ತಪ್ಪು ನನ್ನದಲ್ಲ,ಆ ದೇವರದ್ದು!
Team Udayavani, Apr 17, 2018, 5:58 PM IST
ನಿಮ್ಮ ತಲೆಯ ಕೂದಲಿಗೆ ಈಗಲಾದರೂ ಶಾಂಪುವಿನ ದರ್ಶನ ಮಾಡಿಸುತ್ತಿದ್ದೀರೋ ಅಥವಾ ಲೈಫ್ಬಾಯ್ ಎಲ್ಲಿದೆಯೋ ಅಲ್ಲಿದೇ ಆರೋಗ್ಯ ಅಂತ ಯಾಮಾರಿಸುತ್ತಿದ್ದೀರೋ? ಯಾಕೋ ನಿಮ್ಮನ್ನ ಮರೆಯೋಕಾಗ್ತಿಲ್ಲಾರೀ..
ಹೇಗಿದ್ದೀರಿ? ಎಲ್ಲಿದ್ದೀರಿ? ಮೊದಲಿದ್ದ ನಿಮ್ಮ ಮುಗ್ಧತೆಯನ್ನ ಹಾಗೇ ಉಳಿಸಿಕೊಂಡಿದ್ದೀರೋ ಅಥವಾ ಬೆಂಗಳೂರೆಂಬ ಮಾಯಾವಿಯ ತೆಕ್ಕೆಯಲ್ಲಿ ಕಳೆದುಕೊಂಡಿದ್ದೀರೋ? ಪ್ರತಿನಿತ್ಯ ಮನೆಯಲ್ಲಿ ಗಾಯತ್ರಿ ಮಂತ್ರವನ್ನ ಈಗಲೂ ಜಪಿಸುತ್ತಿದ್ದೀರಾ? ನಿಮ್ಮ ತಲೆಯ ಕೂದಲಿಗೆ ಈಗಲಾದರೂ ಶಾಂಪುವಿನ ದರ್ಶನ ಮಾಡಿಸುತ್ತಿದ್ದೀರೋ ಅಥವಾ ಲೈಫ್ಬಾಯ್ ಎಲ್ಲಿದೆಯೋ ಅಲ್ಲಿದೇ ಆರೋಗ್ಯ ಅಂತ ಯಾಮಾರಿಸುತ್ತಿದ್ದೀರೋ?
ನಿಮ್ಮನ್ನ ಮರೆಯೋಕಾಗ್ತಿಲ್ಲಾರೀ, ಬದುಕಿನಲ್ಲಿ ಕೆಲವೊಂದು ಆದರ್ಶಗಳನ್ನಿಟ್ಟುಕೊಂಡವರಿಗೆ ನೀವೊಂದು ಆದರ್ಶ. ಮೋಜು ಮಸ್ತಿ ಮಾಡಲು ಕಾಲೇಜಿಗೆ ಬರುತ್ತಿದ್ದ ಹುಡುಗರ ಮಧ್ಯೆ ಹುಡುಗಿಯರ ಕಡೆ ತಿರುಗಿಯೂ ನೋಡದೆ ನಾನು ಖುಷಿಯಾಗಿ ಬದುಕಬಲ್ಲೆ ಅನ್ನುತ್ತಿದ್ದ ನಿಮ್ಮ ಆತ್ಮವಿಶ್ವಾಸವೇ ನನ್ನನ್ನು ಮೋಡಿ ಮಾಡಿದ್ದು, ನಿಮ್ಮೆಡೆಗೆ ನನ್ನನ್ನ ಸೆಳೆದಿದ್ದು.
ನೋಟುಗಳು, ಬಂಗಲೆಗಳು, ಶ್ರೀಮಂತಿಕೆ ನನ್ನಲ್ಲಿ ಯಾವತ್ತೂ ಪ್ರೀತಿಯನ್ನ ಹುಟ್ಟಿಸಲಿಲ್ಲ. ದುಬಾರಿ ಬೈಕುಗಳಲ್ಲಿ ಬರುತ್ತಿದ್ದ ಯಾವ ಹುಡುಗನ ಮೇಲೂ ನನಗೆ ಮನಸ್ಸಾಗಲಿಲ್ಲ. ಆಡಂಬರದ ಬದುಕಿನಿಂದ ದೂರವಿದ್ದು, ಹೃದಯಕ್ಕೆ ಹತ್ತಿರವಾಗಿದ್ದ ನಿಮ್ಮ ಮೇಲೆ ಇವತ್ತಿಗೂ ಮನಸ್ಸಿದೆ ಸಾರ್. ನಿಮ್ಮಿಂದ ನನಗೆ ಪತ್ರ ಬರುವುದಿಲ್ಲ, ನಾನು ಈ ಜನುಮದಲ್ಲಿ ನಿಮ್ಮ ಮುಖ ನೋಡಲಾಗುವುದಿಲ್ಲ ಅನ್ನುವ ಸತ್ಯ ತಿಳಿದಿದ್ದರೂ, ನಿಮ್ಮ ನೆನಪಾದಾಗಲೆಲ್ಲ ನನ್ನೆದೆಯ ಭಾರವನ್ನ ಕಳೆದುಕೊಳ್ಳಲು ಪತ್ರ ಬರೆಯುತ್ತಲೇ ಇರ್ತೀನಿ.
