ಬಾರಣ್ಣಾ, ಎಷ್ಟು ಸಬ್ಜೆಕ್ಟ್ ಡುಮ್ಕಿ?
Team Udayavani, Aug 15, 2017, 6:00 AM IST
“ಬಾರಣ್ಣಾ! ಎಷ್ಟು ಸಬ್ಜೆಕ್ಟ್ ಹೋಗಿದೆ? ಎಷ್ಟನೇ ಅಟೆಂಪ್ಟ್?’ ಅಂತ ಒಬ್ಟಾತ ಕೇಳಿದ. “ರೆಗ್ಯುಲರ್ರೋ? ಪ್ರೈವೇಟೋ?’ ಎಂದು ಕೇಳಿದ ಇನ್ನೊಬ್ಬ. ಅವರ ಮಾತು ಕೇಳಿ ನನಗೆ ಒಂದು ರೀತಿಯ ಗಲಿಬಿಲಿಯಾಯಿತು.
ಬಿ.ಎಡ್ ಮುಗಿಸಿದ ಬಳಿಕ ತಕ್ಷಣವೇ ಸರ್ಕಾರಿ ನೌಕರಿ ಸಿಗದಿದ್ದುದರಿಂದ, ನಾನು ಭದ್ರಾವತಿಯ ಎಚ್.ಎಂ.ಸಿ ಟ್ಯುಟೋರಿಯಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಟ್ಯೂಶನ್ ಮಾಡುತ್ತಿದ್ದೆ. ಅದು ಓಲ್ಡ್‌ಟೌನ್‌ನಲ್ಲಿ ಇತ್ತು. ಅಲ್ಲಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಅವರು ಒಂದು ದಿನ ನನಗೆ ಜನ್ನಾಪುರದ ಬ್ರಾಂಚ್‌ಗೆ ಬರಲು ತಿಳಿಸಿದರು. ನಾನು ಆರು ಗಂಟೆಗೆ ಸರಿಯಾಗಿ ಜನ್ನಾಪುರದ ಬ್ರಾಂಚ್ ಆಫೀಸ್‌ಗೆ ಹೋದೆ. ಪ್ರಿನ್ಸಿಪಾಲರು ಇನ್ನೂ ಬಂದಿರಲಿಲ್ಲ. ಆದರೆ, ಸುಮಾರು 30-35 ವಿದ್ಯಾರ್ಥಿಗಳು ಅಲ್ಲಿ ಕಾಯುತ್ತಿದ್ದರು.
ನಾನು ಅಲ್ಲಿಗೆ ಹೋಗುತ್ತಿದ್ದಂತೆ ನಾಲ್ಕೈದು ವಿದ್ಯಾರ್ಥಿಗಳು ನನ್ನನ್ನು ಪ್ರಶ್ನಿಸತೊಡಗಿದರು. “ಬಾರಣ್ಣಾ! ಎಷ್ಟು ಸಬೆjಕ್ಟ್ ಹೋಗಿದೆ? ಎಷ್ಟನೇ ಅಟೆಂಪ್ಟ್?’ ಅಂತ ಒಬ್ಟಾತ ಕೇಳಿದ. “ರೆಗ್ಯುಲರ್ರೋ? ಪ್ರೈವೇಟೋ?’ ಎಂದು ಕೇಳಿದ ಇನ್ನೊಬ್ಬ. ಅವರ ಮಾತು ಕೇಳಿ ನನಗೆ ಒಂದು ರೀತಿಯ ಗಲಿಬಿಲಿಯಾಯಿತು. ತಕ್ಷಣ ಏನು ಹೇಳಬೇಕೆಂದು ಹೊಳೆಯಲಿಲ್ಲ. ನಾನು ಏನೂ ಮಾತಾಡದೆ ಸುಮ್ಮನೆ ಕುಳಿತೆ. ಅಷ್ಟರಲ್ಲಿ ಇನೊಬ್ಬ “ಏಯ್ ಬಕ್ರಾ, ಅಷ್ಟೂ ಗೊತ್ತಾಗಲ್ವೇನೋ? ಕೈಯಲ್ಲಿ ಕನ್ನಡ ಪುಸ್ತಕ ಕಾಣಾ¤ ಇಲ್ವಾ? ಕನ್ನಡಾನೇ ಹೋಗಿದೆ ಅಂದಮೇಲೆ ಇವನದು ಆಲ್ ಔಟ್ ಅನ್ಸುತ್ತೆ…’ ಅಂತ ಜೋರಾಗಿ ನಗುತ್ತಾ “ಲೋ ರಾಜು, ನಿನಗೆ ಜೊತೆಗೊಬ್ಬ ಸಿಕಾª ಕಣೋ’ ಅಂತಂದ. ಇನ್ನಬ್ಬ ನನ್ನನ್ನು ಸಮಾಧಾನ ಮಾಡುವವನಂತೆ- “ಹೆದರೊRàಬೇಡ. ಹೊಸ ಮೇಷ್ಟ್ರು ಬರ್ತಾರಂತೆ. ಸೆಪ್ಟೆಂಬರ್‌ನಲ್ಲಿ ಪಾಸ್ ಮಾಡ್ಕೊàಬಹುದು. ನಾವೆಲ್ಲ ನಿನ್ನ ಜೊತೆಗಿತೇìವೆ’ ಅಂದ. ನನಗೆ ಪರಿಸ್ಥಿತಿ ಪೂರ್ತಿ ಅರ್ಥವಾಯ್ತು. ಅಷ್ಟರಲ್ಲಿ ಪ್ರಾಂಶುಪಾಲರು ಬಂದರು. ಬೀಗ ತೆಗೆಯಲು ಹೇಳಿದ ಅವರು ನನಗೆ “ಬನ್ನಿ ಮೇಷ್ಟ್ರೇ’ ಅಂತ ಒಳಗೆ ಕರೆದರು.
ಪ್ರಾಂಶುಪಾಲರು ನನಗೊಂದು ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿ ತಾವೊಂದರಲ್ಲಿ ಕುಳಿತರು. ನಮ್ಮೆದುರು ಟ್ಯೂಶನ್‌ಗೆ ಬರುತ್ತಿದ್ದ ವಿದ್ಯಾರ್ಥಿಗಳು ಕುಳಿತರು. ಆಗ ಪ್ರಾಚಾರ್ಯರು- “ನೋಡಿ ವಿದ್ಯಾರ್ಥಿಗಳೇ, ಇವತ್ತಿನಿಂದ ಶ್ರೀ ರಾಮ ಸುಬ್ರಾಯ್ ಶೇಟ್ ಎಂಎ, ಬಿಎಡ್ ಇವರು ನಿಮಗೆ ಕನ್ನಡ, ಸೋಷಿಯಲ್ ಪಾಠ ಮಾಡ್ತಾರೆ. ನಮ್ಮ ಹಳೇನಗರದ ಎರಡೂ ಬ್ಯಾಚ್‌ನ ಎಲ್ಲಾ ಮಕ್ಕಳೂ ಪಾಸಾಗಿದ್ದಾರೆ. ಲಕ್ಷ್ಯ ಕೊಟ್ಟು ಪಾಠ ಕೇಳಿ. ಮೇಷ್ಟ್ರೇ, ನೀವು ಪಾಠ ಶುರು ಮಾಡಿ’ ಅಂದಾಗ ಮಕ್ಕಳೆಲ್ಲ ಪೆಚ್ಚಾದರು.
