ಟುಡೇ ಸ್ ಹೋಮ್ ವರ್ಕ್: ನೀವೇಕೆ ಅಡುಗೆ ಮಾಡಬಾರದು?
Team Udayavani, May 5, 2020, 2:29 PM IST
ಹೆಂಡತಿಯೋ, ಅಮ್ಮನೋ ರುಚಿರುಚಿಯಾಗಿ ಅಡುಗೆ, ತಿಂಡಿ ಮಾಡಿಹಾಕಿದ ನಂತರ- “ಅಯ್ಯೋ, ಖಾರ ಜಾಸ್ತಿ, ಉಪ್ಪೇ ಹಾಕಿಲ್ಲ. ದೋಸೆ, ಚಿಕ್ಕಣ್ಣನ ಹೋಟೆಲ್ ದೋಸೆ ಥರ ಇಲ್ಲ,
ಸಾಂಬಾರ್ ವಿದ್ಯಾರ್ಥಿ ಭವನ್ ರೀತಿ ಇಲ್ಲ’- ಹೀಗೆಲ್ಲ ರುಚಿವಿಮರ್ಶೆ ಮಾಡುತ್ತೀರ, ಅಲ್ವೇ? ಮನೆಯಲ್ಲಿ ಇದ್ದವರು ಕೂಡ, ಈ ಮಾತು ಕೇಳಿ ಬೇಜಾರಾದರೂ- “ಪಾಪ, ಮಗ/ ಗಂಡ ಹೊರಗೆ ದುಡಿದು ಬರ್ತಾನೆ. ಏನೋ ಹೇಳ್ತಾನೆ ಬಿಡಿ’ ಅಂತ ಸಹಿಸಿಕೊಂಡಿರುತ್ತಾರೆ. ನೀವು ಎಂದಾದರೂ ಸೌಟು ಹಿಡಿದು ನಳಮಹರಾಜರಾಗಿರುವ ಉದಾಹರಣೆ ಇದೆಯೇ? ಇಲ್ಲ ಅನ್ನುವುದಾದರೆ, ಈಗ ಆ ಕೆಲಸ ಮಾಡಿ. ಜೀವನ ಪರ್ಯಂತ ಅವರು ಮಾಡಿ ಹಾಕಿದ್ದನ್ನು ನೀವು ತಿನ್ನುತ್ತಿದ್ದಿರಲ್ಲ… ಈಗ ಅವರನ್ನು ಕೂಡ್ರಿಸಿ, ನೀವು ಮಾಡಿ ಹಾಕಿ ನೋಡೋಣ.
ಅಡುಗೆ ಮನೆಯಲ್ಲಿ ಬೇಯೋದು, ಕಿರಿಕಿರಿ ಮಾಡೋ ಬಾಸ್ ಎದುರಿಗೆ ನಿಲ್ಲೋದಕ್ಕಿಂತ ಕಷ್ಟ. ಲಾಕ್‌ಡೌನ್ ಸಮಯದಲ್ಲಿ, ದಿನಕ್ಕೆ ಒಂದು ಹೊತ್ತು ಅಡುಗೆ ಮನೆಯ ಕೆಲಸ ಇಟ್ಟುಕೊಳ್ಳಿ. ಒಂದುವೇಳೆ, ಅಡುಗೆ ಮಾಡುವ ವಿಚಾರದಲ್ಲಿ ನೀವು ಅನಕ್ಷರಸ್ಥರಾದರೆ, ಅಡುಗೆ ಮಾಡೋರಿಗೆ ಸಹಾಯಕರಾಗಬಹುದು. ಆ ಸಂದರ್ಭದಲ್ಲಿಯೇ, ಹೇಗೆ ಅಡುಗೆ ಮಾಡುತ್ತಾರೆ ಅನ್ನೋದನ್ನು ತಿಳಿದುಕೊಳ್ಳಿ. ಅಡುಗೆ ಮಾಡಲು ಗೊತ್ತಿದ್ದರೆ, ಒಂದು ಹೊತ್ತಿನ ಅಡುಗೆ ಕೆಲಸವನ್ನು ವಹಿಸಿಕೊಳ್ಳಿ. ಇದರಿಂದ ಮನೆಯವರಿಗೂ ಸ್ವಲ್ಪ ಶ್ರಮ ಕಡಿಮೆಯಾಗುತ್ತದೆ. ಮೊದಲ ಬಾರಿ ಅಡುಗೆ ಮಾಡುವಾಗ, ನೀವು ದೊಡ್ಡ ಚೆಫ್ ಅಂತೆಲ್ಲ ಅಂದುಕೊಳ್ಳಬೇಡಿ. ನೀವು ಪಂಟರ್ ಆಗಿರೋದು, ಆಫೀಸ್ ಕೆಲಸದಲ್ಲಿ. ಮನೆಯಲ್ಲಲ್ಲ. ಹೀಗಾಗಿ, ಉಪ್ಪು ಜಾಸ್ತಿನೋ, ಹುಳಿ ಕಡಿಮೆಯೋ ಆಗಬಹುದು. ಅಡುಗೆ ಮಾಡೋದು, ಸಿನಿಮಾ ಮಾಡೋದು ಎರಡೂ ಒಂದೇ ಅನ್ನೋದು ತಿಳಿದಿರಲಿ.
ಏಕೆಂದರೆ, ಎರಡಕ್ಕೂ ವಿಮರ್ಶೆಗಳೇ ಜಾಸ್ತಿ. ಒಂದು ಪಕ್ಷ ಹಿಂಜರಿಕೆಯಾದರೆ ಚಿಂತೆ ಇಲ್ಲ. ಕಾಫಿ, ಟೀ, ಕಷಾಯ ಮಾಡುವ ಮೂಲಕ ಅಡುಗೆ ಮನೆಗೆ ಕಾಲಿಡಿ. ಒಂದು ಅಡುಗೆ ಮಾಡುವ ರುಚಿ ಸಿಕ್ಕರೆ, ಅದರ ಜಗತ್ತೇ ಬೇರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.