ನೋಡಿ ಸ್ವಾಮಿ, ನಾವಿರೋದೇ ಹೀಗೆ…
ಐಟಿ ಬದುಕು
Team Udayavani, Dec 10, 2019, 5:48 AM IST
ಅರಮನೆಗಳನ್ನು ದೂರದಿಂದ, ಯಾವತ್ತೋ ಒಂದು ದಿನ ಹೋಗಿ ನೋಡಿದರೆ ಬಹಳ ಚೆನ್ನಾಗಿರುತ್ತದೆ. ನಮ್ಮ ಸಾಫ್ಟವೇರ್ ಬದುಕು ಕೂಡ ಹೀಗೇ. ದೂರದ ಜಗತ್ತಿಗೆ ಇಲ್ಲಿ ಹಣ, ನೆಮ್ಮದಿ ಎಲ್ಲವೂ ದಂಡಿಯಾಗಿ ಇರುವಂತೆ ಕಾಣುತ್ತಿದೆ. ಆದರೆ ವಾಸ್ತವವೇ ಬೇರೆ. ಬಿಡ್ರೀ ಅವರಿಗೇನು? ದುಡ್ಡಿದೆ ಎಂದು ತೇಲಿಸಿ ಮಾತಾಡುವವರಿಗೆ, ಸಾಫ್ಟ್ವೇರ್ ಬದುಕು ಹೇಗಿದೆ ಅನ್ನೋದರ ಅನಾವರಣ ಹೀಗಿದೆ…
ವಾರಾಂತ್ಯ ಬಂದರೆ ಸಾಕು; ಮನಸ್ಸಿಗೆ ಅದೇನೋ ಖುಷಿ. ವಾರದಲ್ಲಿ ಈ ಎರಡು ದಿನಗಳು ರಜೆ ಇರದಿದ್ದರೇ…! ಐ.ಟಿ ಯಲ್ಲಿ ಕೆಲಸ ಮಾಡುವ ಸಾಕಷ್ಟು ಮಂದಿ ಇಷ್ಟೊತ್ತಿಗೆ ಅರೆ ಹುಚ್ಚರಾಗಿಬಿಡುತ್ತಿದ್ದರು.
ಇಲ್ಲಿಯ ಕೆಲಸ ದೂರದಿಂದ ನೋಡುವವರಿಗೆ ಸಕತ್ ಸಾಫ್ಟ್ ಆಗಿ ಕಾಣುತ್ತಿರುತ್ತದೆ. ಮೈಸೂರು ಅರಮನೆಯನ್ನು ದೂರದಿಂದ ನೋಡಿದ ಹಾಗೇ. ಅದರಲ್ಲಿ ಇರೋರಿಗೆ ಗೊತ್ತಾಗುತ್ತೆ ಕಷ್ಟ -ಸುಖ. ಎಷ್ಟೋ ಜನ ನಾವೂ ಸಾಫ್ಟ್ವೇರ್ ಎಂಜಿನಿಯರ್ ಆಗಬೇಕು ಅಂತಾರೆ. ಅದು ನೋಡುವ ಉಡುಗೆಯಿಂದ, ದೊಡ್ಡ ಮಹಡಿಯಿಂದ ಹೊಳೆಯುವ ಗ್ಲಾಸ್ ಆಫೀಸಿನಿಂದ. ನಮ್ಮ ಜಗತ್ತಿನೊಳಗೆ ಹೆಜ್ಜೆ ಇಟ್ಟು ನೋಡಿದಾಗ ತಿಳಿಯುತ್ತದೆ. ನಿಜವಾದ ಸಾಫ್ಟ್ವೇರ್ ಇಂಜಿನಿಯರ್‌ನ ಹಾರ್ಡ್ ಕೆಲಸ . ನಮ್ಮ ಕೆಲಸವನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ..
