ವಿಷನ್‌ ಇಂಪಾಸಿಬಲ್‌: ಅಸಾಧ್ಯ ತೀರ ಸೇರಿಸುವ ಫೆಲೋ”ಶಿಪು


Team Udayavani, Apr 4, 2017, 5:06 PM IST

04-JOSH-5.jpg

21ನೇ ಶತಮಾನದ ಶುರುವಿನಿಂದ ಭಾರತ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಜ್ಞಾನ, ಆರ್ಥಿಕ, ರಾಜಕೀಯ ಇತ್ಯಾದಿ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವ ಅವಕಾಶ ಹಾಗು ಲಕ್ಷಣಗಳು ಸಾಕಷ್ಟಿವೆ. ಆದರೆ ಭಾರತದ ಅಭಿವೃದ್ಧಿ ಪಥವನ್ನು ಸಕಾರಾತ್ಮಕ ದಿಕ್ಕಿನೆಡೆಗೆ ಮುನ್ನಡೆಸಲು ಯುವ ನಾಯಕರ ಅವಶ್ಯಕತೆಯಿದೆ. ಭಾರತದ ಅಭಿವೃದ್ಧಿಗಾಗಿ ಯೋಜನೆ ಹಾಗು ನೀತಿ ರಚನೆ (policy making)
ಮತ್ತು ನೀತಿ ಅನುಷ್ಠಾನದಲ್ಲಿ (policy implementation) ಉತ್ಸಾಹಿ ಪ್ರತಿಭಾವಂತ ಯುವಕರ ಕೊಡುಗೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇಂಥ ಸಮರ್ಥ ಯುವ ನಾಯಕರನ್ನು ಮತ್ತು ನೀತಿ ಯೋಜನೆಯಲ್ಲಿ ಪ್ರತಿಭಾವಂತ ಅಭ್ಯರ್ಥಿಗಳನ್ನು ತಯಾರು ಮಾಡಲೆಂದೇ
ವಿಷನ್‌ ಇಂಡಿಯಾ ಫೆಲೋಶಿಪ್‌ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಷನ್‌ ಇಂಡಿಯಾ ಫೌಂಡೇಶನ್‌ ಸಂಸ್ಥೆಯು ಈ ಕಾರ್ಯಕ್ರಮವನ್ನು ನಡೆಸುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ ಉತ್ಸಾಹಿ ಯುವಕರನ್ನು ಈ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಿಕೊಂಡು ನಂತರ ಉತ್ತಮ ಗುಣಮಟ್ಟದ ತರಬೇತಿಯನ್ನು ಕೊಡುವುದರ ಮುಖಾಂತರ ಅವರನ್ನು ಪ್ರಭಾವಿ ನೀತಿ/ ಯೋಜನೆಗಳ ನಿರ್ಮಾಣಕ್ಕೆ ಸಜ್ಜುಗೊಳಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಪ್ರಸ್ತುತ ಲೋಕಸಭಾ/  ಜ್ಯಸಭಾ  ಸದಸ್ಯರ ಜೊತೆಗೆ ಅಥವಾ ಮುನ್ಸಿಪಲ್‌ ಕಾರ್ಪೊರೇಶನ್‌ಗಳಲ್ಲಿ, ಸರ್ಕಾರಿ ಇಲಾಖೆಗಳಲ್ಲಿ ಅಥವಾ ಇನ್ನಿತರೆ ಸಾರ್ವಜನಿಕ ರಂಗದಲ್ಲಿ ಚಾಲ್ತಿಯಲ್ಲಿರುವ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಜೊತೆಗೆ ಅಭ್ಯರ್ಥಿಗಳಿಗೆ ಸೂಕ್ತವಾದ ಕ್ಷೇತ್ರದಲ್ಲಿ ಸ್ವಂತ ಯೋಜನೆಗಳನ್ನು ಜಾರಿಗೊಳಿಸುವ ಅವಕಾಶಗಳನ್ನು ಕೂಡ ಒದಗಿಸಲಾಗುತ್ತದೆ. ಈಗಾಗಲೇ ಚಾಲ್ತಿಯಲ್ಲಿರುವ
ಯೋಜನೆಗಳಲ್ಲಿ ಅಭ್ಯರ್ಥಿಗಳು ಕೆಲಸ ಮಾಡುವುದರಿಂದ ಕಲಿಕಾ ಗುಣಮಟ್ಟ ಅತ್ಯುನ್ನತವಾಗಿರುತ್ತದೆ. ಜೊತೆಗೆ ಪ್ರಭಾವಿ ವ್ಯಕ್ತಿಗಳ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ಕೂಡ ಪಡೆಯುತ್ತಾರೆ. 

