ಹೇಳ್ರೀ ನನ್ನ ಕಂಡ್ರೆ ನಿಮಗೇನನ್ನಿಸುತ್ತೆ?
ಗಡಿಬಿಡಿ ಮಾಡದೆ ಗುಟ್ಟಾಗಿ ಹೇಳಿಬಿಡಿ
Team Udayavani, Sep 22, 2020, 8:33 PM IST
ಸಾಂದರ್ಭಿಕ ಚಿತ್ರ
ಕಳೆದವಾರವಿಡೀ ಫೇಸ್‌ಬುಕ್‌ನಲ್ಲಿ ಎಲ್ಲರದ್ದೂ ಒಂದೇ ಪ್ರಶ್ನೆ: “ನನ್ನಕಂಡ್ರೆ, ನನ್ನ ಹೆಸರು ಬೆಂಗಳೂರು ಕೇಳಿದ್ರೆ, ಆ ಕ್ಷಣಕ್ಕೆ ನಿಮಗೆ ಏನನ್ನಿಸ್ತದೆ?’ ಪ್ರತಿಯೊಂದು ಪ್ರಶ್ನೆಗೂ ತರಹೇವಾರಿ ಉತ್ತರಗಳು ಬಂದವು ಎಂಬುದು ಸ್ವಾರಸ್ಯದ ಸಂಗತಿ. ತನ್ನ ವಿಷಯವಾಗಿ ಇನ್ನೊಬ್ಬರು ಏನೆನ್ನಬಹುದು ಎಂದು ತಿಳಿಯುವಕುತೂಹಲ ಪ್ರತಿಯೊಬ್ಬರಿಗೂ ಇರುತ್ತದಲ್ಲಯಾಕೆ?
ಕಲ್ಪಿಸಿಕೊಳ್ಳಿ. ಹೊಸದಾಗಿ ಮದುವೆಯಾಗಿದ್ದೀರಿ. ಆಫೀಸಿನಿಂದ ಆಗಷ್ಟೇ ಮನೆಗೆ ಬಂದು, ಹೆಂಡತಿ ನಗುನಗುತ್ತಾ ತಂದುಕೊಟ್ಟ ಬಿಸಿಬಿಸಿ ಕಾಫಿ ಹೀರುತ್ತಿದ್ದೀರಿ. ಪಕ್ಕದಿಂದ ರೀ… ಎಂಬ ಸ್ವರ. ತಲೆಯೆತ್ತಿ ನೋಡಿದರೆ ನಿಮ್ಮಾಕೆ ನುಲಿಯುತ್ತಾ ನಾನು ಹ್ಯಾಗೆಕಾಣಿ¤àನ್ರೀ ಎನ್ನುತ್ತಾಳೆ. ಸಣ್ಣದಾಗಿ ಶಿಳ್ಳೆ ಹೊಡೆಯುತ್ತಾ ಸೂಪರ್ ಎಂದು ಉದ್ಗಾರವೆತ್ತುತ್ತೀರಿ. ಅಷ್ಟೇನಾ?… ಈ ಡ್ರೆಸ್ ನನಗೆ ಹ್ಯಾಗೆಕಾಣಿ¤ದೆ ಹೇಳಿ ಅಂದ್ರೆ… ನಿಂಗೇನ್ ಚಿನ್ನಾ, ಯಾವ ಡ್ರೆಸ್ ಹಾಕಿದ್ರೂ ಸೂಪರ್ ಎನ್ನುತ್ತೀರಿ. ಹಾಕದಿದ್ರೂ… ಎಂಬ ತುಂಟಮಾತುಕಣ್ಣಲ್ಲಿಕಂಡು, ತುಟಿಯಲ್ಲಿ ನಿಂದುಕೆನ್ನೆಕೆಂಪಾಗಿಸುತ್ತದೆ. ಇರಲಿ ಬಿಡಿ, ನಾವಂತೂ ತಪ್ಪು ತಿಳಿಯುವುದಿಲ್ಲ, ಪಾಪ, ನೀವೇನು ಮಾಡುತ್ತೀರಿ? ಇನ್ನೊಂದು ಚಿತ್ರ,8-10 ವರ್ಷಗಳ ನಂತರದ್ದು ಎನ್ನಿ. ಅದೇ ಸೀನು. ಆಫೀಸಿನಿಂದ
