ನಾನೇಕೆ ಜಿಮ್‌ಗೆ ಹೋಗೋದಿಲ್ಲ?


Team Udayavani, Sep 18, 2018, 8:16 AM IST

27.jpg

ಜಿಮ್‌ ಯಂತ್ರಗಳ ಮೈದಡವಿ, ಏದುಸಿರು ಬಿಡುತ್ತಾ ಅವುಗಳನ್ನೆತ್ತಿ, ಎಳೆದಾಡಿ, ಮೈತುಂಬಾ ಬೆವರು ಬರಿಸಿಕೊಂಡರೇನೇ ದೇಹ ಫಿಟ್‌ ಆಗೋದು ಎನ್ನುವ ಕಲ್ಪನೆ ಯುವಸಮೂಹದ್ದು. ಅನೇಕರಿಗೆ ಜಿಮ್‌ ಎನ್ನುವುದು ಒಂದು ಕ್ರಶ್‌. ಆದರೆ, ಆ ಯಂತ್ರಗಳ ಬಳಿ ಹೋಗದೇ ನಾವು ಆರೋಗ್ಯವಾಗಿರಬಹುದು. ದೇಹವನ್ನೂ ಬಾಲಿವುಡ್‌ ಹೀರೋ ರೀತಿ ಫಿಟ್‌ ಆಗಿಟ್ಟುಕೊಳ್ಳಬಹುದು ಎಂಬುದಕ್ಕೆ ಸೋಮಾರಿಯೊಬ್ಬ ಒಂದಿಷ್ಟು ಪುರಾವೆ ಒದಗಿಸಿದ್ದಾನೆ…

ನನ್ನ ಇಡೀ ದಿನದ ಒಂದು ಹವ್ಯಾಸ ಟಿವಿ ನೋಡೋದು. ಹಾಗೆ ಆ ಪರದೆ ನೋಡಿದಾಗಲೆಲ್ಲ ಸಿನಿಮಾ ಹೀರೋ ಕಣ್ಣೆದುರು ಕುಣಿಯುತ್ತಿರುತ್ತಾನೆ. ಅಂಗಿ ಬಿಚ್ಚಿ ನಿಂತ ಹೀರೋನನ್ನು ತೆರೆಯ ಮೇಲೆ ನೋಡುವಾಗ “ಅಯ್ಯೊ ಪಾಪ’ ಅನಿಸುತ್ತದೆ. ಇವನಿಗೆ ಬಟ್ಟೆಯೇ ಇಲ್ವೆ ಅನ್ನುವ ವಿಚಾರಕ್ಕಲ್ಲ, ಈವಯ್ಯ ಹೊಟ್ಟೆ ಮೇಲೆ ಆರೇಳು ಪ್ಯಾಕ್‌ ತೋರಿಸೋಕೆ ಅದೆಷ್ಟು ದಿನಗಳನ್ನು, ಸುಖಗಳನ್ನು ಬಲಿಕೊಟ್ಟನೊ ಅಂತ ಮನಸ್ಸು ಲೆಕ್ಕ ಹಾಕುತ್ತೆ. ಇಷ್ಟವಿಲ್ಲದಿದ್ದರೂ ಅದೆಷ್ಟು ಊಟ ಮುಕ್ಕಿದನೊ, ಇಷ್ಟ ಇರೋದನ್ನು ತಿನ್ನದೇ ಎಷ್ಟು ಕೊರಗಿದನೋ, ಜಿಮ್‌ ಮೇಷ್ಟ್ರು ಹತ್ರ ಇನ್ನೂ ಇನ್ನೂ ಬೇಕು ಇನ್ನೂ… ಅನ್ನುವ ಮಾತುಗಳನ್ನು ಅದೆಷ್ಟು ಬಾರಿ ಕೇಳಿಸಿಕೊಂಡು ರೋಸಿ ಹೋಗಿದ್ದನೊ, ಕಂತೆ ಕಂತೆ ಹಣವನ್ನು ನೀರಿನಂತೆ ಚೆಲ್ಲಿದ್ದನೊ, ಜಿಮ್‌ ರೂಮಿನಲ್ಲಿ ಅದೇ ಬೆವರಿನೊಂದಿಗೆ ಸೆಣಸಿ ಸೆಣಸಿ ಮೈಯೂದಿಸಿಕೊಂಡಿ¨ªಾನೊ! ನೋಡಿದರೆ, ಪಾಪ ಅನಿಸುತ್ತದೆ. ಹೀರೊ ಬಾಡಿ ತೋರಿಸಿದ ಮಾತ್ರಕ್ಕೆ ಸಿನಿಮಾಗಳು ಹಿಟ್‌ ಆಗುವುದಿಲ್ಲ. ಅವಾರ್ಡ್‌ ಕೂಡ ಬಂದಿಲ್ಲ.

