ಈ ಸಮಯ ರಿಯಾಜ್‌ ಮಯ


Team Udayavani, May 12, 2020, 8:54 AM IST

TIME TO0000

ಮನಸ್ಸನ್ನ, ಸ್ವರವನ್ನ ಒಂದು ಕಡೆ ನಿಲ್ಲಿಸ್ರಿ…
ರಿಯಾಜ್‌ ಮಾಡೋರಿಗೆ, ಒಳ್ಳೆಯ ಗುರು ಸಿಕ್ಕಬೇಕ್ರಿ. ಶಾಸನಉಕ್ಕನುಗುಣವಾಗಿ ಅಭ್ಯಾಸಮಾಡಿದ ಗುರು ಸಿಕ್ಕರಂತೂ ಅದು, ಶಿಷ್ಯನ ಸೌಭಾಗ್ಯ. ಅಂಥ ಗುರುವಿನಿಂದ ಮಾರ್ಗದರ್ಶನ ಆದರೆ, ರಿಯಾಜ್‌ ಹೇಗಿರುತ್ತೆ, ಏನು ಮಾಡಬೇಕು  ಅನ್ನೋದು ತಿಳಿದಿರ್ತದ. ರಿಯಾಜ್‌ಗೆ ಕುಂತಾಗ, ತಕ್ಷಣ ಮೂಡ್‌ ಬರೋದಿಲ್ಲ. ತಂಬೂರ ತಗೊಂಡು, ಅದನ್ನ ಹಚ್ಚಿ, ದನಿ ಕೂಡಿಸಾಕ ಟೈಂ ಆಗ್ತದೆ. ಇದಕ್ಕೆ ಏನೂ ಮಾಡಂಗಿಲ್ಲ.

ಯಾವ ದಾರೀನೂ ಇಲ್ರಿ. ಗಟ್ಟಿ ಮನಸ್ಸೊಂದು  ಮಾಡಬೇಕು, ಅಷ್ಟ… ಇದಕ್ಕ ನಲವತ್ತು ನಿಮಿಷ ಹಿಡೀತದ. ಆನಂತರ, ನಿಧಾನಕ್ಕ ಮೂಡು ಹತ್ತತದ. ಅಭ್ಯಾಸ ಮಾಡಬೇಕು ಅನ್ನೋ ಮನಸ್ಸಿದ್ದರೆ ಏನೂ ಆಗಲ್ರಿ. ಇಷ್ಟಾದಮೇಲೂ ಮನಸ್ಸು ಗಡಬಡ ಮಾಡ್ತದೆ, ಚಂಚಲ ಆಗ್ತದೆ. ಸಾಕ್‌  ಬಿಡು ಅನಿಸ್ತದೆ. ಸ್ವರದ್ದು, ಮನಸ್ಸಿನದ್ದು ಓಡಾಟ ಜಾಸ್ತಿ. ಹೀಗಾಗಿ, ರಿಯಾಜಿಗೆ ಕೂತೋನು, ಅದರವಿರುದಟಛಿ ಹೋರಾಡಿ, ಜಯಶಾಲಿ ಆಗಬೇಕಾಗ್ತದೆ.