ಆಗಷ್ಟೇ ಮನೆಗೆ ಬಂದು ಅದೇಕಾಫಿ, ಹೀರುತ್ತಾ ಸುಧಾರಿಸಿಕೊಳ್ಳುತ್ತಿದ್ದೀರಿ. ಪಕ್ಕದಿಂದ ಅದೇ ಉಲಿ. ತಣ್ಣಗೆ ಹ್ಮ್ ಚೆನ್ನಾಗಿ ಕಾಣ್ತಿನಿ ಎಂದು ಸುರಿ ಕಾಫಿಯಲ್ಲಿಮುಳುಗುತ್ತೀರಿ. ಮತ್ತೆ ಅದೇ ಪ್ರಶ್ನೆ. ಅಷ್ಟೇನಾ… ಸರಿಯಾಗಿ ನೋಡಿ ಹೇಳ್ರೀ, ಹ್ಯಾಗೆ ಕಾಣ್ತೀನಿ – ಈ
ಬಾರಿ ಬೇಡಿಕೆ ಗದರಿಕೆಯಾಗಿದೆ. ನಿಮಗೋ, ಆಗಷ್ಟೇ ಆಫೀಸಿನಲ್ಲಿ ಮಂಗಳಾರತಿಯಾಗಿದೆ. ನಿಮ್ಮ “ಸ್ಮಾರ್ಟ್’ ಕೆಲಸಕ್ಕೆ ಬಾಸ್ ಸಿಕ್ಕಾಪಟ್ಟೆ ರೇಗಾಡಿದ್ದುಕಿವಿಯಲ್ಲಿನ್ನೂ ಗುಂಯ್ಯುಡುತ್ತಿದೆ – ಅವನೂ ಹೀಗೇಕೇಳಿದ್ದ – ಏನ್ರೀ, ನಿಮ್‌ಕಣ್ಣಿಗೆ ಹ್ಯಾಗ್‌ಕಾಣ್ತೀನ್ರೀ ನಾನು? ಗೂಬೆ ಥರಾ ಕಾಣ್ತೀನಾ? ಹೆಂಡತಿ ಹ್ಯಾಗೆಕಾಣ್ತೀನ್ರೀ ಎಂದು ಜಬರಿಸಿದಾಗ ಇದೇ ಗುಂಗಿನಲ್ಲಿ, ಗೂಬೆ ಥರಾ ಕಾಣ್ತೀಯ ಎಂದುಬಿಟ್ಟಿರಿ ಹುಷಾರು – ಪಾಪ, ಅವರು ನಿಜಕ್ಕೂ ಹಾಗಿಲ್ಲವೂ ಇಲ್ಲ, ಮತ್ತೆ ನಿಮಗೆ ವಿವೇಕವೂ ಇದೆ. ಹೆಂಡತಿ ಹೇಗೆ ಕಾಣ್ತೀನ್ರೀ ಎಂದು ರಾಗವೆಳೆಯುವುದು, ಗಂಡ ಸಮಯೋಚಿತವಾಗಿ ಅದ್ಭುತ, ಸೂಪರ್, ಸೆಕ್ಸೀ, ರೊಮ್ಯಾಂಟಿಕ್ ಉದ್ಗಾರವೆಳೆಯುವುದು, ಬೊಗಳೆಯೆಂದು ತಿಳಿದಿದ್ದರೂ ಅದಕ್ಕಾಕೆ ನಸುನಾಚಿದಂತೆ ನಟಿಸುವುದು- ಇದು ಲಾಗಾಯ್ತಿನಿಂದ ಬಂದ ರೂಢಿ.
