ಟ್ರೋಲ್ ಹೈಕ್ಳು
Team Udayavani, Aug 13, 2019, 5:00 AM IST
ಇವತ್ತಿನ ಬಹುತೇಕ ಟ್ರೋಲ್‌ಗಳು ಬೇರೆಯವರ ತಪ್ಪುಗಳನ್ನು ಹುಡುಕುವುದು, ಬೇರೆಯವರನ್ನು ಜರಿಯುವುದಕ್ಕೆ ಬಳಕೆಯಾಗುತ್ತಿವೆ. ಹೀಗಾಗಿ, ಪರರ ದುಃಖದಲ್ಲಿ ಭಾಗಿಯಾಗುವ ಬದಲು, ಅದನ್ನು ಎಂಜಾಯ್ ಮಾಡುವ ಮನೋಸ್ಥಿತಿ ರೂಪಿಸುತ್ತಿರುವ ಟ್ರೋಲ್‌ಗಳು ಯುವಜನಾಂಗದ ಮನಸ್ಥಿತಿಯನ್ನೇ ಹಾಳು ಮಾಡಿವೆ.
ಯಾವುದೋ ಒಂದು ಸುದ್ದಿ , ಒಂದು ವಿಚಾರ, ಒಬ್ಬ ವ್ಯಕ್ತಿ, ಒಬ್ಬರ ಅಭಿಪ್ರಾಯ, ಒಂದು ನುಡಿಗಟ್ಟು, ಯಾರದ್ದೋ ಹೇಳಿಕೆ , ಮತ್ಯಾರದ್ದೋ ಫೋಟೊ…ಹೀಗೆ, ಒಟ್ಟಿನಲ್ಲಿ ಏನೋ ಒಂದು ಪರರ ವಸ್ತು, ವಿಚಾರವನ್ನು ಫೇಸ್ ಬುಕ್, ಇನ್ಸ್ಟಾಗ್ರಾಂ, ಯುಟ್ಯೂಬ್ ನಂಥ ಜಾಲತಾಣಗಳಲ್ಲಿ ಹಾಕಿ, ಜನ ಒಬ್ಬರಾದ ಮೇಲೊಬ್ಬರು ನಿರಂತರವಾಗಿ ಹರಡುತ್ತಾ ಹೋದರೆ ಅದನ್ನು ಟ್ರೋಲ್ ಅಂತ ಹೇಳ್ತಾರೆ.
ಇವತ್ತು ಟ್ರೋಲ್ ಅನ್ನೋದು ಬೆಳಕಿನಷ್ಟೇ ವೇಗ ಪಡೆದು ಕೊಂಡಿದೆ. ಅಮೆರಿಕದಲ್ಲಿ ಕೂತು ಟ್ರೋಲ್ ಮಾಡಿದರೆ, ಕರ್ನಾಟಕದ ಹಳ್ಳಿಯ ಮೂಲೆಯಲ್ಲಿ ದೇವರಂತೆ ಅದು ಪ್ರತ್ಯಕ್ಷವಾಗುತ್ತದೆ. ಗಮನಿಸಬೇಕಾದ ವಿಚಾರವೆಂದರೆ, ಬಹಳಷ್ಟು ಸಲ ಟ್ರೋಲ್‌ನ ವಿಚಾರಕ್ಕೆ, ಟ್ರೋಲ್ ಮಾಡುವವರ ಅಭಿಪ್ರಾಯ ಸೇರಿ, ಕಣ್ಣಿಂದ ಕಣ್ಣಿಗೆ ಎಲ್ಲವೂ ಬದಲಾಗಿ ಮೂಲ ವಿಚಾರವೇ ಮರೆಯಾಗಿ ಬಿಟ್ಟಿರುತ್ತದೆ. ಕೆಲವೊಮ್ಮೆ ಸಾಕಪ್ಪಾ ಸಾಕು ಅನ್ನುವಷ್ಟರ ಮಟ್ಟಿಗೆ ಈ ಟ್ರೋಲ್ ಬೆಳೆದಿರುತ್ತದೆ.
