ನಿನ್ನನ್ನು ಸಂಪರ್ಕಿಸುವ ಮಾರ್ಗ ಯಾವುದು?

Team Udayavani, Jul 30, 2019, 3:00 AM IST

nina-sampa

ನೀನು ಪತ್ರದೊಂದಿಗೆ ನನಗಾಗಿ ಎರಡು ಸಾಲುಗಳ ಕವನವನ್ನು ಗೀಚತೊಡಗಿದಾಗ, ನಾನು ಸುಮ್ಮನಾಗಲಿಲ್ಲ. ಅದಕ್ಕೆ ಉತ್ತರವೆಂಬಂತೆ, ನಿನಗಾಗಿ ಕವಿತೆ ಬರೆದೆ. ಪ್ರೀತಿಯ ಇವನೇ, ನಿನ್ನಂತೆ ಪ್ರೇಮಪತ್ರದ ಅಂಕಣವನ್ನು ಹವ್ಯಾಸಕ್ಕಾಗಿ ಬರೆಯುತ್ತಿದ್ದವಳು, ನಿನ್ನಪತ್ರಗಳನ್ನು ಓದಿ ಮನಸೋತೆ. ಅಂದಿನಿಂದ ನಾನು ಬರೆಯುವ ಪ್ರೇಮ ಪತ್ರಗಳು ನಿನಗಾಗೇ ಮೀಸಲಾದವು. ನೀನು ಕೂಡ ಅದಕ್ಕೆ ಸಮ್ಮತಿಯೆಂಬಂತೆ ಮುಂಚಿಗಿಂತ ಹೆಚ್ಚು ಅಂದವಾಗಿ ಪತ್ರಗಳನ್ನು ಬರೆಯಲು ಶುರು ಮಾಡಿದೆ.

ಎಲ್ಲಕ್ಕಿಂತ ಭಿನ್ನವೆಂಬಂತೆ ನಮ್ಮ ಪ್ರೀತಿ, ಪತ್ರದಲ್ಲೇ ಸಾಗಲು ಶುರುವಾಯಿತು. ಒಬ್ಬರನ್ನೊಬ್ಬರು ಕಾಣದೆ, ಭೇಟಿಯಾಗದೆ ನಮ್ಮದೇ ಕಲ್ಪನೆಯೆಂಬಂತೆ ಇಬ್ಬರೂ ಪತ್ರ ಬರೆಯತೊಡಗಿದೆವು. ನನ್ನ ಸ್ನೇಹಿತೆಯರ ಮುಂದೆ ನಮ್ಮ ಪ್ರೀತಿಯ ಬಗ್ಗೆ ಹೇಳಿದಾಗ ಅವರಿಗೇನೋ ಹೊಟ್ಟೆಕಿಚ್ಚು. ಆದರೂ, “ಎಷ್ಟು ಲಕ್ಕಿ ನೀನು, ಇಷ್ಟು ಚೆನ್ನಾಗಿ ಪತ್ರ ಬರೆಯೋ ಹುಡುಗ ಇನ್ನು ನಿನ್ನನ್ನು ಎಷ್ಟು ಪ್ರೇಮಿಸಬಹುದು’ ಎಂದೆಲ್ಲ ಹೇಳತೊಡಗಿದರು.

