ಖಾಲಿ ಜೇಬಿನ ವೀಕೆಂಡ್‌ಗಳು!


Team Udayavani, Jan 8, 2019, 12:30 AM IST

13.jpg

ಖಾಲಿತನವೇ ಬದುಕಿನಲ್ಲಿ ಹೆಚ್ಚಿನದನ್ನು ಕಲಿಸುವುದು. ಖಾಲಿ ಜೇಬು ಕೂಡಾ ಹಾಗೆಯೇ. ಅದರಲ್ಲೂ ವೀಕೆಂಡ್‌ ಬಂದಾಗ ಜೇಬು ಖಾಲಿಯಾಗಿಬಿಟ್ಟರೆ, ವಿದ್ಯಾರ್ಥಿಗಳಿಗೆ ಕಡಲೆ ಸಿಕ್ಕಾಗ ಹಲ್ಲು ಕಳೆದುಕೊಂಡಷ್ಟೇ ಖೇದವಾಗುತ್ತದೆ. ಅದೇನೋ ನಿಜ, ಆದರೆ ಅದರಾಚೆಗಿನ ಪ್ರಪಂಚವೂ ವಿದ್ಯಾರ್ಥಿಗಳೆದುರು ತೆರೆದುಕೊಳ್ಳುತ್ತದೆ. ದುಡ್ಡೇ ಎಲ್ಲವೂ ಅಲ್ಲ ಎನ್ನುವಂತೆ ಜೀವನದ ಚಿಕ್ಕಪುಟ್ಟ ಸಂತಸಗಳನ್ನು ಆತ ಅನುಭವಿಸುತ್ತಾನೆ. ಮುಂದೆ ಇವೇ ಮಧುರ ನೆನಪುಗಳಾಗಿ ಶಾಶ್ವತವಾಗಿ ಅವನೊಂದಿಗೂ ಉಳಿದುಬಿಡುತ್ತದೆ. ಬದುಕಿನುದ್ದಕ್ಕೂ ಕೈ ಹಿಡಿದು ಮುನ್ನಡೆಸುತ್ತದೆ. ಆ ವಯಸ್ಸು, ಗೆಳೆಯರು, ಓದು, ಬರಹ, ಆಟ, ತರ್ಲೆಗಳು ಸಂಭ್ರಮಿಸಲು ಇರುವ ತೆಕ್ಕೆಗಟ್ಟಲೆ ಕಾರಣಗಳು, ದುಡ್ಡನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿಬಿಡುತ್ತವೆ. 

ಹಳ್ಳಿ-ನಗರಗಳ ಭೇದವಿಲ್ಲದೆ ಇತ್ತೀಚೆಗೆ ವೀಕೆಂಡ್‌ಗಳು ರಂಗೇರುತ್ತಿವೆ. ಔಟಿಂಗ್‌, ಹೋಟೆಲ…, ಸಿನಿಮಾ, ಸಂಗೀತ ಕಾರ್ಯಕ್ರಮ… ಹೀಗೆ ಒಂದಲ್ಲಾ ಒಂದು ಮನರಂಜನೆಯನ್ನು ಅಪೇಕ್ಷಿಸುವುದು ತಪ್ಪಲ್ಲ. ಖುಷಿ ಅನ್ನುವುದು ಬರೀ ವೀಕೆಂಡಿನ ಮ್ಯಾಟರ್‌ ಅಲ್ಲದಿದ್ದರೂ ವಾರವಿಡೀ ಜಂಜಾಟಗಳಲ್ಲಿ ಮುಳುಗುವ ಜೀವಗಳಿಗೆ ವಾರಾಂತ್ಯದಲ್ಲಿ ಒಂದು ಕಳೆ ಬರೋದು ವೀಕೆಂಡ್‌ನಿಂದಲೇ. ಇದು ಬರೀ ದುಡಿಯುವ ವರ್ಗಕ್ಕಷ್ಟೇ ಸೀಮಿತವಲ್ಲ, ವಿದ್ಯಾರ್ಥಿಗಳೂ ವೀಕೆಂಡ್‌ಗಾಗಿ ಕಾಯುವವರೇ. ವಿದ್ಯಾರ್ಥಿಯೋ, ನೌಕರನೋ ವೀಕೆಂಡ್‌ ಮೋಜಿಗೆ ಕಾಸಂತೂ ಬೇಕು. ದುಡಿಯುವವರಾದರೆ ಸ್ವಂತ ದುಡಿಮೆಯಿಂದ ಪಾರ್ಟಿ ಮಾಡುತ್ತಾರೆ. ಅದೇ ವಿದ್ಯಾರ್ಥಿ ವರ್ಗವಾದರೆ ಪಾಕೆಟ್‌ ಮನಿಯಿಂದಲೋ ಸ್ನೇಹಿತರ ಕೃಪಾಕಟಾಕ್ಷದಿಂದಲೋ ಪಾರ್ಟಿ ಮಾಡಬೇಕಾದ ಅನಿವಾರ್ಯತೆ. ಪಾರ್ಟಿಯಂತೂ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. 