ಏಯ…, ಬಿಡು ಮಾರಾಯ. ಅದು ಏನೋ ನೀವು ಯಾವಾಗಲೂ ಕಂಪ್ಯೂಟರ್ ಪರದೆ ನೋಡುತ್ತಾ ಕಾಲ ಕಳೆಯುತ್ತಿರುತ್ತೀರಾ? ಎಂದು ಹಗುರವಾಗಿ ಮಾತನಾಡುವುದೂ ಉಂಟು. ಇದು ಸಲ್ಲ. ನಿತ್ಯ ಸರಿಯಾದ ಸಮಯಕ್ಕೆ ಆಫೀಸ್ ಗೆ ಬರುವುದು ಮಾತ್ರ ಗೊತ್ತು. ಅದೇ ಸಂಜೆ, ಸರಿಯಾದ ಟೈಂ ಗೆ ಮನೆಗೆ ಹೋಗುವುದು ಕಷ್ಟ. ಈ ಕೆಲಸದ ಕರಾಮತ್ತೇ ಹಾಗೆ. ಅದರ ವಿಚಾರವನ್ನು ಯಾರ ಬಳಿಯೂ ಹೇಳಿಕೊಳ್ಳುವ ಹಾಗಿಲ್ಲ ..ಸರ್ಕಾರಿ ಕೆಲಸ ದೇವರ ಕೆಲಸ ಅಂತ ಸುಮ್ಮನೆ ಹೇಳಿಲ್ಲ. ಒಂದು ಸಲ ಸರ್ಕಾರಿ ನೌಕರಿ ಕೆಲಸ ಸಿಕ್ಕಿದರೆ ಮುಗಿಯಿತು. 58-60 ವರ್ಷ ಆಗುವವರೆಗೂ ಯಾವ ತಲೆ ಬಿಸಿಯಿಲ್ಲ ..
ಈ ವಿಚಾರ ಏಕೆ ಹೇಳ್ತಿದ್ದೀನಿ ಅಂದರೆ, ಐ.ಟಿ ಬಿ.ಟಿ ನೌಕರರಿಗೆ, ಕೆಲಸ ಸಿಕ್ಕ ಕ್ಷಣದಿಂದಲೇ ಅದನ್ನು ಉಳಿಸಿಕೊಳ್ಳುವ ಹೋರಾಟ ಶುರುವಾಗುತ್ತದೆ. ವೇತನವನ್ನು ಹೆಚ್ಚಿಸಿಕೊಳ್ಳುವುದು, ಕ್ವಾರ್ಟರ್, ಮಧ್ಯ ವಾರ್ಷಿಕ, ವಾರ್ಷಿಕ ಅಪ್ರೈಸಲ…ನಲ್ಲಿ ರೇಟಿಂಗ್ ಜಾಸ್ತಿ ಪಡೆಯುವುದು ಹೆಗ್ಗುರಿ. ಹೀಗೆ ಕೆಲಸದ ಜೊತೆಯಲ್ಲಿಯೇ ಬರುವ ಒಳಗಿನ ತನ್ನ ವ್ಯಥೆಯನ್ನು ಮತ್ತೂಬ್ಬ ಐ.ಟಿ ಉದ್ಯೋಗಿ ಮಾತ್ರ ಅರ್ಥ ಮಾಡಿಕೊಳ್ಳಬಲ್ಲನು.
ಆದ್ದರಿಂದಲೇ ವಾರದ ರಜೆಗೆ ಇಲ್ಲಿ ಬಲು ಮಹತ್ವ. ಆ ಎರಡು ದಿನವಾದರೂ ಆರಾಮಾಗಿ ಬೇಗ ಮಲಗಿ ಲೇಟಾಗಿ ಏಳುವ ಕನಸು. ಎರಡು ದಿನವಾದರೂ ಖುಷಿಯಾಗಿ ಎಲ್ಲರೊಂದಿಗೆ ಬೆರೆತು ಊಟ ಮಾಡುವ ಸಂತೋಷ. ಯಾವುದೋ ಪ್ರೀತಿಯ ಕಾದಂಬರಿಯ ಅರ್ಧ ಓದನ್ನು ಎರಡು ದಿನದಲ್ಲಿ ಮುಗಿಸುವ ಆತುರ.
ಒಂದು ಸಲ ಹೀಗಾಯ್ತು.
