ಈ ಸಲ ಸಿಕ್ಕಾಗ ನಾನೇ ಮಾತಾಡಿಸ್ತೀನಿ!


Team Udayavani, Apr 16, 2019, 6:00 AM IST

q-9

ಇನಿಯಾ,
ಒಲವಿನ ಓಲೆಯಿದು, ಹೃದಯದ ಆಸೆಯಿದು, ನನ್ನ ಪ್ರೀತಿ ದೋಣಿಯ ನಾವಿಕ ನೀನಾಗಬೇಕೆಂದು ಕಾಯುತ್ತಿರುವ ಹೂ ಮನಸ್ಸು ನನ್ನದು.

ಪ್ರಥಮ ಪಿಯುಸಿ ಆರಂಭದ ದಿನಗಳವು. ಹೇಳಿ ಕೇಳಿ ಹದಿ ಹರೆಯದ ವಯಸ್ಸು, ನೋಡಿದ್ದೆಲ್ಲ ಬೇಕೆನ್ನುವ ಮನಸ್ಸು. ಆಗ ಸಿಕ್ಕಿದವನು ನೀನು. ಪ್ರೀತಿ, ಪ್ರೇಮ ಅಂದ್ರೆ ಏನು ಅಂತ ತಿಳಿಯದ ಮುಗ್ದೆ ನಾನಾಗಿದ್ದೆ. ತರಗತಿ ಮುಗಿಸಿ ಬರುವಾಗ ಅಚಾನಕ್‌ ಆಗಿ ನನ್ನ ಮುಂದೆ ಬಂದೆ ನೀನು. ಆ ಮೊದಲ ಭೇಟಿಯಲ್ಲೇ ಏನೋ ರೋಮಾಂಚನದ ಅನುಭವ ಆಯ್ತು.

ನೀನಾಗೇ ನನ್ನ ಮಾತಾಡಿಸಿದರೂ, ಏನಂತ ಉತ್ತರಿಸಬೇಕು ಅಂತ ತಿಳಿಯದೆ ತಡಬಡಾಯಿಸಿಬಿಟ್ಟೆ. ನಿನ್ನ ಮಾತು ನನಗೆ ಸಂಗೀತದಂತೆ ಕೇಳಿಸುತ್ತಿತ್ತು. ಅದಕ್ಕೇ ಮೌನವಾಗಿ ಆಲಿಸುತ್ತಾ ನಿಂತೆ. ಅದಕ್ಕಿಂತ ಮುಂಚೆ ಹಿಂದೆಂದೂ ನಾನು ನಿನ್ನನ್ನು ನೋಡಿರಲಿಲ್ಲ. “ಇವನ್ಯಾರು?’ ಅನ್ನೋ ಪ್ರಶ್ನೆ ಕಾಡಿತಾದರೂ, ಯಾವುದೋ ಅಗೋಚರ ಬಾಂಧವ್ಯ ಆ ಪ್ರಶ್ನೆಯನ್ನು ಮರೆಸಿ ಹಾಕಿತು. ನನ್ನ ಅಕ್ಕಪಕ್ಕ ನನಗಿಂತಲೂ ಸುಂದರಿಯರಾದ ಎಷ್ಟೊಂದು ಹುಡುಗಿಯರಿದ್ರೂ ಈ ಶ್ಯಾಮಲ ವರ್ಣದ ಶ್ಯಾಮಲೆಯನ್ನೇ ಯಾಕೆ ನೀನು ಮಾತಾಡಿಸಿದೆ ಅಂತಲೂ ಗೊತ್ತಿಲ್ಲ..

ಪ್ರೀತಿ ಎಂಬ ಭಾವನಾ ಲೋಕಕ್ಕೆ ನನ್ನನ್ನು ಪರಿಚಯಿಸಿದವನು ನೀನೇ. ಅಂದು ನೀನು ನನ್ನ ಪೋನ್‌ ನಂಬರ್‌ ಕೇಳಿದಾಗ, ನಾನು ಕೊಡಲಿಲ್ಲ. ಆದರೆ ನೀನು ಅಲ್ಲಿಂದ ಹೊರಟು ಹೋದ ಮೇಲೆ, ಛೇ! ಎಂಥಾ ಪೆದ್ದಿ ನಾನು. ನಂಬರ್‌ ಕೊಟ್ಟಿದ್ದರೆ ಗಂಟೇನು ಹೋಗ್ತಿತ್ತು ಅಂತ ಅನ್ನಿಸಿತು.

ಅವತ್ತು ನೀನೇನೋ ಮರು ಮಾತಾಡದೆ ಹೋಗಿಬಿಟ್ಟೆ. ಆದ್ರೆ, ನಾನು ಅಂದಿನಿಂದ ಇಂದಿನವರೆಗೆ ನಿನಗೋಸ್ಕರ ಕಾಯ್ತಾ ಇದ್ದೀನಿ. ನಾಲ್ಕು ವರ್ಷದಿಂದ ನಿನ್ನದೇ ಧ್ಯಾನದಲ್ಲಿರುವ ನನಗೆ ನೀನು ಆದಷ್ಟು ಬೇಗ ಮತ್ತೆ ಸಿಗು. ನೀನು ಮೊದಲು ನೋಡಿದಾಗ ನಾನು ಹಾಕಿದ್ದ ಅದೇ ಹಸಿರು ಬಣ್ಣದ ಲಂಗ ದಾವಣಿ ಹಾಕಿ ಅದೇ ಕಾಲೇಜಿನ ಗೇಟ್‌ ಮುಂದೆ ಕಾಯುತ್ತಿರುತ್ತೀನಿ. ಮತ್ತೂಮ್ಮೆ ನನ್ನೆದುರು ಬಾ. ನಾನೇ ಮೊದಲು ಮಾತಾಡಿಸ್ತೀನಿ. ನಂಬರ್‌ ಕೂಡಾ ಕೊಡ್ತೀನಿ. ಸರೀನಾ?

ಇಂತಿ ನಿನ್ನ ಪ್ರೀತಿಯ ಶ್ಯಾಮಲೆ..
ಕಾವ್ಯಾ ಎನ್‌.

ಟಾಪ್ ನ್ಯೂಸ್

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.