ಇವತ್ತು ಟ್ರೋಲ್ ಮಾಡುವವರಲ್ಲಿ ಯುವಜನತೆಯೇ ಹೆಚ್ಚಾಗಿ ತುಂಬಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ, 20ರಿಂದ 30 ವಯಸ್ಸಿನ ಆಸುಪಾಸಿನ ಮಂದಿಯೇ ಟ್ರೋಲ್‌ಗಳಲ್ಲಿ ತೊಡಗಿಕೊಂಡಿರುವುದಂತೆ. ಅಮೆರಿಕದಂಥ ಮುಂದುವರಿದ ದೇಶದಲ್ಲಿ , ಟ್ರೋಲ್ ಎಂಬುದು ಜಾಹೀರಾತಿನ ಟೂಲ್.
ಕಾಲೆಳೆಯುವ ಕಾಯಕ
ಇದರ ಪರಿಣಾಮ ನಮ್ಮಲ್ಲೂ ಟ್ರೋಲ್‌ಗಳನ್ನು ನಾನಾ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಬ್ಯುಸಿನೆಸ್ ಉದ್ದೇಶ ಇಟ್ಟುಕೊಂಡು, ತಮ್ಮ ಪ್ರಾಡಕ್ಟ್ಗಳನ್ನು ಜಾಹೀರಾತು ಮಾಡಲು, ಹೀಗೆ ಮಾಡುತ್ತಲೇ ಎದುರಾಳಿ ಕಂಪೆನಿಯ ಉತ್ಪನ್ನಗಳು ಚೆನ್ನಾಗಿಲ್ಲ ಅಂತ ಪರೋಕ್ಷವಾಗಿ ಹೇಳಲು ಟ್ರೋಲ್‌ಗಳನ್ನು ಬಳಸುತ್ತಾರೆ. ಹಾಗೆಯೇ, ತಮಗಾಗದ ಪಕ್ಷವೋ, ವ್ಯಕ್ತಿಯೋ ಯಾರಾದರೂ ಸರಿ. ಅವರನ್ನು ಜರಿಯಲು ಟ್ರೋಲ್‌ಗಳೇ ಉತ್ತಮ ಸಾಧನ. ಟ್ರೋಲ್ ಮೇಲೆ ಈಗ ನೆಗೆಟೀವ್ ನೆರಳಿದೆ. ಟ್ರೋಲ್‌ಗಳ ಮೂಲಕ ಕೀಳುಮಟ್ಟದ ನಿಂದನೆ ಮಾಡಿ, ಮಾನಹಾನಿಗೆ ಒಳಗಾದವರ ಪಟ್ಟಿಯಲ್ಲಿ ಬಾಲಿವುಡ್‌ತಾರೆಯರು, ಕ್ರಿಕೆಟ್ ಆಟಗಾರರೂ ಉಂಟು.
ಟ್ರೋಲ್‌ಗಳ ಸೃಷ್ಟಿ ಕರ್ತರು ಬಹುತೇಕ ಯುವಕರು. ಈ ಬಾರಿಯ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ಪಕ್ಷಗಳು ಶೇ. 40ರಷ್ಟು ಪ್ರಚಾರ ಟ್ರೋಲ್‌ಗಳ ಮೂಲಕ, ಎದುರಾಳಿ ಪಕ್ಷಗಳನ್ನು ಜರಿಯುವ ಮೂಲಕ ಮಾಡಿವೆಯಂತೆ. 16 ಕೋಟಿ ಜನರನ್ನು ಮುಟ್ಟಿದ್ದು ಇದೇ ಟ್ರೋಲ್, ಸೋಶಿಯಲ್ ಮೀಡಿಯಾದಿಂದ ಅಂದರೆ, ಇವಕ್ಕೆಲ್ಲಾ ನಮ್ಮ ಯುವಜನಾಂಗವನ್ನೇ ಹೆಚ್ಚು ಬಳಕೆ ಮಾಡಿಕೊಳ್ಳಲಾಗಿದೆ ಎಂದರ್ಥ.