  ಹೀರೋ ಫಿಟ್‌ ಆಗಬೇಕಂತೇನೂ ಇಲ್ಲ. ಹೀರೋ ಅಲ್ಲದೆಯೂ ಫಿಟ್‌ ಆಗಿರಬಹುದು. ಈಗ ನಾನಿಲ್ಲವೇ? 
 “ಸಿಕ್ಸ್‌ಪ್ಯಾಕ್‌ ಇದ್ದರೇನೇ ಹುಡುಗಿಯರು ಮತ್ತೆ ಮತ್ತೆ ಮುಂಗುರುಳು ಸರಿಸಿ ನಮ್ಮತ್ತ ನೋಡೋದೋ’ ಅಂದಿದ್ದ ಗೆಳೆಯ. ನಾನು ಅವತ್ತೂಂದಿನ ಜಿಮ್‌ಗೆ ಹೋಗಿ, “ಇವುಗಳಲ್ಲಿ ಯಾವ ಮಶೀನ್‌ ಹುಡುಗಿಯರನ್ನು ಇಂಪ್ರಸ್‌ ಮಾಡುವಂತೆ ಮಾಡುತ್ತೆ?’ ಅಂತ ಕೇಳಿದ್ದೆ. ಜಿಮ್‌ನವನು ನಗುತ್ತಾ ಹೇಳಿದ, “ಈ ಯಂತ್ರಗಳಿಗೆ ಇಂಪ್ರಸ್‌ ಮಾಡುವಂಥ ಶಕ್ತಿಯಿಲ್ಲ. ಹೊರಗೊಂದು ಮಶೀನ್‌ ಇದೆ. ಅದರಿಂದ ಸಾಧ್ಯ’. ನಾನು ಹೌದೆಂದು ನಂಬಿ ಹೊರಗೆ ಬಂದೆ. ಅಲ್ಲಿ ಕಂಡಿದ್ದು, ಎಟಿಎಂ ಮಶೀನ್‌! ದೇಹದಲ್ಲಿ ಊದಿದ ಮಾಂಸಖಂಡಗಳಿಗೆ, ಕೈಯಲ್ಲಿನ ಹಣಕ್ಕೆ ಎಲ್ಲರನ್ನೂ ಸೆಳೆಯುವ ತಾಕತ್ತು ಇದ್ರೆ ಜಗತ್ತು ಹೀಗೆ ಇರುತ್ತಿತ್ತಾ?!? ನಮ್ಮ ದೇಹಕ್ಕೆ ನಾವೇ ಸಾಕಷ್ಟು ಹಿಂಸೆ ಕೊಟ್ಟೂ ಕೊಟ್ಟು, ಕಾಡಿಸಿ, ಎಳೆದಾಡಿ, ಜಜ್ಜಿ, ಫಿಟ್‌ ಮಾಡಿಕೊಳ್ಳುವಾಗ ಬದುಕಿನ ಎಷ್ಟೊಂದು ಸುಖಗಳಿಂದ ವಂಚಿತರಾಗುತ್ತೇವೆ?

