ಯೋಗ ಬಂತು ಯೋಗ
ಕೋರ್ಸ್ ಮಾಡಿದವರಿಗೆ ರಾಜ"ಯೋಗ'
Team Udayavani, Jul 9, 2019, 5:30 AM IST
ಯೋಗದ ಕುರಿತು ದೇಶ-ವಿದೇಶಗಳಲ್ಲಿ ಭರವಸೆ-ವಿಶ್ವಾಸಗಳು ಹೆಚ್ಚಾದ್ದರಿಂದ ಎಲ್ಲ ಕಡೆ ಯೋಗದ ಕಲಿಕೆ ಶಾಸ್ತ್ರೋಕ್ತವಾಗಿ ಆರಂಭಗೊಂಡಿದೆ. ಸರ್ಟಿಫಿಕೇಟ್ ಕೋರ್ಸ್‌ಗಳಿಂದ ಹಿಡಿದು ಪಿಎಚ್‌ಡಿ ಪದವಿವರೆಗೂ ಯೋಗವನ್ನು ಹೇಳಿಕೊಡುವ ಕಾಲೇಜುಗಳು ನಮ್ಮಲ್ಲಿ ಇವೆ. ಯೋಗದಲ್ಲಿ ಕೋರ್ಸ್ ಮಾಡಿರುವವರಿಗೆ ಈಗ ದಿಢೀರನೆ ಬೇಡಿಕೆ ಶುರುವಾಗಿದೆ.
“ಯೋಗವಿದ್ದಲ್ಲಿ ರೋಗವಿಲ್ಲ’ ಎಂಬುದು ಈ ಕಾಲದ ಗಾದೆ. ಮನಸ್ಸು – ದೇಹವನ್ನು ನಿಯಂತ್ರಣದಲ್ಲಿರಿಸಿಕೊಂಡು ಆರೋಗ್ಯಯುತ ಬದುಕು ಕಲ್ಪಿಸಿಕೊಡುವಲ್ಲಿ ಯೋಗ ನೆರವಿಗೆ ಬರುತ್ತದೆ. ಆಧುನಿಕ ಜೀವನ ಶೈಲಿಯ ಬೈ ಪ್ರಾಡ್‌ಕ್ಟ್ಗಳೆನಿಸಿರುವ ಖನ್ನತೆ, ಏರುಪೇರಿನ ರಕ್ತದೊತ್ತಡ, ಬೆನ್ನು ನೋವು, ಏಕಾಗ್ರತೆಯ ಕೊರತೆ, ತೂಕ ಹೆಚ್ಚಳ, ಸಕ್ಕರೆ ಖಾಯಿಲೆ, ಥೈರಾಯ್ಡ, ಪಿಸಿಓಡಿ, ಮಂಡಿ ನೋವು, ನಿದ್ರಾಹೀನತೆಗಳಿಂದ ನಲುಗಿ ಹೋಗುತ್ತಿರುವವರಿಗೆ ಯೋಗ ಸಂಜೀವಿನಿಯಂತೆ.
ವಿವೇಕಾನಂದರ ವರ್ಗಿಕರಣ ಮಾಡಿರುವ- ರಾಜಯೋಗ, ಭಕ್ತಿ ಯೋಗ, ಕರ್ಮಯೋಗ, ಜ್ಞಾನ ಯೋಗಗಳ ಜೊತೆ ಇಂದಿನ ಕಾಲದ ಮುಖ ಯೋಗ, ನಗೆ ಯೋಗ, ಮ್ಯೂಸಿಕ್ ಯೋಗ, ನೃತ್ಯ ಯೋಗ, ಪವರ್ ಯೋಗಗಳೂ ಸೇರಿಕೊಂಡು “ಯೋಗ’ ಎಂಬ ಕಾನ್ಸೆಪ್ಟ್ಗೆ ರಾಜಯೋಗ ಲಭಿಸವಂತೆ ಮಾಡಿದೆ.
ಯೋಗದ ಕುರಿತು ದೇಶ-ವಿದೇಶಗಳಲ್ಲಿಯೂ ಈಗ ಭರವಸೆ-ವಿಶ್ವಾಸಗಳು ಹೆಚ್ಚಾದ್ದರಿಂದ ಎಲ್ಲ ಕಡೆ ಯೋಗದ ಕಲಿಕೆ ಶಾಸ್ತ್ರೋಕ್ತವಾಗಿ ಆರಂಭಗೊಂಡಿದೆ. ವ್ಯಾಯಾಮ ಶಾಲೆಯಲ್ಲಿ ಕಸರತ್ತು ನಡೆಸುವುದರ ಜೊತೆ ಯೋಗವು ಬೇಕಿದೆ. ಡಬ್ಬಿಗಟ್ಟಲೆ ಗುಳಿಗೆ ಕೊಟ್ಟು ಫೀಸು ಪೀಕಿಸಿದ ಮೇಲೆ “ಯೋಗಾ ಮಾಡ್ರೀ ಎಲ್ಲಾ ಸರಿ ಹೋಗುತ್ತೆ’ ಎನ್ನುತ್ತಾರೆ ಈಗಿನ ವೈದ್ಯರು.
