ಮೈ ಮೇಲೆ ಹೀರೋ ಬಂದೋವ್ನ


Team Udayavani, Mar 19, 2019, 12:30 AM IST

w-14.jpg

“ಇಲ್ಲಿ ಯಾರೂ ಹೀರೋಗಳನ್ನ ಹುಟ್ಟು ಹಾಕಲ್ಲ, ನಮಗೆ ನಾವೇ ಹೀರೋಗಳಾಗ್ಬೇಕು’ ಅನ್ನೋದು ಎಷ್ಟು ನಿಜ ನೋಡಿ. ಟಿಕ್‌ ಟಾಕ್‌ ಆ್ಯಪ್‌ನ ಕ್ರೇಜ್‌ ನೋಡಿದ್ರೆ, ಹಾಗನ್ನಿಸುತ್ತೆ. ಯಾವ ಮಾನದಂಡವನ್ನೂ ಕೇಳದೆ, ಕೇವಲ 15 ಸೆಕೆಂಡ್‌ನ‌ಲ್ಲಿ ನಿಮ್ಮನ್ನು ಸೆಲೆಬ್ರಿಟಿ ಮಾಡುವ ಆ್ಯಪ್‌ನ ಹಿಂದೆ ಹೋದರೆ, ಕಾಣಿಸೋ ಜಗತ್ತೇ ಬೇರೆ… 

ರಿಯಾಲಿಟಿ ಶೋ ಬಂತೆಂದರೆ, ಕಣ್ತೆರೆದು ಧ್ಯಾನಕ್ಕೆ ಕೂರುತ್ತಿತ್ತು ಮನಸ್ಸು. ಕಲರ್‌ ಕಲರ್‌ ಲೈಟುಗಳ ಮಧ್ಯೆ, ಮೈಕ್‌ ಹಿಡ್ಕೊಂಡ್‌, ಸೊಂಟ ಅಲ್ಲಾಡಿಸ್ಕೊಂಡ್‌ ಅವ್ರೆಲ್ಲ ಹಾಡೋ ಚೆಂದ ನೋಡಿ… ಚಪ್ಪಾಳೆ ಸಾಲುª ಅಂತ ಜಡ್ಜ್ ಶಿಳ್ಳೇನೂ ಹೊಡೆದುಬಿಟ್ರಪ್ಪಾ… ಗೇಮ್‌, ಕಾಮಿಕ್ಸ್‌, ಬುಕ್ಕುಗಳನ್ನೆಲ್ಲ ಬದಿಗೊತ್ತಿ, ಆ ಪುಟಾಣಿ ರಿಯಾಲಿಟಿ ಶೋ ಒಳಗೆ ಮುಳುಗಲೂ ಒಂದು ಕಾರಣ ಇತ್ತು. “ನಾನೆಂದು ಆ ಟಿ.ವಿ. ಹೊಕ್ಕಿ, ಸೆಲೆಬ್ರಿಟಿ ಆಗೋದು? ಅವರಂತೆ ಸಖತ್ತಾಗಿ ಹಾಡೋದು?’ - ಅದರ ಪ್ರಶ್ನೆ. ಟಿ.ವಿ.ಗೆ ಹೋಗುವ ಮಾರ್ಗ ತಿಳಿದಿಲ್ಲವೆಂದೇ ಅದು, ತನ್ನ ಅಪ್ಪನ ಮೊಬೈಲಿನಲ್ಲಿದ್ದ ಟಿಕ್‌ಟಾಕ್‌ ಆ್ಯಪ್‌ನ ಮೊರೆ ಹೋಗಿತ್ತು. ಅಲ್ಲೇನೂ ಕಾಯಬೇಕಿಲ್ವಲ್ಲ… ಹದಿನೈದೇ ಸೆಕೆಂಡಿನಲ್ಲಿ ಹೀರೋನಂತೆಯೇ ಅನುಕರಿಸಿ, ಮಿಂಚಬಹುದು!

