ಕತೆ ಹೇಳುವೇ, ಒಂದು ಕತೆ ಹೇಳುವೇ…
ಟುಡೇಸ್ ಹೋಮ್ ವರ್ಕ್
Team Udayavani, Apr 28, 2020, 11:22 AM IST
ಸಾಂದರ್ಭಿಕ ಚಿತ್ರ
ಮಕ್ಕಳಿಗೆ, ದಿನಕ್ಕೆ ಮೂರು ಕತೆ ಹೇಳಿ. ಅದರಲ್ಲಿ ಒಂದು ಕತೆ ಅವರ ಮನಸ್ಸಿನಲ್ಲಿ ಕೂತರೂ ಸಾಕು…
ಮಕ್ಕಳ ಜೊತೆ ಮಕ್ಕಳಾಗುವುದು ಸುಲಭದ ಮಾತೇನಲ್ಲ. ಅದಕ್ಕೆ ಮನಸ್ಸು ಮಾಡಬೇಕು. ಅಂದರೆ, ಅವರ ಮನಸ್ಸನ್ನು ಮೊದಲು ಪಳಗಿ ಸಬೇಕು. ಕೇವಲ ಮಕ್ಕಳ ಜೊತೆ ಆಟವಾಡಿದರೆ ಸಾಕೇ… ಇಲ್ಲ, ಮಕ್ಕಳಿಗೆ ನಿಮ್ಮ ಬದುಕಿನ ಕಷ್ಟ ಸುಖಗಳ ಕತೆ ಹೇಳಲು ಸಮಯ ಮೀಸಲಿಡಿ. ಇವತ್ತಿನ ಜನರೇಷನ್‌ಗೆ ಕಷ್ಟಗಳು ಕಡಿಮೆ. ಅದರಲ್ಲೂ, ಮಧ್ಯಮವರ್ಗದ ಕುಟುಂಬದ ಮಕ್ಕಳಿಗೆ, ಹಿಂದಿನ ತಲೆಮಾರಿನಷ್ಟು ಕಷ್ಟವಿರುವುದಿಲ್ಲ. ಹೆತ್ತವರೇ ಎಲ್ಲವನ್ನೂ ಹೆಗಲ ಮೇಲೆ ಎಳೆದುಕೊಂಡು, ಮಕ್ಕಳಿಗೆ ನೆರಳಾಗಿರುತ್ತಾರೆ. ಹೀಗಾಗಿ, ಮಕ್ಕಳನ್ನು ಕೂಡ್ರಿಸಿಕೊಂಡು ದಿನಕ್ಕೊಂದು ಕತೆ ಹೇಳಿ.
ಕತೆಗಳು ಅವರನ್ನು ಗಾಢವಾಗಿ ಕಾಡುವಂತಿರಲಿ. ಕಾಡುವುದು ಅಂದರೆ, ನೆಗೆಟೀವ್ ಆಗಿ ಅಲ್ಲ, ಕಥೆಗಳು ಭಯ ಹುಟ್ಟಿಸುವಂತೆ ಇರಬಾರದು, ಬದಲಾಗಿ, ಪ್ರೇರಣೆ ನೀಡುವಂತೆ ಇರಲಿ. ಕತೆ ಹೇಳುವುದೂ ಒಂದು ಕಲೆ. ನೀವು ಹೇಳುವ ಕಥೆಯಲ್ಲಿ ನೂರಕ್ಕೆ 80ರಷ್ಟು ವಾಸ್ತವ ಇರಲಿ. ಅಗತ್ಯ ಅನ್ನಿಸಿದರೆ ಮಾತ್ರ ಸ್ವಲ್ಪ ಸುಳ್ಳು ಸೇರಿಸಿ. ಇಲ್ಲವಾದರೆ, ಮಕ್ಕಳು ನಿಮ್ಮ ಕಾಲದ ಕತೆಗಳನ್ನು ಕೇಳಲು ಇಷ್ಟ ಪಡೋಲ್ಲ. ವಾಸ್ತವ ಜಗತ್ತಿನ ಮೊಟುಪತ್ಲು, ಟಾಮ್ ಅಂಡ್ ಜರ್ರಿಯನ್ನು ಬಳಸಿಕೊಂಡೋ, ಶಾಲೆಯಲ್ಲಿರುವ ಸ್ನೇಹಿತರ ಹೆಸರನ್ನು ಇಟ್ಟುಕೊಂಡೋ
ಕತೆ ಹೇಳುತ್ತಾ ಹೋದರೆ, ಅದು ಮಕ್ಕಳ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದುಬಿಡುತ್ತದೆ.
ನೀವು ಕತೆಯನ್ನು ಹೇಳುತ್ತಾ ಹೋದಂತೆ, ಆ ಪಾತ್ರಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳುತ್ತಾ, ನಿಮಗೆ ಹತ್ತಿರ ವಾಗುತ್ತಾ ಹೋಗುತ್ತಾರೆ. ಕತೆ ಹೇಳಲು ಸಮಯ ನಿಗದಿ ಮಾಡಿ. ಊಟ ತಿಂಡಿ ಮಾಡುವಾಗ ಹಠ ಮಾಡುವ ಮಕ್ಕಳು ಇದ್ದರೆ, ಕತೆಯನ್ನು ಆಗಲೇ ಹೇಳಿ. ಯಾವ ಕಾರಣಕ್ಕೂ ಅವರಿಗೆ ಮೊಬೈಲ್ ಕೊಡಬೇಡಿ. ದಿನಕ್ಕೆ ಮೂರು ಕತೆ ಹೇಳಿ. ಅದರಲ್ಲಿ ಒಂದು ಕತೆ ಮನಸ್ಸಿನಲ್ಲಿ ಕೂತರೂ ಸಾಕು. ಏಕೆಂದರೆ, ಬೇರಿಗೆ ನೀರು ಹಾಕಿದರೆ, ಮೇಲೆ ಮರ ಚಿಗುರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.