ಇಂಥದ್ದೊಂದು ಶನಿವಾರ ತಾನೊಬ್ಬನೇ ಮನೆಯಲ್ಲಿ ಸಂಭ್ರಮಿಸುವಾ ಎಂದು ಎದ್ದಿದ್ದೇ ಮುಂಜಾನೆ 9ಕ್ಕೆ. ಸಧ್ಯ ಲ್ಯಾಪ್ ಟಾಪ್ ತೆಗೆದು ಇಶ್ಯೂ ಚೆಕ್ ಮಾಡುವ ಗೋಜು ಇರಲಿಲ್ಲ.
ಹೊರಗಡೆ ವಾತಾವರಣ ಸುಂದರವಾಗಿ ಕಾಣುತ್ತಿತ್ತು. ಇದೀಗ ತಾನೇ ಸ್ನಾನ ಮಾಡಿದ ಪ್ರಕೃತಿ ಮಾತೆಯಂತೆ ಹಚ್ಚಹಸಿರಾಗಿ ಕಂಗೊಳಿಸುತ್ತಿತ್ತು. ಊಟ ಮಾಡಿ ಹೀಗೆ ವಾಕ್ ಹೋಗಿ ಬರೋಣವೆಂದುಕೊಂಡೆ. ಟೇಂಪರೇಚರ್ 23 ತೋರಿಸುತ್ತಿತು. ವಾಕಿಂಗ ಲೇನ್‌ನಲ್ಲಿ ಯಾರೊಬ್ಬರೂ ಇಲ್ಲ. ಅದು ದೂರದಲ್ಲಿ ಅಮೇರಿಕಾದ ಲೇಡಿ ರನ್ನಿಂಗ್ … ಮಾಡಿಕೊಂಡು ಬರುತ್ತಿದ್ದಳು. ಹತ್ತಿರಕ್ಕೆ ಬಂದಾಗ ಹಾಯ…! ಎಂದು ಹಾಗೆಯೇ ಓಡುತ್ತಾ ಮರೆಯಾದಳು. ನಿತ್ಯ ಹೋಗುತ್ತಿದ್ದಷ್ಟು ದೂರ ಹೋಗಲು ಸಾಧ್ಯವಿಲ್ಲವೆಂದು ನಡೆಯುತ್ತಾ ಸಾಗಿದೆ.
ರಾತ್ರಿಗೆ ಏನು ಅಡುಗೆ ಮಾಡುವುದು? ಹೊಟ್ಟೆಯ ನೆನಪು ಮಾತ್ರ ಇರಲೇಬೇಕು. ಒಬ್ಬರೇ ಇದ್ದರೂ ಅಡುಗೆ ಇಬ್ಬರೂ ಇದ್ದರೂ ಅಡುಗೆ ಮಾಡಲೇಬೇಕು. ಅವಲಕ್ಕಿ ಮಾಡಿದರೇ ಭೇಷ್ ಅನಿಸಿತು. ಅದನ್ನು ಸುಲಭವಾಗಿ ಮಾಡಿದರಾಯ್ತು ಎಂದುಕೊಂಡೆ. ಪುನಃ ಲ್ಯಾಪ್ ಟಾಪ್ ಆನ್ ಮಾಡಿದೆ. ಹಾಗೆಯೇ, ಫೇಸುºಕ್ ಫ್ರೆಂಡ್‌ಲಿಸ್ಟ್‌ನಲ್ಲಿರುವ ಗೆಳೆಯ ಅವನ ಫ್ರೆಂಡ… ಗೆ ಕಾಮೆಂಟ್ ಹಾಕಿದ್ದಾ.
ಉಫ್!
ಅವಲಕ್ಕಿ ರಡಿಯಾಯಿತು.