ಫೆಲೋಶಿಪ್‌ ಅವಧಿ ಮತ್ತು ಆಯ್ಕೆ ಪ್ರಕ್ರಿಯೆ ವಿಷನ್‌ ಇಂಡಿಯಾ ಫೆಲೋಶಿಪ್‌ ಅವಧಿಯು ಮೂರು ವರ್ಷದ್ದಾಗಿದ್ದು, ಇದರ ಅರ್ಜಿಗಳನ್ನು ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲಿ ಕರೆಯಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಜೂನ್‌ ತಿಂಗಳಿನಿಂದ ತರಬೇತಿ ನೀಡಲಾಗುತ್ತದೆ. ಅರ್ಜಿಗಳನ್ನು ಆನ್‌ಲೈನ್‌ ಮುಖಾಂತರ ಸಲ್ಲಿಸಬೇಕು. ಎಲ್ಲ ಕ್ಷೇತ್ರದ ಮತ್ತು ವರ್ಗದ ಅಭ್ಯರ್ಥಿಗಳಿಗೆ ಈ ಫೆಲೋಶಿಪ್‌ನಲ್ಲಿ ಅವಕಾಶವನ್ನು ನೀಡಲಾಗುತ್ತದೆ. ಬಹುತೇಕ ಆಯ್ಕೆಯಾದ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ/ಡಾಕ್ಟರೇಟ್‌ ಹೊಂದಿರುತ್ತಾರೆ ಮತ್ತು ಕನಿಷ್ಠ ಎರಡು ವರ್ಷದ ಕೆಲಸದ ಅನುಭವವನ್ನು ಹೊಂದಿರುತ್ತಾರೆ. ಆಭ್ಯರ್ಥಿಗಳಲ್ಲಿ ಉತ್ತಮ ಸಂವಹನ ಕೌಶಲಗಳ ಜೊತೆಗೆ ಕಷ್ಟದ ಜಾಗಗಳಲ್ಲಿ ಸವಾಲುಭರಿತ ಕಾರ್ಯಗಳಲ್ಲಿ ಕೆಲಸವನ್ನು ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಬೇಕು.
ಜೊತೆಗೆ ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ಕೆಲಸ ಮಾಡಲು ಬೇಕಾದ ಸೂಕ್ತವಾದ ಕೌಶಲಗಳನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಒಂದು ಪ್ರಬಂಧವನ್ನು ಬರೆಯಬೇಕು (500-800 ಪದಗಳ ಮಿತಿಯಲ್ಲಿ). ಈ ಪ್ರಬಂಧದಲ್ಲಿ ಅಭ್ಯರ್ಥಿಗಳ ಹಿಂದಿನ
ಕೆಲಸದ ಅನುಭವ, ಫೆಲೋಶಿಪ್‌ ಆಯ್ದುಕೊಳ್ಳಲು ಕಾರಣ, ಮುಂದಿನ ಯೋಜನೆಗಳ ಬಗೆಗೆ ಉಲ್ಲೇಖವಿರಬೇಕು. ಜೊತೆಗೆ ಒಂದು ವೈಯಕ್ತಿಕ ವಿಡಿಯೋವನ್ನು ತಯಾರು ಮಾಡಿ ಕಳಿಸಬೇಕು. ಈ ವಿಡಿಯೋದಲ್ಲಿ ಅಭ್ಯರ್ಥಿಗಳು ತಮ್ಮ ಗುರಿ ಮತ್ತು ವಿಷನ್‌ ಬಗೆಗೆ ತಿಳಿಸಬೇಕು. ಪ್ರಬಂಧ ಹಾಗು ವಿಡಿಯೋ ಜೊತೆಗೆ ಅಭ್ಯರ್ಥಿಗಳು ತಮಗೆ ಗೊತ್ತಿರುವ ಇಬ್ಬರು ವ್ಯಕ್ತಿಗಳ ಮಾಹಿತಿಯನ್ನು ಒದಗಿಸಬೇಕು. ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಅವರ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ವ್ಯಕ್ತಿಗಳನ್ನು ಸಂಪರ್ಕಿಸಲಾಗುತ್ತದೆ. ಆನ್‌ಲೈನ್‌ ಅರ್ಜಿಗಳನ್ನು ಪರಿಶೀಲಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ಮುಂದಿನ ಹಂತದ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನವನ್ನು ಸ್ಕೈಪ್‌ (Skype) ಮಾಧ್ಯಮದ ಮುಖಾಂತರ ಅಥವಾ ವೈಯಕ್ತಿಕವಾಗಿ ನಡೆಸಬಹುದು. 

