ನಿನ್ನ ಪ್ರೇಮದ ಪರಿಯ ನೀನರಿಯೇ ಕನಕಾಂಗಿ…!
Team Udayavani, Jan 14, 2020, 5:00 AM IST
ನಿನ್ನ ಕೈ ಬೆರಳು ಹಿಡಿದು ಜಾತ್ರೆಯಲ್ಲಿ ಸುತ್ತಾಡಿದ್ದು, ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡು ಅಕ್ಕನ ಮದುವೆಯಲ್ಲಿ ಓಡಾಡಿದ್ದು, ಅಕ್ಕ ಪಕ್ಕ ಕುಳಿತು ನವ ದಂಪತಿಯಂತೆ ಊಟ ಮಾಡಿದ್ದು ನಾನು ಮರೆತಿಲ್ಲ.
ಪ್ರೀತಿಯ ನಾಟಕವಾಡಿ ಹೋದವಳೆ… ಓಮ್ಮೆ ಕೇಳಿಲ್ಲಿ. ನಿನ್ನ ಮೈ ಬಣ್ಣಕ್ಕೆ ಮಾರು ಹೋದವನಲ್ಲ ನಾನು. ನಿನ್ನಲ್ಲಿರುವ ಮಗುವಿನಂಥ ಮುಗ್ಧ ಮಾತುಗಳಿಗೆ ಶರಣಾದವನು. ನೀನು ಮಾತನಾಡಲು ಪ್ರಾರಂಬಿಸಿದಾಗ ನಾನು ನನ್ನ ನೋವನ್ನೆಲ್ಲ ಮರೆತು, ನಿನ್ನ ಜಗತ್ತಿನಲ್ಲಿ ನನ್ನ ಮನಸ್ಸನ್ನು ತೇಲಿ ಬಿಡುತ್ತಿದ್ದೆ. ಒಂದು ದಿನ ನಿನ್ನ ಧ್ವನಿ ಬೀಳದಿದ್ದರೆ ಒಂದೇ ಸಮನೆ ಚಡಪಡಿಸುತ್ತಿದ್ದೆ. ಯಾಕೆ ಗೋತ್ತ? ನನ್ನ ಭವಿಷ್ಯ ಎಂಬ ಕನಸಿನ ಅರಮನೆಯನ್ನು ನಿನ್ನ ಜೊತೆ ಕಟ್ಟಿದ್ದೆ . ಅಷ್ಟರ ಮಟ್ಟಿಗೆ ನಿನ್ನನ್ನು ಪ್ರೀತಿಸುತ್ತಿದ್ದೆ.
ನಿನಗೂ ನನ್ನ ಮೇಲೆ ಅಷ್ಟೇ ಪ್ರೀತಿ ಇದೆ ಎಂದು ಭಾವಿಸಿದ್ದೆ. ಆದರೆ, ನಿನಗೆ ನನ್ನ ಮೇಲೆ ಇದ್ದದ್ದು ಬರಿ ಮೋಹವಷ್ಟೆ, ಟೈಮ್ ಪಾಸ್‌ಗಾಗಿ ನನ್ನನ್ನು ಬಳಸಿಕೊಂಡದ್ದು ಅಂತ ತಿಳಿದಿದ್ದು ನಿನ್ನ ಆ ಮುಗª ಧ್ವನಿಯಲ್ಲಿ ಕೇಳಿದ ಒರಟು ಮಾತುಗಳಿಂದ. “ನನಗೆ ನೀನು ಬೇಡ, ನಾ ಕಂಡ ಕನಸಿನ ಆ ಬದುಕು ನಿನ್ನಿಂದ ಸಿಗಲಾರದು’ ಅಂತ ನೀನು ಅಂದಾಗಲೂ ಸಹಿಸಿಕೊಂಡೆ. ಆದರೆ ನನ್ನ ಪ್ರೀತಿಯನ್ನೇ ಅನುಮಾನಿಸಿ, ನಾನು ನಿನಗೆ ಎಷ್ಪನೇ ಹುಡುಗಿ ಅಂದಾಗ ಮಾತ್ರ, ಬರ ಸಿಡಿಲು ಬಡಿದು ಆಕಾಶವೇ ಕಳಚಿ ಬಿದ್ದಂತೆ ಕುಸಿದು ಬಿದ್ದೆ.