ಹಾಗೆಯೇ ನನ್ನ ಬ್ಲಾಗ್ ಕೊಂಡಿಯನ್ನು ಓಪನ್ ಮಾಡಿದೆ. ಅಲ್ಲಿರುವ ಮುಂದಿನ ಬ್ಲಾಗ… ಕೊಂಡಿಯನ್ನು ಕ್ಲಿಕ್ಕಿಸಿದೆ. ಇನ್ನೊಂದು ಕನ್ನಡ ಕವನಗಳ ಬ್ಲಾಗ್ ಬಂತು. ಸಾಹಿತ್ಯಕ್ಕೆ ಸಂಬಂಧಿಸಿದ್ದು ಇನ್ನೊಂದು. ಪಂಡಿತ್ ಎಂಬುವವರು ಉತ್ತಮ ಪುಸ್ತಕ ವಿಮರ್ಶೆಗಳನ್ನು ಮಾಡಿದ್ದರು. ಭೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಬರೆದಿರುವುದನ್ನು ಪೂರ್ತಿ ಓದಿದೆ. ಓದುವುದಕ್ಕೆ ಸಮಯವಿದ್ದರೆ, ಅವರೆಲ್ಲರ ಅನುಭವಗಳನ್ನು ನಮ್ಮದಾಗಿಸಿಕೊಳ್ಳಬಹುದು. ವಾರಾಂತ್ಯಕ್ಕೆ ಇದಕ್ಕಿಂತ ಉತ್ತಮವಾದ ಸಂಗತಿ ಇನ್ನು ಏನಿದೆ?
ಶನಿವಾರದ ರಜೆ ಹೀಗೆ ಮುಗಿಯಿತು. ನಾಳೆ ಭಾನುವಾರ. 12 ಕ್ಕೆ .. ಗೆಟ್‌ಟುಗೆದರ್. ಆಫೀಸ್ ಗೆಳೆಯರೆಲ್ಲ ತಿಂಗಳಿಗೊಮ್ಮೆ ಒಟ್ಟಿಗೆ ಸೇರಿ ಕೆಲವು ಸಮಯವನ್ನು ಖುಷಿಯಾಗಿ ಕಳೆಯುವುದು. ನಾವುಗಳೇ ಮಾಡಿಕೊಂಡು ಬಂದಂಥ ವಿವಿಧ ಬಗೆಯ ಭಕ್ಷ್ಯಗಳನ್ನು ಹಂಚಿಕೊಂಡು ಒಟ್ಟಿಗೆ ತಿನ್ನುವುದು. ಈ ಭಾರಿಯ ನನ್ನ ಪಾಲಿನ ತಿನಿಸು ವೆನಿಲಾ ಐಸ್ ಕ್ರೀಮ….ನೆನಪಾಯಿತು.
ಎಲ್ಲವೂ ಲೆಕ್ಕ ಹಾಕಿದ ಹಾಗೇ ನಡೆಯಿತು. ಬೆನ್ನಿಗೇ ಮಾರನೆ ದಿನ ಸೋಮವಾರ ಬಂದೇ ಬಿಟ್ಟಿತು. ಶಾಲೆಗೆ ಹೋಗಲ್ಲ ಅಂತ ಹಠ ಮಾಡುವ ಮಗುವಿನಂತೆ ಮನಸ್ಸು ಚಂಡಿ ಹಿಡಿಯಿತು, ಆಫೀಸಿಗೆ ಹೋಗಲ್ಲ ಅಂತ. ಸಾರಿ ಸಾರಿ ಹೇಳಿಯಾದ ಮೇಲೆ, ಕ್ಯಾಲೆಂಡರ್ ಮೇಲೆ ಮತ್ತೆ ಶನಿವಾರ, ಭಾನುವಾರ ಕಂಡಾಗ… ಐದು ದಿನ ಕೆಲಸ ಮಾಡಿದರೆ ಮತ್ತೆ ಎರಡು ದಿನ ರಜೆ ಅಂತ ಮನಸ್ಸು ಕುಣಿದಾಡಿತು. ಅದೇ ಉತ್ಸಾಹವಾಗಿ, ಆತ್ಮವಿಶ್ವಾಸವಾಗಿ ಆಫೀಸಿಗೆ ಹೋಗಲು ಎದ್ದು ನಿಂತೆ.
ಕಣ್ಣಲ್ಲಿ ಮತ್ತೆ ರಜೆ ಸಿಗುವ ಆಸೆಯಲಿ…
ಸೌಮಿನಿ ಹನುಮಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್ ನ್ಯೂಸ್ ಕೊಟ್ಟ ಚಿತ್ರತಂಡ
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.