ಹಾಗೆಂದು ಆ ಸವಲತ್ತು ನಿಮಗೂ ಇದೆಯೆಂದು ಭ್ರಮಿಸಿಬಿಟ್ಟಿರಿ. ನೀವೇನೋ ಸೊಗಸಾಗಿ ಗಡ್ಡ ಟ್ರಿಮ್ ಮಾಡಿಕೊಂಡು, ನೀವು ರೊಮ್ಯಾಂಟಿಕ್ ಎಂದುಕೊಂಡ ಒಂದು ನಗೆಬಾಣವನ್ನೆಸೆಯುತ್ತಾ ಕಣ್ಣಲ್ಲೇ ಹೇಗಿದೆ ಎಂದು ಕೇಳುತ್ತೀರಿ (ಬಾಯಲ್ಲಿಕೇಳಲು ಧೈರ್ಯ ಬರಬೇಕಲ್ಲ). ಕೇಳಿದ್ದಿನ್ನೂ ಮುಗಿದೇ ಇಲ್ಲ, ಅಯ್ಯ, ಇದೇನು ಅವತಾರ, ಒಳ್ಳೆಕತ್ತೆಕಿರುಬನ ರೀತಿ ಧಾಡಿ ಬಿಟ್ಕೊಂಡು, ಹೋಗಿ ಶೇವ್ ಮಾಡಿಕೊಂಡ್ ಬನ್ನಿ ಎಂಬ ಮಾತಿನ ತಪರಾಕಿ ಬೀಳುತ್ತದೆ. ತೆಪ್ಪಗೆಕೆನ್ನೆ ಸವರಿಕೊಂಡು ಹೋಗಿ ಶೇವ್ ಮಾಡಿಕೊಂಡು, ಕನ್ನಡಿಯಲ್ಲೊಮ್ಮೆ ನೋಡಿ, ಪರವಾಗಿಲ್ಲ ಈಗ ನಿಜಕ್ಕೂ ಸ್ಮಾರ್ಟ್ ಎಂದುಕೊಂಡು ಹೆಂಡತಿಯ ಮುಂದೆ ನಿಲ್ಲುತ್ತೀರಿ- ನಿಮ್ಮದೇಕೆನ್ನೆಯ ನುಣುಪನ್ನು ಅನುಭವಿಸುತ್ತಾ. ಆಕೆಯೋ ನಿಮ್ಮಕಡೆಕಣ್ಣೆತ್ತಿಯೂ ನೋಡದೇ, ಇದಕ್ಕೇನು ಕಮ್ಮಿಯಿಲ್ಲ, ಹೋಗಿ ತರಕಾರಿ ತನ್ನಿ, ಬೇಗ ಎಂದು ಆಜ್ಞಾಪಿಸುತ್ತಾಳೆ. ಟುಸ್ಸೆಂದ ಉತ್ಸಾಹದ ಬಲೂನನ್ನು ಮುದುರಿಟ್ಟುಕೊಳ್ಳುತ್ತಾ ತೆಪ್ಪಗೆ ತರಕಾರಿ ತಂದಿಟ್ಟು, ಫೇಸ್ಬುಕ್ ತೆರೆದು ಕೂರುತ್ತೀರಿ. ಮೊನ್ನೆ, ಯಾರೋ ಹೀಗೆ ಕೌಟುಂಬಿಕ ಅನಾದರದಿಂದ ಬೇಸತ್ತ ಪ್ರಾಣಿಯೇ ಇರಬೇಕು, ಫೇಕ್ಕಿನಲ್ಲಿ ಅಭಿಯಾನವೊಂದನ್ನು ಶುರುಮಾಡಿದ್ದುಕಂಡುಬಂತು – ನನ್ನ ಹೆಸರುಕೇಳಿದಾಗ ನಿಮಗೇನೆನಿಸುತ್ತದೆ?. ಅಲ್ಲಪ್ಪಾ, ಈ ಮೂತಿಗೆ ಮನೆಯಲ್ಲೇ ಸಿಗದಕಿಮ್ಮತ್ತು ಫೇಸ್ಬುಕ್ಕಿನಲ್ಲಿ ಸಿಗುತ್ತದೆಯೇ ಎನ್ನಬೇಡಿ. ಈ ಫೇಸ್ಬುಕ್ ಬೇರೆಯದೇ ಪ್ರಪಂಚ. ಇಲ್ಲೂ ಬಡಿದಾಟಗಳೂ,ಕೆಸರೆರಚಾಟಗಳೂ ಇದ್ದರೂ ಬಹುತೇಕ ಸದ್ಭಾವ ಸನ್ನಡತೆಗಳ ಜಗತ್ತೆಂದೇ ಹೇಳಬೇಕು. ನೀವು ಹಾಕಿದ ಪೋಸ್ಟನ್ನು ಓದಿಯೇ ಇರದಿದ್ದರೂ ಒಂದು ಲೈಕೊತ್ತಿ ಮುಂದುವರೆಯುವ ಧಾರಾಳ.