ಸ್ಯಾಲರಿ ಡೇ ಅಪ್ಪನಿಗಷ್ಟೇ ಅಲ್ಲ; ಮಗನಿಗೂ!
ಅಪ್ಪ- ಅಮ್ಮಂದಿರ ಕೈಗೆ ವೇತನ ಸಿಗುವ ದಿನವೇ ಮಕ್ಕಳ ಪಾಲಿಗೂ “ಸಂಬಳದ ದಿನ’. ಅಪ್ಪನಿಗೆ ಇರುವಂತೆ ಮಕ್ಕಳಿಗೂ ಕೂಡ ತಿಂಗಳಲ್ಲಿ ಒಂದು ಪಾಕೆಟ್‌ ಮನಿ ದಿನವಿದೆ. ಹೇಳಿ ಕೇಳಿ ನಾವು ಕಾಲೇಜು ವಿದ್ಯಾರ್ಥಿಗಳು. ಓದಲಿಕ್ಕೆಂದು ಊರು, ಮನೆ ಬಿಟ್ಟು ಬಂದಿರುತ್ತೇವೆ. ಅಪ್ಪನಿಂದ ಬರುವ ಮನಿ ಆರ್ಡರ್‌ ಅಥವಾ ಬ್ಯಾಂಕ್‌ ಅಕೌಂಟ್‌ಗೆ ಬೀಳುವ ಮೊತ್ತ ರೂಮ್‌ ಬಾಡಿಗೆಗೆ, ಎರಡು ಕೆಜಿ ಅಕ್ಕಿಗೆ, ಇಲ್ಲವೇ ಹಾಸ್ಟೆಲ್‌ ಮೆಸ್‌ ಬಿಲ್‌ಗೆ ಮುಗಿದು ಹೋಗುತ್ತದೆ. ಊರಿಂದ ಹೊರಡುವಾಗ ಅವ್ವ ಸೆರಗಿನ ತುದಿಯಿಂದ ಬಿಚ್ಚಿ ಕೊಟ್ಟ ನೂರು ಮಡಿಕೆಯ ಗಾಂಧಿ ನೋಟನ್ನು ವಾರದ ಸಿನಿಮಾ ನುಂಗಿ ಹಾಕಿರುತ್ತದೆ. ಉಳಿದ ಚೂರು ಪಾರು, ಸಂಜೆ ಹೊತ್ತಿನ ರಸ್ತೆ ಬದಿಯ ಘಾಟು ತಿನಿಸಿಗೆ. ವಾರ ಮುಗಿಯುವ ಮೊದಲೇ ಜೇಬು ಸ್ವತ್ಛವಾಗಿರುತ್ತದೆ. ಎಷ್ಟರ ಮಟ್ಟಿಗೆ ಸ್ವತ್ಛವೆಂದರೆ ಮಿನಿಮಂ ಬ್ಯಾಲೆನ್ಸ್ ಬಿಡದ ಬ್ಯಾಂಕ್‌ ಖಾತೆ ಅವರಿಗೆ ಮತ್ತೆ ಮತ್ತೆ ಮೆಸೇಜ… ಮಾಡಿ ಉಗಿಯುತ್ತಲೇ ಇರುತ್ತದೆ.

