ಪ್ರೀತಿಯೆಂಬ ಮಾಯಾಜಿಂಕೆ ಬೆಂಕಿಯಾಗಿ ಸುಟ್ಟಿತೇಕೆ?

Team Udayavani, Jan 30, 2018, 1:52 PM IST

31-35.jpg

ಮರೆಯಲಾಗದಂಥ ಪ್ರೀತಿ ನೀಡಿ, ಯಾವುದೋ ಅತಿ ಸಣ್ಣ ಕಾರಣಕ್ಕೆ ನನ್ನ ಬದುಕಿಂದಲೇ ಎದ್ದು ಹೋಗಿದೀಯ. ಹಾಗಂತ ನಾನು ನಿನ್ನನು ದೂರಲಾರೆ. ದ್ವೇಷಿಸಲಾರೆ. ನಿನಗೆ ಕೆಟ್ಟದ್ದು ಬಯಸಲಾರೆ. ಎಲ್ಲೇ ಇದ್ರೂ ನೀನು ಚೆನ್ನಾಗಿರಬೇಕು ಕಣೋ….

ಗೆಳೆಯಾ, ಒಂದೇ ಒಂದು ಸಲ ನಿನ್ನ ನಗು ನೋಡಬೇಕೆಂದು ಈ ಮನಸು ಹಂಬಲಿಸುತ್ತಿದೆ.ಆದರೆ ಅದು ಇನ್ನೆಂದೂ ಸಾಧ್ಯವಿಲ್ಲವೆಂದು ನನಗೆ ಗೊತ್ತು. ಕಾರಣಗಳೇ ಇಲ್ಲದಂತೆ ನನ್ನ ಜೀವನದಲ್ಲಿ ಬಂದು ಕಾರಣ ಹೇಳದೆಯೇ ಹೋಗಿಬಿಟ್ಟೆಯೆಲ್ಲಾ? ಒಂದು ವರುಷದ ನಮ್ಮ ಪ್ರೀತಿ ಒಂದೇ ನಿಮಿಷದಲ್ಲಿ ಚೂರಾಯಿತೆ? ನಿನಗೇ ಬೇಡವಾದ ಮೇಲೆ ನಾನು ನಿನ್ನನ್ನು ಬಯಸಿ ಪ್ರಯೋಜನವೇನು? ಇಷ್ಟು ದಿನ ನಾವು ಜೊತೆಯಾಗಿ ಕಳೆದ ಸಮಯವನ್ನು ಮರೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ.  

ವಿಧಿ ಯಾರ ಯಾರ ಜೀವನದಲ್ಲಿ ಯಾವ ಯಾವ ರೀತಿ ಆಟವಾಡುವುದೋ ತಿಳಿಯದು. ನನ್ನ ಜೀವನದಲ್ಲೂ ಕೂಡ ಮರೆಯಲಾಗದ ಘಟನೆ ನಡೆದೇ ಹೋಯಿತು. ನಿನ್ನ ಜೀವನದಲ್ಲಿ ನನ್ನ ಪಾತ್ರ ಇಷ್ಟೇ ಇರಬಹುದು ಅನಿಸುತ್ತಿದೆ. ನಿನ್ನಂತಹ ಒಳ್ಳೆ ಹುಡುಗನ ಜೊತೆಗೆ ಇಷ್ಟು ದಿನಗಳ ಕಾಲ ಇರುವ ಅವಕಾಶವನ್ನು ಆ ದೇವರು ಕೊಟ್ಟನಲ್ಲ, ಅಷ್ಟೇ ಸಾಕು. ನೀನು ನನ್ನೊಂದಿಗಿದ್ದರೂ, ದೂರವಾಗಿದ್ದರೂ ಕೂಡ ನಿನ್ನ ಹಿತವನ್ನೇ ಬಯಸುವಳು ನಾನು. ಜಗತ್ತಿನ ಸುಖವನ್ನೆಲ್ಲ ಆ ದೇವರು ನಿನಗೆ ಕರುಣಿಸಲಿ, ನಿನ್ನ ಪಾಲಿನ ಕಷ್ಟಗಳೆಲ್ಲ ನನ್ನ ಪಾಲಿಗಿರಲಿ.