ನೀನು ಪತ್ರದೊಂದಿಗೆ ನನಗಾಗಿ ಎರಡು ಸಾಲುಗಳ ಕವನವನ್ನು ಗೀಚತೊಡಗಿದಾಗ, ನಾನು ಸುಮ್ಮನಾಗಲಿಲ್ಲ. ಅದಕ್ಕೆ ಉತ್ತರವೆಂಬಂತೆ, ನಿನಗಾಗಿ ಕವಿತೆ ಬರೆದೆ. ಪತ್ರದಲ್ಲೇ ನಾವಿಬ್ಬರೂ ಮೊದಲು ಭೇಟಿಯಾಗಿ, ಮದುವೆಯಾಗಿ, ಪ್ರೀತಿ ಲಹರಿ ಸಾಗುವ ಭಾವನೆಗಳು ಪ್ರಕಟವಾದವು.ರೇಖಾಗಣಿತ, ವಿಜ್ಞಾನ, ಪ್ರಕೃತಿ, ಕನ್ನಡಾಂಬೆ, ಸಿನಿಮಾತಾರೆ,ಆಭರಣಗಳು, ಪುಸ್ತಕ, ಗಣಕಯಂತ್ರ, ಅಡುಗೆ, ಕ್ರಿಕೆಟ್‌ ಹೀಗೆ ನಾನಾ ವಿಷಯಗಳನ್ನಿಟ್ಟುಕೊಂಡು ಪ್ರೇಮಪತ್ರ ಬರೆಯುತ್ತ, ಹರಿಯುತ್ತ ಸಾಗಿತ್ತು ನಮ್ಮ ಪ್ರೀತಿಯ ಕಾವ್ಯಧಾರೆ. ನಿನ್ನ ಹೆಸರು, ಹವ್ಯಾಸ, ಇತ್ಯಾದಿ ವಿಷಯಗಳನ್ನು ಬರೆಯುತ್ತಿದ್ದ ಎರಡು ಸಾಲುಗಳಲ್ಲಿ ಅಡಗಿಸಿ, ಪದಬಂಧ ಬಿಡಿಸುವುದನ್ನು ಕಲಿಸಿದೆ ನನಗೆ.

ಹೀಗೆ ಸಾಗುತ್ತಿದ್ದ ನಮ್ಮ ಪತ್ರ ವ್ಯವಹಾರ, ನಾಲ್ಕು ವಾರಗಳಿಂದ ನಿಂತಿದೆಯಲ್ಲ ಗೆಳೆಯ? ಪ್ರತಿ ಬಾರಿ ನಿನ್ನ ಪತ್ರ ಓದಲು ಹಾತೊರೆಯುತ್ತಿದ್ದ ಮನಸ್ಸು ಈಗ ಪತ್ರವಿಲ್ಲದೇ ಕಂಗಾಲಾಗಿದೆ. ನಿನ್ನನ್ನು ಸಂಪರ್ಕಿಸುವ ಬೇರೆ ವಿಧಾನವೇ ತಿಳಿಯದಾಗಿದೆ. ನಿನ್ನ ನಿಜವಾದ ಹೆಸರು, ವಿಳಾಸ, ಫೇಸ್‌ಬುಕ್‌ ಐಡಿ, ಇ ಮೇಲ್‌, ವಾಟ್ಸಾಪ್‌ ನಂಬರ್‌ ಯಾವುದನ್ನೂ ನಾನು ಅರಿಯೆ. ನಾನು ಬರೆದ ಹಿಂದಿನ ಎರಡು ಪತ್ರದಲ್ಲಿ ನನ್ನ ಮೊಬೈಲ್‌ ಸಂಖ್ಯೆಯನ್ನು ಕವನದ ಸಾಲಲ್ಲಿ ಅಡಗಿಸಿದ್ದೇನೆ. ಸಾಧ್ಯವಾದರೆ, ಒಂದು ಕರೆ ಮಾಡು.

ಇಂತಿ ನಿನ್ನ ಕರೆಗಾಗಿ ಕಾಯುತ್ತಿರುವ,
ಉಲೂಚಿ
* ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

Ligament pain: ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು; ವಿಶ್ರಾಂತಿಗೆ ವೈದ್ಯರ ಸೂಚನೆ

Ligament pain: ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು; ವಿಶ್ರಾಂತಿಗೆ ವೈದ್ಯರ ಸೂಚನೆ

