ಜನುಮ ಜನುಮದಲ್ಲು ನೀ ನನ್ನವನೇ…
Team Udayavani, May 2, 2017, 12:46 PM IST
ಯಾಕೋ ನನ್ ಹುಡ್ಗಿ ಪೆದ್ದು ಥರ ಓವರ್ ಆ್ಯಕ್ಟ್ ಮಾಡ್ತಿದ್ದಾಳೆ ಅಂದ್ಕೋಬೇಡ. ನಾನ್ ಸ್ವಲ್ಪ ಲೂಸೇ… ಅದು ನಿನ್ ಪ್ರೀತಿ ವಿಷ್ಯದಲ್ಲಿ ಮಾತ್ರ. ಅಮ್ಮನ ಮಡಿಲಲ್ಲಿ ಕೂತು ಮುದ್ದು ಮಾಡಿಸಿಕೊಳ್ಳೋ ಹಾಗೇ, ನಿನ್ ಮಡಿಲಲ್ಲಿ ಮಗುವಾಗಬೇಕು.
ಹುಡ್ಗಾ, ನೀನು ತುಂಬಾ ಸ್ಮಾರ್ಟ್ ಅಂತಾ ನಿನ್ ಹಿಂದೆ ಬಿದ್ದಿಲ್ಲ ಕಣೋ. ಈ ಸ್ಮಾರ್ಟ್ ಹುಡ್ಗನ ಹಾರ್ಟ್‌ನಲ್ಲಿರೋ ಪ್ಯಾರ್ (ಪ್ರೀತಿ) ನೋಡಿ, ಪರವಶಳಾದೆನೋ… ಅನ್ನೋ ಸಾಂಗ್ ಥರಾ ನಿನ್ನೊಳಗೆ ಬೆರೆತು ಹೋದೆ. ನಿನ್ ಪ್ರೀತಿಗೆ ಯಾವಾಗಲೂ ಈ ಮನಸ್ಸು ಹಂಬಲಿಸುತ್ತಾ ಇರುತ್ತೇ ಕಣೋ.
ನಿನ್ನನ್ನ ತುಂಬಾ, ಅಂದ್ರೆ ಹೇಳ್ಳೋಕ್ಕಾಗದೇ ಇರೋವಷ್ಟು ಇಷ್ಟಪಡ್ತೀನಿ. ನಿನ್ ನಗು, ನಿನ್ ಕಾಳಜಿ, ನೀನ್ ಮುದ್ದು ಮಾಡೋವಾಗ ಹೇಳ್ಳೋ ಪ್ರತಿ ಮಾತೂ ನಂಗೆ ಇಷ್ಟ. ಸಿಟ್ಟಲ್ಲಿ ಬೈಯೋ ಮಾತುಗಳೂ ಇಷ್ಟ. ನೀನು
ಹೇಗಿದ್ರೂ ನನ್ ಹುಡ್ಗನೇ ಕಣೋ. ನಿನ್ನ ಪ್ರತಿ ಉಸಿರು, ಪ್ರತಿ ಎದೆಬಡಿತ, ನಿನ್ನ ಹಿಂಬಾಲಿಸೋ ನೆರಳು ಕೂಡ ನಾನೇ ಆಗಿರಬೇಕು ಅನ್ನೋ ಆಸೆ. ನಿಂಗೂ ಹಾಗೇ ಅನ್ಸುತ್ತೆ ಅಲ್ವಾ?