ನಿನ್ನೊಡನೆ ಎಷ್ಟೋ ಕನಸು ಕೂಡಿಕೊಂಡೆ,ಅದೆಷ್ಟೋ ಪ್ರೀತಿ ಕಟ್ಟಿಕೊಂಡೆ. ಆದರೆ ಅದೆಲ್ಲ ಕಣ್ಣೆದುರಲ್ಲೇ ಕರಗಿ ಹೋಯಿತು. ಕಳೆದು ಹೋಯಿತು. ಚಿನ್ನೂ, ನನಗೆ ನಿನ್ನನ್ನು ಬಿಟ್ಟು ಇರೋಕೆ ಆಗಲ್ವೋ, ಆದರೂ ಹೇಗೋ ಇರುತ್ತೇನೆ ಬಿಡು ನಿನ್ನ ನೆನಪಲ್ಲೇ. ನಿನಗೆ ಎಂದೂ ನೋವಾಗಬಾರದೆಂದು ಬಯಸುವವಳು ನಾನು. ನಾನೇ ನಿನಗೆ ನೋವು ಅಂದಮೇಲೆ ದೂರವಿರುವುದೇ ಒಳಿತು. ಕಳೆದುಕೊಂಡಿರುವುದು ಮರಳಿ ಸಿಗುವುದಿಲ್ಲ, ಸಿಕ್ಕಿದರೂ ಅದು ಮೊದಲಿನ ಹಾಗೆ ಇರುವುದಿಲ್ಲ. ಇಂದು ನಿನ್ನ ಕನಸುಗಳಲ್ಲಿ ನಾನಿರುವೆನೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಮನಸು, ಕನಸಿನ ತುಂಬಾ ನೀನೇ ಇರುವೆ.  ಗೆಳೆಯಾ….ಮರೆಯಲಾಗದಂತಹ ಪ್ರೀತಿ ನೀಡಿ ಇಂದು ಅದಾವುದೋ ಕಾರಣಕ್ಕೆ ನನ್ನಿಂದ ದೂರಾಗಿ ಹೋದೆಯಾ? ಇರಲಿ, ಆಗಿದ್ದೆಲ್ಲಾ ಆಯಿತು, ಇನ್ನು ಮುಂದೆ ನಿನ್ನ ಜೀವನದಲ್ಲಿ ನೋವುಗಳೇ ಬರದಿರಲಿ, ನಿನಗೆ ನನಗಿಂತಲೂ ಒಳ್ಳೆ ಹುಡುಗಿ ಸಿಗಲಿ. ಅವಳೊಂದಿಗೆ ನೂರ್ಕಾಲ ಚೆನ್ನಾಗಿರು.

ಹಣೆ ಬರಹ ಬರೆಯೊ ಆ ದೇವರು, ಯಾರು ಯಾರಿಗೆ ಜೋಡಿ ಅಂತ ಮೊದಲೇ ಫಿಕ್ಸ್‌ ಮಾಡಿಬಿಡಬೇಕಿತ್ತು. ಹಾಗೆ ಮಾಡಿದ್ದಿದ್ರೆ ಈ ಭೂಮಿ ಮೇಲೆ ಯಾವ ಪ್ರೀತಿಯೂ ಸೋಲ್ತಾ ಇರಲಿಲ್ಲ, ಯಾವ ಪ್ರೇಮಿಯೂ ಸಾಯ್ತಾ ಇರಲಿಲ್ಲ. ನಿನ್ನ ಖುಷಿಗೆ ನಾನೆಂದು ಅಡ್ಡಿಯಾಗುವುದಿಲ್ಲ. ಯಾಕೆಂದರೆ ನಾನು ಖುಷಿ ಪಟ್ಟಿದ್ದು ನಿನ್ನಿಂದ ಕಣೋ. ಎಲ್ಲೇ ಇದ್ರೂ, ಹೇಗೇ ಇದ್ರೂ ಎಂದೆಂದಿಗೂ ನೀನು ನನ್ನ ಮನಸ್ಸಲ್ಲಿ ಒಂದು ಮಧುರ ನೆನಪಾಗಿ ಇದ್ದೇ ಇರ್ತೀಯ. ಇಷ್ಟೆಲ್ಲ ಹೇಳಿದ ಮೇಲೂ ನಾನು ಹೇಳಲೇಬೇಕಿರುವ ಅತೀ ಮುಖ್ಯವಾದ ಮಾತಿದು; ಮಿಸ್‌ ಯು ಸೋ ಮಚ್‌ ಬಂಗಾರು….

ಎಂದೆಂದಿಗೂ ನಿನ್ನ ಖುಷಿಯನ್ನೇ ಬಯಸುವ

ಗೀತಾ ಕೆ. ಬೈಲಕೊಪ್ಪ

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.