ಪ್ರತಿಯೊಬ್ಬನಲ್ಲೂ ಒಬ್ಬ ನಟ ಅಡಗಿರುತ್ತಾನೆ. ಅಣ್ಣಾವ್ರಂತೆ ಹಾಡುವ, ಆರು¾ಗಂನಂತೆ ಗರ್ಜಿಸುವ, ಪ್ರಭುದೇವನಂತೆ ಕುಣಿಯುವ ಆಸೆ ಎಲ್ಲರಿಗೂ ಇರುತ್ತದೆ. ಸಿನಿಮಾ ತಾರೆಯರಂತೆ ತಾವೂ ಸೆಲೆಬ್ರಿಟಿ ಆಗಬೇಕು, ತಮಗೂ ಫ್ಯಾನ್‌ ಫಾಲೋವಿಂಗ್‌ ಹುಟ್ಟಿಕೊಳ್ಳಬೇಕು ಅಂತ ಕನಸು ಕಾಣುವ ಲಕ್ಷಾಂತರ ಜನರಿದ್ದಾರೆ. ಏನ್ಮಾಡೋದು, ಎಲ್ಲರಿಗೂ ಸೂಕ್ತ ವೇದಿಕೆ, ಪ್ರೋತ್ಸಾಹ ಸಿಗುವುದಿಲ್ಲ. ಸಿನಿಮಾ ಜಗತ್ತು ಬಯಸುವ ಹೀರೋ-ಹೀರೋಯಿನ್‌ ಲಕ್ಷಣಗಳು; ಅಂದರೆ ಆರಡಿ ಕಟೌಟಿನ ಎತ್ತರ, ಕಟ್ಟುಮಸ್ತಾದ ದೇಹ, ಸುಂದರ ಮುಖ, ತೆಳ್ಳಗೆ- ಬೆಳ್ಳಗಿನ ಶರೀರ, ಆಕರ್ಷಕ ವ್ಯಕ್ತಿತ್ವ ಇಲ್ಲದ ಕಾರಣ ಅವಕಾಶ ವಂಚಿತರಾದವರೂ ಇದ್ದಾರೆ. ಆದರೆ, ಈ ಎಲ್ಲಾ ಕನಸು, ಕನವರಿಕೆಗಳನ್ನು ನನಸು ಮಾಡುತ್ತಿರುವ ಆ್ಯಪ್‌: “ಟಿಕ್‌ ಟಾಕ್‌ ಮ್ಯೂಸಿಕಲ್‌ ವಿಡಿಯೊ ಆ್ಯಪ್‌’. ಯಾವ ಮಾನದಂಡವನ್ನೂ ಕೇಳದೆ, ಕೇವಲ 15 ಸೆಕೆಂಡ್‌ನ‌ಲ್ಲಿ ನಿಮ್ಮನ್ನು ಸೆಲೆಬ್ರಿಟಿ ಮಾಡುವ ಆ್ಯಪ್‌. 

ಸ್ಮಾರ್ಟ್‌ಫೋನ್‌ನ ಸ್ಮಾರ್ಟ್‌ ಆ್ಯಪ್‌
ಫೇಸ್‌ಬುಕ್‌, ಇನ್‌ಸ್ಟಗ್ರಾಮ್‌ನಂಥ ಸೋಶಿಯಲ್‌ ಮೀಡಿಯಾ ಆ್ಯಪ್‌ಗ್ಳನ್ನೆಲ್ಲ ಹಿಂದಿಕ್ಕಿ “ಟಿಕ್‌ ಟಾಕ್‌’ ಜನಪ್ರಿಯವಾಗುತ್ತಿದೆ. ಸಮೀಕ್ಷೆಯೊಂದರ ಪ್ರಕಾರ, ಐಫೋನ್‌ ಹಾಗೂ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅತಿ ಹೆಚ್ಚು  ಡೌನ್‌ಲೋಡ್‌ ಆಗುತ್ತಿರುವ ಆ್ಯಪ್‌ ಇದು. ಚೀನಾದ ಈ ಆ್ಯಪ್‌, 2018ರ ಆಗಸ್ಟ್‌ನಲ್ಲಿ “ಮ್ಯೂಸಿಕಲ್‌.ಲಿ’ ಎಂಬ ಆ್ಯಪ್‌ ಅನ್ನೂ ತನ್ನೊಡಲಿಗೆ ಸೇರಿಸಿಕೊಂಡಿತು. “ಮ್ಯೂಸಿಕಲ್‌.ಲಿ’ ಕೂಡಾ ಟಿಕ್‌ಟಾಕ್‌ನಂತೆಯೇ ಶಾರ್ಟ್‌ ವಿಡಿಯೊಗಳ ಆ್ಯಪ್‌ ಆಗಿತ್ತು. ಆ ಆ್ಯಪ್‌ನ ಬಳಕೆದಾರರೆಲ್ಲ ಟಿಕ್‌ಟಾಕ್‌ಗೆ ಶಿಫ್ಟ್ ಆದ ಕಾರಣ, ಜಗತ್ತಿನ ತುಂಬಾ ಟಿಕ್‌ ಟಾಕ್‌ನ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. 

