“ವಾಂತಿ’ವೀರನ ಎಸ್ಕೇಪ್ ಐಡಿಯಾ
Team Udayavani, Jul 3, 2018, 6:00 AM IST
ಶಾಲಾ ದಿನಗಳಲ್ಲಿ ನನಗೆ ಮಹೇಶ ಎಂಬ ಗೆಳೆಯನಿದ್ದ. ಆತ ಸಕಲ ಕಲಾವಲ್ಲಭ. ಅದರಲ್ಲೂ, ನಟನೆಯಲ್ಲಿ ಅವನಿಗೆ ಬಹಳ ಆಸಕ್ತಿ ಇತ್ತು. ಯಾರನ್ನಾದರೂ ಒಂದು ಬಾರಿ ನೋಡಿದರೆ ಸಾಕು, ಅವರಂತೆಯೇ ಅನುಕರಿಸಿ ನಟಿಸುವ ಕಲೆ ಅವನಿಗೆ ಕರಗತವಾಗಿತ್ತು. ಇಂಥವನು ಶಾಲೆಯಲ್ಲಿ ಜೊತೆಗಾರನಾದ ಮೇಲೆ ಕೇಳಬೇಕೆ? ಚಕ್ಕರ್ ಹೊಡೆದು ಹೊರಗೆ ಹೋಗಲು ಅವನೇ ಹೇಳಿಕೊಟ್ಟ. ನಮ್ಮ ಶಾಲೆಯಿಂದ ಊರಿಗೆ ಬರುವ ದಾರಿಯಲ್ಲೇ ಹಲವಾರು ಹಣ್ಣಿನ ಮರಗಳಿದ್ದವು. ನಮಗೆ ಯಾವಾಗ ನೇರಳೆ, ಬಿಕ್ಕೆ ಹಣ್ಣನ್ನು ತಿನ್ನಬೇಕು ಎನಿಸುತ್ತಿತ್ತೋ, ಆಗೆಲ್ಲಾ ಮಹೇಶನಿಗೆ ವಾಂತಿಯಾಗುತ್ತಿತ್ತು.
ಆರೋಗ್ಯ ಸರಿ ಇದ್ದರೂ ಅದು ಹೇಗೆ ವಾಂತಿ ಮಾಡಿಕೊಳ್ಳುತ್ತಿದ್ದ ಅಂತಿದೀರ? ನಮಗೆ ಯಾವಾಗೆಲ್ಲಾ ಕ್ಲಾಸು ಬೋರಾಗುತ್ತಿತ್ತೋ, ಆಗೆಲ್ಲಾ ಅವನಿಗೆ ಸಂಜ್ಞೆ ಮಾಡುತ್ತಿದ್ದೆವು. ಆ ಪುಣ್ಯಾತ್ಮ ತಕ್ಷಣವೇ ವಾಂತಿ “ಬರಿಸಿ’ಕೊಳ್ಳುತ್ತಿದ್ದ! ನಾವು ಕೂಡಲೇ ಓಡಿಹೋಗಿ ಮುಖ್ಯ ಶಿಕ್ಷಕರಿಗೆ ವಿಷಯ ತಿಳಿಸುತ್ತಿದ್ದೆವು. ನಮ್ಮ ನಟನೆಯನ್ನು ತಿಳಿಯದ ಮುಖ್ಯ ಶಿಕ್ಷಕರು, ಮಹೇಶನನ್ನು ಕರೆದು “ಹುಷಾರಾಗಿ ಮನೆಗೆ ಹೋಗು. ಒಬ್ಬನೇ ಹೋಗುವುದು ಬೇಡ. ಜೊತೆಯಲ್ಲಿ ಯಾರನ್ನಾದರೂ ಕರೆದುಕೊಂಡು ಹೋಗು’ ಎನ್ನುತ್ತಿದ್ದರು. ಅವರು ಅಷ್ಟು ಹೇಳಿದ್ದೇ ತಡ, ನಾ ಮುಂದು ತಾ ಮುಂದು ಎಂದು ತರಗತಿಯಲ್ಲಿ ಎಲ್ಲರೂ ಮಹೇಶನ ಪುಸ್ತಕದ ಚೀಲವನ್ನು ಹಿಡಿಯಲು ಮುಂದಾಗುತ್ತಿದ್ದರು. ತರಗತಿಯ ಆವರಣ ದಾಟುವವರೆಗೆ ಅಳುತ್ತಿದ್ದ ಮಹೇಶ, ಆವರಣ ದಾಟಿದ ಕೂಡಲೇ ಮೊದಲಿನಂತಾಗಿಬಿಡುತ್ತಿದ್ದ. ಅದು ಹೇಗೆ ವಾಂತಿ ಮಾಡಿದೆ ಎಂದು ಕೇಳಿದರೆ, ಅದರ ಹಿಂದಿನ ಮರ್ಮವನ್ನು ಹೇಳುತ್ತಿದ್ದ. ಮಧ್ಯಾಹ್ನ ಊಟವಾದ ಮೇಲೆ ಹೊಟ್ಟೆ ಹಿಡಿಸಲಾರದಷ್ಟು ನೀರು ಕುಡಿದು ಕುಣಿಯುತ್ತಿದ್ದನಂತೆ. ನಂತರ ಬಲವಂತವಾಗಿ ಬಿಕ್ಕಳಿಸಿ, ವಾಂತಿ ಬರಿಸಿಕೊಳ್ಳುತ್ತಿದ್ದನಂತೆ.
ಗಿರೀಶ ಜಿ.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.