ಮಂಟಪದಲ್ಲಿ ಡ್ಯಾನ್ಸ್‌ ಮಾಡಿದ ವರ.. ಕೋಪಗೊಂಡು ಮದುವೆಯನ್ನೇ ರದ್ದು ಮಾಡಿದ ವಧುವಿನ ತಂದೆ

ಮಂಟಪದಲ್ಲಿ ಡ್ಯಾನ್ಸ್‌ ಮಾಡಿದ ವರ.. ಕೋಪಗೊಂಡು ಮದುವೆಯನ್ನೇ ರದ್ದು ಮಾಡಿದ ವಧುವಿನ ತಂದೆ

Naxalism: ಉಡುಪಿ ಡಿಸಿ ಕಚೇರಿಯಲ್ಲಿ ಶರಣಾದ ನಕ್ಸಲ್‌ ತೊಂಬಟ್ಟು ಲಕ್ಷ್ಮೀ

Naxalism: ಉಡುಪಿ ಡಿಸಿ ಕಚೇರಿಯಲ್ಲಿ ಶರಣಾದ ನಕ್ಸಲ್‌ ತೊಂಬಟ್ಟು ಲಕ್ಷ್ಮೀ

WPL 2025: UP Warriorz captain Alyssa Healy out of the tournament

WPL 2025: ಯುಪಿ ವಾರಿಯರ್ಸ್‌ ನಾಯಕಿ ಅಲಿಸಾ ಹೀಲಿ ಕೂಟದಿಂದ ಔಟ್

3

Bengaluru: ಡಿಜಿಟಲ್‌ ಅರೆಸ್ಟ್;  40 ಲಕ್ಷ ವಂಚನೆ

C.K. Nayudu Award: BCCI Lifetime Achievement Award to Sachin Tendulkar

C.K. Nayudu Award: ಸಚಿನ್‌ ತೆಂಡೂಲ್ಕರ್‌ ಅವರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ

muzaf

Muzaffarpur: ಮಹಾಕುಂಭಮೇಳದಿಂದ ಮರಳುತ್ತಿದ್ದವರ ಕಾರು ಪಲ್ಟಿ; ಐವರು ನೇಪಾಳಿ ಪ್ರಜೆಗಳು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Ligament pain: ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು; ವಿಶ್ರಾಂತಿಗೆ ವೈದ್ಯರ ಸೂಚನೆ

Ligament pain: ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು; ವಿಶ್ರಾಂತಿಗೆ ವೈದ್ಯರ ಸೂಚನೆ

ಮಂಟಪದಲ್ಲಿ ಡ್ಯಾನ್ಸ್‌ ಮಾಡಿದ ವರ.. ಕೋಪಗೊಂಡು ಮದುವೆಯನ್ನೇ ರದ್ದು ಮಾಡಿದ ವಧುವಿನ ತಂದೆ

ಮಂಟಪದಲ್ಲಿ ಡ್ಯಾನ್ಸ್‌ ಮಾಡಿದ ವರ.. ಕೋಪಗೊಂಡು ಮದುವೆಯನ್ನೇ ರದ್ದು ಮಾಡಿದ ವಧುವಿನ ತಂದೆ

Naxalism: ಉಡುಪಿ ಡಿಸಿ ಕಚೇರಿಯಲ್ಲಿ ಶರಣಾದ ನಕ್ಸಲ್‌ ತೊಂಬಟ್ಟು ಲಕ್ಷ್ಮೀ

Naxalism: ಉಡುಪಿ ಡಿಸಿ ಕಚೇರಿಯಲ್ಲಿ ಶರಣಾದ ನಕ್ಸಲ್‌ ತೊಂಬಟ್ಟು ಲಕ್ಷ್ಮೀ

Chikkaballapura: ಸಿಎಂ ಸಿದ್ದರಾಮಯ್ಯ ಭೇಟಿ ದಿಡೀರ್ ರದ್ದು

Chikkaballapura: ಸಿಎಂ ಸಿದ್ದರಾಮಯ್ಯ ಭೇಟಿ ದಿಢೀರ್ ರದ್ದು

WPL 2025: UP Warriorz captain Alyssa Healy out of the tournament

WPL 2025: ಯುಪಿ ವಾರಿಯರ್ಸ್‌ ನಾಯಕಿ ಅಲಿಸಾ ಹೀಲಿ ಕೂಟದಿಂದ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.