ಮೂರು ಮಿಡತೆಗಳು
Team Udayavani, Jul 23, 2019, 5:00 AM IST
ಡಾರ್ವಿನ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ದಿನಗಳು. ಮಿಡತೆಗಳ ಬಗ್ಗೆ ಅವನಿಗೆ ಅಪಾರ ಆಸಕ್ತಿ. ಪ್ರಕೃತಿಯ ಗುಟ್ಟುಗಳ ಬೀಗ ಒಡೆಯಲು ಮಿಡತೆಗಳೇ ಕೀಲಿಕೈ ಎಂದು ಆತ ಭಾವಿಸಿದ್ದ. ಕೇಂಬ್ರಿಡ್ಜ್ನ ಪರಿಸರದಲ್ಲಿ ಅದೊಂದು ದಿನ ದೊಡ್ಡ ಮರದ ಕಾಂಡದ ಬಳಿ ಹುಡುಕುತ್ತಿದ್ದಾಗ ಡಾರ್ವಿನ್‌ಗೆ ಒಂದಲ್ಲ ಎರಡು ವಿಶೇಷ ಮಿಡತೆಗಳು ಕಂಡವು. ಅಂಥವನ್ನು ಅವನು ಹಿಂದೆಂದೂ ಕಂಡಿರಲಿಲ್ಲ. ತಕ್ಷಣ ಕಾರ್ಯಪ್ರವೃತ್ತನಾದ ಆತ ತನ್ನ ಎರಡೂ ಕೈಗಳಿಂದ ಅವನ್ನು ಗಬಕ್ಕನೆ ಹಿಡಿದುಬಿಟ್ಟ. ಹೀಗೆ ಎರಡು ಮುಷ್ಟಿಗಳಲ್ಲಿ ಎರಡು ಮಿಡತೆಗಳನ್ನು ಹಿಡಿದು ಇನ್ನೇನು ಎದ್ದುನಿಲ್ಲಬೇಕು ಎಂಬಷ್ಟರಲ್ಲಿ ಅವನಿಗೆ ಮೂರನೆಯ ಜಾತಿಯೊಂದು ಕಾಣಿಸಿಕೊಂಡಿತು. ತನ್ನ ಬಲಗೈಯ ಮುಷ್ಟಿ ತೆರೆದು ಮಿಡತೆಯನ್ನು ಬಾಯೊಳಗೆ ಹಾಕಿಕೊಂಡು ಮೂರನೆಯ ಮಿಡತೆ ಹಿಡಿಯಲು ಹಾರಿದ ಡಾರ್ವಿನ್. ಆದರೆ, ಬಾಯೊಳಗೆ ಬಂಧಿಯಾಗಬೇಕಿದ್ದ ಮಿಡತೆ ಕೂಡ ಅಷ್ಟೇ ಕ್ಷಿಪ್ರವಾಗಿ ತನ್ನ ಜಾಣ್ಮೆ ತೋರಿಸಿತು. ಡಾರ್ವಿನ್‌ನ ಬಾಯಿಗೆ ತನ್ನ ಕಹಿ ದ್ರಾವಣವನ್ನು ಉಗುಳಿ ಅದು ಮಿಂಚಿನಂತೆ ತಪ್ಪಿಸಿಕೊಂಡಿತು. ಈ ಗಡಿಬಿಡಿಯಲ್ಲಿ ಮೂರನೇ ಮಿಡತೆ ಕೂಡ ತಪ್ಪಿಸಿಕೊಂಡು ಪರಾರಿಯಾಯಿತು.
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Kabaddi: ಇಂದು ಸೀನಿಯರ್ ಕಬಡ್ಡಿ ತಂಡದ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.