ಹುಚ್ಚು ಹುಡುಗನ ತರಲೆ ಯೋಚನೆಗಳು..

Team Udayavani, Oct 3, 2017, 1:11 PM IST

jo9.jpg

ಗುಂಪಿನಲಿ ನಾ ಹರಟೆ ಹೊಡೆವಾಗ ಏನೂ ಅರಿಯದ ಮಳ್ಳಿಯ ಹಾಗೆ ನೆಲವನ್ನೇ ನೋಡುತ್ತ ನೀ ಸಾಗಬೇಕಿತ್ತು. ಅದನ್ನ ಗಮನಿಸಿ ನಾನು “ಏ ಬುಲ್ ಬುಲ್ ಮಾತಾಡಕಿಲ್ವಾ?’ ಅಂತ ನಿನ್ನನ್ನು ಕೆಣಕಬೇಕಿತ್ತು. ಒಮ್ಮೊಮ್ಮೆ  ನಾನು ಸುಮ್ಮನಿದ್ದರೂ  ದೂರದಿಂದಲೇ ನನ್ನನ್ನು ನೋಡಿ ಹತ್ತಿರ ಬಂದಾಗ ಕಂಡೂ ಕಾಣದವಳಂತೆ ನೀ ತಲೆಬಗ್ಗಿಸಿಕೊಂಡು ಹೋಗಿ ಬಿಡಬೇಕಿತ್ತು!

ಪ್ರೀತಿ-ಪ್ರೇಮದ ವಿಷಯದಲ್ಲಿ, ಪ್ರೀತಿಸ್ತಿದೀನಿ  ಅಥವಾ ಇಲ್ಲ ಎಂದು ಸ್ಪಷ್ಟವಾಗಿ ಹೇಳದೆ ತಿಂಗಳುಗಳ ಕಾಲ ಕಾಡುವುದರಲ್ಲಿ ಹುಡುಗಿಯರದೇ ಮೇಲುಗೈ. “ನಿನ್ನ ಬಗ್ಗೆ ನನಗಾವ ರೀತಿಯ ಪ್ರೇಮಭಾವನೆಗಳೇ ಇಲ್ಲ’ ಎಂದರೂ ಬೆಂಬಿಡದ ಬೇತಾಳನಂತೆ ಗಂಟುಬಿದ್ದು “ಐ ಲವ್‌ ಯೂ’ ಅಂತ ಪೀಡಿಸುವ ಚಾಳಿ ಮಾತ್ರ ಹುಡುಗರ ಜನ್ಮಸಿದ್ಧ ಹಕ್ಕು. ಆದರೆ, ನಾ ಪೀಡಿಸಲಿಲ್ಲ. ನೀನು ಕಾಡಲೂ ಇಲ್ಲ. ಆದರೂ ನಾವು ಒಬ್ಬರಿಗೊಬ್ಬರು ಎಷ್ಟೊಂದು ಹತ್ತಿರ ಆಗಿಬಿಟ್ಟೆವಲ್ಲ? ನಿಜಕ್ಕೂ ಈಗ ಬೇಸರವಾಗುತ್ತಿದೆ ಹುಡುಗಿ, ಪೀಡಿಸುವ-ಕಾಡಿಸುವ ಆ ಖುಷಿಯಿಂದ ನಾವಿಬ್ಬರೂ ವಂಚಿತವಾದೆವಲ್ಲ ಎಂದು.

ಗುಂಪಿನಲಿ ನಾ ಹರಟೆ ಹೊಡೆವಾಗ ಏನೂ ಅರಿಯದ  ಮಳ್ಳಿಯ ಹಾಗೆ ನೆಲವನ್ನೇ ನೋಡುತ್ತ ನೀ ಸಾಗಬೇಕಿತ್ತು. ಅದನ್ನು ನಾ ಗಮನಿಸಿ “ಏ ಬುಲ್ ಬುಲ್ ಮಾತಾಡಾಕಿಲ್ವ?’ ಅಂತ ಕೆಣಕಬೇಕಿತ್ತು. ಒಮ್ಮೊಮ್ಮೆ ನಾ ಸುಮ್ಮನಿದ್ದರೂ ದೂರದಿಂದಲೇ ನನ್ನನ್ನು ನೋಡಿ ಹತ್ತಿರ ಬಂದಾಗ ನೋಡಿಯೂ ನೋಡದಂತೆ ನೀ ಒಂಟಿಯಾಗಿ ಸಾಗಬೇಕಿತ್ತು. ನಾನು ನಿನ್ನ ಹಿಂದಿಂದೆ ಬಂದು ಭಯದಿಂದಲೇ ನಿನ್ನನ್ನು ಮಾತನಾಡಿಸಬೇಕಿತ್ತು. ದಿನಗಳೆದಂತೆ, ಒಬ್ಬರಿಗೊಬ್ಬರ ಕಣ್ಣುಗಳು ಮಾತಾಡಿ ಹೃದಯದಲಿ ಪ್ರೇಮ ಪ್ರಕರಣ ದಾಖಲಾಗಬೇಕಿತ್ತು.

