ಬರೆದು ಬದುಕಿ
Team Udayavani, Dec 4, 2018, 6:00 AM IST
ಕಂಟೆಂಟ್ ರೈಟರ್, ಕೇವಲ ಬರಹಗಾರರಲ್ಲ. ಅವರು, ತಂತ್ರಜ್ಞರು, ನವಿರಾದ ಹಾಸ್ಯಪ್ರಜ್ಞೆಯುಳ್ಳವರು ಮತ್ತು ಮಾರಾಟತಜ್ಞರೂ ಹೌದು. ಅವರು ಜನರ ಮಿಡಿತವನ್ನು ಅಂತರ್ಜಾಲದಲ್ಲಿ ಹರಡಬಲ್ಲ ನುಡಿನಿಪುಣರು ಕೂಡ…
ಕಂಟೆಂಟ್ ರೈಟರ್ ಎಂಬ ವೃತ್ತಿಯನ್ನು ಅಪಾರ್ಥ ಮಾಡಿಕೊಂಡವರೇ ಜಾಸ್ತಿ. ಹೆಚ್ಚಿನವರು, ಅದು ಕೇವಲ ಲೇಖನ, ಬ್ಲಾಗ್ ಬರಹಗಳಿಗೆ ಸಂಬಂಧಿಸಿದ ವೃತ್ತಿ ಎಂದು ಭಾವಿಸಿದ್ದಾರೆ. ಆದರೆ, ಕಂಟೆಂಟ್ ರೈಟಿಂಗ್‌ನ ವ್ಯಾಪ್ತಿ ವಿಶಾಲವಾಗಿದೆ ಮತ್ತು ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರವಾಗಿದೆ. ಹಾಗಾದರೆ, ಕಂಟೆಂಟ್ ರೈಟಿಂಗ್ ಎಂದರೇನು? ಹೆಚ್ಚು ಜನರನ್ನು ತಲುಪಲಿ ಎಂಬ ನಿರ್ದಿಷ್ಟ ಉದ್ದೇಶದ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಸರಿ ಹೊಂದುವ ಬರಹಕ್ಕೆ ಕಂಟೆಂಟ್ ರೈಟಿಂಗ್ ಎನ್ನುತ್ತಾರೆ. ಪತ್ರಿಕೋದ್ಯಮದ ಬರಹಕ್ಕೂ ಕಂಟೆಂಟ್ ಬರಹಕ್ಕೂ ವ್ಯತ್ಯಾಸವಿದೆ. ಕಂಟೆಂಟ್ ಬರಹಗಾರರು SEO (Search
Engine Optimization) ಮತ್ತು (Hypertext Markup Language) ಗಮನದಲ್ಲಿಟ್ಟುಕೊಂಡು ಪದಜೋಡಿಸಬೇಕಾಗುತ್ತದೆ. ತನ್ನ ಲೇಖನದ ಪದಪುಂಜಗಳು ಓದುಗರನ್ನು ಕೈ ಹಿಡಿದು ನಡೆಸುವ ತಾಂತ್ರಿಕ ಲಕ್ಷಣಗಳನ್ನು ಹೊಂದಿವೆ ಎಂಬುದನ್ನು ಕಂಟೆಂಟ್ ಬರಹಗಾರ ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಕೇವಲ ಬರಹಗಾರರಲ್ಲ…
ಕಂಟೆಂಟ್ ರೈಟರ್‌ಗಳು ಕೇವಲ ಬರಹಗಾರರಲ್ಲ. ಅವರು, ತಂತ್ರಜ್ಞರು, ನವಿರಾದ ಹಾಸ್ಯಪ್ರಜ್ಞೆಯುಳ್ಳವರು ಮತ್ತು ಮಾರಾಟತಜ್ಞರೂ ಹೌದು. ಅವರು ಜನರ ಮಿಡಿತವನ್ನು ಅಂತರ್ಜಾಲದಲ್ಲಿ ಹರಡಬಲ್ಲ ನುಡಿನಿಪುಣರು. ಕಂಟೆಂಟ್ ಬರಹಗಾರರ ಮತ್ತೂಂದು ಮುಖ್ಯ ಗುಣವೆಂದರೆ, ಅವರು ಮೊದಲಿಗೆ ಸಂಶೋಧಕರು, ಆ ಬಳಿಕ ಬರಹಗಾರರು. ಏಕೆಂದರೆ, ಬರೆಯುವ ಮುನ್ನ ಅವರು ಬಹಳ ಮಾಹಿತಿ ಕಲೆಹಾಕಬೇಕಾಗುತ್ತದೆ. ಬರಹವು ಸ್ಪಷ್ಟವೂ, ಪ್ರಸ್ತುತವೂ, ನಿಖರವೂ ಆಗಿದ್ದು ಕಂಪನಿಯ ನಿಲುವಿಗೆ ಸೂಕ್ತವೂ ಆಗಿರಬೇಕಾಗುತ್ತದೆ.