ಭಾರತ ಸರ್ಕಾರ ಯೋಗದ ಕುರಿತು ಜಾಗೃತಿ ಮೂಡಿಸಲು ಕಳೆದ ಐದು ವರ್ಷಗಳಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು 140 ಕೋಟಿ ರೂ. ಖರ್ಚು ಮಾಡಿದೆ. ಹೊಸ ಶಿಕ್ಷಣ ನೀತಿಯಲ್ಲಿ, ನಳಂದಾ ತಕ್ಷಶಿಲಾ ಮಾದರಿಯಲ್ಲಿ ಶಿಕ್ಷಣ ನೀಡುತ್ತೇವೆಂದು ಹೇಳಿ ಯೋಗವನ್ನು ಶಿಕ್ಷಣದ ಪ್ರತೀ ಹಂತದಲ್ಲೂ ಕಡ್ಡಾಯಗೊಳಿಸುವ ಇರಾದೆ ಹೊಂದಿದೆ. ಯೋಗದ ಮಹತ್ವವನ್ನರಿತ ಅನೇಕ ಶಿಕ್ಷಣ ಸಂಸ್ಥೆಗಳು ತಮ್ಮ ಕಾಲೇಜುಗಳಲ್ಲಿ ಸರ್ಕಾರ ಗಳಿಂದ ಅಂಗೀಕೃತವಾದ ಯೋಗದ ಹಲವು ಹಂತ-ಬಗೆಯ ಕೋರ್ಸ್‌ಗಳನ್ನು ಪ್ರಾರಂಭಿಸಿವೆ.
ಸರ್ಟಿಫಿಕೇಟ್ ಕೋರ್ಸ್‌ಗಳಿಂದ ಹಿಡಿದು ಪಿಎಚ್‌ಡಿ ಪದವಿವರೆಗೂ ಯೋಗವನ್ನು ಹೇಳಿಕೊಡುವ ಕಾಲೇಜುಗಳು ನಮ್ಮಲ್ಲಿ ಇವೆ. ಬೆಂಗಳೂರು ವಿಶ್ವವಿದ್ಯಾಲಯ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತನ್ನ ಡಿಗ್ರಿ ಕೋರ್ಸ್‌ನಲ್ಲಿ ಯೋಗ ಕಲಿಕೆಯನ್ನು ಕಡ್ಡಾಯಗಳಿಸಿ ಆದೇಶ ಹೊರಡಿಸಿದೆ.
ಯಾವ್ಯಾವ ಕೋರ್ಸ್‌ಗಳು ಲಭ್ಯ?
ಎಸ್ಸೆಸ್ಸೆಲ್ಸಿ ಪಿಯುಸಿ ನಂತರ – ಫೌಂಡೇಶನ್ ಕೋರ್ಸ್ ಇನ್ ಯೋಗ, ಪಿಜಿ ಡಿಪ್ಲೊಮಾ ಇನ್ ಯೋಗ ಅಂಡ್ ಹೋಲಿಸ್ಟಿಕ್ ಹೆಲ್ತ್, ಪಿಜಿ ಡಿಪ್ಲೊ›ಮಾ ಇನ್ ಯೋಗ ಥೆರಪಿ, ಪಿಜಿ ಡಿಪ್ಲೊಮಾ ಇನ್ ಯೋಗ ನ್ಯಾಚುರೋಪತಿ, ಯೋಗಿಕ್ ಸೈನ್ಸ್, ಯೋಗ ಅಂಡ್ ಆಲ್ಟರ್ ನೇಟ್ ಥೆರಪಿ ಇದೆ. ಇನ್ನು ಸರ್ಟಿಫಿಕೆಟ್ ಕೋರ್ಸುಗಳಲ್ಲಿ ಅಡ್ವಾನ್ಸ್‌ಡ್ ಕೋರ್ಸ್ ಇನ್ ಯೋಗ ಡಿಪ್ಲೊಮಾ ಕೋರ್ಸ್ ಇನ್ ಯೋಗ ಎಜುಕೇಶನ್, ಯೋಗ ಟೀಚರ್ ಟ್ರೆçನಿಂಗ್, ಯೋಗ ಅಂಡ್ ಹೆಲ್ತ್ ಎಜುಕೇಶನ್ ಮುಂತಾದವು.
