ಸ್ಮೈಲ್ ಜೊತೆಗೆ ಫೋನ್ ನಂಬರನ್ನೂ ಕೊಡಬಾರದಿತ್ತಾ?
Team Udayavani, Feb 26, 2019, 12:30 AM IST
ನನ್ನ ಎಲ್ಲ ಅಪ್ಲಿಕೇಷನ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದ ದೇವರು, ಅವತ್ಯಾಕೋ ನನ್ನ ಮೇಲೆ ಕರುಣೆ ತೋರಿಬಿಟ್ಟ. ಅವಳು ನನ್ನ ಪಕ್ಕದ ಸೀಟ್‌ನಲ್ಲಿಯೇ ಬಂದು ಕುಳಿತಳು.
ಆಹಾ, ಆವತ್ತು ಯಾರ ಮುಖ ನೋಡ್ಕೊಂಡು ಬಸ್ ಹತ್ತಿದ್ದೊ, ಯಾವತ್ತೂ ಸಿಗದೇ ಇದ್ದ ಅದೃಷ್ಟ ಅವತ್ತು ಒಲಿದಿತ್ತು.
ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆಗೆ ಬರುವುದೇ ಒಂದು ದೊಡ್ಡ ಸಂತಸ. ಪ್ರಯಾಣದ ಮಧ್ಯೆ ಸಿಗುವ ಕೃಷ್ಣಾ , ಭೀಮಾ, ತುಂಗಭದ್ರಾ ನದಿಗಳನ್ನೆಲ್ಲ ಕಣ್ತುಂಬಿಕೊಳ್ಳೋ ಖುಷಿ ಒಂದೆಡೆಯಾದರೆ, ಜೀನ್ಸ್‌ಪ್ಯಾಂಟು ಟಿ-ಶರ್ಟ್, ಲಿಪ್‌ಸ್ಟಿಕ್ ಹಚ್ಚಿದ ಹುಡುಗಿಯರನ್ನು ನೋಡಿ ನೋಡಿ ಬೇಜಾರಾಗಿದ್ದ ಮನಸ್ಸಿಗೆ ಹಳ್ಳಿ ಹುಡುಗಿಯರನ್ನು ನೋಡುವ ಸಂಭ್ರಮ ಇನ್ನೊಂದೆಡೆ.
ಬೆನ್ನಿಗೆ ಒಂದು ಬ್ಯಾಗ್ ಹಾಕ್ಕೊಂಡು ಬೆಳ್ಳಂಬೆಳಗ್ಗೆ ಯಾದಗಿರಿಯಲ್ಲಿ ಇಳಿದು, ಅಲ್ಲಿಂದ ನಮ್ಮೂರಿಗೆ ಹೋಗುವ ಬಸ್ ಹತ್ತಿದೆ. ಕೆಂಭಾವಿಗೆ ಟಿಕೆಟ್ ತೆಗೆಸಿ ಜೇಬಲ್ಲಿ ಇಡೋ ಅಷ್ಟರಲ್ಲಿ ಹಿಂದಿನಿಂದ ಯಾವುದೋ ಹುಡುಗಿ “ಗೋಗಿ’ ಅಂದ ಹಾಗಾಯ್ತು. ಅದು ನಮ್ಮೂರಿಗಿಂತ ಮೊದಲ ಬರುವ ಊರು. ಯಾರು ನೋಡೋಣ ಅಂತ ಹಿಂದೆ ತಿರುಗಿದ್ರೆ, ಹಾಲ್ಗೆನ್ನೆಯ ಸುಂದರಿ ನಿಂತಿದ್ದಳು.
ದೇವರೇ, ನನ್ನ ಪಕ್ಕದ ಸೀಟ್‌ನಲ್ಲೇ ಆ ಹುಡುಗಿ ಬಂದು ಕುಳಿತುಕೊಳ್ಳಲಿ ಎಂದು ದೇವರಿಗೊಂದು ನಮಸ್ಕಾರ ಹಾಕಿದೆ. ನನ್ನ ಎಲ್ಲ ಅಪ್ಲಿಕೇಷನ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದ ದೇವರು, ಅವತ್ಯಾಕೋ ನನ್ನ ಮೇಲೆ ಕರುಣೆ ತೋರಿಬಿಟ್ಟ. ಅವಳು ನನ್ನ ಪಕ್ಕದ ಸೀಟ್‌ನಲ್ಲಿಯೇ ಬಂದು ಕುಳಿತಳು.
ಮುದ್ದು ಮುಖಕ್ಕೆ ಆಗಲೇ ಮನಸೋತಿದ್ದ ನಾನು, ಅವಳ ಒಂದು ಮುಗುಳ್ನಗೆಗೆ ಕಾಯುತ್ತಿದ್ದ. ಒಂದೇ ಒಂದು ಸಲ ಸೆ¾„ಲ್ ಕೊಟ್ಟರೆ ಸಾಕು; ಮಾತಾಡಿಸಿ, ನಂಬರ್ ಕೇಳಿಬಿಡೋಣ ಅಂತ ಆಕೆಯತ್ತ ಕದ್ದುಮುಚ್ಚಿ ನೋಡುತ್ತಿದ್ದೆ. ಆಕೆಯ ಕಡೆಯಿಂದ ಸರಿಯಾದ ರಿಯಾಕ್ಷನ್ ಸಿಗಲಿಲ್ಲ. ಈ ಹುಡುಗಿಯ ಸಹವಾಸವೇ ಬೇಡ ಅಂತ ಅಲ್ಲಿಂದ ಎದ್ದು, ಲಾಸ್ಟ್ ಸೀಟ್‌ಗೆ ಬಂದು ಕುಳಿತೆ.
ನನ್ನ ಪಾಡಿಗೆ ನಾನು ಕಿಟಕಿಯಾಚೆಗಿನ ಸೌಂದರ್ಯ ಸವಿಯುತ್ತಾ, ಇಯರ್‌ಫೋನ್‌ನಲ್ಲಿ ಹಾಡು ಕೇಳುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಆಕೆಯ ಊರು ಬಂತು. ಛೇ, ಇಳಿದು ಹೋಗ್ತಾಳಲ್ಲ ಅಂತ ಬೇಜಾರಾಯ್ತು. ಬಸ್‌ನಿಂದ ಇಳಿಯಲು ಹಿಂದಿನ ಬಾಗಿಲಿನತ್ತ ಬಂದ ಆ ಹುಡುಗಿ, ನನ್ನೆಡೆಗೆ ಕಿರುನಗೆಯೊಂದನ್ನು ಎಸೆದು, ಇಳಿದು ಹೋದಳು! ನನಗೋ ಸ್ವರ್ಗ ರಪ್ಪಂತ ಕಣ್ಮುಂದೆ ಪಾಸಾದ ಹಾಗಾಯ್ತು! ಆದರೂ, ಡೌಟಾಗಿ ಅಕ್ಕಪಕ್ಕ ನೋಡಿದೆ. ಯಾರೂ ಇರಲಿಲ್ಲ. ಅಂದ್ರೆ, ಅವಳು ನನಗೇ ಸ್ಮೈಲ್ ಕೊಟ್ಟಿದ್ದು! ಚೆಲುವೇ, ಇಳಿಯುವ ಮೊದಲು ನಗುವಿನ ಜೊತೆಗೆ ನಂಬರ್ ಅನ್ನೂ ಕೊಡಬಾರದಿತ್ತೇನೇ? ಮತ್ತೆ ಯಾವಾಗ ಸಿಗ್ತಿàಯಾ ಹೇಳು?
ವೀರೇಶ ಕೆಂಭಾವಿ, ಕಲಬುರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.