ನಿಂಗೊತ್ತಾ? ನಿನ್ ವಿಷ್ಯದಲ್ಲಿ ನಾನು ತುಂಬಾ ಸ್ವಾರ್ಥಿ. ಎಷ್ಟು ಅಂದ್ರೆ, ನಿನ್ ಕಣ್ಣಲ್ಲಿ ಯಾವಾಗ್ಲೂ ನನ್ ಪ್ರತಿಬಿಂಬ ಕಾಣಬೇಕು, ನಿನ್ ಕಿವೀಲಿ ನನ್ ಧ್ವನೀನೇ ಗುಂಯ್‌ಗಾಟ್ಟುತ್ತಾ ಇರಬೇಕು. ಇನ್ನೊಂದು ವಿಷ್ಯ: ಇದು ಮಾತ್ರ
ತುಂಬಾ ಸೀರಿಯಸ್ ಮ್ಯಾಟರು: ನನ್ ಮನಸ್ಸಿಗೆ ಸ್ವಲ್ಪ ನೋವಾದರೂ, ಸಂತೋಷವಾದರೂ ನಿನ್ ಮನಸ್ಸಿಗೆ ಅದು ಗೊತ್ತಾಗಬೇಕು. ನೀನು ನನ್ನ ಎದುರಿಗೆ ಬರುತ್ತಾ ಇದ್ದೀಯಾ ಅಂದ್ರೆ ನಿನ್ ಹೃದಯದ ಬಡಿತ ನಂಗೆ ತಿಳೀಬೇಕು. ಒಂಥರಾ ಹಾರ್ಟ್ ಸಿಗ್ನಲ್‌ನಂತೆ ನಮ್ ಪ್ರೀತಿ ಇರಬೇಕು. ನನ್ ಮಾತ್ ಕೇಳಿ, ಯಾಕೋ ನನ್ ಹುಡ್ಗಿ ಪೆದ್ದು ಥರ ಓವರ್ ಆ್ಯಕ್ಟ್ ಮಾಡ್ತಿದ್ದಾಳೆ ಅಂದೊRàಬೇಡ. ನಾನ್ ಸ್ವಲ್ಪ ಲೂಸೇ… ಅದು ನಿನ್ ಪ್ರೀತಿ ವಿಷ್ಯದಲ್ಲಿ ಮಾತ್ರ. ಅಮ್ಮನ ಮಡಿಲಲ್ಲಿ ಕೂತು ಮುದ್ದು ಮಾಡಿಸಿಕೊಳ್ಳೋ ಹಾಗೇ, ನಿನ್ ಮಡಿಲಲ್ಲಿ ಮಗುವಾಗಬೇಕು. ನಿನ್ ಕೈಯಾರೇ ನಂಗೆ
ನೀನು ತುತ್ತು ತಿನ್ನಿಸಬೇಕು. ಒಂದು ವೇಳೆ ತಿನ್ನಬೇಕಾದರೆ ಮಿಸ್ಸಾಗಿ ಬೆರಳು ಕಚ್ಚಿದ್ರೆ ಬೈಯ್ಬಾರ್ಧು. ಕೆಲವೊಂದು ಸಲ ನಂಗೆ ಸಿಟ್ ಬಂದಾಗ ನೀನೇ ಸಮಾಧಾನ ಮಾಡಬೇಕು. ಆಗ ನಾನು ಹುಚ್ಚಿ ಥರ ಆಡಿದ್ರೂ ನನ್ನ ನೀನೇ
ನೋಡ್ಕೊàಬೇಕು. ನಾನು ಹೀಗೆಲ್ಲ ಹೇಳ್ತಿರೋದನ್ನು ಕೇಳಿ ಬೇಜಾರಾಗಬೇಡ. ನನ್ ಸಿಟ್ ನಿಮಿಷದಲ್ಲೇ ಹೊರಟುಹೋಗುತ್ತೆ ಕಣೋ.
ಪಾರ್ಕು, ಸಿನಿಮಾ, ಶಾಪಿಂಗ್ ಅಂತ ಸುತ್ತಾಡಿಸು ಅಂತ ಏನೂ ನಾನು ಕೇಳೊಲ್ಲ. ಆದ್ರೆ ನಿನ್ ಪ್ರೀತಿ ಮಾತ್ರ ಬೇಡ್ತೀನಿ. ಅದು ಈ ಜನ್ಮಕ್ಕಷ್ಟೇ ಅಲ್ಲಾ ಕಣೋ… ಎಷ್ಟೇ ಜನ್ಮ ಬಂದ್ರೂ ನೀನೇ ನಂಗೆ ಸಿಗಬೇಕು. ಯಾವ ಜನ್ಮದಲ್ಲೂ
ನನ್ ಬಿಟ್ಟು ಹೋಗಬಾರದು ಆಯ್ತಾ? ಜನ್ಮ ಜನ್ಮದಲ್ಲೂ ನನ್ನೊಂದಿಗೆ ಇರಿ¤àಯಾ ಅಲ್ವೇನೋ ಹುಡ್ಗ?
– ರಶ್ಮಿ ಟಿ., ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.