ನಿಮ್ಮದು ಮಂಗನಮೂತಿಯೇ ಆಗಿರಲಿ, ಅದಕ್ಕೂ ಒಂದಷ್ಟು ಲೈಕುಗಳು, ಮೆಚ್ಚುಗೆಯ ಮಾತುಗಳು ಗ್ಯಾರಂಟಿ? ವಚನೇಕಾ ದರಿದ್ರತಾ? ಎಂಬ ಮಾತನ್ನು ನಂಬಿ ನಡೆಯುವಂಥದ್ದು ಈ ಸಮಾಜ. ಹಾಗೆಂದು ಇವೇನು ಮುಖಸ್ತುತಿಯಲ್ಲ, ನಿಮ್ಮಿಂದ ಅವರಿಗೆ ಆಗಬೇಕಾದ್ದು ಏನೂ ಇರುವುದಿಲ್ಲ. ಮೆಚ್ಚುಗೆ ಬಹುತೇಕ ನಿಮ್ಮ ಬಗೆಗಿನ ಅಭಿಮಾನದಿಂದಲೇ ಬಂದುದಾಗಿರುತ್ತದೆ; ಅದರಲ್ಲಿ ಎಳ್ಳುಕಾಳಿನಷ್ಟಾದರೂ ಸತ್ಯವಿರುವುದೂ ಹೌದು. ನಿಜ ಜೀವನದಲ್ಲಿದ್ದಂತೆ, ಹೊಗಳಿದರೆ ವ್ಯಕ್ತಿ ತಲೆಯ ಮೇಲೇಕೂರುತ್ತಾನೆ/ಳೆ ಎಂಬ ಭಯ ಫೇಸ್ಬುಕ್ಕಿನಲ್ಲಿಲ್ಲ. ಆದ್ದರಿಂದ ಇಲ್ಲಿ ಎಲ್ಲ ಧಾರಾಳ. ಈ ಗುಣಗ್ರಹಣಶಕ್ತಿ ಎಷ್ಟೋ ವೇಳೆ ನಿಮ್ಮ ನಿಜಜೀವನದಲ್ಲಿ ಮುಕ್ಕಾದ ಮಾನಕ್ಕೆ ಮುಲಾಮಿನಂತೆಕೆಲಸ ಮಾಡುತ್ತದೆ. ಅದಕ್ಕೇ ಈ ಮಾದರಿಯ ಅಭಿಯಾನಗಳು ಫೇಸುºಕ್ಕಿನಲ್ಲಿ ಪ್ರಚಂಡ ಜನಪ್ರಿಯತೆ ಗಳಿಸುತ್ತವೆ. ಆದರೆ ಇದರಲ್ಲಿ ಧಾರಾಳವಾಗಿ ಉಕ್ಕಿ ಹರಿಯುತ್ತಿದ್ದ ಪರಸ್ಪರ ಪ್ರಶಂಸೆಯನ್ನುಕಂಡ ಮಿತ್ರರೊಬ್ಬರಿಗೆ ಈ ಸುಭಾಷಿತ ನೆನಪಾಯಿತಂತೆ: ಉಷ್ಟ್ರಾಣಾಂಚ ವಿವಾಹೇಷು ಗೀತಂ ಗಾಯಂತಿ ಗರ್ದಭಾಃ ಪರಸ್ಪರಂ ಪ್ರಶಂಸಂತಿ ಅಹೋ ರೂಪಮಹೋ ಧ್ವನಿಃ (ಒಂಟೆಗಳ ಮದುವೆಯಲ್ಲಿಕತ್ತೆಗಳು ಹಾಡಿದುವು; ಮತ್ತು ಅವು ಪರಸ್ಪರ ಹೊಗಳಿಕೊಂಡುವು- ಆಹಾ ನಿನ್ನ ರೂಪವೇ! ಆಹಾ ನಿನ್ನ ಧ್ವನಿಯೇ!) ನಾನೂ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದೆನಾದ್ದ ರಿಂದ ನಾನು ಒಂಟೆ- ಕತ್ತೆಗಳ ಪರವಹಿಸಿ ಮಾತಾಡಿದೆ.
ಹಾಗಾದರೆ ಒಂಟೆಗಳು ಮದುವೆ ಮಾಡಿಕೊಳ್ಳೋದೇ ತಪ್ಪೇ? ಕತ್ತೆಗಳು ಮದುವೆಗೆ ಹೋಗೋದೇ ತಪ್ಪೇ? ಹೋದರೂ ಶೋಕಸಭೆಗೆ ಹೋದಂತೆ ಮೌನವಾಗಿ ತಲೆಯಾಡಿಸಿ ಬರಬೇಕೇ? ಅದಕ್ಕವರು ಚೆನ್ನಾಗ್ ಹೇಳಿದ್ರಿ ಎಂದು ಉತ್ತರಿಸಿದರು. ನನ್ನ ವಾದವನ್ನವರು ಒಪ್ಪಿದರೆಂದೇ ನನ್ನೆಣಿಕೆ. ನೀವೇನಂತೀರಿ?
-ಮಂಜುನಾಥ ಕೊಳ್ಳೇಗಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.