ಒಳ್ಳೇದಾಗ್ಲಿ ಅಂತ ಬುದ್ಧಿ ಹೇಳಿದೀನಿ, ಅರ್ಥ ಮಾಡ್ಕೋ
Team Udayavani, Oct 2, 2018, 6:00 AM IST
ನಿಂಗೆ ನನ್ನಿಂದ ಎಷ್ಟು ನೋವಾಗಿದೆಯೋ, ನಿನ್ನನ್ನು ನೋಯಿಸಿದ್ದಕ್ಕೆ ಅದರ ಎರಡು ಪಟ್ಟು ಜಾಸ್ತಿ ನೋವು ನನಗಾಗಿದೆ. ಹಾಗಂತ ನಂಗೆ ನಿನ್ನನ್ನು ಬಿಟ್ಟು ಬದುಕೋ ಶಕ್ತಿ ಇಲ್ಲ ಅಂತಲ್ಲ. ಬದುಕಬಲ್ಲೆನೇನೋ. ಆದರೆ, ನಿನ್ನನ್ನ ಮನಸಾರೆ ಪ್ರೀತಿ ಮಾಡಿದೀನಿ. ಅಷ್ಟು ಸುಲಭವಾಗಿ ಹೇಗೆ ನಿನ್ನಿಂದ ದೂರ ಆಗೋದು.
ಲೇ ಚಿನ್ನ, ನಿಂಗೆಷ್ಟು ಕೊಬ್ಬು ನೋಡು? ಎಲ್ಲರ ಹತ್ರ ಮಾತಾಡೋಕೆ ಟೈಮಿದೆ, ನನ್ನತ್ರ ಮಾತಾಡೋಕೆ ಮಾತ್ರ ಟೈಮಿಲ್ಲ ಅಲ್ವಾ? ನಂಗೆ ನಿನ್ನ ಮೇಲೆ ತುಂಬಾ ಕೋಪ ಬಂದಿದೆ ಅಂತ ನಿಂಗೂ ಗೊತ್ತು. ಆದರೆ, ಅದರ ಹಿಂದಿರೋ ಪ್ರೀತಿ ನಿಂಗರ್ಥ ಅರ್ಥ ಆಗ್ತಾ ಇಲ್ಲ ಅಲ್ವಾ?
ನಾನು ಮಾಡಿದ ಒಂದೇ ಒಂದು ತಪ್ಪಿಗೆ, ನನ್ನಿಂದ ದೂರ ಆಗ್ಬೇಕು ಅಂತ ನೀನು ನಿರ್ಧಾರ ಮಾಡಿಬಿಟ್ಟೆ. ನೋಡೂ, ಕೆಟ್ಟ ಘಳಿಗೆಯಲ್ಲಿ ನಿನ್ನ ಮೇಲೆ ರೇಗಾಡಿಬಿಟ್ಟೆ. ಅದನ್ನೇ ಮನಸಲ್ಲಿಟ್ಟುಕೊಂಡು, ನೀನು ಈ ರೀತಿ ಶಿಕ್ಷಿಸುವುದು ಸರಿಯಲ್ಲ.