ಸೆಲೆಬ್ರಿಟಿ ಆಗೋದು ಹೇಗೆ?  
ಟಿಕ್‌ಟಾಕ್‌ ಆ್ಯಪ್‌ ಮೂಲಕ 15 ಸೆಕೆಂಡ್‌ಗಳ ಮ್ಯೂಸಿಕಲ್‌ ವಿಡಿಯೊ ಮಾಡಿ, ಅದನ್ನು ನಿಮ್ಮ ಗೆಳೆಯರು ಮತ್ತು ಫಾಲೊವರ್‌ಗಳೊಂದಿಗೆ ಹಂಚಿಕೊಳ್ಳಬಹುದು. 12 ವರ್ಷ ಮೇಲ್ಪಟ್ಟವರು ಟಿಕ್‌ ಟಾಕ್‌ ಬಳಕೆದಾರರಾಗಬಹುದು. ಇನ್‌ಸ್ಟಗ್ರಾಮ್‌, ಫೇಸ್‌ಬುಕ್‌ ಅಥವಾ ಗೂಗಲ್‌ ಅಕೌಂಟ್‌ ಮೂಲಕ ಟಿಕ್‌ಟಾಕ್‌ ಅಕೌಂಟ್‌ ತೆರೆದರೆ, ನಿಮ್ಮ ಮುಂದೆ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ. ನರಪೇತಲ ಅನ್ನಿಸಿಕೊಂಡವನೊಬ್ಬ ಅಬ್ಬರದ ಡೈಲಾಗ್‌ ಹೇಳುತ್ತಾನೆ, ಡುಮ್ಮೊಟ್ಟೆಯ ಅಂಕಲ್‌ ಒಬ್ಬರು ಮೈಕಲ್‌ ಜಾಕ್ಸನ್‌ನಂತೆ ಡ್ಯಾನ್ಸ್‌ ಮಾಡುತ್ತಾರೆ, ಕಾಲೇಜಲ್ಲಿ ಎಲ್ಲರಿಂದ ಕಡೆಗಣಿಸಲ್ಪಟ್ಟ ಹುಡುಗಿಯೂ ಅಲ್ಲಿ ಯಾವುದೋ ಹಾಡಿಗೆ ನಾಚಿಕೊಳ್ಳುತ್ತಾಳೆ, ಯಾರೋ ಹುಡುಗ ಇನ್ಯಾರೋ ಹುಡುಗಿಯ ಜೊತೆ ಡುಯೆಟ್‌ ಹಾಡುತ್ತಿರುತ್ತಾನೆ… ಇದನ್ನೆಲ್ಲಾ ಯಾರು ನೋಡ್ತಾರೆ ಅಂತ ಕಡೆಗಣಿಸಬೇಡಿ, ಆ ವಿಡಿಯೊಗಳೇ ಸಾವಿರಾರು ಲೈಕ್‌, ಶೇರ್‌, ಕಮೆಂಟ್‌ ಗಿಟ್ಟಿಸಿಕೊಂಡಿರುತ್ತವೆ. 

