ಫೇಸ್ ಟು ಫೇಸ್ ಆದಾಗ ಏನಂತ ಮಾತಾಡಿಸ್ಲಿ?
Team Udayavani, Jul 24, 2018, 6:00 AM IST
ಇಡೀ ದಿನವನ್ನ ಅಂದರೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಮಾತ್ರ- ನಿನ್ನೊಂದಿಗೆ ಕಳೆಯಬೇಕು ಅನ್ನೋದು ನನ್ನಾಸೆ. ಪಾರ್ಕೊಂದರ ಕಲ್ಲು ಬೆಂಚಿನ ಮೇಲೆ, ಮಾಲ್ ಹೊರಗಿನ ಸಿಮೆಂಟ್ ಕಟ್ಟೆಯ ಮೇಲೆ ನಿನಗೆ ಅಂಟಿಕೊಂಡು ಕುಳಿತು ಮನದ ಮಾತುಗಳನ್ನೆಲ್ಲ ಹೇಳ್ಕೊಬೇಕು ಅಂತ ಆಸೆ ನನಗೆ…
ಡಿಯರ್ ಕಿರಣ್,
ನಮ್ಮ ಮುಂದಿನ ಬದುಕಿನ ಬಗ್ಗೆ ನಿನ್ ಜೊತೆ ಮಾತಾಡ್ಬೇಕಾಗಿದೆ. ನಾಡಿದ್ದು ಸಿಕ್ಕಾಗ ಖುಲ್ಲಂಖುಲ್ಲಾ ಈ ವಿಷಯವನ್ನು ಡೀಟೇಲ್ ಆಗಿಯೇ ಮಾತಾಡೋಣ. ಸ್ವಲ್ಪ ಜಾಸ್ತೀನೇ ಟೈಮ್ ಅಡ್ಜಸ್ಟ್ ಮಾಡಿಕೊಂಡು ಬಾ. ನಿಂಗೆ ಸೀರಿಯಸ್ನೆಸ್ ಬರುತ್ತೆ ಅಂತ ಇಷ್ಟು ದಿನ ಕಾದು ಕಾದು ಸುಸ್ತಾಯ್ತು. ನಿನಗೆ ಈ ಬಗ್ಗೆ ಗ್ಯಾನ ಇದೆ ಅಂತಾನೇ ಅನ್ನಿಸ್ತಾ ಇಲ್ಲ. ನೀನು ಫೋನ್ ನಲ್ಲಿ ಬರೀ ಕಾಗೆ ಹಾರಿಸ್ತೀಯ. ಏನ್ ಕೇಳಿದ್ರೂ- “ಮಾಡೋಣ ಬಿಡೂ, ಆಗುತ್ತೆ ಬಿಡೂ, ಎಲ್ಲ ಸರಿ ಹೋಗುತ್ತೆ ಬಿಡು… ‘, ಇಂಥ ಮಾತುಗಳನ್ನ ನಾಲ್ಕು ವರ್ಷಗಳಿಂದ ಕೇಳಿ ಕೇಳಿ ಹುಚ್ಚು ಹಿಡಿದಿದೆ. ಮನೆಯಲ್ಲಿ ಮದುವೆಗೆ ತಯಾರಿ ನಡೆಸಿದ್ದಾರೆ ಕಣೋ. ಆಗಲೇ ಹುಡುಗನ ಬೇಟೆ ಶುರುವಾಗಿದೆ.ಅಕಸ್ಮಾತ್ ತುಂಬಾ ಚೆನ್ನಾಗಿರೋ ಹುಡುಗ ಬಂದುಬಿಟ್ರೆ… ಒಂದೇ ಒಂದು ಕ್ಷಣದ ಮಟ್ಟಿಗೆ ನೀನು ಮರೆತುಹೋಗಿ ನಾನು ಆ ಹೊಸ ಸಂಬಂಧವನ್ನು ಒಪ್ಪಿಕೊಂಡುಬಿಟ್ರೆ …
ನನ್ನ ಆತಂಕಗಳೆಲ್ಲಾ ಇಂಥವೇ. ಇದನ್ನೆಲ್ಲ ನಿನ್ ಜೊತೆ ಮಾತಾಡ್ಬೇಕು. ಪ್ಲೀಸ್, ಯಾರೂ ಇಲ್ಲದ ಜಾಗಕ್ಕೆ ನನ್ನ ಕರೆದುಕೊಂಡು ಹೋಗು. ದರಿದ್ರ ಮೊಬೈಲು ತರಬೇಡ. ಅದೊಂದು ಇದ್ರೆ ನೀನು ಜೊತೆಗಿದ್ದೂ ಇಲ್ಲದಂತೆ. ಮೆಸೇಜ್ ಕುಟ್ಟುತ್ತ ಕುಳಿತುಬಿಡ್ತೀಯಾ. ನಿನ್ನ ಸೋಮಾರಿತನವನ್ನ ನಾನು