ಕಾಲೇಜಿನ ದಿನಗಳಲ್ಲಿ ಕರೆನ್ಸಿ ಸಿಸ್ಟಮ್‌ ಮಾತ್ರವಲ್ಲದೆ, ಬಾರ್ಟರ್‌ ಸಿಸ್ಟಮ್‌ಗಳನ್ನೂ ಅನುಸರಿಸುವುದಿದೆ. ಅಂದರೆ ಸಾಲ ಕೊಡು- ತಗೊಳ್ಳುವಿಕೆಯ ನಡುವೆ, ವಸ್ತುಗಳ ವಿನಿಮಯವೂ ನಡೆಯುತ್ತದೆ. ಹಿಂದಿನ ದಿನಗಳಲ್ಲಿ ಪಕ್ಕದ ಮನೆಯಿಂದ ಒಂದು ಕಪ್‌ ಸಕ್ಕರೆ ತಗೊಂಡು, ಕಪ್‌ ವಾಪಸ್‌ ಕೊಡುವಾಗ ಮತ್ತಿನ್ಯಾವುದಾದರೂ ಪದಾರ್ಥ ಕೊಡುತ್ತಿದ್ದ ಹಾಗೆ ಒಬ್ಬ ಸ್ನೇಹಿತ ಫ‌ುಲ್‌ಮೀಲ್ಸ್‌ ಕೊಡಿಸಿದರೆ, ಇನ್ನೊಬ್ಬ ಸಿನಿಮಾ ಟಿಕೆಟ್‌ ಸ್ಪಾನ್ಸರ್‌ ಮಾಡುವುದು, ಹೀಗೆ… ವೀಕೆಂಡ್‌ ಬರುತ್ತಿದ್ದಂತೆಯೇ ಜೇಬಿಗೆ ಕೈ ಹಾಕಿಕೊಂಡಾಗ ಖಾಲಿ ಖಾಲಿ!  ಹಾಗಂತ ವಿದ್ಯಾರ್ಥಿಗಳ ಪಾಲಿನ ಖುಷಿಯೂ ಖಾಲೀನಾ? ಖಂಡಿತವಾಗಲೂ ಇಲ್ಲ! ದುಡ್ಡು ಖಾಲಿಯಾದ ತಕ್ಷಣ ಜೇಬಿನ ತುಂಬಾ ಕನಸುಗಳು ಬಂದು ಕೂರುತ್ತವೆ. ಕಾಲೇಜ… ಕ್ಯಾಂಪಸ್‌ನ ನಗು ಬಂದು  ಕೂರುತ್ತದೆ. ಚೆನ್ನಾಗಿ ಓದುವ ಆಸೆ ಬಂದು ಕೂರುತ್ತದೆ. ಪುಕ್ಸಟ್ಟೆ ದಕ್ಕುವ ಸಾಕಷ್ಟು ತರ್ಲೆಗಳು ಬಂದು ಕೂರುತ್ತವೆ. ಕಾಲೇಜಿನ ತಿರುವಿನಲ್ಲಿ ನಕ್ಕು ಹೋದ ಆ ಗುಂಗುರು ಕೂದಲಿನ ಹುಡುಗಿಯ ಆಪ್ತ ನಗು ನೆನಪಾಗಿರುತ್ತದೆ. ಸ್ನೇಹಿತರ ಮೂಟೆಗಟ್ಟಲೆಯ ಜೋಕುಗಳು, ಆಟಗಳು, ಒಡನಾಟಗಳು ಎಲ್ಲವೂ ತುಂಬುತ್ತವೆ.