ಇನ್ನ, ಹಾಡೋರು ದನಿ ಕಾಯೊಬೇಕು. ಅದಕ್ಕ ತಮ್ಮ  ದನಿ ಬಗ್ಗೆ  ಳ್ಕೊಬೇಕು. ಪ್ರತಿಯೊಬ್ಬರ ದನಿಗೂ ಅಳತೆ ಇರ್ತದ. ದಪ್ಪ ದನಿ ಅಂದ್ರ, ಕರಿ 1, ಬಿಳೆ 1 ಕ್ಕೆ ದನಿ ಇರ್ತದೆ. ಇಂಥವರು, ಬೇರೆ ಅವ್ರು ಬಿಳೆ ನಾಲ್ಕು, ಬಿಳೆ ಮೂರಕ್ಕೆ ಹಾಡ್ತಾರ ಅಂತ ತಾವೂ ಹಾಡೋಕೆ ಹೋದ್ರ, ದನಿ ಕೆಡ್ತದ. ಕೇಳುವವರಿಗೆ  ಇಂಪು ಅನಿಸೋಲ್ಲ. ಬರ್ತಾ ಬರ್ತಾ ದನಿ ಹೋಗಿಬಿಡ್ತದ. ಹಾಗಾಗಿ, ದನಿ ಪಟ್ಟಿ ಒಳಗ, ಪ್ರಾಕ್ಟೀಸ್‌ ಮಾಡ್ಕೊಬೇಕು. ತೆಳ್ಳನೆ ವಾಯ್ಸ್ ಇದ್ರ, ಖರದು (ಕೆಳ ಶೃತಿ)ರಿಯಾಜ್‌ ಮಾಡ್ಲೆ ಬೇಕಾಗ್ತದ. ಆಗ, ದನಿ  ಹತೋಟಿಗೆ ಬರ್ತದ. ಹತೋಟಿ  ಅಂದ್ರ ಮತ್ತೇನಿಲ್ಲ. ಸ್ವರಾಭ್ಯಾಸ ಮಾಡಿ, ಪಳಗಿಸಿಕೊಳ್ಳಬೇಕು. ಹೇಗಂದ್ರ ಶಡ್ಜ, ಪಂಚಮದಾಗ ಸ್ವರ ನಿಲ್ಲಿಸೋದು.

ಸುಮ್ಮನೆ ಅಲ್ಲ, ಕೇಂದ್ರೀಕೃತಗೊಳ್ಳಬೇಕು. ಆಚೆ ಈಚೆ ಹೋಗಬಾರದು. ಇದನ್ನುಮಾಡೋಕೇ ಸುಮಾರು ದಿವಸ  ಇಡಸ್ತದ. ಆಮೇಲೆ, ಶಡ್ಜದಿಂದ ಶಡ್ಜಕ್ಕೆ ರಿಯಾಜು ಮಾಡಬೇಕು. ಸರಳಿ ಸ್ವರಗಳು, ಅಲಂಕಾರ ಸ್ವರಗಳ ಹಿಂದೆ ಬೀಳಬೇಕು. ಬೆಳಗ್ಗೆ ಸೂರ್ಯ ಉದಯ ಆಗೋದೊಳಗೆ ಏಳಬೇಕು. ತಂಬೂರ ತಗೊಂಡು ಸ್ವರಾಭ್ಯಾಸ ಮಾಡಬೇಕು.  ಸೂರ್ಯೋದಯದ ನಂತರ, ಶಡ್ಜದಿಂದ ಶಡ್ಜದವರೆಗೆ ಹೇಗೆ ಅಭ್ಯಾಸ ಮಾಡಬೇಕು ಅನ್ನೋದನ್ನ, ಆ ಶಿಷ್ಯನ ಸಾಮರ್ಥ್ಯ ಆಧರಿಸಿ, ಗುರು ಹೇಳಿಕೊಡ್ತಾನ. ಗುರುಗಳು ಒಂದು ತಾಸು ಹೇಳಿಟ್ಟಾರ ಅಂದ್ರ, ಶಿಷ್ಯ ನಾಲ್ಕು ತಾಸ್‌ ರಿಯಾಜ್‌  ಮಾಡಬೇಕಾಗ್ತದೆ…
* ಪಂಡಿತ್‌ ವೆಂಕಟೇಶ್‌ ಕುಮಾರ್‌ ಹಿರಿಯ ಗಾಯಕರು, ಹಿಂದೂಸ್ತಾನಿ