ಹತ್ತು ಬಾರಿ ಯೋಚಿಸಿ
ನಿಜ, ಟ್ರೋಲ್ ಒಳ್ಳೆಯದಿರಬಹುದು. ಆದರೆ, ಯಾವುದೇ ವಿಚಾರಗಳನ್ನು ಟ್ರೋಲ್ ಮಾಡುವ ಮುನ್ನ ಒಮ್ಮೆಯಾದರೂ ಅದರ ಪರಿಣಾಮಗಳ ಕುರಿತು ಯೋಚಿಸಬೇಕು. ಹೊಸ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವುದರಲ್ಲೂ ಇವು ಮಹತ್ತರ ಪಾತ್ರ ವಹಿಸಿವೆಯಾದರೂ, ಟ್ರೋಲ್‌ಗಳಲ್ಲಿ ಬಹುತೇಕ ನಕಾರಾತ್ಮಕವಾಗಿಯೇ ಇರುತ್ತದೆ. ಜಾತಿ, ಧರ್ಮ ನಿಂದನೆಯಿಂದ ಕೂಡಿರುತವೆೆ. ಯಾರಾರದೋ ಚಿತ್ರಗಳನ್ನು ಇನ್ಯಾರದೋ ಮಾತಿಗೆ ಸೇರಿಸಿ, ವ್ಯಂಗ್ಯ ಮಾಡುವುದುಂಟು.
ತೇಜೋವಧೆಯನ್ನೇ ಮುಖ್ಯವಾಗಿಸಿಕೊಂಡ ಟ್ರೋಲ್‌ಗಳನ್ನು ಮತ್ತೂಬ್ಬರಿಗೆ ಕಳುಹಿಸುವುದು ಅಪಾಯಕಾರಿ. ಒಬ್ಬರು ಇನ್ನೊಬ್ಬರನ್ನು ಕಾಲೆಳೆಯುವ, ಬೈಯ್ಯುವುದೇ ಆಗಿರುವುದರಿಂದ ಅದರ ಮೂಲ ಉದ್ದೇಶ ನೋಡುಗರ ಗಮನವನ್ನು ಕ್ಷಣ ಮಾತ್ರ ಇತ್ತ ಕಡೆ ಸೆಳೆಯುವುದಷ್ಟೇ. ಅದು ನೋಡುಗರ ಮನಸ್ಥಿತಿಯ ಮೇಲೆ ಯಾವ ಪರಿಣಾಮ ಬೀರುತ್ತದೆ, ಬೈಸಿ ಕೊಳ್ಳುವ ವ್ಯಕ್ತಿಯ ಮಾನಸಿಕ ಸ್ಥಿತಿ ಹೇಗಿರುತ್ತದೆ ಇದ್ಯಾವುದು ಮುಖ್ಯವಲ್ಲ. ಹೀಗಾಗಿ ಬೇರೆಯವರ ಟ್ರೋಲ್ ನಮಗೆ ಸಂತೋಷ ತಂದರೂ, ಬೇರೆಯವರ ದುಃಖವನ್ನು ಸಂಭ್ರಮಿಸುವ ಮನೋಸ್ಥಿತಿಗೂ ನಮ್ಮನ್ನು ತಂದು ನಿಲ್ಲಿಸುತ್ತದೆ. ಇದು ಟ್ರೋಲ್ ಮಾಡುವವರ ವೈಯುಕ್ತಿಕ ಜೀವನದ ಮೇಲೂ ಅಡ್ಡ ಪರಿಣಾಮ ಬೀರಬಹುದು. ಹೀಗಾಗಿ, ಕಣ್ಣಿಗೆ ಕಂಡದ್ದನ್ನೆಲ್ಲಾ ಮನಸ್ಸಿಗೆ ಹಿಡಿಸಿದ್ದನ್ನೆಲ್ಲಾ ವಿಮರ್ಶೆ ಮಾಡುತ್ತಾ ಕುಳಿತುಕೊಳ್ಳುವುದು ಆರೋಗ್ಯ ಪೂರ್ಣ ಮನಸಿನ ಲಕ್ಷಣವಲ್ಲ.
ಟ್ರೋಲ್‌ಗಳಲ್ಲಿ ತೊಡಗಿಕೊಂಡರೆ, ಹೆಚ್ಚಾಗಿ ಪೊಸಿಸೀವ್‌ನೆಸ್ ಬರುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ಸಿಡುಕುವ ಮನೋಭಾವ ಬೆಳೆಯುತ್ತದೆ. ಅವರಿಗೆ ಸಿಗುವ ಸಂತೋಷ ನನಗೆ ಏಕೆ ಇಲ್ಲ ಅನ್ನೋ ಇನ್‌ಫಿರಿಯಾರಿಟಿ ಕಾಂಪ್ಲೆಕ್ಸ್ ಶುರುವಾಗುತ್ತದೆ. ಬೇರೆಯವರ ನೋವನ್ನು ಎಂಜಾಯ್ ಮಾಡುವ ಗುಣ ಬೆಳೆಯುವುದರಿಂದ, ಪರರ ಕಷ್ಟಕ್ಕೆ ನೆರವಾಗುವ ಮನೋಭಾವ ಬೆಳೆಯುವುದಿಲ್ಲ. ಟ್ರೋಲ್ ಮಾಡುವುದರಲ್ಲೇ ಸಂತೋಷ ಕಾಣವವರು ಬದುಕಲ್ಲಿ ಒಂಟಿಯಾಗುತ್ತಾ ಹೋಗುತ್ತಾರೆ ಎಂದು ಎಚ್ಚರಿಸುತ್ತಾರೆ ಮನಶಾಸ್ತ್ರಜ್ಞರು.