ಪದವಿ ಕೋರ್ಸ್‌ಗಳು ಹೀಗಿವೆ; ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಯೋಗ ಅಂಡ್ ನ್ಯಾಚುರೋಪತಿ, ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಯೋಗ ಶಾಸ್ತ್ರ , ಬಿ.ಎಸ್ಸಿ ಒಂದರಲ್ಲೇ, ಬಿ.ಎಸ್ಸಿ ಇನ್ ಯೋಗ ಅಂಡ್ ಎಜುಕೇಶನ್, ಯೋಗ ಅಂಡ್ ಮ್ಯಾನೇಜ್‌ಮೆಂಟ್, ಯೋಗ ಅಂಡ್ ಕಾನ್ಶಿಯಸ್‌ನೆಸ್ ಅಂತ ಮೂರು ರೀತಿಯ ಅಧ್ಯಯನ ಇದೆ.
ಯೋಗದಲ್ಲೂ ಸ್ನಾತಕೋತ್ತರವಿದೆ. ಎಂ.ಎಸ್ಸಿ ಇನ್ ಯೋಗ ಅಂಡ್ ಹೆಲ್ತ್ ಎಂ.ಎಸ್ಸಿ ಇನ್ ಯೋಗ ಅಂಡ್ ನ್ಯಾಚುರೋಪತಿ, ಎಂ.ಎಸ್ಸಿ ಇನ್ ಯೋಗಿಕ್ ಸೈನ್ಸ್‌ಸ್ ಅಂಡ್ ಹೋಲಿಸ್ಟಿಕ್ ಹೆಲ್ತ್, ಎಂ.ಎಸ್ಸಿ ಇನ್ ಯೋಗ ಅಂಡ್ ಮ್ಯಾನೇಜ್‌ಮೆಂಟ್ ಎಂ.ಎಸ್ಸಿ ಇನ್ ಯೋಗ ಅಂಡ್ ಜರ್ನಲಿಸಂ, ಎಂ.ಎಸ್ಸಿ ಇನ್ ಯೋಗ ಅಂಡ್ ಕೌನ್ಸೆಲಿಂಗ್ ಸರ್ಟಿಫಿಕೇಟ್ ಕೋರ್ಸ್‌ಗಳು.
ಕೋರ್ಸ್ ಎಲ್ಲೆಲ್ಲಿ ಲಭ್ಯ?
ಬೆಳಗಾವಿಯ ಕೆಎಲ್‌ಇ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್, ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯ, ಧಾರವಾಡದ ಕರ್ನಾಟಕ , ಮೈಸೂರಿನ ‘ಸಂಮ್ಯಕ್’ ಯೋಗ, ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮೂಡಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗ, ಉಜಿರೆಯ ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್‌ಸ್, ಪುಣೆಯ ಕೈವಲ್ಯಧಾಮ, ಹೆಬ್ಟಾಳದ ವಿವೇಕಾನಂದ ಸ್ಕೂಲ್ ಆಫ್ ಯೋಗ, ದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನಿrಟ್ಯೂಟ್ ಆಫ್ ಯೋಗ, ಮುಂಬಯಿನ ಸಾಂತಾಕೃಜ್ ಬಳಿಯ ಯೋಗ ಇನ್ಸ್ಟಿಟ್ಯೂಟ್, ಹರಿದ್ವಾರದ ದೇವ ಸಂಸ್ಕೃತಿ ವಿಶ್ವದ್ಯಾಲಯ, ಭುವನೇಶ್ವರದ ಇನ್ಸ್ಟಿಟ್ಯೂಟ್ ಆಫ್ ಯೋಗಿಕ್ ಸೈನ್ಸ್‌ಸ್ ಅಂಡ್ ರಿಸರ್ಚ್ ಮತ್ತು ಗುಜರಾತ್ ಗಳಲ್ಲಿ ಯೋಗದ ಹಲವು ಕೋರ್ಸ್‌ಗಳನ್ನು ಕಲಿಸಲಾಗುತ್ತದೆ.
ಎಲ್ಲೆಲ್ಲಿ ಕೆಲಸ?
