ಮೊಬೈಲ್ ಚೋರನ ಸ್ವಾಗತ
Team Udayavani, Mar 19, 2019, 12:30 AM IST
ಹಳ್ಳಿಯನ್ನು ಬಿಟ್ಟು ದೂರದ ಊರಿಗೆ ಎಂದೂ ಪ್ರಯಾಣ ಮಾಡಿರಲಿಲ್ಲ. ಆರೋಗ್ಯ ತಪಾಸಣೆ ಸಂಬಂಧ ಅದೊಂದು ದಿನ ಅಕ್ಕನ ಮನೆಗೆಂದು, ಹುಬ್ಬಳ್ಳಿಯ ಬಸ್ಸು ಹತ್ತಿದ್ದೆ. ಅಪ್ಪ, ಆಸ್ಪತ್ರೆಯ ಖರ್ಚಿಗೆಂದು ಸ್ಪಲ್ಪ ಹಣವನ್ನಷ್ಟೇ ನೀಡಿದ್ದರು. ಅಕ್ಕನಿಗಾಗಿ ಅಮ್ಮ ಸಂಡಿಗೆ ಮಾಡಿ ಕಳುಹಿಸಿದ್ದಳು. ಅವೆಲ್ಲವನ್ನೂ ಜೋಪಾನವಾಗಿ ಇಟ್ಟುಕೊಂಡು, ಬಸ್ಸಿನಲ್ಲಿ ಹೊರಟಿದ್ದೆ.
ಅಕ್ಕ ಆಗಾಗ್ಗೆ ಕರೆಮಾಡಿ, ನಾನಿರುವ ಸ್ಥಳವನ್ನು ತಿಳಿದುಕೊಳ್ಳುತ್ತಿದ್ದಳು. “ಹುಬ್ಬಳ್ಳಿಗೆ ಬಂದ ತಕ್ಷಣ ಕರೆಮಾಡು, ಕರೆದುಕೊಂಡು ಬರಲು ನಿನ್ನ ಭಾವ ಬರ್ತಾರೆ’ ಎಂದಿದ್ದಳು. ಕೊನೆಗೂ ಹುಬ್ಬಳ್ಳಿ ಬಂದೇ ಬಿಟ್ಟಿತು. ಬಸ್ಸಿನಿಂದ ಇಳಿದ ಕೂಡಲೇ ಅಕ್ಕನಿಗೆ ಕರೆಮಾಡಬೇಕೆಂದು, ಮೊಬೈಲ್ ಕೈಗೆತ್ತಿಕೊಂಡಿದ್ದಷ್ಟೇ… ಅದೆಲ್ಲಿದ್ದನೋ ಒಬ್ಬ ಭೂಪ, ನನ್ನ ಕೈಯಿಂದ ಮೊಬೈಲ್ ಕಿತ್ಕೊಂಡು ಪರಾರಿ. ನಾನು “ಅಯ್ಯೋ ಮೊಬೈಲ್, ಮೊಬೈಲ್’ ಎಂದು ಕಿರುಚಿಕೊಂಡೆ. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಅಕ್ಕನ ಮನೆಗೆ ಹೋಗುವುದು ಹೇಗೆ ಎಂಬುದೇ ಚಿಂತೆಯಾಯಿತು. ಆದರೆ, ಅನತಿ ದೂರದಲ್ಲಿ ನಿಂತಿದ್ದ ಒಬ್ಬ ಹಳ್ಳಿಯವ ಇದನ್ನು ಗಮನಿಸಿ, ಆ ಕಳ್ಳನನ್ನು ಬೆನ್ನಟ್ಟಿದ. ಕಳ್ಳ ಮೊಬೈಲನ್ನು ಬಿಸಾಕಿ, ಓಡಿ ಹೋದ.
ಹಳ್ಳಿಯ ಹುಡುಗ ಮೊಬೈಲ್ ತಂದು ನನ್ನ ಕೈಗಿಟ್ಟ. ಅವನಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೋ ತಿಳಿಯದಾದೆ. “ಹುಷ್ಯಾರು ತಮ್ಮಾ, ಮೊಬೈಲ್ ಜ್ವಾಕಿ’ ಎಂದು ಹೇಳಿ ಹಳ್ಳಿಯವ ಹೊರಟು ಹೋದ. ಅವನೀಗ ಎಲ್ಲಿಯೇ ಇದ್ದರೂ, ಒಂದು ಥ್ಯಾಂಕ್ಸ್ ಹೇಳಬಯಸುತ್ತೇನೆ.
ವೆಂಕಟೇಶ ಚಾಗಿ, ಲಿಂಗಸುಗೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.