ದಾರಿ ಯಾವುದಯ್ಯಾ ಅವಸರಕೆ?
Team Udayavani, Jul 30, 2019, 3:00 AM IST
ಪ್ರಿನ್ಸ್‌ಟನ್‌ನಲ್ಲಿ ಒಂದಾನೊಂದು ಕಾಲದಲ್ಲಿ ದಿನನಿತ್ಯ ಪಾರ್ಟಿಗಳು ನಡೆಯುತ್ತಿದ್ದವು. ಅಲ್ಲಿನ ಪೊ›ಫೆಸರ್‌ಗಳು ಆಗಿಂದಾಗ್ಗೆ ಪಾರ್ಟಿ ಏರ್ಪಡಿಸಿ ತಮ್ಮ ಸಹೋದ್ಯೋಗಿಗಳನ್ನು ಆಮಂತ್ರಿಸುತ್ತಿದ್ದರು. ಗಣಿತಜ್ಞ ಜೆ.ಡಬ್ಲ್ಯು. ಅಲೆಕ್ಸಾಂಡರ್, ಒಮ್ಮೆ ಬೀಚ್ ಪಾರ್ಟಿ ಏರ್ಪಡಿಸಿ, ತನ್ನ ಮನೆಯ ಅಂಗಳದಲ್ಲಿ ಲೋಡ್‌ಗಟ್ಟಲೆ ಮರಳು ಹಾಕಿಸಿದ್ದನಂತೆ.
ಪ್ರಿನ್ಸ್‌ಟನ್‌ನಲ್ಲಿ ಎಲ್ಲ ಪಾರ್ಟಿಗಳದ್ದು ಒಂದು ತೂಕವಾದರೆ, ಗಣಿತಜ್ಞ ಜಾನ್ ಫಾನ್ ನೊಯ್ಮಾನ್ ಏರ್ಪಡಿಸುತ್ತಿದ್ದ ಪಾರ್ಟಿಗಳದ್ದೇ ಒಂದು ತೂಕ. ಅವು ಯೂನಿವರ್ಸಿಟಿಯ ಕ್ಯಾಂಪಸ್ ಒಳಗೆ ಮಾತ್ರವಲ್ಲ, ಜಗತ್ತಿನ ಪಂಡಿತವಲಯದಲ್ಲೇ ಹೆಸರುವಾಸಿ! ನೊಯ್ಮಾನ್‌ನ ಪಾರ್ಟಿಗಳಲ್ಲಿ ಹತ್ತುಹಲವು ಮಂದಿ ಸೇರುತ್ತಿದ್ದರು. ಸಂಗೀತ, ಮದ್ಯ, ಹರಟೆ, ನಗುವಿಗೆ ಅಲ್ಲಿ ಕೊರತೆಯೇ ಇರಲಿಲ್ಲ. ಆತನ ಪಾರ್ಟಿಗಳಲ್ಲಿ ಕೇವಲ ಹಿರಿಯರು ಮಾತ್ರವಲ್ಲ, ತರುಣ ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೂ ಆಮಂತ್ರಣವಿರುತ್ತಿತ್ತು.
ಆಮಂತ್ರಣ ಇದೆ ಎಂದಾದರೆ ಯಾರೊಬ್ಬರೂ ಆ ಪಾರ್ಟಿಗಳಿಗೆ ಗೈರಾಗುತ್ತಿರಲಿಲ್ಲ. ಮೂಗುಮಟ್ಟ ಮದ್ಯ ಸಮಾರಾಧನೆಯಾದ ಮೇಲೆ ಕೆಲವರಿಗೆ ತಮ್ಮ ಮನೆಯ ದಾರಿ ಕಾಣುತ್ತಿರಲಿಲ್ಲ. ಪಾರ್ಟಿ ಮುಗಿಸಿ ಮನೆಗೆ ಹೊರಟವರು ದಾರಿ ತಿಳಿಯದೆ ತಿರುತಿರುಗಿ ಸುಸ್ತಾದರೆ, ಅವರನ್ನು ರಾತ್ರಿ ಉಳಿಸಿಕೊಂಡು ಬೆಳಗ್ಗೆ ಕಳಿಸಿಕೊಡುವ ವ್ಯವಸ್ಥೆಯೂ ನೊಯ್ಮಾನ್‌ನಲ್ಲಿತ್ತು. ಅದಕ್ಕೆಂದೇ ತನ್ನ ಮನೆಯ ಮಾಳಿಗೆಯಲ್ಲಿ ಒಂದು ದೊಡ್ಡ ಹಾಲ್ ಅನ್ನು ಮೀಸಲಿಟ್ಟಿದ್ದ ಆತ!
ಒಮ್ಮೆ ಹಾಗೆ ಪಾರ್ಟಿ ಮುಗಿದ ಮೇಲೆ, ಮಾಳಿಗೆಯಲ್ಲಿ ಮಲಗಿದ್ದ ಒಬ್ಬ ತರುಣ ಸಂಶೋಧಕ, ನೊಯ್ಮಾನ್ ಬಳಿ ಬಂದು, ಮಲಗಿದ್ದ ಅವನನ್ನು ಎಬ್ಬಿಸಿ, “ಇಲ್ಲಿ ಹತ್ತಿರದಲ್ಲೆಲ್ಲಾದರೂ ಮೂತ್ರ ವಿಸರ್ಜನೆ ಮಾಡಲು ಜಾಗ ಇದೆಯಾ?’ ಎಂದು ಕೇಳಿದನಂತೆ. ನೊಯ್ಮಾನ್, “ನಮ್ಮ ಮನೆಯಲ್ಲಿ ಅದಕ್ಕಂತಲೇ ಒಂದು ಕೋಣೆಯನ್ನು ಮೀಸಲಿರಿಸಿದ್ದೇವೆ. ನೀವು ಅಲ್ಲಿಗೆ ಹೋಗಬಹುದು’ ಎಂದು ಟಾಯ್ಲೆಟ್‌ನ ದಾರಿ ತೋರಿಸಿದನಂತೆ.
* ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.