ಆ ಮಾತುಗಳನ್ನು ನನಗೆ ಇಂದಿಗೂ ಸಹಿಸಿಕೊಳ್ಳಲಾಗುತ್ತಿಲ್ಲ . ಒಂದು ಸತ್ಯ ಹೇಳ್ತೀನಿ ನೆನಪಿಟ್ಟುಕೋ. ನನ್ನ ಮೊದಲ ಪ್ರೀತಿ ನೀನು. ಖಾಲಿ ಕೈಯಲ್ಲಿರುವಾಗಲೇ, ಪುಡಿಗಾಸನ್ನು ಜೋಡಿಸಿ ನಿನ್ನ ಖುಷಿಗಾಗಿ ಇಟ್ಟವನು ನಾನು. ಈಗ ಒಳ್ಳೆಯ ಉದ್ಯೋಗದಲ್ಲಿದ್ದೇನೆ. ಈಗ ಕೇಳಬೇಕಾ? ನಿನ್ನನ್ನು ರಾಣಿ ಥರಾ ನೋಡ್ಕೊತಿದ್ದೇ. ಈಗ ನೀ ನನ್ನನ್ನು ತೊರೆದು ಸಂತಸದಿಂದ ಇರಬಹುದು.
ನಾಳೆ ಬೇರೊಬ್ಬನನ್ನು ಮದುವೆಯೂ ಆಗಬಹುದು. ಆದರೆ, ನನ್ನಷ್ಟು ನಿಷ್ಕಲ್ಮಶವಾಗಿ ಯಾರೂ ನಿನ್ನ ಪ್ರೀತಿಸಲೂ ಸಾಧ್ಯವಿಲ್ಲ.
ನಿನ್ನ ಕೈ ಬೆರಳು ಹಿಡಿದು ಜಾತ್ರೆಯಲ್ಲಿ ಸುತ್ತಾಡಿದ್ದು, ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡು ಅಕ್ಕನ ಮದುವೆಯಲ್ಲಿ ಓಡಾಡಿದ್ದು, ಅಕ್ಕ ಪಕ್ಕ ಕುಳಿತು ನವ ದಂಪತಿಯಂತೆ ಊಟ ಮಾಡಿದ್ದು, ಕಾಲೇಜಿನಲ್ಲಿ ನಿನ್ನ ಕಾರ್ಯಕ್ರಮಗಳು ಇದ್ದಾಗ ಮುಂದಿನ ಸಾಲಿನಲ್ಲಿ ಕುಳಿತು ನೊಡುತ್ತಿದ್ದದ್ದು , ನಿನ್ನ ನೋಡುವ ಸಲುವಾಗಿ ಕಾಲೇಜಿಗೆ ಬಂಕ್ ಮಾಡಿದ್ದು… ಇದನ್ನೆಲ್ಲ ನೀನು ಮರೆತಿರಬಹುದು. ಆದರೆ, ನಾನು ಮರೆತಿಲ್ಲ. ಮುಂದೊಂದು ದಿನ ನನ್ನ ಪ್ರೀತಿಯ ಬೆಲೆ ನಿನಗೆ ಅರ್ಥವಾಗುತ್ತದೆ. ಆದರೆ ಪ್ರಯೋಜನವಿಲ್ಲ, ಏಕೆಂದರೆ, ಆಗ ಕಾಲ ಮಿಂಚಿ ಹೋಗಿರುತ್ತದೆ. ಆಗ ಮರಳಿ ಬರುವ ಪ್ರಯತ್ನವೂ ಮಾಡಬೇಡ.
ಏಕೆಂದರೆ, ಮತ್ತೂಮ್ಮೆ ನಿನ್ನ ಮೋಹದ ಬಲೆಗೆ ಬೀಳುವ ಹುಡುಗ ನಾನಲ್ಲ .
ಅಮೃತ ಚಂದ್ರಶೇಖರ ತೀರ್ಥಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.