ಪದೇಪದೆ ಸೋತರೂ ಗೆಲುವಿನ ಆಸೆ ಇದೆ!
Team Udayavani, Aug 14, 2018, 6:00 AM IST
ತುಂಬಾ ಮುದ್ದಾಗಿದ್ದೆ ನೀನು, ಮಾತಿನಲ್ಲಿಯೂ ಮತ್ತು ಮನಸಿನಲ್ಲಿಯೂ. ನಿನ್ನ ಜೊತೆಯಲ್ಲಿದ್ದಾಗ ವಾಹ್, ಸ್ವರ್ಗಕ್ಕೆ ಮೂರೇ ಗೇಣು ಎಂದು ಬೀಗುತ್ತಿದ್ದವ ನಾನು. ನಿನ್ನೊಂದಿಗೆ ಕಳೆದ ಕ್ಷಣಗಳನ್ನು ವಿವರಿಸಬೇಕೆಂದರೂ ಪದಗಳೇ ಸಿಗದಿದ್ದಾಗಲೇ ತಿಳಿದಿದ್ದು, ನಿನ್ನ ಮೇಲಿದ್ದ ಒಲವು ಅನುರಾಗದ ರೂಪ ಪಡೆಯಿತೆಂದು. ಆದರೆ, ಅದೇ ಅನುರಾಗ ಇಂದು ಅಳಿವಿನಂಚಿನಲ್ಲಿದೆ. ಬೇಗ ಬಂದು ಸಹಕರಿಸು, ಅನುರಾಗವನ್ನು ಬದುಕಿಸು.
ಪ್ರೀತಿ ಆರಂಭವಾಗಿದ್ದು ನಿನ್ನಿಂದಲ್ಲವೇ? ಅದು ಕೊನೆಯಾದರೂ ನಿನ್ನಿಂದಲೇ ಆಗಲಿ ಎಂದು ನಾನು ಹೇಳಲಾರೆ. ಯಾಕೆಂದರೆ ತಂಗಾಳಿಯಂತೆ ಬಂದು ನನ್ನಲಿ ಉಸಿರಾಗಿ ಉಳಿದವಳು ನೀನು. ಪದಗಳೇ ಸಿಗದೆ ಮೂಕನಾಗಿ ನಿಂತಿದ್ದ ನನಗೆ, ಅನುರಾಗದ ಅರಿವಾದ ಮೇಲಂತೂ ಏನು ಮಾಡಬೇಕೆಂದು ತೋಚದೆ ಸ್ತಬ್ಧನಾದೆ, ಭಾವನೆಗಳ ಬಲೆಯಲ್ಲಿ ಬಂಧಿಯಾದೆ. ನಿನಗೆ ತಿಳಿದಿಲ್ಲ, ಅನುರಾಗ ತಿಳಿಸಲು ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೇನೆಂದು. ಆದರೆ, ಅಷ್ಟೂ ಬಾರಿ ಸೋತಾಗಲೂ ಮನದಂಚಲ್ಲೆಲ್ಲೋ ಗೆದ್ದೆನೇನೋ ಎಂದೆನಿಸುತ್ತಿತ್ತು. ಕಾರಣ ಇಂದಿಗೂ ತಿಳಿಯುತಿಲ್ಲ.
ನಿನ್ನ ಕಣ್ಣ ನೋಟದ ಸೆಳೆತದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾಗಲೂ ನನಗರಿವಿತ್ತು ಇದು ಅನುರಾಗವೇ ಎಂದು. ನಿನ್ನ ಮುಗ್ಧ ಮಾತಿನ ಮೋಡಿಯಲ್ಲಿ ಮಿಂದೇಳುತ್ತಿದ್ದಾಗಲೂ ನನಗರಿವಿತ್ತು ಇದು ಅನುರಾಗವೇ ಎಂದು. ನಿನ್ನ ಸಾಂಗತ್ಯದ ಸಮೀಪದಲ್ಲಿ ಒದ್ದಾಡುತ್ತಿದ್ದಾಗಲೂ ಅರಿವಿತ್ತು ನನಗೆ ಇದು ಅನುರಾಗವೇ ಎಂದು.ಆದರೆ ನಿನಗೆ ಇದಾವುದೂ ತಿಳಿಯುತ್ತಿಲ್ಲ ಎಂಬುದು ಮಾತ್ರ ನನಗೆ ಅರಿವಿಲ್ಲದೇ ಹೋಯಿತು.
ನಿನ್ನಲ್ಲಿ ಹೇಳಲು ಬಹಳಷ್ಟಿದೆ ಎಂದು ಪ್ರತಿ ಬಾರಿ ಬಳಿ ಬಂದಾಗಲೂ, ನಾನು ಹೇಳದೇ ಉಳಿದಿದ್ದೇ ಹೆಚ್ಚು. ಆದರೆ ಇನ್ನು ಹಾಗಾಗದು. ಮಾತಿನಲ್ಲಿ ಹೇಳಲಾಗದ್ದನ್ನು ಮೌನದಲ್ಲಿಯೇ ಹೇಳುವೆ; ಎಲ್ಲವನ್ನೂ ಅಲ್ಲದಿದ್ದರೂ, ಎಂದೆಂದೂ ನನ್ನ ಜೊತೆಗಿರು ಎಂಬುದನ್ನಾದರೂ.
ಅದೇ ಹೆಜ್ಜೆ ನಾದಗಳೊಡನೆ, ಅದೇ ಮುಗ್ಧ ಮಾತುಗಳೊಡನೆ…
ಅಭಿಷೇಕ್ ಎಂ. ತೀರ್ಥಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.