ಇದು ಕಾಸಿಲ್ಲದ ಅಗಿª ಒರ್ಜಿನಲ್‌ ಖುಷಿ!
ಖರ್ಚಿಗೆ ಹಣವಿಲ್ಲವೆಂದು ವಿದ್ಯಾರ್ಥಿ ತಲೆ ಮೇಲೆ ಕೈ ಹೊತ್ತು ಕೂರುವುದಿಲ್ಲ. ದುಡ್ಡೇ ಎಲ್ಲವೂ ಅಲ್ಲ ಎನ್ನುವಂತೆ ಜೀವನದ ಚಿಕ್ಕಪುಟ್ಟ ಸಂತಸಗಳನ್ನು ಆತ ಅನುಭವಿಸುತ್ತಾನೆ. ಮುಂದೆ ಇವೇ ಮಧುರ ನೆನಪುಗಳಾಗಿ ಶಾಶ್ವತವಾಗಿ ಅವನೊಂದಿಗೂ ಉಳಿದುಬಿಡುತ್ತದೆ. ಬದುಕಿನುದ್ದಕ್ಕೂ ಕೈ ಹಿಡಿದು ಮುನ್ನಡೆಸುತ್ತದೆ. ಆ ವಯಸ್ಸು, ಗೆಳೆಯರು, ಓದು, ಬರಹ, ಆಟ, ತರ್ಲೆಗಳು ಸಂಭ್ರಮಿಸಲು ಇರುವ ತೆಕ್ಕೆಗಟ್ಟಲೆ ಕಾರಣಗಳು, ದುಡ್ಡನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿಬಿಡುತ್ತವೆ. ಇಲ್ಲಿ ಖುಷಿಗಷ್ಟೇ ಮೊದಲ ಸ್ಥಾನ. ಹಣವಿಲ್ಲದೆ ವಾರಾಂತ್ಯ ಕಳೆಯುವವರನ್ನು ನೋಡಿ ಕೆಲವರು, ಅಯ್ಯೋ ಪಾಪವೆನ್ನುವಂತೆ ಲೊಚಗುಟ್ಟುತ್ತಾರೆ. ಆದರೆ ಮಜಾ ಅಂದರೆ, ದುಡ್ಡಿಲ್ಲದವರಿಗೆ ಅಂಥವರನ್ನು ನೋಡಿ ಪಾಪ ಅನಿಸುತ್ತದೆ. ದುಡ್ಡಿದ್ದರೂ ಒಳ್ಳೆಯ ಟೇಸ್ಟ್‌ ಇಲ್ಲವಲ್ಲ ಎಂದು ಮರುಕ ಪಡುತ್ತಾರೆ. ಹಣವಿಲ್ಲದೆಯೂ ಮೂಟೆಗಟ್ಟಲೆ ಖುಷಿ ಬಾಚುವ ನಾವೆಷ್ಟು ಶ್ರೀಮಂತರೆಂದು ಅರಿಯದೇ ಹೋದರಲ್ಲಾ ಅನಿಸುತ್ತದೆ. 

ಓದು ಮುಗಿಸಿ ನೌಕರಿಯೊಂದನ್ನು ಗಿಟ್ಟಿಸಿಕೊಂಡು ದುಡಿಯಲು ತೊಡಗಿದಾಗ ವಿದ್ಯಾರ್ಥಿ ದುಡ್ಡಿನ ಮುಖ ನೋಡಲು ಪ್ರಾರಂಭಿಸುತ್ತಾನೆ. ಮೊದ ಮೊದಲು ಅದೆಂಥ ಸಡಗರ ಅಂತೀರಿ. ಬರ್ತಾ ಬರ್ತಾ ದುಡ್ಡಿಗಿಂತ ಇನ್ನೆಲ್ಲೋ ಖುಷಿ ಇದೆ ಅನಿಸುತ್ತೆ. ಆಗ ನೆನಪಾಗುವುದೇ ಕಾಲೇಜಿನ ದಿನಗಳು. ಆ ದಿನಗಳಲ್ಲಿ ಎಷ್ಟೊಂದು ಖುಷಿ ಇತ್ತು ಅನಿಸುತ್ತದೆ. ಹತ್ತು ರೂಪಾಯಿ ಜೇಬಿನಲ್ಲಿದ್ದರೂ ನಾವೇ ರಾಜರು ಅಂದುಕೊಂಡ ದಿನಗಳವು. ಅಲ್ಲಿ ಎಲ್ಲದಕ್ಕೂ ಲಿಮಿಟ್‌, ಆದ್ರೆ ಖುಷಿಗೆ ಮಾತ್ರ ಲಿಮಿಟ್‌ ಇರುತ್ತಿರಲಿಲ್ಲ. ಅಂದಿನ ದಿನಗಳ ಮುಂದೆ ದುಡ್ಡಿನ ದಿನಗಳೇ ಸಪ್ಪೆ ಎನಿಸಿಬಿಡುತ್ತದೆ. ಬದುಕಿನ ಸಂಕಟಗಳು ಆರಂಭವಾದಾಗ ಕಾಲೇಜಿನ ಖಾಲಿ ಜೇಬಿನ ದಿನಗಳನ್ನು ನೆನಪಿಸಿಕೊಂಡು ಖುಷಿ ಪಡುತ್ತೇವೆ. ಅದೇ ನೋಡಿ ಖಾಲಿ ಜೀಬಿನ ದಿನಗಳಿರುವ ತಾಕತ್ತು! 

ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.