ಹೌದು ಕಣೋ; ನನ್ನ ಲೋಕದಲ್ಲಿ ಈಗ ನೀನಿಲ್ಲ!
Team Udayavani, Jun 19, 2018, 4:53 PM IST
ನಾಟಕದಲ್ಲಿ ಮುಖಕ್ಕೆ ಬಣ್ಣ ಹಚ್ಚುವವರನ್ನು ನೋಡಿದ್ದೇನೆ. ಅವರ ಉದ್ದೇಶ ಇನ್ನೊಬ್ಬರನ್ನು ರಂಜಿಸುವುದಾಗಿರುತ್ತದೆ. ಆದರೆ, ನಿನ್ನ ಥರ ಇನ್ನೊಬ್ಬರನ್ನು ನೋಯಿಸಲು, ಬಣ್ಣ ಬಣ್ಣದ ಮಾತುಗಳನ್ನು ಆಡುವವರನ್ನು ನಾನು ನೋಡಿರಲಿಲ್ಲ.
ಮನುಷ್ಯನ ಮನಸ್ಸು ಎಷ್ಟು ವಿಚಿತ್ರ ಅಲ್ವಾ ಗೆಳೆಯ?
ಅಂದು ನೀನು ಪ್ರೇಮದ ವಿಚಾರವನ್ನು ನನ್ನಲ್ಲಿ ನಿವೇದಿಸಿಕೊಂಡೆ. ಆಗ ನಿರ್ಧಾರ ತೆಗೆದುಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲ. ಆದರೂ ನಿನ್ನ ಅದೃಷ್ಟವೋ ಏನೋ; ನಾನು ನಿನ್ನನ್ನು ಒಪ್ಪಿದೆ. ಸ್ವಲ್ಪ ದಿನ ಕಳೆದ ಮೇಲೆ ಇದ್ದಕ್ಕಿದ್ದಂತೆ ಜ್ಞಾನೋದಯವಾಯೆ¤àನೋ; ನಿನಗೆ ಈ ಹಳೆಯ ಪ್ರೀತಿ ಬೇಡವಾಯಿತಲ್ಲವೇ?
ಪ್ರೀತಿಯನ್ನು ಹೇಳಿಕೊಳ್ಳುವಾಗ ಮಾಡಿದ ಆಣೆ, ಪ್ರಮಾಣಗಳು ಇಂದು ಏನಾದವು? ಹುಡುಗನಾಗಲಿ ಅಥವಾ ಹುಡುಗಿಯಾಗಲಿ: ಇನ್ನೊಂದು ಮನಸ್ಸಿನ ಜೊತೆ ಏನನ್ನಾದರೂ ಹೇಳುವಾಗ ಹತ್ತು ಬಾರಿ ಯೋಚಿಸಬೇಕು. ಉಹೂಂ, ಅದೇನನ್ನೂ ನೀನು ಯೋಚಿಸಲೇ ಇಲ್ಲ. ಅಗತ್ಯವಿದ್ದಷ್ಟು ದಿನ ನನ್ನೊಂದಿಗೆ ಓಡಾಡಿ, ಓದು ಮುಗಿದು, ನಿನಗೆ ಕೆಲಸ ಸಿಕ್ಕಿದ ನಂತರ ನನ್ನೊಂದಿಗೆ ಸರಿಯಾಗಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟೆ. ನಾನಂದುಕೊಂಡೆ: ಎÇÉೋ ಕೆಲಸದ ಒತ್ತಡದಲ್ಲಿ ಸಿಲುಕಿರಬೇಕು ಅಂತ.