“ಸಾರ್…’ ಅಂತ ಅವರು ಏಳಲು ಮುಂದಾದಾಗ ನಾನದಕ್ಕೆ ಅವಕಾಶ ಕೊಡದೆ ಪಾಠ ಪ್ರಾರಂಭಿಸಿದೆ. ಕೆಲ ಹೊತ್ತಿನ ನಂತರ ಪ್ರಿನ್ಸಿಪಾಲರು “ಮೇಷ್ಟ್ರೇ! ನಾನಿನ್ನು ಬರ್ತೇನೆ. ನೀವು ಮುಂದುವರಿಸಿ’ ಅಂತ ಹೇಳಿ ಹೊರಟರು. ಆಗ ಕೆಲವು ವಿದ್ಯಾರ್ಥಿಗಳು “ಸಾರ್ ನಮ್ಮದು ತಪ್ಪಾಯ್ತು ಕ್ಷಮಿಸಿ’ ಅಂತ ಕಾಲಿಗೆ ಬೀಳಲು ಮುಂದೆ ಬಂದರು. ನಾನು ಅವರನ್ನು ತಡೆದು “ನೋಡಿ, ಯಾರ ಬಗ್ಗೆಯೂ ಸರಿಯಾಗಿ ತಿಳಿದುಕೊಳ್ಳದೆ ದುಡುಕಿ ಏನೇನೋ ಮಾತಾಡಬಾರದು. ನಿಮುª ಹುಡುಗಾಟದ ಬುದ್ಧಿ. ಗೊತ್ತಾಗದೇ ತಪ್ಪು ಮಾಡಿದ್ರಿ. ಇನ್ಮುಂದೆ ಈ ರೀತಿ ಮಾಡಬೇಡಿ. ಕೂತ್ಕೊಳ್ಳಿ, ಪಾಠ ಕೇಳಿ’ ಎಂದು ಸಮಾಧಾನ ಪಡಿಸಿದೆ. ನಂತರ ನಾನು ಯೋಚಿಸಿದೆ. ನನ್ನ ಮೈಕಟ್ಟು ಅವರಷ್ಟೇ ಇದೆ. ಅವರು ಹಾಕಿರುವಂಥದ್ದೇ ಬೆಲೆಯ ಪ್ಯಾಂಟು, ಶರ್ಟು. ಕೆಲವರು ನನಗಿಂತ ಎತ್ತರವಿದ್ದಾರೆ. ಹಾಗಾಗಿ, ನನ್ನನ್ನು ಶಿಕ್ಷಕ ಎಂದು ಒಪ್ಪಲು ಅಥವಾ ಗುರುತಿಸಲು ಅವರಿಗೆ ಸಾಧ್ಯವಾಗಿಲ್ಲ ಅನ್ನಿಸಿತು. ಆನಂತರ ಪ್ರತಿ ಹೊಸ ಬ್ಯಾಚಿಗೆ ಪಾಠ ಹೇಳಲು ಹೋಗುವಾಗ ಬಿ.ಎಡ್‌ನಲ್ಲಿ ಹೊಲಿಸಿಕೊಂಡ ಸೂಟ್ ಹಾಕಿಕೊಂಡೇ ಹೋಗುತ್ತಿದ್ದೆ. 1973ರ ವೇಳೆಯಲ್ಲಿ ಕೋಟು ಹಾಕುವುದೂ ಸಾಮಾನ್ಯವಾಗಿತ್ತು. ಈಗ ಟ್ಯುಟೋರಿಯಲ್ ನೋಡಿದೊಡನೆ ಹಳೆಯದೆಲ್ಲ ನೆನಪಾಗುತ್ತದೆ, ಕೈಯಲ್ಲಿ ಕನ್ನಡ ಬುಕ್ ಹಿಡ್ಕೊಂಡು ಬಂದಿದಾನೆ. ಅಂದ್ರೆ ಎಲ್ಲಾ ಸಬ್ಜೆಕ್ಟ್ನಲ್ಲೂ ಡುಮ್ಕಿ ಹೊಡೆದಿದ್ದಾನೆ ಎಂದೇ ಅರ್ಥ ಎಂದು ನನಗೆ ಸರ್ಟಿಫಿಕೆಟ್ ನೀಡಿದ್ದನ್ನು ನೆನಪಿಸಿಕೊಂಡರೆ ನಗು ಬರುತ್ತದೆ.
– ರಾಮಸುಬ್ರಾಯ ಶೇಟ್, ಚಿಕ್ಕಮಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.