  ನಿಮಗೊಂದು ಕುತೂಹಲಕಾರಿ ಸತ್ಯ ಗೊತ್ತಾ? ಇದು ನಾನು ಹೇಳ್ತಿರೋದು ಅಲ್ಲ; ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು. ಈಗಿನ ಯುವಕರಿಗಿಂತ ಹಿಂದಿನ ಹಿರಿಕರು ಆರೋಗ್ಯವಾಗಿ ಹೆಚ್ಚು ಕಾಲ ಬದುಕುತ್ತಿದ್ದರಂತೆ. ಇದನ್ನು ವಿಶ್ವಸಂಸ್ಥೆ ಹೇಳದೇ ಇದ್ದರೂ ನಮ್ಮ ಕಣ್ಣ ಮುಂದೆ ಕಣ್ಣ ಮುಂದೆ ಇರುವ ಸತ್ಯವೇ ತಾನೆ!? ಯಾವ ಜಿಮ್‌ನ ಉಸಾಬರಿ ಇಲ್ಲದೇ ಬದುಕಿದ ಅವರದು ಹೆಲ್ದಿ ಲಾಂಗ್‌ ಲೈಫ್, ಜಿಮ್‌ಗಳ ಸಹವಾಸ ಮಾಡಿಯೂ ಎಲ್ಲವನ್ನೂ ತೆತ್ತು ಕೂಡ ನಮ್ಮದು ಕಸಿವಿಸಿಯ ಶಾರ್ಟ್‌ ಲೈಫ್. ಇದೆಂಥ ಕರ್ಮ ಮಾರ್ರೆ!

  ಇದು ತಿನ್ನುವಿಕೆಯಲ್ಲಿ ಒಂದು ಅಸಮತೋಲನ ಒಡ್ಡುತ್ತದೆ. ಎಷ್ಟು ಬಾರಿ ಜಿಮ್‌ನಲ್ಲಿ ನಮಗೆ ರೀತಿ ರಿವಾಜು ಗೊತ್ತಿಲ್ಲದೆ ವರ್ಕ್‌ಗೆ ಇಳಿಯುವ ಕ್ರಿಯೆಗಳು ಅಪಾಯ ಸೃಷ್ಟಿಸುತ್ತವೆ. ಅದೊಂದು ಪಂಜರದೊಳಗೆ ಯಾರೋ ಕೂಡಿ ಹಾಕಿ ಆಡಿಸುವ ಆಟದಂತೆ ತೋರುತ್ತದೆ ನನಗೆ. ನಿಮಗೆ ಗೊತ್ತಾ ಜಿಮ್‌ ಒಂದು ಅಡಿಕ್ಷನ್‌. ಏಕಾಏಕಿಯಾಗಿ ಬಿಟ್ಟು ಕೂರಲು ಸಾಧ್ಯವೇ ಇಲ್ಲ. ಅದೊಂದು ಏಕತಾನತೆ ಮತ್ತು ಕಾಡುವ ಕಿರಿಕಿರಿ.