ಅಭ್ಯಾಸ ಮಾಡೋದು ಅಭ್ಯಾಸ ಆಗಬೇಕು…
ಸಂಗೀತ ಕಲಿಯೋಕೂ ಮೊದಲು, ಒಂದು ವಿಚಾರ ತಿಳಿಯಬೇಕು. ಏನಾದರೂ ಸಾಧನೆ ಮಾಡಬೇಕಾದರೆ, ಒಂದಷ್ಟು ತ್ಯಾಗ ಮಾಡಬೇಕು. ಅದರಲ್ಲಿ ಟಿ.ವಿ, ಮೊಬೈಲ…, ನಿದ್ದೆ… ಇವೆಲ್ಲ ಇರುತ್ತವೆ.  ಒಂದೇ ದಿವಸ, ಒಂದೇ ಸಲಕ್ಕೆ, ಗಂಟೆಗಟ್ಟಲೆ ಕುಳಿತು ಅಭ್ಯಾಸ ಮಾಡೋಕೆ ಆಗಲ್ಲ. ಹಾಗಾಗಿ, ಬೆಳಗ್ಗೆ ಅರ್ಧಗಂಟೆ, ಸಂಜೆ ಅರ್ಧಗಂಟೆ, ರಾತ್ರಿ ಒಂದುಗಂಟೆ, ಹೀಗೆ… ರೂಢಿಯಾದ ಮೇಲೆ ಗಂಟೆಗಟ್ಟಲೆ ಅಭ್ಯಾಸ  ಮಾಡಬಹುದು. ಬೇಸಿಕ್‌ ಅಂತ ಹೇಳ್ತಾರಲ್ಲ: ತಾರಕ  ಸ್ಥಾಯಿ, ಮಂದ್ರ ಸ್ಥಾಯಿ, ಜಂಟಿ ವರಸೆ, ಸರಳೆವರಸೆ, ಸ್ವರ ಜತಿ ಇವುಗಳ ಜೊತೆಗೆ, ಎಲ್ಲ ಅಕಾರಗಳನ್ನು ಮೊದಲುಅಭ್ಯಾಸ ಮಾಡಬೇಕು.

ಸಾ  ಇಂದ ನೇರವಾಗಿ ಮೇಲಿನ ಸ್ಥಾಯಿಗೆ ಹೋಗೋದು. ಸರಿಗಮಪದನಿಸ ವನ್ನು ಗಂಟಲಿಗೆ  ಹೊಂದಿಸಿ  ಕೊಳ್ಳೋದು. ಐದೈದು ಪದದಲ್ಲಿ ಅಕಾರ,ಇಕಾರ, ಉಕಾರ ಅಭ್ಯಾಸ ಮಾಡೋದು, ಹಮ್‌ ಕಾರ… ಇವೆಲ್ಲಾ ಬಹಳ ಮುಖ್ಯ. ಹಮ್ಮಿಂಗ್‌ ಅಂತಾರಲ್ಲ, ಅದು ಸರಿಯಾಗಬೇಕು ಅಂದರೆ, ಹಮ್‌ ಅಭ್ಯಾಸ ಮಾಡಲೇಬೇಕು. ಮೂರು ಕಾಲದಲ್ಲಿ ವರ್ಣಗಳನ್ನು ಅಭ್ಯಾಸ ಮಾಡಬೇಕು. ಆದಾದ ಮೇಲೆ ನಿಧಾನಕ್ಕೆ ಕೀರ್ತನೆ, ದೇವರ ನಾಮ, ತಿಲ್ಲಾನ… ಸಂಗೀತ ಕಲಿಕೆ ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ಒಂದು ದಿನ ಮೇಳಕರ್ತ ರಾಗ, ಮತ್ತೂಂದು ದಿನ ಶಂಕರಾಭರಣ. ಹೀಗೆ, ದಿನಕ್ಕೊಂದು  ರಾಗಗಳನ್ನು ಅಭ್ಯಾಸ ಮಾಡುವುದರಿಂದ, ಗಂಟಲಲ್ಲಿ ಫೊ ಹಾಗೇ ಇರುತ್ತದೆ. “ಏನ್ರೀ, ಎಷ್ಟು ಚೆನ್ನಾಗಿ ಹಾಡ್ತೀರಾ..’ ಅಂತ ಅನ್ನಿಸಿಕೊಳ್ಳೋಕೂ, ಚಪ್ಪಾಳೆ ಗಿಟ್ಟಿಸಿಕೊಳ್ಳೋಕೂ ಈ ಅಭ್ಯಾಸ ಇರಬೇಕು.
* ಪಲ್ಲವಿ ಗುರುಪ್ರಸನ್ನ, ಶಾಸ್ತ್ರೀಯ ಸಂಗೀತಗಾರ್ತಿ