ಉತ್ತಮ ಕಂಟೆಂಟ್ ಬರಹಗಾರನಿಗೆ, ತನ್ನ ಲೇಖನವನ್ನು ತಾನೇ ಪರಿಷ್ಕರಿಸುವ; ತಿದ್ದಿ, ತೀಡಿ ಹಸನುಗೊಳಿಸುವ ಜಾಣ್ಮೆ- ತಾಳ್ಮೆಗಳೂ ಬೇಕಾಗುತ್ತವೆ. ಕೇವಲ ಬರವಣಿಗೆ ಗೊತ್ತಿದ್ದರೆ ಸಾಲದು, e-zine (ಇಲೆಕ್ಟ್ರಾನಿಕ್ ಮ್ಯಾಗ್‌ಜಿನ್), ಬ್ಲಾಗ್, ನ್ಯೂಸ್ ಲೆಟರ್- ಹೀಗೆ ಯಾವ ಮಾಧ್ಯಮಕ್ಕೆ ಬೇಕಾಗಿರುತ್ತದೋ, ಆ ಮಾಧ್ಯಮಕ್ಕೆ ಹೊಂದಿಕೊಳ್ಳುವಂತೆ ಡಿಸೈನ್ ಮಾಡಲು ಗೊತ್ತಿರಬೇಕು. ಕಂಪನಿಯ ಆನ್‌ಲೈನ್ ಯಶಸ್ಸಿಗೆ ಕಂಟೆಂಟ್ ಬರಹಗಾರನ ಕೊಡುಗೆ ಬಹಳ ಮುಖ್ಯ. ಇಂದು ಭಾರತದಲ್ಲಿ ಬಹು ಅವಕಾಶಗಳನ್ನು ಸೃಷ್ಟಿಸುತ್ತಿರುವ ಕ್ಷೇತ್ರಗಳಲ್ಲಿ ಕಂಟೆಂಟ್ ರೈಟಿಂಗ್ ಕೂಡ ಒಂದು.
ಕಂಟೆಂಟ್ ರೈಟರ್‌ಗಳಲ್ಲಿ ಎಲ್ಲರೂ ಒಂದೇ ರೀತಿಯ ಕೆಲಸವನ್ನು ನಿರ್ವಹಿಸಬೇಕಾಗಿಲ್ಲ. ರೈಟಿಂಗ್‌ನಲ್ಲಿರುವ ಬೇರೆ ಬೇರೆ ವಿಭಾಗಗಳನ್ನು ಆರಿಸಿಕೊಳ್ಳುವ ಆಯ್ಕೆ ಅವರಿಗಿದೆ.
1. ಕಾಪಿ ರೈಟರ್
ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಬೇಕಾದ ಮಾಹಿತಿಯನ್ನು ಸುಂದರ ಪದಜೋಡಣೆಯ ಮೂಲಕ, ಜಾಹೀರಾತು ರೂಪಿಸುವುದರ ಮೂಲಕ ಉತ್ಪಾದಕನಿಗೆ ನೆರವಾಗುವವನು ಕಾಪಿ ರೈಟರ್.