ಆದರೆ ನನಗೆ ನಿಜ ಸಂಗತಿ ತಿಳಿದಿದ್ದು ಸ್ವಲ್ಪ ತಡವಾಗಿಯೇ. ಹಿಂದಿನ ವರ್ಷ ಜುಲೈ 3ರಂದು, ನಿನ್ನ ವಾಟ್ಸಾéಪ್ ಸ್ಟೇಟಸ್ ನೋಡಿದಾಗಲೇ ಗೊತ್ತಾಗಿದ್ದು, ನೀನು ಇನ್ನೊಂದು ಹುಡುಗಿಯನ್ನು ಪ್ರೀತಿಸುತಿದ್ದೀಯ ಅಂತ. ಅವತ್ತೇ ನಿನ್ನೊಂದಿಗೆ ಮಾತು ಬಿಟ್ಟೆ. ಹೇಳ್ಳೋ-ಅಗತ್ಯವಿದ್ದಷ್ಟು ದಿನ ನನ್ನೊಂದಿಗೆ ಓಡಾಡಿದ ನೀನ್ಯಾಕೆ ಹೀಗೆ ಮಾಡಿದೆ? ನಾಟಕದಲ್ಲಿ ಮುಖಕ್ಕೆ ಬಣ್ಣ ಹಚ್ಚುವವರನ್ನು ನೋಡಿದ್ದೇನೆ. ಅವರ ಉದ್ದೇಶ ಇನ್ನೊಬ್ಬರನ್ನು ರಂಜಿಸುವುದಾಗಿರುತ್ತದೆ. ಆದರೆ, ನಿನ್ನ ಥರ ಇನ್ನೊಬ್ಬರನ್ನು ನೋಯಿಸಲು, ಬಣ್ಣ ಬಣ್ಣದ ಮಾತುಗಳನ್ನು ಆಡುವವರನ್ನು ನಾನು ನೋಡಿರಲಿಲ್ಲ. ವಿಧಿ ಎಷ್ಟೊಂದು ಕ್ರೂರಿ! ನನ್ನ ಜೀವನದಲ್ಲಿಯೇ ಈ ರೀತಿ ಆಟವಾಡಿಬಿಟ್ಟಿತು.
3 ವರ್ಷಗಳಿಂದ ನಿನ್ನ ಹುಟ್ಟುಹಬ್ಬಕ್ಕೆ ಮೊದಲ ಶುಭಾಶಯ ನನ್ನದೇ ಆಗಿರುತ್ತಿತ್ತು. ಆದರೆ, ಈಗ ಆ ಜಾಗವನ್ನು ಬೇರೆ ಯಾರೋ ಆಕ್ರಮಿಸಿದ್ದಾರೆ. ಇರಲಿ, ನೀನು ನನಗೆ ನೋವು ಮಾಡಿದ್ದರೂ, ನಿನಗೆ ಶುಭ ಹಾರೈಸುತ್ತಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು, ನಿನಗೆ ಒಳ್ಳೆಯದಾಗಲಿ!
ಒಂದು ಮಾತು ನೆನಪಿಟ್ಟುಕೋ; ಇನ್ಮುಂದೆ ಯಾವ ಹುಡುಗಿಯ ಜೀವನದಲ್ಲಿಯೂ ಈ ರೀತಿ ಆಟವಾಡಬೇಡ, ಪ್ಲೀಸ್.
ನನಗೆ ನನ್ನ ಅಪ್ಪ ,ಅಮ್ಮ ಮುಖ್ಯ. ಬದುಕು ವಿಶಾಲವಾಗಿದೆ. ನೀನು ಜೊತೆಗಿರದಿದ್ದರೂ, ನಾನು ಜೀವನದಲ್ಲಿ ನನ್ನ ಗುರಿ ತಲುಪುತ್ತೇನೆ. ಒಂದು ವೇಳೆ ನಾನು ನಿನಗೆ ಮುಂದೆ ಎಲ್ಲಾದರೂ ಸಿಕ್ಕಿದರೆ, ದಯವಿಟ್ಟು ನನ್ನನ್ನು ಮಾತನಾಡಿಸಬೇಡ. ಏಕೆಂದರೆ ನನ್ನ ಮನಸ್ಸಿನಿಂದ ನಿನ್ನನ್ನು ಆಚೆಗೆ ಹಾಕಿದ್ದೇನೆ. ಅರ್ಥಾತ್, ನೀನು ಈ ಲೋಕದಲ್ಲಿಯೇ ಇಲ್ಲವೆಂದು ತಿಳಿದಿದ್ದೇನೆ. ಸರಿ, ಚೆನ್ನಾಗಿರು…
ಇಂತಿ, ನೊಂದ, ಮೋಸಹೋದ ಮನಸ್ಸು
– ಶ್ರೇಯಾ ಭಂಡಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.