ಟ್ರೋಲ್ ಬೇಡಪ್ಪಾ ಅಂದ್ರೆ
ಯಾವುದೇ ಟ್ರೋಲ್‌ಗೆ ಲೈಕ್ ಒತ್ತಿದರೆ ಅವರನ್ನು ಪಕ್ಷ, ಧರ್ಮ, ಜಾತಿ ಅಂತೆಲ್ಲ ಡಿವೈಡ್ ಮಾಡಿ, ದ್ವೇಷದ ಬೀಜ ಬಿತ್ತಲಾಗುತ್ತಿದೆ. ಟ್ರೋಲ್ ಮಾಡೋರಿಗೆ ಇದು ಬ್ಯುಸಿನೆಸ್, ನೋಡೋರಿಗೆ ಸಮಯ ಹಾಳು ಅನ್ನೋ ಸತ್ಯ ಎಷ್ಟೋ ಜನಕ್ಕೆ ಗೊತ್ತಿಲ್ಲ, ಟ್ರೋಲ್‌ನ ದುರಂತ ಎಂದರೆ, ಪ್ರತಿಭೆಗಿಂತ ಹೆಚ್ಚು ಪ್ರಚಾರ ಕೊಟ್ಟು, ಅವರ ಸಾಧನೆಗೆ ಅಡ್ಡಗಾಲಾಗುವುದು. ನಮ್ಮಲ್ಲಿ ಎಷ್ಟೋ ತಪ್ಪು ಮಾಹಿತಿಗಳು, ವೈಯಕ್ತಿಕ ವಿಚಾರಗಳು ಟ್ರೋಲ್ ಆಗಿ, ಅದರಿಂದ ನೊಂದವರು ಆತ್ಮಹತ್ಯೆ ಮಾಡಿಕೊಂಡು ಪ್ರಸಂಗವೂ ನಡೆದಿದೆ. ಸಮಾಜಘಾತುಕ ಹಾಗೂ ಮಾನಹಾನಿಯಂಥ ಸುದ್ದಿ ಹಾಕುವ ಟ್ರೋಲರ್‌ಗಳನ್ನು ಪೋಸ್ಕೋ ಹಾಗೂ ಐಟಿ ಕಾಯ್ದೆಯಡಿ ಶಿಕ್ಷೆಗೆ ಗುರಿಮಾಡಬೇಕು ಎಂಬ ನಿಯಮವೂ ಜಾರಿಯಾಗಿದೆ.
ಹೀಗೆ ಮಾಡಿ,
ಯಾವುದೇ ಸಂಗತಿಯನ್ನು ಟ್ರೋಲ್ ಮಾಡಲೇಬೇಕು ಅನ್ನಿಸಿದರೆ – ಆ ವಿಚಾರ ಸತ್ಯವೇ ಅನ್ನುವುದನ್ನು ಪರಿಶೀಲಿಸಿ.ಅದರಿಂದ ಸಮಾಜಕ್ಕೆ ಅಥವಾ ಜನರಿಗೆ ಏನು ಲಾಭವಾದೀತು ಎನ್ನುವುದನ್ನು ಆಲೋಚಿಸಿ, ಟ್ರೋಲ್ ಆಗುತ್ತಿರುವ ವಿಚಾರ ಸುಳ್ಳು ಎಂದಾದಲ್ಲಿ, ಸತ್ಯವನ್ನು ಟ್ರೋಲ್ ಮಾಡುವ ಪರಿಪಾಠ ಒಳ್ಳೆಯದು.
ನರೇಂದ್ರ ಎಸ್ ಗಂಗೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.