ಪ್ರಶ್ನಿಸಬೇಕು. ನಾನೆಷ್ಟು ಪ್ರೀತಿಸ್ತೀನಿ ಅಂತ ನಿನ್ನಲ್ಲಿ ಹೇಳ್ಕೊಳ್ಬೇಕು. ನನ್ನ ಮಾತುಗಳು ಅರ್ಥವಾದ್ರೂ ಪೆಕರನಂತೆ ಕೂತಿರಿ¤àಯಲ್ಲ; ಆಗ ನಿನ್ನ ತಲೆ ಮೇಲೆ ಮೊಟಕಬೇಕು. ನಿನ್ನ ಜೊತೆ ಸುತ್ತಬೇಕು . ಬೈಕು ಬೋರಾದರೆ ಕಾಲು ನಡಿಗೆ, ನಿನ್ನೊಂದಿಗೆ ಹೆಜ್ಜೆ ಹಾಕುವುದಕ್ಕಿಂತ ದೊಡ್ಡ ಖುಷಿ ಬೇರೆ ಏನಿದೆ ನನಗೆ?ಬೇಕಾದರೆ ಒಂದೂ ಮಾತಿಲ್ಲದೆ ಸಂಜೆಯವರೆಗೂ ನಿನ್ನ ಕೈ ಹಿಡಿದುಕೊಂಡು ನಡೆಯಬಲ್ಲೆ. ಅಲ್ಲಿ ನಿನ್ನ ಕಳ್ಳ ನೋಟ, ನನ್ನ ಹುಸಿಮುನಿಸು ಎಲ್ಲವೂ ಅದೆಷ್ಟು ಸೂಪರ್ ಅಲ್ವಾ?
ನಾಡಿದ್ದು ನೀನು ಸಿಕ್ಕಾಗ ಹೇಗೆ ಮಾತಾಡಬೇಕು ಅಂತ ಕನ್ನಡಿ ಮುಂದೆ ಈಗಾಗಲೇ ರಿಹರ್ಸಲ್ ಮಾಡಿ ಆಗಿದೆ.ಆದ್ರೆ ನೀನು ಎದುರಾದಾಗ ಏನು ಮಾಡ್ಬೇಕು ಅಂತಾನೇ ತಿಳೀತಿಲ್ಲ. ನಮಸ್ಕಾರ ಅನ್ನಲ? ಹೇಗಿದ್ದೀಯ ಅನ್ನಲ? ಹೇಳಿದ ಸಮಯಕ್ಕಿಂತ ಇಪ್ಪತ್ತು ನಿಮಿಷ ಮೊದಲೇ ಬಂದಿದ್ದರೂ, ಏನು ಇಷ್ಟು ಲೇಟು ಅಂದುಬಿಡಲ?ಬನ್ರಿ, ನಿಮ್ಗೆನೆ ಕಾಯ್ತಿದ್ದೆ ಅನ್ನಲ?ಅಥವಾ ಹಳೇ ಕಾಲದ ಹುಡುಗೀರ ಥರಾ ತಲೆತಗ್ಗಿಸಿ ನಿಂತು ಬಿಡಲಾ?ಅಥವಾ… ಹೋಗು, ನಿಜಕ್ಕೂ ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ ನನಗೆ…
ನೋಡೂ, ಈಗಾದ್ರೂ ನೀನು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡು. ಹುಡುಗನಿಗೆ ಕೆಲಸ ಇಲ್ಲ ಅಂತಾದ್ರೆ ಯಾವ ಸಂಬಂಧವೂ ಬೆಳೆಯೋದಿಲ್ಲ. ನಾಳೆ ನೀನು ದೊಡ್ ಮನುಷ್ಯ ಆಗಬಹುದು. ಭಾಳಾ ದೊಡ್ ಸಾಧನೆ ಮಾಡಬಹುದು. ಆದ್ರೆ ಈಗ ಖಾಲಿ ಕೈಲಿ ಕೂತ್ಕೊಬಾರ್ದು. ನನ್ನ ಕೈ ಹಿಡಿಯೋ ಹುಡುಗ ಕೈ ತುಂಬಾ ಸಂಪಾದನೆ ಮಾಡ್ಲಿ ಅಂತಾನೆ ಎಲ್ಲಾ ಹುಡುಗೀರೂ ಆಸೆಪಡ್ತಾರೆ. ಅಂಥವರ ಪೈಕಿ ನಾನೂ ಒಬ್ಬಳು ಅಂತ ನಿನಗೆ ಬಿಡಿಸಿ ಹೇಳಬೇಕಿಲ್ಲ ತಾನೇ?
ದಿಲ್ ಸೆ
ಮಾಧವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.