2. ವೆಬ್‌ಸೈಟ್ ಕಂಟೆಂಟ್ ಬರಹಗಾರರು
ವೆಬ್‌ಸೈಟ್‌ಗೆ ಆಕರ್ಷಕ ರೂಪ ಕೊಡುವುದು ಎಷ್ಟು ಮುಖ್ಯವೋ, ಆಕರ್ಷಕ ಬರಹದ ಮೂಲಕ ಮಾಹಿತಿ ನೀಡುವುದೂ ಅಷ್ಟೇ ಮುಖ್ಯ. ಚೇತೋಹಾರಿಯಾದ ಸರ್ಚ್ ಎಂಜಿನ್‌ಗೆ ಹತ್ತಿರವಾದ ಬರಹವನ್ನು ನೀಡುವುದು ವೆಬ್‌ಸೈಟ್ ಕಂಟೆಂಟ್ ಬರಹಗಾರನ ಕೆಲಸ.
3. ಟೆಕ್ನಿಕಲ್ ರೈಟರ್
ವಸ್ತು ಅಥವಾ ಸೇವೆಗಳನ್ನು ಕುರಿತ ಬಳಕೆದಾರರ ಕೈಪಿಡಿ, ಪ್ರಾಡಕ್ಟ್ ಕೆಟಲಾಗ್ ರೂಪಿಸುವುದು ಟೆಕ್ನಿಕಲ್ ರೈಟರ್‌ಗಳು.
4. ರಿಸರ್ಚ್ ರೈಟರ್:
ಈ ಪಾತ್ರ ನಿರ್ವಹಿಸುವ ಬರಹಗಾರ, ಅತಿ ಹೆಚ್ಚು ಮಾಹಿತಿಗಳನ್ನು ಹುಡುಕಿ, ವಿಚಾರಗಳನ್ನು ವಿಮರ್ಶಿಸಿ, ತಾಳೆ ನೋಡಿ, ಇತರ ವೆಬ್‌ಸೈಟ್‌ಗಳನ್ನು ಸಂದರ್ಶಿಸಿ ವಿವರವಾದ, ಸಂಶೋಧನಾತ್ಮಕವಾದ ಬರಹವನ್ನು ರೂಪಿಸಬೇಕಾಗುತ್ತದೆ.
5. ಕ್ರಿಯೇಟಿವ್ ರೈಟರ್
ವಿಚಾರಗಳನ್ನು ಅತ್ಯಂತ ಸರಳವಾಗಿ ಮತ್ತು ಕುತೂಹಲಕರವಾಗಿ ನಿವೇದಿಸುವುದು ಕ್ರಿಯೇಟಿವ್ ರೈಟರ್‌ನ ಜವಾಬ್ದಾರಿ.