ಯೋಗದಲ್ಲಿ ಹಲವು ಬಗೆಯ ಕೋರ್ಸ್ ಮಾಡಿದವರಿಗೆ ಈಗ ಡಿಮ್ಯಾಂಡ್ ಇದೆ. ಅವರು ಯೋಗ ತರಬೇತುದಾರ, ಯೋಗ ಶಿಕ್ಷಕರಾಗಿ ಹೋಗಬಹುದು. ಪ್ರಸ್ತುತ ಯೋಗ ಥೆರಪಿಸ್ಟ್ , ಯೋಗ ಅಂಡ್ ನ್ಯಾಚುರೋಪತಿ ರಿಸರ್ಚ್ ಆಫೀಸರ್, ಯೋಗ ಏರೊಬಿಕ್ ಇನ್ಸ$óಕ್ಟರ್, ಪರ್ಸನಲ್ ಯೋಗ ಟ್ರೆçನರ್ ಅಂತೆಲ್ಲ ಶುರುವಾಗಿದೆ. ಬಹುತೇಕ ಖಾಸಗೀ – ಸರ್ಕಾರಿ ಶಾಲೆಗಳು, ಜಿಮ್‌ಗಳು, ಚಿಕಿತ್ಸಾ ಕೇಂದ್ರಗಳು, ಆಸ್ಪತ್ರೆಗಳಿಗೆ ಯೋಗ ಪದವೀಧರರು ಬೇಕಾಗಿದ್ದಾರೆ. ರೆಸಾರ್ಟ್‌ಗಳು, ಹೌಸಿಂಗ್ ಸೊಸೈಟಿಗಳು, ಸರ್ಕಾರೀ ಸ್ವಾಮ್ಯದ ಕ್ರೀಡಾ ಶಾಖೆಗಳು, ಕ್ರೀಡಾ ತರಬೇತಿ ಸಂಸ್ಥೆಗಳು, ಐಟಿ ಕಂಪನಿಗಳು, ಆರ್ಮಿ ಪಬ್ಲಿಕ್ ಸ್ಕೂಲ್‌ಗಳಿಗೂ ಇವರ ಅವಶ್ಯಕತೆ ಇದೆ. ಇನ್ನೊಂದು ವಿಶೇಷ ಎಂದರೆ, ಯೋಗ ತರಬೇತಿ ನಡೆಸುವ ಕೇಂದ್ರಗಳಿಗೆ ಆದಾಯ ತೆರಿಗೆ ಕಿರಿಕಿರಿ ಇಲ್ಲ.
ಕೇಂದ್ರ ಬೆಂಬಲ
ಕೇಂದ್ರ ಸರ್ಕಾರ ಸ್ಥಾಪಿಸಿರುವ “ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ’ – ಸಂಸ್ಥೆಯು ಯೋಗ ತರಬೇತುದಾರರಿಗೆ ನಾಲ್ಕು ಹಂತದ ಶ್ರೇಣಿಗಳಾದ ತರಬೇತುದಾರ, ಶಿಕ್ಷಕ, ಗುರು ಹಾಗೂ ಆಚಾರ್ಯ ಎಂಬ ಪ್ರಮಾಣ ಪತ್ರಗಳನ್ನು ನೀಡುತ್ತದೆ. ಇವರು ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತದ ವಿದೇಶಾಂಗ ಇಲಾಖೆಯ ದೂತಾವಾಸದಲ್ಲಿ ಕೆಲಸ ನಿರ್ವಹಿಸಲು ಆರ್ಹರಾಗಿರುತ್ತಾರೆ. ವಿಶ್ವದ ಇತರ ಭಾಗಗಳ ಬೇಡಿಕೆಯನ್ನು ಗಮನಿಸಿರುವ ಭಾರತ ಸರ್ಕಾರ ಯೋಗ ಕಲಿಸುವ ಯಾರೇ ಬಂದರೂ ಅವರ ಕೌಶಲ್ಯ ಪರೀಕ್ಷಿಸಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಿದೆ.
ಪೂರ್ಣ ವಿವಿ
ಆನೇಕಲ್‌ನ ವಿಸ್ವಾಮಿ ವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಡೀಮ್ಡ್ ವಿಶ್ವವಿದ್ಯಾಲಯ. ಇದು ಪ್ರಮಾಣದ ಯೋಗ ವಿವಿಯಾಗಿದ್ದು, ಪ್ರಪಂಚದ 30 ಶಾಖೆಗಳನ್ನು ಹೊಂದಿದೆ. ಯೋಗ ಇನ್óಕ್ಟರ್ ಕೋರ್ಸ್‌ನಿಂದ ಹಿಡಿದು ಪಿ.ಎಚ್.ಡಿ ವರೆಗೆ ಶಿಕ್ಷಣ ನೀಡುವುದಲ್ಲದೆ ಕೋರ್ಸ್ ಮುಗಿದ ನಂತರ ಉದ್ಯೋಗವನ್ನೂ ಕೊಡಿಸುತ್ತದೆ.
ಯೋಗ ಜ್ಞಾನ ಮತ್ತು ಪ್ರಕೃತಿ ಚಿಕಿತ್ಸೆಯ ಪದವಿಯಲ್ಲದೆ ವೈದ್ಯರಿಗಾಗಿಯೇ “ಯೋಗ ಥೆರಪಿ ಓರಿಯಂಟೇಶನ್ ಟ್ರೇನಿಂಗ್’ ಎಂಬ ಕೋರ್ಸ್‌ಅನ್ನೂ ಕಲಿಸುತ್ತದೆ.
-ಗುರುರಾಜ್ ಎಸ್. ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.