ಅವಸರದಲ್ಲಿ ಏನಾಗುತ್ತೀರಿ?
Team Udayavani, Aug 27, 2019, 5:25 AM IST
ಅವನೊಬ್ಬ ಹೆಸರಾಂತ ಉದ್ಯಮಿ. ಅವನ ಏಕೈಕ ಪುತ್ರನನ್ನು ತುಂಬ ಬೇಗನೆ ಎಲ್ಲ ವಿದ್ಯೆಯನ್ನೂ ಕಲಿಸುವ ಕೋರ್ಸ್‌ಗೆ ಸೇರಿಸಬೇಕು. ಯಶಸ್ವಿ ಉದ್ಯಮಿಯಾಗುವುದು ಹೇಗೆ ಎಂದು ಅವನಿಗೆ ಬೇಗ ಹೇಳಿಕೊಡಬೇಕು. ತಂದೆಗೆ ತಕ್ಕ ಮಗ ಎಂದು ಲೋಕದ ಜನರೆಲ್ಲಾ ಮೆಚ್ಚಿ ಮಾತಾಡುವ ರೀತಿಯಲ್ಲಿ ಮಗನನ್ನು ಬೆಳೆಸಬೇಕು ಎಂಬುದು ಅವನ ಉದ್ದೇಶವಾಗಿತ್ತು. ಈತ ಹೀಗೆ ಹಲವು ಬಗೆಯ ಲೆಕ್ಕಾಚಾರಗಳನ್ನು ಮಾಡಿಕೊಂಡೇ ಒಂದು ಯೂನಿವರ್ಸಿಟಿಗೆ ಬಂದ. ಅಲ್ಲಿ ಪದವಿ ಕೋರ್ಸ್‌ಗಳು ಅದಕ್ಕೆ ವಿಧಿಸಲಾಗುವ ಶುಲ್ಕ, ಕೋರ್ಸ್ ಮುಗಿಯಲು ಇದ್ದ ಅವಧಿಯ ಬಗ್ಗೆ ತಿಳಿದು ಅವನಿಗೆ ಅಸಹನೆ ಉಂಟಾಯಿತು.
ಕುಲಪತಿಗಳ ಮುಂದೆ ಕುಳಿತು “ಸಾರ್, ಒಂದೊಂದು ಪದವಿ ಕೋರ್ಸ್ ಮುಗಿಸಲು ದೀರ್ಘ ಅವಧಿ ತಗಲುತ್ತದೆ. ಬೇಗ ಬೇಗ ಪಾಠ ಮಾಡಿ, ಅತಿ ಬೇಗ ಪದವೀಧರರನ್ನಾಗಿ ರೂಪಿಸಲು ಸಾಧ್ಯವಿಲ್ಲವೇ? ಅಂಥದೊಂದು ಪ್ರಯೋಗವನ್ನು ಈ ವರ್ಷದಿಂದಲೇ ನನ್ನ ಮಗನ ಮೇಲೆ ಏಕೆ ಮಾಡಬಾರದು?’ ಅಂದ.
ಕುಲಪತಿಗಳು ಒಮ್ಮೆ ಆ ಉದ್ಯಮಿಯನ್ನು ಪ್ರೀತಿ ಹಾಗೂ ಮರುಕದಿಂದ ನೋಡಿ
ಹೇಳಿದರು. “ಈ ಲೋಕದ ಚರಾಚರವೂ ಭಗವಂತನ ಸೃಷ್ಟಿ ಎಂದು ಹಿರಿಯರು ಹೇಳಿರುವುದನ್ನು ನೀವೂ ಕೇಳಿಯೇ ಇರುತ್ತೀರಿ. ಒಂದು ಚಿಕ್ಕ ಸಸಿ, ಮರವಾಗಿ ಬೆಳೆದು ಮಾವಿನ ಹಣ್ಣಿನ ಫಲ ನೀಡಲು ಭರ್ತಿ 12 ವರ್ಷಗಳ ಕಾಲಾಕಾಶಬೇಕು.
ಹಾಗೆಯೇ, ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಗುವ ಗ್ಲಾಸ ತಯಾರು ಮಾಡಲು ಕೇವಲ ಎರಡು ತಿಂಗಳ ಸಾಕು. ನಿಮ್ಮ ಮಗ, ನೂರು ಮಂದಿಯ ಹಸಿವು ತಣಿಸುವ ಮಾವಿನ
ಮರ ಆಗಬೇಕೋ ಅಥವಾ ಒಂದು ಗ್ಲಾಸ್ ಆಗಿ ಉಳಿದರೆ ಸಾಕೋ ನೀವೇ ನಿರ್ಧರಿಸಿ’ಅಂದರು. ಉದ್ಯಮಿ ಪೆಚ್ಚಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.