ಇದೆಂಥ ಲೋಕವಯ್ಯ!?
ನನಗೆ ರೇಜಿಗೆ ಹುಟ್ಟಿಸುವುದು ಜಿಮ್‌ ರೂಮಿನ ಒಳನೋಟ. ಅಲ್ಲಿನ ಭಾವಹೀನ ಮಶೀನ್‌ಗಳು ನನ್ನ ದೇಹವನ್ನು ಜಜ್ಜಿ ಹಾಕಲೊ ಬಾಯಿ ತೆರೆದು ಕೂತಂತೆ ಕಾಣಿಸುತ್ತವೆ. ಎಳೆಯ ಸೂರ್ಯನ, ತಣ್ಣನೆ ಗಾಳಿ, ಇಬ್ಬನಿ ನೆಲದ ಬದಲಿಗೆ ಕಣ್ಣಿಗೆ ಚುಚ್ಚುವಂಥ ಲೈಟುಗಳು, ಬುಸ ಬುಸ ಉಸಿರಿನಿಂದ ಆಚೆ ಬಂದು ಅಲ್ಲೇ ಸುತ್ತಿ ಸುತ್ತಿ ಬಡಿಯುವ ಅದೇ ಗಾಳಿ, ಮನಸ್ಸಿಗೆ ಮುಟ್ಟದೆ ಎದೆಗೆ ಬಡಿಯುವ ಅಬ್ಬರದ ಮ್ಯೂಸಿಕ್‌, ಸ್ಕೂಲ್‌ ಮೇಷ್ಟ್ರಿಗಿಂತ ಕಠೊರವಾಗಿ ಕಾಡುವ ಜಿಮ್‌ ಮೇಷ್ಟ್ರು, ನಮ್ಮ ನೋವನ್ನು, ಬೆವರನ್ನು ಎಂಜಾಯ್‌ ಮಾಡುವ ಅವನ ಮನಃಸ್ಥಿತಿ ತಿರಸ್ಕಾರವನ್ನುಂಟು ಮಾಡುತ್ತವೆ. ಬೆಳಗ್ಗೆಯ ಚೆಲುವು ಸಂಜೆಯ ಕಾಡುವ ಒಲವು, ಇಲ್ಲಿ ಅತೃಪ್ತ ದೇಹಗಳ ಬೆವರಿನ ವಾಸನೆಯ ಮಧ್ಯೆ ಕಳೆದು ಹೋಗುತ್ತದೆ. ಧಡೂತಿಯ ಎಂಟು ಅಡಿಯವನಿಗೂ ಐದಡಿಯ ನಲವತ್ತು ಕೆಜಿಯವನಾದ ನನಗೂ ಒಂದೇ ತರಹದ ಮಶೀನ್‌ಗಳು ಇರುವುದು ನನಗೆ ಆಶ್ಚರ್ಯ ಮತ್ತು ಭಯ. ಗೋಡೆಗೆ ಮೆತ್ತಿರುವ ದೇಹಪಟುಗಳ ಚಿತ್ರಗಳು ಕಲ್ಲಿನ ಮೂಟೆಗಳು ಅನಿಸಿ ಆ ಕಡೆಗೊಂದು ಭಾವನಾತ್ಮಕ ನೋಟ ಬೀರಲು ಸಾಧ್ಯವಾಗುವುದೇ ಇಲ್ಲ.

ಜಿಮ್‌ಗೆ ಹೋಗದೇ ಫಿಟ್‌ ಆಗಬಹುದು ಗೊತ್ತಾ!?
ನಮ್ಮಪ್ಪ ಈಗಲೂ ಈಗಿನವರ ಆ ಪ್ಯಾಕ್‌ ಬಾಡಿಗಿಂತ ಮುಂದೆ. ಅದೇ ಯವ್ವನದ ಲವಲವಿಕೆ, ಅದೇ ಗಟ್ಟಿತನ. ಎಪ್ಪತ್ತರ ಹೊಸ್ತಿಲ ಮೇಲೆ ಕೂತು ಬಾಯಿಯನೊಮ್ಮೆ ನೋಡಿಕೊಂಡರೂ ಅಷ್ಟೂ ಹಲ್ಲುಗಳು ಹಾಗೆಯೇ ಉಳಿದುಕೊಂಡಿವೆ. ಕ್ವಿಂಟಾಲ್‌ ತೂಕ ಎತ್ತುವುದು ಅವರಿಗೆ ಈಗಲೂ ಅನಾಯಸ. ಜಿಮ್‌ ಹೋಗುತ್ತಿದ್ದ ಆ ಹುಡುಗನ ಎರಡು ಹಲ್ಲುದಾರಿಯಲ್ಲಳಿಯವು. ಫಿಟ್‌ ಮಾಂಸಖಂಡಗಳ ಬೆಳವಣಿಗೆಯಷ್ಟೇ ಅಲ್ಲ. ಫ‌ಟಾಫ‌ಟ್‌ ಅನ್ನುವ ಫಿಟೆ°ಸ್‌ ಸಿಗುವುದು ಕೇವಲ ಜಿಮ್‌ನಲ್ಲಿ ಅಲ್ಲ. ಇಲ್ಲಿವೆ ನೋಡಿ ಒಂದಿಷ್ಟು ವಿಚಾರಗಳು.