ಪ್ರೇಮಗೀತೆಗಳ ಕೆಲ ಸಾಲುಗಳನ್ನೇ ಕದ್ದು ಮುದ್ದಾದ ಪ್ರೇಮ ನಿವೇದನೆಯ ಪತ್ರವನ್ನು ನಾನು ಬರೆಯಬೇಕಿತ್ತು. ಅದು ನಿಮ್ಮಪ್ಪನ ಕೈಗೆ ಸಿಕ್ಕಿ ಫ‌ಜೀತಿಯಾಗಬೇಕಿತ್ತು. ಅದೇ ಕಾರಣಕ್ಕೆ  ನೀನು ಮುನಿಸಿಕೊಳ್ಳಬೇಕಿತ್ತು. ನಾನು ಒಂದಿಡೀ ವಾರ ನಿನಗೆ ಸಾರಿ ಕೇಳಿ ಕಡೆಗೂ ರಾಜಿ ಮಾಡಿಕೊಳ್ಳಬೇಕಿತ್ತು. ಕೊನೆಗೆ ಪ್ರೀತಿಯಲಿ ಫಿಲಾಸಫಿ ಪಾಸಾದ ನಮ್ಮ ಕಾಲೇಜಿನ ಅಮರ ಪ್ರೇಮಿಗಳಿಬ್ಬರ ಸಂಧಾನದಿಂದ ನಾವಿಬ್ಬರೂ ಒಂದಾಗಬೇಕಿತ್ತು. 

ಎಲ್ಲವೂ ಅಂದುಕೊಂಡಂತೆಯೇ ಆಗಿ, ಸಿನಿಮಾ-ಪಾರ್ಕು ಅಂತ ಅಲೆಯುತ್ತ ಕಾಲ ದೂಡಬೇಕಿತ್ತು. ರಾತ್ರಿಯಿಡೀ ಮೊಬೈಲಲ್ಲಿ ಹರಟಬೇಕಿತ್ತು. ಬ್ಯಾಟರಿಯ ಚಾರ್ಜ್‌ ಖಾಲಿಯಾದಾಗ ಕರೆಂಟು ಇಲ್ಲದ್ದು ಗೊತ್ತಾಗಿ ಕೆಪಿಟಿಸಿಎಲ್ನವರನ್ನು ಹಳಿಯಬೇಕಿತ್ತು. ನಿನ್ನನ್ನು ಬಿಟ್ಟು ನಿನ್ನ ಗೆಳತಿಯ ನಾಸಿಕದ ಕುರಿತು ನಾ ಬರೆದ ಕವನವನ್ನು ನಿನ್ನಿಂದಲೇ ಓದಿಸಿ ನಿನ್ನನ್ನು ರೇಗಿಸಬೇಕಿತ್ತು.

ಇದಕ್ಕೆ ಪ್ರತೀಕಾರವಾಗಿ ಕವನ ಓದಿದ ಮರುದಿನದಿಂದಲೇ ನೀನು ನನ್ನೊಂದಿಗೆ ಮಾತು ಬಿಟ್ಟು ಹೊಟ್ಟೆ ಉರಿಸಬೇಕಿತ್ತು. ಆಗ, ಹಸಿವು ನಿದ್ರೆಗಳಿರದೇ ನಾನು ಒದ್ದಾಡಬೇಕಿತ್ತು. ನಮ್ಮಿಬ್ಬರ ಬದುಕಿನಲ್ಲಿ ಇಷ್ಟೇ ಅಲ್ಲ, ಇನ್ನೂ ಏನೇನೋ ಆಗಬೇಕಿತ್ತು ಅನಿಸುತ್ತಿದೆ. ಹೇಳು, ನಿನಗೂ ಎಂದಾದರೂ ಹೀಗೆ ಅನಿಸಿದೆಯಾ? ನನಗೆ ಕಷ್ಟಪಡದೇ ಸಿಕ್ಕ ಸ್ವರ್ಗ ಸುಖ ನೀನು. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸೆಳೆವುದೇ ಜೀವನ’ ಅಲ್ಲವೇ? ಅದಕ್ಕೇ ಇಂಥ ತರ್ಲೆ ವಿಚಾರಗಳು. ಅನಿಸಿದ್ದನ್ನ ಹಾಗೇ ಹೇಳಿದ್ದೇನೆ. 

ಇಂತಿ ನಿನ್ನ ನಲ್ಮೆಯ ಹುಚ್ಹುಡುಗ: ಅಶೋಕ ವಿ ಬಳ್ಳಾ

ಟಾಪ್ ನ್ಯೂಸ್

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.