ಇನ್ನು ಮೂರು ದಿನ ಕಳೆದರೆ ನಿಮ್ಮ ಹುಟ್ಟುಹಬ್ಬ. ಹೌದು, ನಿಮಗೆಷ್ಟು ವರ್ಷವಾಯಿತು? ನನ್ನ ಲೆಕ್ಕ ತಪ್ಪಿಲ್ಲದಿದ್ದರೆ ಮೂವತ್ತು ಅಲ್ವ? ಅಪ್ಪಟ ಪ್ರೇಮಿಯಂತೆ ನನ್ನ ಪ್ರೀತಿಸಿದವರು ನೀವು. ಥೂ ಹೋಗಾಚೆ ಎಂದು ಅಸಹನೆಯಿಂದ ನುಡಿದು, ನಿಮ್ಮ ಬದುಕಿನಿಂದ ಎದ್ದು ಬಂದವಳು ನಾನು. ಅಲ್ವ ಸಾರ್? ಅಪ್ಪ-ಅಮ್ಮನ ಪ್ರೀತಿಗೋಸ್ಕರ ನನ್ನ ಪ್ರೀತಿ ಬಲಿಕೊಟ್ಟೆ ಅನ್ನುವ ಸತ್ಯ ನಿಮಗೆ ಗೊತ್ತಿರಲಿಕ್ಕಿಲ್ಲ… ಕೊನೆಗೂ ನಿಮಗೊಂದು ಕಾರಣವನ್ನೂ ಹೇಳದೆ ನಿಮ್ಮ ಬದುಕಿನಿಂದ ಹೊರಗೆ ಬಂದ ನನ್ನನ್ನ ದಯವಿಟ್ಟು ಕ್ಷಮಿಸಿಬಿಡಿ.
ಬದುಕಿನಲ್ಲಿ ಕಷ್ಟಗಳು ತಿಳಿಯದೆ ಬದುಕು ಪರಿಪೂರ್ಣವಾಗುವುದಾದರೂ ಹೇಗೆ? ಕೊನೆಗೂ ಯಾವುದೂ ನನ್ನ ಕೈಗೆಟುಕಲಿಲ್ಲ. ಕೊನೆಯ ಪಕ್ಷ ಈ ಬದುಕು ಮುಗಿಯುವುದರೊಳಗೆ ಮತ್ತೆ ನಿಮ್ಮನ್ನ ನೋಡುತ್ತೀನೋ ಇಲ್ವೋ, ಅದೂ ಗೊತ್ತಿಲ್ಲ. ಮನಸ್ಸು ನಿಮ್ಮೊಂದಿಗೆ ಮಾತಾಡಿದಾಗಲೆಲ್ಲಾ, ಸಂಕಟವನ್ನು ಹೇಳ್ಕೊಬೇಕು ಅನ್ನಿಸಿದಾಗಲೆಲ್ಲಾ ಬರೆದಿದ್ದೀನಲ್ಲ; ಅಷ್ಟೂ ಪತ್ರಗಳನ್ನೂ ನಿಮಗೆ ತಲುಪಿಸಬೇಕು ಸಾರ್. ಒಂದು ಸುಂದರ ಪ್ರೇಮಕಥೆಯ ಕೊನೆಯ ಪುಟವನ್ನ ಹರಿದೆಸೆದವಳು ನಾನಲ್ಲ ಅನ್ನುವ ಸತ್ಯವನ್ನ ನಿಮಗೆ ತಿಳಿಸಬೇಕು.
ಮೊದಲು ದಿನಕ್ಕೆಷ್ಟೋ ಬಾರಿ ನಿಮ್ಮ ಹೆಸರನ್ನ ಕರೆದು ಗೋಳು ಹೋಯ್ದುಕೊಳ್ಳುತ್ತಿದ್ದ ನಾನು, ಇವತ್ತು ನಿಮ್ಮ ಹೆಸರು ಹೇಳುವ ಯೋಗ್ಯತೆಯನ್ನೂ ಕಳೆದುಕೊಂಡಿದ್ದೀನಿ. ದೇವರಲ್ಲಿ ನನ್ನ ಮೊದಲ ಕೊನೆಯ ಬೇಡಿಕೆಯೊಂದೇ, ನೀವು ಚೆನ್ನಾಗಿರಬೇಕು. ಎಲ್ಲ ಹುಡುಗಿಯರೂ ನನ್ನಷ್ಟು ಕ್ರೂರಿಯಾಗಿರೋದಿಲ್ಲ. ದೇವರಂತ ನಿಮಗೆ ದೇವತೆಯಂತ ಹುಡುಗಿ ಸಿಕ್ಕೇ ಸಿಕ್ತಾಳೆ. ದಯವಿಟ್ಟು ಕ್ಷಮಿಸಿಬಿಡಿ. ತಪ್ಪು ನನ್ನದಲ್ಲ ಆ ದೇವರದ್ದು…
ಯಾವತ್ತೂ ನಿಮ್ಮವಳು
ಪಾಪದ ಹುಡುಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.