1. ನಿಮ್ಮ ಫಿಟ್ನೆಸ್‌ಗೆ ಜಿಮ್‌ ಒಂದೇ ದಾರಿಯಲ್ಲ…
ಫಿಟ್ನೆಸ್‌ ಸತತ ಹಿಂಸೆಯಿಂದ, ಕಾಟಾಚಾರದಿಂದ, ಒತ್ತಾಯದಿಂದ ದಕ್ಕುವುದಲ್ಲ! ಜಿಮ್‌ನಿಂದ ಫಿಟೆ°ಸ್‌ ದಕ್ಕಬಹುದು. ಆದರೆ, ಜಿಮ್‌ ಒಂದರಿಂದಲೇ ದಕ್ಕಲಾರದು ಅಂದಾದ ಮೇಲೆ ಬಲವಂತದ ಜಿಮ್‌ ಜೀವನ ಏಕೆ? ದೈಹಿಕ ವ್ಯಾಯಾಮಕ್ಕೆ ಸಾವಿರ ದಾರಿಗಳಿವೆ. ನೀವು ದೇಹಕ್ಕೆ ನೀಡಬಹುದಾದ ಹಿತವಾದ ಮತ್ತು ವ್ಯವಸ್ಥಿತವಾದ ಕೆಲಸಗಳೂ ಫಿಟೆ°ಸ್‌ ನೀಡಬಲ್ಲವು.

2. ನಿಮ್ಮ ಇಷ್ಟದಲ್ಲೇ ನಿಮ್‌ ಫಿಟ್ನೆಸ್‌ ಇದೆ…
ಕೆಲವರಿಗೆ ಆಟಗಳೆಂದರೆ ಪ್ರಾಣ. ಸೈಕ್ಲಿಂಗ್‌ ಆಸೆ ಮತ್ತೆ ಕೆಲವರಿಗೆ. ಒಂದಿಷ್ಟು ಮಂದಿ ಈಜಿನಲ್ಲಿ ಖುಷಿ ಕಾಣುತ್ತಾರೆ. ಕಾಡುವ ಹಾಡುಗಳನ್ನು ಕೇಳುತ್ತಾ ಸೂರ್ಯನ ಎದುರಿಗೆ ಜೋರಾಗಿ ನಡೆಯುವುದರಲ್ಲಿ ಕೆಲವರು ತಮ್ಮನ್ನು ತಾವು ಮರೆತುಬಿಡುತ್ತಾರೆ. ಇಲ್ಲಿ ನಿಮ್ಮ ಇಷ್ಟಗಳು ದಕ್ಕುತ್ತವೆ ಬೋನಸ್‌ ಎಂಬಂತೆ ಫಿಟೆ°ಸ್‌ ಕೂಡ ಸಿಗುತ್ತೆ. ನೋಡಿ ಮಾಘ ಸ್ನಾನ ಬೇಕೆ?

3. ನಿಮ್ಮ ಜೀವನ ಶೈಲಿಯಿಂದಲೇ ಫಿಟ್ನೆಸ್‌ ಸಿಗುತ್ತೆ!
ನಿಮ್ಮ ಲೈಫ್ ಹೇಗಿದೆ ಹೇಳಿ? ಕಂಡಿದ್ದೆಲ್ಲವನ್ನೂ ಹೊಟ್ಟೆ ಬಿರಿಯುವ ಹಾಗೆ ಉಂಡು, ಸದಾ ಗೊರಕೆ ಹೊಡೆಯುವಂತಿದೆಯಾ? ಹೀಗಿದ್ದರೆ, ಯಾವ ಜಿಮ್‌ ಕೂಡ ನಿಮ್ಮನ್ನು ಕಾಪಾಡಲಾರದು! ಎಲ್ಲಾ ಸಂಶೋಧನೆಗಳು ಹೇಳುತ್ತಿರುವುದೂ ಇದನ್ನೇ. ನಿಮ್ಮ ನಿಮ್ಮ ಜೀವನ ಶೈಲಿಯೇ ನಿಮ್ಮ ಅಭದ್ರ ದೇಹಸ್ಥಿತಿಗೆ ಕಾರಣ ಅಂತ. ಒಂದು ಆರೋಗ್ಯಯುತ ಜೀವನಶೈಲಿ ರೂಢಿಸಿಕೊಂಡರೆ ನೀವು ಫಿಟ್‌.