ಹದಿನೈದೇ ಸೆಕೆಂಡು
“ಇಲ್ಲಿ ಯಾರೂ ಹೀರೋಗಳನ್ನ ಹುಟ್ಟು ಹಾಕಲ್ಲ, ನಮಗೆ ನಾವೇ ಹೀರೋಗಳಾಗ್ಬೇಕು’ ಅನ್ನೋದು ಎಷ್ಟು ನಿಜ ನೋಡಿ. ಸೆಲೆಬ್ರಿಟಿ ಆಗೋದು ಬಹಳ ಸುಲಭ ಇಲ್ಲಿ. ಒಂದು ಹಿಡಿ ಆತ್ಮವಿಶ್ವಾಸ, ಒಂಚೂರು ನಟನೆ, ತಕ್ಕ ಮಟ್ಟಿಗಿನ ಡ್ಯಾನ್ಸ್‌ ಗೊತ್ತಿದ್ದರೆ ಸಾಕು; ಇಷ್ಟ ಬಂದಂತೆ ವಿಡಿಯೊಗಳನ್ನು ಮಾಡಬಹುದು. ನೀವು ಚಂದ ಕಾಣಿಸಲು, ವಿಡಿಯೊ ಬ್ಯಾಕ್‌ಗ್ರೌಂಡ್‌ನ್ನು ಅದ್ದೂರಿ ಕಾಣುವಂತೆ ಮಾಡಲು, ಹೀಗೆ ಟೂಲ್ಸ್‌, ಕ್ಯಾಮೆರಾ ಸ್ಪೀಡ್‌ ಅಡ್ಜಸ್ಟ್‌ಮೆಂಟ್‌ನಂಥ ಹತ್ತಾರು ಆಪ್ಷನ್‌ಗಳಿರುತ್ತವೆ. ಬೇರೆಯವರ ವಿಡಿಯೊವನ್ನು ನೀವು ಲೈಕ್‌, ಕಮೆಂಟ್‌ ಶೇರ್‌ ಕೂಡಾ ಮಾಡಬಹುದು. ಇಲ್ಲಿ ಕೆಲವರಿಗೆ ಮಿಲಿಯನ್‌ಗಟ್ಟಲೆ ಫ್ಯಾಲೋವರ್ಗಳಿದ್ದಾರೆ! 15 ಸೆಕೆಂಡ್‌ನ‌ದ್ದಾದರೂ, ಅವರ ವಿಡಿಯೊಗಳನ್ನು ಕಾದು ಕುಳಿತು ನೋಡುವಷ್ಟು ಕ್ರೇಝ್ ಹುಟ್ಟಿಸಿದ್ದಾರೆ.

ಎಚ್ಚರವಿರಲಿ…
ನೀವು ಬಿಂದಾಸ್‌ ಆಗಿ ಅಪ್‌ಲೋಡ್‌ ಮಾಡಿದ ವಿಡಿಯೋಗಳಿಗೆ ಬರುವ ಕಮೆಂಟ್‌ಗಳನ್ನೂ ಅಷ್ಟೇ ಬಿಂದಾಸ್‌ ಆಗಿ ತೆಗೆದುಕೊಳ್ಳಬೇಕು. ಯಾಕಂದ್ರೆ, ಇಲ್ಲಿಯೂ ವಿಮರ್ಶಕರಿದ್ದಾರೆ. ಮನಸ್ಸಿಗೆ ಬೇಸರವಾಗುವಂಥ ಕಮೆಂಟ್‌ಗಳು ಬರುವುದು ಸಹಜ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವವರು ಟಿಕ್‌ಟಾಕ್‌ನಿಂದ ದೂರ ಉಳಿಯುವುದೇ ಉತ್ತಮ. ಹುಡುಗಿಯೊಬ್ಬಳ ಟಿಕ್‌ಟಾಕ್‌ ವಿಡಿಯೋಕ್ಕೆ ಅಶ್ಲೀಲ ಆಡಿಯೊ ಸೇರಿಸಿ, ಆಕೆಯ ಹೆಸರು ಹಾಳು ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟಿಕ್‌ ಟಾಕ್‌ನಿಂದಾಗಿ ಸೈಬರ್‌ ಕ್ರೈಂ ಪ್ರಕರಣಗಳೂ ಹೆಚ್ಚುತ್ತಿವೆ. ನಿಮ್ಮ ವಿಡಿಯೋಗಳನ್ನು ಯಾರು ಡೌನ್‌ಲೋಡ್‌ ಮಾಡಬಹುದು, ಯಾರು ನಿಮ್ಮೊಂದಿಗೆ ಡುಯಟ್‌ ವಿಡಿಯೊ ಮಾಡಬಹುದು ಎಂಬೆಲ್ಲಾ ಆಯ್ಕೆಗಳು ಆ್ಯಪ್‌ನ ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ಇವೆ. ಆ ಬಗ್ಗೆ ಗಮನ ಹರಿಸದಿದ್ದಾಗ, ಈ ರೀತಿಯ ಘಟನೆಗಳು ನಡೆಯುತ್ತವೆ. ಸೆಲೆಬ್ರಿಟಿ ಆಗಬೇಕೆಂದು ಹಪಹಪಿಸುವವರು ಇದಕ್ಕೆಲ್ಲಾ ರೆಡಿಯಾಗಿರಬೇಕು.   