ಅಭ್ಯಾಸ ಯೋಗದಂತೆ…
ಸಂಗೀತ ಅನ್ನೋದು ಮಲ್ಟಿ ಟಾಸ್ಕಿಂಗ್‌ ಇದ್ದಂತೆ. ತಾಳ, ಶೃತಿ, ಸಾಹಿತ್ಯ… ಹೀಗೆ ಒಂದು ಸಲ ಹಾಡಲು ಅಥವಾ ಅಭ್ಯಾಸಮಾಡಲು ಕುಳಿತರೆ, ಇಷ್ಟೂ ಕಡೆ ಗಮನ ಹರಿಸಬೇಕು. ಸಂಗೀತ ಪ್ರಾಣಾಯಾಮ ಇದ್ದಂತೆ.  ಮೊದಲು  ಓಂಕಾರದಿಂದ ಶುರು ಮಾಡಿ, ವರ್ಣಗಳನ್ನು ಅಭ್ಯಾಸ ಮಾಡಬೇಕು. ಇದರಿಂದ,ಉಸಿರಾಟದ ಮೇಲೆ ನಿಯಂತ್ರಣ ಸಿಗುತ್ತದೆ. ಪ್ರತಿಯೊಬ್ಬರ ಶೃತಿ ಬೇರೆ ಬೇರೆ ಇರುತ್ತೆ. ನಮ್ಮ ಶೃತಿ, ನಮಗೆ ಕಂಫ‌ರ್ಟ್‌ ಜೋನ್‌ ಯಾವುದು ಅಂತ ಮೊದಲು  ತಿಳಿದುಕೊಳ್ಳಬೇಕು. ತುಂಬಾ ಜನ, ಹೈ ಪಿಚ್‌ನಲ್ಲಿ ಹಾಡಿ, ಗಂಟಲು ಕೆಡಿಸಿಕೊಳ್ತಾರೆ. ಒಂದು ರಾಗ ಇಟ್ಕೊಂಡು, ನಮಗೆ ಹೊಂದುವಸ್ಪೀಡ್‌ಗೆ ತಕ್ಕಂತೆ, ಸ್ವರಗಳನ್ನು ಹೇಳಿಕೊಂಡು ಅಭ್ಯಾಸ ಮಾಡುವುದು ಒಳಿತು. ಇದರ ಜೊತೆ, ಅ  ಕಾರಗಳನ್ನು ಹೇಳಿಕೊಳ್ಳಬೇಕು.ಚೀಜ್‌ಗಳನ್ನು ಹಾಡ್ಕೊತಾ ಹಾಡ್ಕೊತಾ, ಸ್ಪೀಡ್‌ ಜಾಸ್ತಿ ಮಾಡ್ತಾ ಮಾಡ್ತಾ ಹೋಗಿ, ಮತ್ತೆ ಓಂಕಾರದಜೊತೆಗೆ ಅಭ್ಯಾಸ ಮುಗಿಸಬೇಕು. ಯೋಗಾಸನದ ಮುಕ್ತಾಯದಲ್ಲಿ  ಶವಾಸನ ಹಾಕಿಸ್ತಾರಲ್ಲ. ಹಾಗೇ.
* ಅರ್ಚನಾ ಉಡುಪ, ಹಿರಿಯ ಗಾಯಕಿ

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.