ಬೆಳೆಯುತ್ತಿದೆ ಉದ್ಯಮ
ಕಂಟೆಂಟ್ ಬರಹಗಾರರ ಆರಂಭದ ಪಗಾರ ತಿಂಗಳಿಗೆ 12- 20 ಸಾವಿರ ರೂ.ಗಳವರೆಗೆ ಇರುತ್ತದೆ. ಅನುಭವ ಹೆಚ್ಚಿದಂತೆಲ್ಲ, ಬರವಣಿಗೆ ಕೈ ಹಿಡಿದಂತೆಲ್ಲ ಹೆಚ್ಚೆಚ್ಚು ಆದಾಯವನ್ನು ಪಡೆಯಬಹುದು. ವಿದೇಶದಿಂದಲೂ ಕಂಟೆಂಟ್ ರೈಟಿಂಗ್‌ನ ಪ್ರಾಜೆಕ್ಟ್ಗಳು ಭಾರತದತ್ತ ಹರಿದುಬರುತ್ತಿರುವುದರಿಂದ ಈ ಕೌಶಲವುಳ್ಳವರಿಗೆ ಬೇಡಿಕೆ ಖಂಡಿತ ಹೆಚ್ಚಲಿದೆ. ತಜ್ಞರ ಪ್ರಕಾರ, ಕಂಟೆಂಟ್ ರೈಟಿಂಗ್ ಉದ್ಯಮ ವೇಗವಾಗಿ ಸರಾಸರಿ ಶೇ.30ರ ವೇಗದಲ್ಲಿ ಬೆಳೆಯುತ್ತಿದೆ. NITT, Genpact, TCS, IBMನಂಥ ಕಂಪೆನಿಗಳು ಕೂಡ ಕಂಟೆಂಟ್ ರೈಟರ್‌ಗಳಿಗೆ ಒಳ್ಳೆಯ ಆಫರ್ ನೀಡುತ್ತಿವೆ. ಒಳ್ಳೆಯ ಬರಹಗಾರರಿಗೆ ಅಂತಾರಾಷ್ಟ್ರೀಯ ಕಂಪನಿಗಳಾದ C-CAD,
Globarena, Hurix System, E-minds, Cognizant Technologies ಮತ್ತು Digital Thinkನಂಥ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶವೂ ಲಭಿಸಬಹುದು. ಭಾರತೀಯ ಕಂಪನಿಗಳಾದ Tech Books, Macmillan ಮತ್ತು Cyber Media ಗಳಲ್ಲೂ ಉದ್ಯೋಗಾವಕಾಶಗಳಿವೆ. ಕಂಟೆಂಟ್ ರೈಟರ್‌ಗಳನ್ನು ತರಬೇತುಗೊಳಿಸಲೆಂದೇ ಹಲವಾರು ಕಂಪನಿಗಳು ಹುಟ್ಟಿಕೊಂಡಿವೆ. ಸರ್ಟಿಫಿಕೇಟ್ ಕೋರ್ಸ್‌ಗಳು, SEO ತರಬೇತಿ, ಆನ್‌ಲೈನ್ ತರಬೇತಿಗಳು ಕೂಡ ಲಭ್ಯ ಇವೆ. ಬರಹ, ತಾಂತ್ರಿಕ ಕೌಶಲ್ಯ, ಸೃಜನಶೀಲ ಮನಸ್ಸು ಉಳ್ಳವರಿಗೆ ಹೇಳಿ ಮಾಡಿಸಿದ ವೃತ್ತಿ- ಕಂಟೆಂಟ್ ರೈಟಿಂಗ್.
ಏನು ಗೊತ್ತಿರಬೇಕು?
* ಇಂಗ್ಲಿಷ್‌ನಲ್ಲಿ ಬರೆಯುವ ಮತ್ತು ಮಾತನಾಡುವ ಕಲೆ
* ಕಂಪ್ಯೂಟರ್ ಕೌಶಲ.
*ತಾರ್ಕಿಕವಾಗಿ ಆಲೋಚಿಸುವ ಶಕ್ತಿ ಮತ್ತು ಸೃಜನಶೀಲ ಮನಸ್ಸು.
*ವೇಗವಾಗಿ ಟೈಪಿಂಗ್ ಮಾಡುವ ಸಾಮರ್ಥ್ಯ.
* ನಿರ್ವಹಣಾ ಕೌಶಲ ಮತ್ತು ಹೊಸತನ್ನು ಕಲಿಯುವ ಹುಮ್ಮಸ್ಸು.
*ತಂಡದೊಂದಿಗೆ ಒಗ್ಗೂಡಿ ಕೆಲಸ ಮಾಡುವ ಮನೋಭಾವ.
* ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸುವ ಚಾಕಚಕ್ಯತೆ.
– ರಘು ವಿ., ಪ್ರಾಂಶುಪಾಲರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.