ಬ್ಯಾನ್‌ ಆಗ್ಬೇಕ್‌ ಅಂತಿದ್ದಾರೆ…
ಟಿಕ್‌ ಟಾಕ್‌ನ ಬಳಕೆದಾರರಲ್ಲಿ ಹದಿ ಹರೆಯದ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಹೆಚ್ಚುತ್ತಿರುವ ಟಿಕ್‌ ಟಾಕ್‌ ಕ್ರೇಝ್ ಮಕ್ಕಳ ಮನಸ್ಸಿನ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂಬ ಕಾರಣಕ್ಕೆ, ಇಂಡೋನೇಷ್ಯಾದಲ್ಲಿ ಈ ಆ್ಯಪ್‌ ಅನ್ನು ಬ್ಯಾನ್‌ ಮಾಡಲಾಗಿತ್ತು. ಟಿಕ್‌ ಟಾಕ್‌ ಬ್ಯಾನ್‌ ಆಗ್ಬೇಕು ಅಂತ 1.7 ಲಕ್ಷ ಜನ ಪೆಟಿಷನ್‌ ಸೈನ್‌ ಮಾಡಿದ್ದರು. ಈ ಆ್ಯಪ್‌ ಅನ್ನು ಬ್ಯಾನ್‌ ಮಾಡಬೇಕೆಂಬ ಕೂಗು ಭಾರತದಲ್ಲಿಯೂ ಎದ್ದಿದ್ದು, ತಮಿಳುನಾಡಿನ ವಿಧಾನಸಭೆಯಲ್ಲಿ ಆ ಕುರಿತು ಚರ್ಚೆಯೂ ನಡೆದಿದೆ. ವಯಸ್ಸಿನ ಮಿತಿಯನ್ನು 12-16ಕ್ಕೆ ಏರಿಸುವ ಚರ್ಚೆಯೂ ನಡೆದಿದೆ. ಹಾಗೆ ಮಾಡಿದರೆ, ಮಿಲಿಯನ್‌ಗಟ್ಟಲೆ ಬಳಕೆದಾರರನ್ನು ಕಳೆದುಕೊಳ್ಳುವ ಚಿಂತೆ ಕಂಪನಿಯದ್ದು. 

ಡೌನ್‌ಲೋಡ್‌ನ‌ಲ್ಲಿ ಯಾವ ಆ್ಯಪ್‌ ಮುಂದೆ?
ಹೆಸರು                          ಡೌನ್‌ಲೋಡ್‌ (ಮಿಲಿಯನ್ಸ್‌)
1. ಟಿಕ್‌ಟಾಕ್‌                  45.8
2. ಯೂ ಟ್ಯೂಬ್‌             35.3
3. ವಾಟ್ಸ್‌ಆ್ಯಪ್‌                33.8
4. ಇನ್‌ಸ್ಟಗ್ರಾಮ್‌           31
5.ಫೇಸ್‌ಬುಕ್‌                  29.4
6. ವಿಚಾಟ್‌                     28.9 
(ಆಧಾರ: ಸೆನ್ಸಾರ್‌ ಟವರ್‌- 2018 )

*ಈ ಆ್ಯಪ್‌ 75 ಭಾಷೆಗಳಲ್ಲಿ ಲಭ್ಯ.
*ಕಳೆದ ಅಕ್ಟೋಬರ್‌ನಲ್ಲಿ ಟಿಕ್‌ಟಾಕ್‌ ಬಳಕೆದಾರರ ಸಂಖ್ಯೆ 800 ಮಿಲಿಯನ್‌ ಗಡಿ ದಾಟಿತು.
* ಪ್ರತಿ ತಿಂಗಳು ಸಕ್ರಿಯವಾಗಿ ಟಿಕ್‌ಟಾಕ್‌ ಬಳಸುವವರ ಸಂಖ್ಯೆ 500 ಮಿಲಿಯನ್‌ಗೂ ಹೆಚ್ಚು. 
*ಬಳಕೆದಾರರಲ್ಲಿ 50% ಜನ 24 ವರ್ಷಕ್ಕಿಂತ ಮೇಲ್ಪಟ್ಟವರು.
*60% ಬಳಕೆದಾರರು ಮಹಿಳೆಯರು.
*60% ಜನ ಕಾಲೇಜು ಡಿಗ್ರಿ ಹೊಂದಿದವರು.
*40% ಜನ ಬಳಕೆದಾರರು ದೊಡ್ಡ ನಗರಗಳಲ್ಲಿ ವಾಸಿಸುವವರು.
(ಆಧಾರ: ಇಂಟರ್‌ನೆಟ್‌)

ಪ್ರಿಯಾ

ಟಾಪ್ ನ್ಯೂಸ್

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.