇಳೊದೊಂದೇ: ನಮ್ಮ ಪ್ರೀತಿ ಶಾಶ್ವತವಾಗಿರಲಿ ಮತ್ತು ಪರಿಪೂರ್ಣವಾಗಿರಲಿ.
ನನ್ನ ಜೀವನದ ಕೊನೆಯವರೆಗೂ ನಿನ್ನ ಪ್ರೀತಿ ನನಗಿರಲಿ ಅನ್ನೊದೊಂದೇ ನನ್ನ ಆಸೆ.
ಇಂತಿ ನಿನ್ನ ಪ್ರೀತಿಯ
ಪಿ.ವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