4. ಕಿವಿಯೂದುವವನಿಗೆ ಕೋಕ್‌ ಕೊಡಿ…
“ಇಲ್ನೋಡು ಮಗಾ, ನಾನು ಹೇಗಿದ್ದೆ ಹೇಗಾದೆ!?’. ನೀನು ಒಂದ್ಸರಿ ಜಿಮ್‌ಗೆ ಬಂದು ನೋಡು. ಬರೀ ಒಂದೇ ಒಂದು ತಿಂಗಳಲ್ಲಿ ಬದಲಾಗ್ತಿಯ ಗೊತ್ತಾ!? ಒಳ್ಳೇ ನಿv ಬರುತ್ತೆ, ಕಣ್ಣಲ್ಲಿ ಏನೋ ಶೈನಿಂಗ್‌ ಇರುತ್ತೆ. ಚರ್ಮ ಹೊಳೆಯುತ್ತೆ. ಸದಾ ಫ್ರೆಶ್‌ ಫ್ರೆಶ್‌ ಅಂತಾರೆ. ನೀವು ಜಿಮ್‌ಗೆ ಹೋದರೆ ಅಮೇಲೆ ಬಿಡುವುದು ಕಷ್ಟವೇ! ಬಿಟ್ಟರೂ ಕಷ್ಟವೇ! 

ಅತಿಯಾದ ವ್ಯಾಯಾಮದ ಅಪಾಯ
ಜಿಮ್ಮಿನಿಂದ ಶರೀರ ದಪ್ಪವಾಗುವುದು ನಿಜ. ತಕ್ಷಣಕ್ಕೆ ನಿಲ್ಲಿಸಿದರೆ ಸ್ನಾಯುವಿನ ಬಲ ಕುಸಿಯುವುದು. ದೌರ್ಬಲ್ಯವೂ ಕಾಡಬಹುದು. ಹೃದಯದ ರಕ್ತನಾಳದ ಶಕ್ತಿಯೂ ಕುಸಿಯಬಹುದು. ಮಿತಿ ಇಲ್ಲದೇ ಮಾಡುವ ವ್ಯಾಯಾಮ ಅಪಾಯ ತರಬಹುದು. ಅನೇಕರು ಮಂಡಿ, ಸೊಂಟ ಬೆನ್ನಿನ ಅತೀವ್ರ ನೋವುಗಳಿಂದ ಬಳಲುತ್ತಿರುವುದು ಇದೆ. ಇವೆಲ್ಲಾ ವೈದ್ಯಲೋಕ ಹೇಳಿದ ಮಾತು.

ಜಿಮ್‌ ಇಲ್ಲದೆ ಟ್ರಿಮ್‌ ಆಗಿ…
ಸಮತೋಲಿತ ಹಿತ ಮಿತ ಆಹಾರ, ಕೈ ತುಂಬಾ ಕೆಲಸ, ಒಳ್ಳೆಯ ಆಲೋಚನೆ, ಸಾಕಷ್ಟು ನಿದ್ದೆ, ಬೇಗ ಮಲಗಿ ಬೇಗ ಏಳುವುದು, ಮುಂಜಾನೆಯ ವಾಕ್‌, ದೇಹ ಬಯಸುವಷ್ಟು ವ್ಯಾಯಾಮ, ಒಂದಷ್ಟು ಬೆವರು, ಯೋಗ, ಧ್ಯಾನ, ಸಾಕಷ್ಟು ನೀರು ಕುಡಿಯುವ ಅಭ್ಯಾಸ, ಓದು, ದುಶ್ಚಟಗಳಿಂದ ದೂರವಿರುವುದು, ಮಕ್ಕಳೊಂದಿಗೆ ಆಟ ಇವೆಲ್ಲವೂ ನಿಮ್ಮನ್ನು ಜಿಮ್‌ ಇಲ್ಲದೆಯೂ ಟ್ರಿಮ್ಮಾಗಿ ಇಡಬಲ್ಲವು.

ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.