ನಿಂಗೆ ನನ್ನಿಂದ ಎಷ್ಟು ನೋವಾಗಿದೆಯೋ, ನಿನ್ನನ್ನು ನೋಯಿಸಿದ್ದಕ್ಕೆ ಅದರ ಎರಡು ಪಟ್ಟು ಜಾಸ್ತಿ ನೋವು ನನಗಾಗಿದೆ. ಹಾಗಂತ ನಂಗೆ ನಿನ್ನನ್ನು ಬಿಟ್ಟು ಬದುಕೋ ಶಕ್ತಿ ಇಲ್ಲ ಅಂತಲ್ಲ. ಬದುಕಬಲ್ಲೆನೇನೋ. ಆದರೆ, ನಿನ್ನನ್ನ ಮನಸಾರೆ ಪ್ರೀತಿ ಮಾಡಿದೀನಿ. ದೂರ ಆಗೋದು ಹೇಳಿದಷ್ಟು ಸುಲಭ ಅಲ್ಲ. ಇನ್ನೂ ಒಂದು ಮಾತು; ನಿನ್ನನ್ನು ಪ್ರೀತಿ ಮಾಡಿದ ಕ್ಷಣದಿಂದ ಬರೀ ನೋವಲ್ಲೇ ಕಳೆದಿದ್ದೀನಿ ಜೀವನಾನ. ನಿನ್ನ ಪ್ರೀತಿಯಲ್ಲಿ ನನಗೆ ಸಿಕ್ಕಿದ್ದು ಬರೀ ನೋವಿನ ಸಾಲು ಮಾತ್ರ. ಒಂದು ದಿನಾನೂ ನೀನು ನನ್ನನ್ನು ಸಂತೋಷವಾಗಿರೋಕೆ ಬಿಟ್ಟಿಲ್ಲ. ಆದರೂ, ಮೊನ್ನೆಯತನಕ ಒಮ್ಮೆಯೂ ನಾನು ನಿನ್ನ ಮೇಲೆ ರೇಗಾಡಿರಲಿಲ್ಲ. ಯಾಕಂದ್ರೆ, ನನಗೆ ನೀನಂದ್ರೆ ಇಷ್ಟ! ನಿನ್ನ ಜೊತೆಗಿದ್ದಾಗ ಅನುಭವಿಸಿದ ನೋವಿಗಿಂತ, ನೀ ದೂರಾದ ಮೇಲಿನ ನೋವು ನನ್ನನ್ನು ಜಾಸ್ತಿ ಕಾಡುತ್ತಿದೆ. ಏಳೇಳು ಜನ್ಮದಲ್ಲೂ ನೀನೇ ನನ್ನವಳಾಗು ಅಂತ ಕೇಳಿಕೋತಿಲ್ಲ. ಇರೋ ಈ ಜನ್ಮದಲ್ಲಿ ನನ್ನವಳಾಗು ಅಷ್ಟು ಸಾಕು.
ಇಷ್ಟೆಲ್ಲ ಹೇಳಿದ ಮೇಲಾದರೂ ನಿನ್ನ ಮನಸ್ಸು ಬದಲಾದರೆ, ನನ್ನ ಪ್ರೀತಿಯ ಆಳ ನಿಂಗೆ ಅರ್ಥ ಆದ್ರೆ, ಯಾವುದೇ ಹಿಂಜರಿಕೆಯಿಲ್ಲದೆ ಒಂದು ಕರೆ ಮಾಡು. ನನ್ನ ಪ್ರೀತಿ ಬೇಡವೇ ಬೇಡ ಅಂತ ತೀರ್ಮಾನಿಸಿದ್ದೇ ಆದರೆ, ದೂರಾಗಿಬಿಡು. ನಿಂಗೆ ಯಾವತ್ತೂ ತೊಂದರೆ ಕೊಡುವುದಿಲ್ಲ.
ಕೊನೆಯದಾಗಿ ಒಂದು ಮಾತು: ಯಾರಿಗೇ ಆಗ್ಲಿ ಇಷ್ಟೊಂದು ಹಠ ಒಳ್ಳೆಯದಲ್ಲ. ಈ ನಿನ್ನ ಹಠಾನೇ ಮುಂದೊಂದು ದಿನ ನಿಂಗೆ ಮುಳುವಾಗಬಹುದು. ಇನ್ನಾದ್ರೂ ಹಠವನ್ನ ಸ್ವಲ್ಪ ಕಡಿಮೆ ಮಾಡಿಕೋ. ನಿನ್ನ ಒಳ್ಳೆಯದಕ್ಕೆ ಇದನ್ನೆಲ್ಲ ಹೇಳಿದ್ದೇನೆ. ಅಷ್ಟಲ್ಲದೆ ಬೇರೆ ಯಾವ ಉದ್ದೇಶಾನೂ ನನಗಿಲ್ಲ. ಇದರ ಮೇಲೆ ನಿನ್ನಿಷ್ಟ…
ಎಸ್.ಕೆ ಸಾಗರ್, ಸಿಂಧನೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.