ಪ್ರಶ್ನಿಸದೆ ಒಪ್ಪಿದ್ದರೆ…
Team Udayavani, Dec 3, 2019, 12:42 PM IST
ಗಣಿತ ಸಮ್ಮೇಳನಗಳಲ್ಲಿ ಗಂಭೀರವಾದ ಉಪನ್ಯಾಸವಾದ ಮೇಲೆ ಪ್ರಶ್ನೋತ್ತರ ನಡೆಯುವುದು ರೂಢಿ. ಉಪನ್ಯಾಸದ ತಲೆಬುಡ ಅರ್ಥವಾಗದವರು ಕೂಡ ಆಗ ತಮಗೆಲ್ಲ ಅರ್ಥವಾಗಿದೆ ಎಂದು ತೋರಿಸಿಕೊಳ್ಳಲು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳುವುದುಂಟು. ಆಗೆಲ್ಲ ಅವರು ಆಯ್ಲರ್ ಇಲ್ಲವೇ ಗೌಸ್‌ನ ಹೆಸರು ಎಳೆದು ತರುವುದು ಮಾಮೂಲು. ಇದನ್ನು ಆಯ್ಲರನ 34ನೇ ಸಂಪುಟದ 80ನೇ ಪ್ರಮೇಯದಲ್ಲಿ ನೋಡಿದ್ದೇನಲ್ಲ ಎಂದು ಪ್ರಶ್ನೆ ಕೇಳುವವನು ಹೇಳಿದರೂ, ಅವನು ಆಯ್ಲರನ ಯಾವ ಸಂಪುಟವನ್ನಾದರೂ ಪೂರ್ತಿಯಾಗಿ ಓದಿರುವುದುಅನುಮಾನವೇ.
ಒಟ್ಟಿನಲ್ಲಿ, ನೆರೆದವರ ಮುಂದೆ ತಾನು ಮಹಾಪುರುಷನಾಗಬೇಕೆಂಬ ದರ್ದು ಇಲ್ಲಿ ಎದ್ದು ಕಾಣುತ್ತದೆ. ಲೂಯಿ ನಿರೆನ್‌ಬರ್ಗ್ ಎಂಬ ಗಣಿತಜ್ಞ ಪ್ರಸ್ತುತಪಡಿಸಿದ ಗಣಿತದ ಉಪನ್ಯಾಸವೊಂದು ಮುಗಿದ ಮೇಲೆ ಪ್ರಶ್ನೋತ್ತರ ಏರ್ಪಡಿಸಲಾಗಿತ್ತು. ಆಗ ಎದುರಿನ ಸಾಲಲ್ಲಿ ಕುಳಿತಿದ್ದ ಒಬ್ಬ ಮಹನೀಯರು ಎದ್ದು ನಿಂತು ನೀವು ಹೇಳಿದ ವಿಚಾರವನ್ನು ಗೌಸ್ ತನ್ನ ಪುಸ್ತಕದಲ್ಲಿ ಆಗಲೇ ಹೇಳಿಬಿಟ್ಟಿದ್ದಾನಲ್ಲ? ಎಂದರು. ಲೂಯಿ ತುಸುವೂ ತಡವರಿಸದೆ, ಹೌದು. ನಾನೂ ಅದನ್ನುಓದಿದ್ದೇನೆ. ಮಾತ್ರವಲ್ಲ. ಅದರ ತಪ್ಪುಗಳನ್ನೂ ಕಂಡುಹಿಡಿದಿದ್ದೇನೆ. ಆತ ಬರೆದದ್ದನ್ನು ಪ್ರಶ್ನಿಸದೆ ನಂಬಿಬಿಟ್ಟಿದ್ದರೆ, ನಾನೂ ಇಂದು ಮೂರ್ಖರ ಸಾಲಿಗೆ ಸೇರಿಬಿಡುತ್ತಿದ್ದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.