ಯಾವ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶವಿದೆ?
ಹಲವಾರು ರಂಗಗಳಲ್ಲಿ ಅಭ್ಯರ್ಥಿಗಳು ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಫೆಲೋಶಿಪ್‌ ಪ್ರಾರಂಭದಲ್ಲಿಯೇ
ಅಭ್ಯರ್ಥಿಗಳು ತಾವು ಕೆಲಸ ಮಾಡಲು ಇಚ್ಛಿಸುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಒದಗಿಸಲು ಶಾಲೆಗಳ
ನಿರ್ಮಾಣ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕಾರ್ಯನೀತಿ ರಚನೆ, ಭಾರತದ ಇತಿಹಾಸ, ರಾಜಕೀಯ ಸುಧಾರಣೆ, ದೇಶ
ನೀತಿ ಹಾಗು ದೇಶೀ ಸಂಬಂಧಗಳು, ಉತ್ತಮ ಆಡಳಿತ ಮತ್ತು ಸಂಸತ್‌ ಸದಸ್ಯರುಗಳಿಗೆ ಕಾರ್ಯನಿರ್ವಾಹಕ ಸಹಾಯಕರು ಇತ್ಯಾದಿ ಕ್ಷೇತ್ತಗಳಲ್ಲಿ/ಹುದ್ದೆಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಇದರ ಜೊತೆಗೆ ಸ್ವಂತ ಯೋಜನೆಗಳಲ್ಲಿ ಕೂಡ ಕೆಲಸ
ಮಾಡಬಹುದು. ಕೆಲಸದ ಜೊತೆಜೊತೆಗೆ ಅಭ್ಯರ್ಥಿಗಳು ರಿಸರ್ಚ್‌ ಅನ್ನು ಕೂಡ ಕೈಗೊಳ್ಳಬಹುದು. ಫೆಲೋಶಿಪ್‌ ಅವಧಿಯಲ್ಲಿ
ಪ್ರತಿಯೊಬ್ಬ ಅಭ್ಯರ್ಥಿಯು ಮಾಸಿಕ ರೂ. 40,000/- ವೇತನವನ್ನು ಪಡೆಯುತ್ತಾರೆ. ಫೆಲೋಶಿಪ್‌ ನಂತರ ಉನ್ನತ ವ್ಯಾಸಂಗವನ್ನು ಕೈಗೊಳ್ಳಬಹುದು ಅಥವಾ ಸಾರ್ವಜನಿಕ ನೀತಿ ರಚನೆ (public policy making) ಮತ್ತು ಅನುಷ್ಠಾನದಲ್ಲಿ ತಮ್ಮ ಭಷ್ಯವನ್ನು
ರೂಪಿಸಿಕೊಳ್ಳಬಹುದು. ರಾಷ್ಟ್ರನಿರ್ಮಾಣದಲ್ಲಿ ಈ ಫೆಲೋಶಿಪ್‌ ಕಾರ್ಯಕ್ರಮವು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಹೆಚ್ಚು ಹೆಚ್ಚು ಉತ್ಸಾಹಿ ಯುವಕರು ಈ ಫೆಲೋಶಿಪ್‌ ಲಾಭವನ್ನು ಪಡೆದುಕೊಂಡು ತಮ್ಮ ಉಜ್ವಲ ಭಷ್ಯವನ್ನು ರೂಪಿಸಿಕೊಳ್ಳಲಿ ಎಂದು ಆಶಿಸುತ್ತೇವೆ. ಹೆಚ್ಚಿನ ವರಗಳಿಗಾಗಿ ಈ ಕೆಳಗಿನ ವೆಬ್‌ಸೈಟ್‌ಗೆ ಭೇಟಿಕೊಡಿ: www.visionindiafoundation.com

ಪ್ರಶಾಂತ್‌ ಎಸ್‌. ಚಿನ್ನಪ್ಪನವರ್‌, ಚಿತ್ರದುರ್ಗ
 

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.